ಹೈದರಾಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೨೯ ನೇ ಸಾಲು:
 
ಹೈದರ್ ಕೋಲಾರ ಸಮೀಪದ ಬೂದಿಕೋಟೆಯಲ್ಲಿ ಫತ್‌ ಮಹಮ್ಮದ್‌ ಮತ್ತು ಲಾಲ್‌ ಬಾಯಿ ದಂಪತಿಯ ಎರಡನೇ ಮಗನಾಗಿ ಜನಿಸಿದ‌. ಇವನ ಆರಂಭಿಕ ಜೀವನದ ಕುರಿತು ಅಷ್ಟು ಹೆಚ್ಚಿನ ಮಾಹಿತಿಗಳು ದೊರೆಯುವುದಿಲ್ಲ; ತಂದೆಯ ಮರಣಾನಂತರ ತನ್ನ ಸಹೋದರ ಷಹಬಾಜ್‌ ಜೊತೆಗೂಡಿ ಆರ್ಕಾಟಿನ ನವಾಬನ ಸೇನೆಯಲ್ಲಿ ಸೇವೆ ಸಲ್ಲಿಸಿದ. ಕಾರಣ ಶಿಕ್ಷಣ ವಂಚಿತನಾಗಿ ಬೆಳೆಯಬೇಕಾಯಿತು. ಮುಂದೆ ಶ್ರೀರಂಗಪಟ್ಟಣಕ್ಕೆ ಬಂದು ಚಿಕ್ಕಪ್ಪ ಇಬ್ರಾಹಿಂ ಸಾಹಿಬ್‌ ಸಹಾಯದಿಂದ ಮೈಸೂರಿನ ಚಿಕ್ಕಕೃಷ್ಣರಾಜ ಒಡೆಯರ ಸೇನೆಯಲ್ಲಿ ಸಹೋದರನೊಂದಿಗೆ 300 ಕಾಲಾಳುಗಳು ಮತ್ತು 70 ಕುದುರೆಗಳಿದ್ದ ತುಕಡಿಯ ಮುಖ್ಯಸ್ಥನಾಗಿ ನೇಮಕಗೊಂಡ<ref>{{cite book |last1=ಅಲಿ |first1=ಷೇಕ್ |title=ಕರ್ನಾಟಕ ಚರಿತ್ರೆ ಸಂಪುಟ ೫ |publisher=ಪ್ರಸಾರಾಂಗ |location=ಹಂಪಿ |page=36}}</ref>.
[[File:Knave (Hyder Ali from Mysore) from Court Game of Geography MET DP862917.jpg|thumb|ಹೈದರಾಲಿ]]
== ಅಭ್ಯುದಯ ==
ಹೈದರ್‌ ಮೈಸೂರಿನ ಸೇನೆ ಪ್ರವೇಶಿಸಿದ ಸಂದರ್ಭದಲ್ಲಿ ಚಿಕ್ಕದೇವರಾಜ ಒಡೆಯರನ್ನು ನೆಪಮಾತ್ರಕ್ಕೆ ಸಿಂಹಾಸನದಲ್ಲಿ ಕೂರಿಸಿ ದಳವಾಯಿ ದೇವರಾಜನೂ, ಸರ್ವಾಧಿಕಾರಿ ನಂಜರಾಜನೂ ಅಧಿಕಾರ ಚಲಾಯಿಸುತ್ತಿದ್ದರು. 1749 ರಲ್ಲಿ [https://en.wikipedia.org/wiki/Devanahalli_Fort ದೇವನಹಳ್ಳಿ ಕೋಟೆ]ಯ ಮುತ್ತಿಗೆಯಲ್ಲಿ ಇವನು ತೋರಿದ ಸಾಹಸಗಳಿಂದಾಗಿ ಬಹುಬೇಗ ಉನ್ನತ ಹುದ್ದೆಗೇರಿದ.
"https://kn.wikipedia.org/wiki/ಹೈದರಾಲಿ" ಇಂದ ಪಡೆಯಲ್ಪಟ್ಟಿದೆ