ಸದಸ್ಯ:Indudhar Haleangadi/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೧ ನೇ ಸಾಲು:
 
ಡಿಜಿಯೋಗಿ ಟೆಕ್ನಾಲಜಿಸ್ ಪ್ರೈ. ಲಿ. ಕರ್ನಾಟಕದ ಮಂಗಳೂರು ನಗರದಲ್ಲಿ ಕೇಂದ್ರೀಕೃತವಾದ ಮಾಹಿತಿ ತಂತ್ರಜ್ಞಾನ ಸಂಸ್ಥೆ. ಆತ್ಮನಿರ್ಭರ ಭಾರತದಿಂದ ಪ್ರಭಾವಿತಗೊಂಡು ಈ ಸಂಸ್ಥೆ ಹುಟ್ಟಿದೆ. ಪ್ರಸ್ತುತ ಕರ್ನಾಟಕದ ಮಂಗಳೂರು, ಬೆಂಗಳೂರು ಮತ್ತು ಉತ್ತರಕನ್ನಡದಲ್ಲಿ ತನ್ನ ಕೇಂದ್ರವನ್ನು ಸ್ಥಾಪಿಸಿದೆ. ಡಿಜಿಯೋಗಿ ಸಂಸ್ಥೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಾಣಿಜ್ಯ ವ್ಯವಹಾರ, ತಾಂತ್ರಿಕ, ಯಾಂತ್ರಿಕ, ಬಾಹ್ಯಾಧಾರ ಸೇವೆಗಳನ್ನು ಒದಗಿಸುತ್ತಿದೆ.
 
=ಇತಿಹಾಸ=
 
ಬಿಎ ಪದವಿಯನ್ನು ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ನಾಗರಾಜ್ ಭಟ್ ಮತ್ತು ವಿಕ್ರಂ ಹೆಗಡೆ. ಆದರೆ ಅವರ ಆಸಕ್ತಿ ತಂತ್ರಾಂಶ ಮತ್ತು ಮಾಹಿತಿ ತಂತ್ರಜ್ಞಾನದತ್ತ ವಾಲಿತ್ತು. ಹೀಗಾಗಿ ಇವರಿಬ್ಬರೂ, ಉತ್ಸಾಹದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಜಾಲತಾಣಗಳನ್ನು ಅಭಿವೃದ್ಧಿಪಡಿಸಲು ಮುಂದಾದರು. ಆರಂಭದಲ್ಲಿ ವಾರಪತ್ರಿಕೆ ಮತ್ತು ಸುದ್ದಿ ಜಾಲತಾಣವನ್ನು ಅಭಿವೃದ್ಧಿ ಪಡಿಸಿ ಯಶಸ್ಸು ಗಳಿಸಿದ ಇವರು, ಮುಂದೆ ಮಾಹಿತಿ ತಂತ್ರಜ್ಞಾನ ಆಧಾರಿತ ಜಾಲತಾಣವನ್ನು ಅಭಿವೃದ್ಧಿಪಡಿಸಿ ವಾಣಿಜ್ಯ ವ್ಯವಹಾರ, ತಾಂತ್ರಿಕ, ಯಾಂತ್ರಿಕ, ಬಾಹ್ಯಾಧಾರ ಸೇವೆಗಳನ್ನು ಕೊಡಲು ಡಿಜಿಯೋಗಿ ಸಂಸ್ಥೆಯನ್ನು ಹುಟ್ಟು ಹಾಕಿದರು.
 
=ಬೆಳವಣಿಗೆ=
 
ಇಬ್ಬರಿಂದ ಪ್ರಾರಂಭವಾದ ಸಂಸ್ಥೆ, ಇಂದು ೧೨ ಮಂದಿ ತಾಂತ್ರಿಕ ತಜ್ಞರನ್ನೊಳಗೊಂಡ ತಂಡವಾಗಿದೆ. ಪ್ರಸ್ತುತ ಮೊಬೈಲ್ ಗೇಮ್, ಆಪ್, ಜಾಲತಾಣ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಸೇವೆಗಳನ್ನು ಒದಗಿಸುತ್ತಿದೆ. ಈಗಾಗಲೇ ಯುಕೆ ಎಕ್ಸ್ಪ್ರೆಸ್, ಸುದ್ದಿಮಿತ್ರ, ಸುದ್ದಿವಾಣಿ ಇತ್ಯಾದಿ ಜಾಲತಾಣಗಳನ್ನು ಇವರು ತಮ್ಮ ಕ್ಲೈಂಟ್ಸ್‌ಗಳಿಗೋಸ್ಕರ ಅಭಿವೃದ್ಧಿಪಡಿಸಿದ್ದಾರೆ.