ಅರೇನಿಯಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
+image #WPWPTR #WPWP
 
೧ ನೇ ಸಾಲು:
[[ಚಿತ್ರ:Svante Arrhenius 01.jpg|thumb|ಅರೇನಿಯಸ್ (1909)]]
'''ಅರೇನಿಯಸ್''' : 1859-1927. ಸ್ವೀಡನ್ ದೇಶದ ಭೌತವಿಜ್ಞಾನಿ ಹಾಗೂ ರಸಾಯನ [[ವಿಜ್ಞಾನಿ]]. ವಿದ್ಯಾರ್ಥಿದೆಸೆಯಲ್ಲಿದ್ದಾಗ ಗಣಿತವಿಜ್ಞಾನದಲ್ಲಿ ವಿಶೇಷ ಸಾಮರ್ಥ್ಯತೋರಿಸಿದ್ದ. ಆಂಸ್ಟರ್‍ಡಾಮ್‍ನಲ್ಲಿ ವಾಂಟ್‍ಹಾಫ್ ಜೊತೆಗೂಡಿ ಕೆಲಸ ಮಾಡಿದ ಅನಂತರ ಸ್ಟಾಕ್‍ಹೋಂ ನಲ್ಲಿ ಭೌತವಿಜ್ಞಾನದ ಪ್ರಾದ್ಯಾಪಕನಾದ. 1887ರಲ್ಲಿ ಈತ ಪ್ರತಿಪಾದಿಸಿದ [[ವಿದ್ಯುತ್]] ವಿಶ್ಲೇಷಣ ತತ್ತ್ವದ (ಥಿಯೊರಿ ಆಫ್ ಎಲೆಕ್ಟ್ರಾಲಿಟಿಕ್ ಡಿಸೋಸಿಯೇಷನ್) ಸಲುವಾಗಿ ಇವನಿಗೆ ರಸಾಯನವಿಜ್ಞಾನ ವಿಭಾಗದ ನೊಬೆಲ್ ಪಾರಿತೋಷಕ ಲಭಿಸಿತು (1903). ವಾಯುಮಂಡ ಲದ ವಿದ್ಯುತ್ತಿನ ಬಗ್ಗೆಯೂ ಇದೇ ತತ್ತ್ವವನ್ನು ವಿಸ್ತರಿಸಿದ. ಇದಲದೆ ದ್ರಾವಣಗಳ ಸ್ನಿಗ್ಧತ್ವವನ್ನೂ (ವಿಸ್‍ಕಾಸಿಟಿ) ಪ್ರತಿಕ್ರಿಯಾವೇಗವನ್ನೂ ಪರಿಶೀಲಿಸಿದ. ಇವನಿಗೆ ವಿಶ್ವದ ರಚನೆಯ ಬಗ್ಗೆ, ಬೆಳಕಿನ ಒತ್ತಡ ಹಾಗೂ ವಿಶ್ವ ಭೌತವಿಜ್ಞಾನದಲ್ಲಿ ಅದರ ಪಾತ್ರ ಇವುಗಳ ಬಗ್ಗೆ ವಿಶೇಷ ಆಸಕ್ತಿ ಇತ್ತು. ಸೂರ್ಯನ ಸುತ್ತ ತಿರುಗುವ ಧೂಮಕೇತುಗಳ ಬಾಲ ಯಾವರೀತಿ [[ಸೂರ್ಯ]]ನ ರಶ್ಮಿ ವಿಸ್ತರಣದಿಂದ ನಿರಸನಹೊಂದುತ್ತವೆ ಎಂಬುದನ್ನು ಅಧ್ಯಯನ ಮಾಡಿದ.
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಅರೇನಿಯಸ್" ಇಂದ ಪಡೆಯಲ್ಪಟ್ಟಿದೆ