ರಾಜ್‌ಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೆಚ್ಚಿನ ಮಾಹಿತಿ ಸೇರಿಸಲಾಗಿದೆ
No edit summary
೨೯ ನೇ ಸಾಲು:
===ಡಾ. ರಾಜ್ ಕುಟುಂಬ===
[[Image:Rajkumar.jpg|thumb|ಡಾ. ರಾಜ್‌ಕುಮಾರ್]]
[[ಕನ್ನಡ]] [[ರಂಗಭೂಮಿ |ರಂಗಭೂಮಿಯ]] ಹೆಸರಾಂತ ಪ್ರತಿಭೆ ಸಿಂಗನಲ್ಲೂರು ಪುಟ್ಟಸ್ವಾಮಿ ಮತ್ತು ಲಕ್ಷ್ಮಮ್ಮ ದಂಪತಿಗಳ ಹಿರಿಯ ಮಗನಾಗಿ, [[ಚಾಮರಾಜನಗರ]] ಜಿಲ್ಲೆಯ ಗಡಿಭಾಗದಲ್ಲಿರುವ ದೊಡ್ಡ ಗಾಜನೂರಿನಲ್ಲಿ [[೧೯೨೯]]ರ [[ಏಪ್ರಿಲ್ ೨೪]]ರಂದು ರಾಜ್‌ಕುಮಾರ್ ಹುಟ್ಟಿದರು. ನಾಮಕರಣಗೊಂಡ ಹೆಸರು ಮುತ್ತುರಾಜು(ಮುತ್ತಣ್ಣ).<BR> ಡಾ. ರಾಜ್ ಅವರಿಗೆ ವರದರಾಜ್ ಎಂಬ ಸಹೋದರರೂ, ಶಾರದಮ್ಮ ಎಂಬ ತಂಗಿಯೂ ಇದ್ದರು. ೧೯೫೩ ಜೂನ್ ೨೫ರಂದು [[ಪಾರ್ವತಮ್ಮ ರಾಜ್‌ಕುಮಾರ್|ಪಾರ್ವತಿಯವರೊಡನೆ]] ಲಗ್ನವಾಯಿತು. ಪಾರ್ವತಿಯವರು ಮುಂದೆ '''[[ಪಾರ್ವತಮ್ಮ ರಾಜ್‌ಕುಮಾರ್]]''' ಎಂದೇ [[ಕನ್ನಡ]]ದ ಜನತೆಗೆ ಚಿರ ಪರಿಚಿತರಾಗಿ [[ಕನ್ನಡ ಚಿತ್ರರಂಗ]]ದ ಪ್ರಮುಖ ಚಿತ್ರ ನಿರ್ಮಾಪಕರಲ್ಲೊಬ್ಬರಾದರು. [[''ವಜ್ರೇಶ್ವರಿ ಸಂಸ್ಥೆ]]''ಯ ಅಡಿಯಲ್ಲಿ ಹಲವಾರು ಕನ್ನಡ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಡಾ. ರಾಜ್ ದಂಪತಿಗಳಿಗೆ ೫ ಜನ ಮಕ್ಕಳು. ಮೂರು ಜನ ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು. ಗಂಡು ಮಕ್ಕಳಾದ [[ಶಿವರಾಜ್‍ಕುಮಾರ್ (ನಟ)|ಶಿವರಾಜ್‌ಕುಮಾರ್]], [[ರಾಘವೇಂದ್ರ ರಾಜ್‍ಕುಮಾರ್ (ನಟ)|ರಾಘವೇಂದ್ರ ರಾಜ್‌ಕುಮಾರ್]] ಮತ್ತು [[ಪುನೀತ್ ರಾಜ್‌ಕುಮಾರ್]] [[ಕನ್ನಡ ಚಿತ್ರರಂಗ |ಕನ್ನಡ ಚಿತ್ರರಂಗದ]] ನಾಯಕ ನಟರು. ಹೆಣ್ಣು ಮಕ್ಕಳು ಪೂರ್ಣಿಮಾ ಹಾಗು ಲಕ್ಷ್ಮಿ. ಹಿರಿಯ ಅಳಿಯ ಪಾರ್ವತಮ್ಮನವರ ತಮ್ಮನಾದ ಗೋವಿಂದರಾಜು ಹಾಗು ಕಿರಿಯ ಅಳಿಯ ಚಿತ್ರನಟ [[ರಾಮ್‍ಕುಮಾರ್|ರಾಮ್‌ಕುಮಾರ್]]. ಒಟ್ಟು ಹನ್ನೆರಡು ಮೊಮ್ಮಕ್ಕಳಿದ್ದು, [[ಶಿವರಾಜ್‍ಕುಮಾರ್ (ನಟ)|ಶಿವರಾಜ್‌ಕುಮಾರ್]] ಪುತ್ರಿಯಾದ ನಿವೇದಿತಾ, [[ಅಂಡಮಾನ್]] ಮುಂತಾದ ಕೆಲವು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾಳೆ. [[ಕರ್ನಾಟಕ |ಕರ್ನಾಟಕದ]] ಮಾಜಿ ಮುಖ್ಯಮಂತ್ರಿ [[ಎಸ್. ಬಂಗಾರಪ್ಪ]] ಅವರು ಡಾ. ರಾಜ್ ಅವರ ಬೀಗರು. ಬಂಗಾರಪ್ಪನವರ ಪುತ್ರಿಯಾದ ಗೀತಾ, ಶಿವರಾಜ್‌ಕುಮಾರ್ ಅವರ ಪತ್ನಿ.
 
===ಡಾ. ರಾಜ್ ಅಪಹರಣ===
೩೯ ನೇ ಸಾಲು:
[[Image:Bangalore Rajkumar.jpg|thumb|right|200px|ಮಾಧ್ಯಮಗಳಿಂದ "ಅಂತಿಮ ನಮನ, ಅಣ್ಣಾವ್ರೆ"]]
* ಅಂತಿಮ ದಿನಗಳಲ್ಲಿ ಮಂಡಿನೋವು ಹಾಗು ಎದೆನೋವಿನಿಂದ ಬಳಲಿದ ಡಾ. ರಾಜ್, ೧೨ ಏಪ್ರಿಲ್, [[೨೦೦೬]] ಬುಧವಾರದಂದು ಮಧ್ಯಾಹ್ನ ೧:೪೫ರ ಸುಮಾರಿಗೆ, [[ಬೆಂಗಳೂರು|ಬೆಂಗಳೂರಿನಲ್ಲಿ]] ತಮ್ಮ ಕೊನೆಯುಸಿರೆಳೆದರು. [[ಕನ್ನಡ ಚಿತ್ರರಂಗ |ಕನ್ನಡ ಚಿತ್ರರಂಗದ]] ದಂತಕಥೆಯಾಗಿದ್ದ ಡಾ. ರಾಜ್ ಅವರ ಅಗಲಿಕೆಯಿಂದ, ಒಂದು ಸುವರ್ಣ ಯುಗದ ಅಂತ್ಯವಾದಂತಾಯಿತು.
* ಡಾ. ರಾಜ್ ಅವರ ಸ್ವ-ಇಚ್ಛೆಯಂತೆ, ಮರಣೋತ್ತರವಾಗಿ ಅವರ ಕಣ್ಣುಗಳನ್ನು [[ನಾರಾಯಣ ನೇತ್ರಾಲಯ]]ಕ್ಕೆನೇತ್ರಾಲಯಕ್ಕೆ ದಾನ ಮಾಡಲಾಯಿತು. ಮೃತರ ಪಾರ್ಥಿವ ಶರೀರವನ್ನು ಅಭಿಮಾನಿಗಳ, ಬಂಧುಮಿತ್ರರ ದರ್ಶನಕ್ಕಾಗಿ ಬೆಂಗಳೂರಿನ [[ಕಂಠೀರವ ಒಳಾಂಗಣ ಕ್ರೀಡಾಂಗಣ|ಕಂಠೀರವ ಕ್ರೀಡಾಂಗಣ]]ದಲ್ಲಿ ಇಡಲಾಗಿತ್ತು. ಅಪಾರ ಸಂಖ್ಯೆಯ ಜನಸ್ತೋಮ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿತ್ತು.
* ೧೩ ಏಪ್ರಿಲ್ ೨೦೦೬ರಂದು, ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿರುವ [[ಕಂಠೀರವ ಸ್ಟುಡಿಯೊ]] ಆವರಣದಲ್ಲಿ ಡಾ. ರಾಜ್ ಪಾರ್ಥಿವ ಶರೀರದ ಅಂತ್ಯಸಂಸ್ಕಾರವು ನಡೆಯಿತು. ಇವೆರಡು ದಿನ (ಏಪ್ರಿಲ್ ೧೨ ಮತ್ತು ೧೩), ಬೆಂಗಳೂರಿನಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿತ್ತು.
 
೫೩ ನೇ ಸಾಲು:
* [[:Category:ವರ್ಷ-೧೯೪೨ ಕನ್ನಡಚಿತ್ರಗಳು|೧೯೪೨ರಲ್ಲಿ]] ಬಿಡುಗಡೆಯಾದ [[ಭಕ್ತ ಪ್ರಹ್ಲಾದ(೧೯೪೨)|ಭಕ್ತ ಪ್ರಹ್ಲಾದ]] ಚಿತ್ರದಲ್ಲಿ ನಟನಾಗಿಯೂ, [[:Category:ವರ್ಷ-೧೯೫೨ ಕನ್ನಡಚಿತ್ರಗಳು|೧೯೫೨ರಲ್ಲಿ]] ಬಿಡುಗಡೆಯಾದ ಶಂಕರ್‌ಸಿಂಗ್ ನಿರ್ದೇಶನದ [[ಶ್ರೀ ಶ್ರೀನಿವಾಸ ಕಲ್ಯಾಣ]] ಚಿತ್ರದಲ್ಲಿ ಸಪ್ತರ್ಷಿಗಳಲ್ಲಿ ಒಬ್ಬರಾಗಿ ಅಭಿನಯಿಸಿದ್ದ ಮುತ್ತುರಾಜ್, ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು.
* [[೧೯೫೩]]ರಲ್ಲಿ ಆಗಷ್ಟೆ ಮದುವೆಯಾಗಿದ್ದ ಮುತ್ತುರಾಜ್ ದಂಪತಿಗಳು [[ನಂಜನಗೂಡು|ನಂಜನಗೂಡಿನಿಂದ]] ಮೈಸೂರಿಗೆ ಹೊರಡಲು ರೈಲ್ವೆ ನಿಲ್ದಾಣದಲ್ಲಿದ್ದರು. ಅದೇ ಸಮಯಕ್ಕೆ [[ಹೆಚ್.ಎಲ್.ಎನ್.ಸಿಂಹ]] ಕೂಡ ಮೈಸೂರಿಗೆ ಹೋಗಲು ಅಲ್ಲಿಗೆ ಬಂದಿದ್ದರು. ಅವರು ಮುತ್ತು ರಾಜ್‌ರವರನ್ನು ಚಿಕ್ಕಂದಿನಿಂದ ನೋಡಿದ್ದರು. ಅಂದು ರೈಲ್ವೆ ನಿಲ್ದಾಣದಲ್ಲಿ ಆ ದಂಪತಿಗಳನ್ನು ಕಂಡು ಪ್ರೀತಿಯಿಂದ ಮಾತನಾಡಿಸಿ, ಯೋಗಕ್ಷೇಮ ವಿಚಾರಿಸಿದರು.
* ಸಿಂಹ ಕಣ್ಣಪ್ಪನ ಪಾತ್ರಕ್ಕೆ ಹೊಸನಟನನ್ನು ಹುಡುಕುತ್ತಿದ್ದ ಸಮಯ. ಅಂದು ಕಟ್ಟುಮಸ್ತಾದ ಆಳು ಮುತ್ತರಾಜ್‌ರವರನ್ನು ಕಂಡ ತಕ್ಷಣ "ಇವನನ್ನೇ ಕಣ್ಣಪ್ಪನಾಗಿ ಏಕೆ ಮಾಡಬಾರದು" ಎಂಬ ಭಾವನೆ ಮೂಡಿತ್ತು. ಮುತ್ತುರಾಜ್ ಬಳಿ ವಿಳಾಸವನ್ನು ಪಡೆದು, ದಂಪತಿಗಳಿಗೆ ಶುಭ ಕೋರಿ ಸಿಂಹ ಬೀಳ್ಕೊಟ್ಟಿದ್ದರು. ಮೇಲಿನ ಘಟನೆ ನಡೆದ ಕೆಲ ದಿನಗಳಲ್ಲಿ ಮೈಸೂರಿನ ಟೌನ್‌ಹಾಲಿನಲ್ಲಿ ಬೇಡರ ಕಣ್ಣಪ್ಪ ನಾಟಕ ಪ್ರದರ್ಶನವಿತ್ತು. ಅದರಲ್ಲಿ ಮುತ್ತುರಾಜ್ ಕಣ್ಣಪ್ಪನ ಪಾತ್ರ ವಹಿಸುತ್ತಾರೆ ಎಂದು ಸಿಂಹರವರಿಗೆ ತಿಳಿಯಿತು. * ಆ ದಿನ, ಅರ್ಧಗಂಟೆ ನಾಟಕ ನೋಡಿ, ಮುತ್ತುರಾಜ್‌ರವರ ತನ್ಮಯತೆಯ ಅಭಿನಯ ಕಂಡು ಸಿಂಹ ಸಂತೋಷ ಪಟ್ಟರು. [[ಗುಬ್ಬಿ ಕರ್ನಾಟಕ ಫಿಲಂಸ್]] ನಿರ್ಮಿಸುತ್ತಿದ್ದ [[ಬೇಡರ ಕಣ್ಣಪ್ಪ]] ಚಿತ್ರದಲ್ಲಿನ ಕಣ್ಣಪ್ಪನ ಪಾತ್ರಕ್ಕೆ ಈತನೇ ಸರಿಯಾದ ವ್ಯಕ್ತಿ ಎಂದುಕೊಂಡು ನಿರ್ಮಾಪಕ [[ಎ.ವಿ.ಎಂ.ಚೆಟ್ಟಿಯಾರ್]] ಅವರನ್ನು ಸಂಪರ್ಕಿಸಿ, ಆ ಚಿತ್ರದ ಸಹ ನಿರ್ಮಾಪಕರಾಗಿದ್ದ [[ಗುಬ್ಬಿ ವೀರಣ್ಣ]]ನವರಿಗೆ ಈ ವಿಷಯ ತಿಳಿಸಿ ಅವರನ್ನು ಒಪ್ಪಿಸಿದರು.
* ನಂತರ ಮುತ್ತುರಾಜ್ [[ಜಿ.ವಿ.ಅಯ್ಯರ್]] ಹಾಗು [[ನರಸಿಂಹರಾಜು]] ಇವರುಗಳನ್ನು 'ಸ್ಕ್ರೀನ್ ಟೆಸ್ಟ್' ಗೆ [[ಚೆನ್ನೈ|ಮದರಾಸಿಗೆ]] ಬರಲು ಆಹ್ವಾನಿಸಿದರು.ನಿರ್ದೇಶಕ [[ಎಚ್. ಎಲ್. ಎನ್. ಸಿಂಹ|ಎಚ್.ಎಲ್.ಎನ್.ಸಿಂಹ]] ಅವರಿಂದ ಮುತ್ತುರಾಜ್‌ಗೆ-'''ರಾಜ‌ಕುಮಾರ್''' ಎಂಬ ಹೊಸ ಹೆಸರಿನ ನಾಮಕರಣವಾಯಿತು. ರಾಜಕುಮಾರ್ [[ಬೇಡರ ಕಣ್ಣಪ್ಪ]] ಚಿತ್ರದ ನಾಯಕನಾಗಿ ಅಭಿನಯಿಸಿದರು.
* ಚಿತ್ರವು [[೧೯೫೪]]ರ [[ಮೇ]] ತಿಂಗಳಲ್ಲಿ ಆಗಿನ [[ಕರ್ನಾಟಕ|ಮೈಸೂರು ರಾಜ್ಯದಲ್ಲಿ]] ಎಲ್ಲೆಡೆ ಬಿಡುಗಡೆಗೊಂಡಿತು. [[ಬೇಡರ ಕಣ್ಣಪ್ಪ]] ಚಿತ್ರ ರಾಷ್ಟ್ರಪ್ರಶಸ್ತಿ ಪಡೆದ ಪ್ರಥಮ ಚಿತ್ರವಾಗಿ [[ಕನ್ನಡ ಚಿತ್ರರಂಗ]]ದಲ್ಲಿಯೇ ಒಂದು ಮೈಲಿಗಲ್ಲಾಯಿತು. ಮದರಾಸು 'ಸ್ಕ್ರೀನ್ ಟೆಸ್ಟ್' ನೋಡಿದ ನಿರ್ಮಾಪಕ [[ಎ.ವಿ.ಎಂ.ಚೆಟ್ಟಿಯಾರ್]] ಅವರು [[ಹೆಚ್.ಎಲ್.ಎನ್.ಸಿಂಹ]] ಅವರ ಬಳಿ ಹೋಗಿ " ಈ ಉದ್ದ ಮೂಗಿನ ಮತ್ತು ಹಲ್ಲು ಹುಬ್ಬು ಇರುವವರನ್ನು ಹಾಕಿಕೊಂಡು ಏನು ಚಿತ್ರ ಮಾಡುತ್ತೀಯ ಎಂದು ಕೇಳಿದ್ದರಂತೆ. ಆದರೆ [[ಹೆಚ್.ಎಲ್.ಎನ್.ಸಿಂಹ]] ಅವರು ನಿರ್ಮಾಪಕರಿಗೆ [[ಎ.ವಿ.ಎಂ.ಚೆಟ್ಟಿಯಾರ್]], ಇವರೇ ಸರಿಯಾದ ವ್ಯಕ್ತಿಗಳು ಎಂದು ಹೇಳಿ ಒಪ್ಪಿಸಿದ್ದರು.
 
=== ಬಣ್ಣದ ಬದುಕಿನ ಪಕ್ಷಿನೋಟ ===
೮೦ ನೇ ಸಾಲು:
* ಸುಮಾರು ೨೦೬ ಚಿತ್ರಗಳಲ್ಲಿ ನಾಯಕನಟರಾಗಿ ನಟಿಸಿರುವ ರಾಜ್ ಕುಮಾರ್ ಬೆರಳೆಣಿಕೆಯ ರಿಮೇಕ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವೆಂದರೆ "ಅಣ್ಣ ತಂಗಿ","ಮುರಿಯದ ಮನೆ" ,"ವಾತ್ಸಲ್ಯ", "ಮನಸಾಕ್ಷಿ", "ಬಾಳ ಬಂಧನ" ,"ನನ್ನ ತಮ್ಮ", "ಭಾಗ್ಯವಂತರು", "ಅಪೂರ್ವ ಸಂಗಮ" ಮುಂತಾದವುಗಳು. ಅಲ್ಲಿಯೂ ಅವರು ಮೂಲ ನಟರನ್ನು ಅನುಕರಿಸದೆ ತಮ್ಮದೇ ಶೈಲಿಯಲ್ಲಿ ಅಭಿನಯಿಸಿದ್ದಾರೆ. "ಬೇಡರ ಕಣ್ಣಪ್ಪ" ತೆಲುಗಿನಲ್ಲಿ ‘ಶ್ರೀ ಕಾಳಹಸ್ತಿ ಮಹಾತ್ಮಂ’ ಎಂಬ ಹೆಸರಲ್ಲಿ ತಯಾರಾಯಿತು. ಅದರಲ್ಲಿ ಕೂಡ ಡಾ. ರಾಜ್ ಕುಮಾರ್ ಹೀರೊ ಆಗಿ ನಟಿಸಿದರು. ಇದು ಬೇರೆ ಭಾಷೆಯಲ್ಲಿ ರಾಜ್ ಕುಮಾರ್ ನಟಿಸಿದ ಏಕೈಕ ಚಿತ್ರ.
 
* ಡಾ. ರಾಜ್ ಕುಮಾರ್ ಅವರು ಅಂದಿನ ಬಹುತೇಕ ಎಲ್ಲ ಜನಪ್ರಿಯ ನಾಯಕಿಯರೊಂದಿಗೆ ನಟಿಸಿದ್ದಾರೆ. [[ಎಂ.ವಿ.ರಾಜಮ್ಮ]], [[ಆದವಾನಿ ಲಕ್ಷ್ಮಿದೇವಿ]], [[ಪಂಡರೀಬಾಯಿ]], [[ಪ್ರತಿಮಾದೇವಿ]], [[ಹರಿಣಿ]], [[ಸಾಹುಕಾರ್ ಜಾನಕಿ ]] , [[ಕೃಷ್ಣಕುಮಾರಿ]], [[ರಾಜಸುಲೋಚನ]], [[ಬಿ.ಸರೋಜದೇವಿ]], [[ಸಂಧ್ಯಾ]],[[ಆದವಾನಿ ಲಕ್ಷ್ಮಿದೇವಿ]], [[ಮೈನಾವತಿ]], [[ಲೀಲಾವತಿ]], [[ಜಯಂತಿ]], [[ಭಾರತಿ]], [[ಕಲ್ಪನಾ]], [[ವಂದನಾ]], [[ಕಾಂಚನಾ]], [[ಚಂದ್ರಕಲಾ]], [[ಉದಯಚಂದ್ರಿಕಾ]], [[ಬಿ.ವಿ.ರಾಧ]], [[ಶೈಲಶ್ರೀ]], [[ರಾಜಶ್ರೀ]], [[ವಾಣಿಶ್ರೀಆರತಿ]], [[ಜಿ.ವಿ.ಲತಾಮಂಜುಳಾ]], [[ಆರತಿಲಕ್ಷ್ಮಿ]], [[ಮಂಜುಳಾರೇಖಾ]], [[ಲಕ್ಷ್ಮಿಜಯಮಾಲಾ]], [[ರೇಖಾಜಯಪ್ರದಾ]], [[ಜಯಮಾಲಾಗಾಯತ್ರಿ]], [[ಜಯಪ್ರದಾಸರಿತಾ]], [[ಜಯಚಿತ್ರಾ]], [[ಗಾಯತ್ರಿಕಾಂಚನಾ]], [[ಸರಿತಾವಾಣಿಶ್ರೀ]], [[ಜಿ.ವಿ.ಲತಾ]], [[ಮಾಧವಿ]], [[ಗೀತಾ]], [[ಅಂಬಿಕಾ]], [[ರೂಪಾದೇವಿ]], [[ಊರ್ವಶಿ]] ಮುಂತಾದವರೊಂದಿಗೆ ನಟಿಸಿದ್ದಾರೆ. ರಾಜ್-ಭಾರತಿ, ರಾಜ್-ಲೀಲಾವತಿ, ರಾಜ್-ಜಯಂತಿ, ರಾಜ್-ಕಲ್ಪನಾ ಜೋಡಿ ಆ ಕಾಲದಲ್ಲಿ ಅತ್ಯಂತ ಜನಪ್ರಿಯ ಜೋಡಿಯಾಗಿತ್ತು.
 
===ಅವರ ನಟನೆಯ ಐತಿಹಾಸಿಕ ಚಿತ್ರಗಳು===
"https://kn.wikipedia.org/wiki/ರಾಜ್‌ಕುಮಾರ್" ಇಂದ ಪಡೆಯಲ್ಪಟ್ಟಿದೆ