ಕವಿತಾ ಕೃಷ್ಣಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೨ ನೇ ಸಾಲು:
 
==ವೃತ್ತಿ ಜೀವನ==
ಶಾಲಾ ದಿನಗಳಲ್ಲೇ ಹಾಡುಗಾರಿಕೆಗೆ ಚಿನ್ನದ ಪದಕ ಗೆದ್ದಿದ್ದ ಕವಿತಾ ತಮ್ಮ ಚಿಕ್ಕಮ್ಮನ ಸಲಹೆಯಂತೆ ಕಾಲೇಜು ಶಿಕ್ಷಣಕ್ಕೆಂದು [[ಮುಂಬೈ]]ನ ''ಸಂತ ಕ್ಷೇವಿಯರ್ ಕಾಲೇಜಿ''ನಲ್ಲಿ ಪ್ರವೇಶ ಪಡೆದರು. ಕಾಲೇಜಿನ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡಿದ್ದ ಕವಿತಾ ಅವರನ್ನು ಹೇಮಂತ್ ಕುಮಾರ್ ಅವರ ಮಗಳು ರಾನು ಮುಖರ್ಜಿ ಗುರುತಿಸಿ ತಮ್ಮ ತಂದೆಯ ಬಳಿ ಕರೆದೊಯ್ದರು. ಕವಿತಾ ಅವರ ಸಂಗೀತ ಕೇಳಿ ಹೇಮಂತ್ ಕುಮಾರರು ತಮ್ಮ ಗುಂಪಿನ ಗಾಯಕಿಯನ್ನಾಗಿ ಸೇರಿಸಿಕೊಂಡರು. ಹೇಮಂತ್ ಕುಮಾರರ ಜೊತೆ ವೇದಿಕೆಗಳಲ್ಲಿ ಹಾಡುತಿದ್ದ ಕವಿತಾ, ಒಮ್ಮೆ [[ಮನ್ನಾ ಡೆ]] ಅವರ ಗಮನ ಸೆಳೆದು ಅವರು ಜಾಹೀರಾತುಗಳಲ್ಲಿ ಹಾಡುವ ಅವಕಾಶ ಕೊಡಿಸಿದರು. ಆ ವೇಳೆಗಾಗಲೇ ಶಾರದಾ ಹೆಸರಿನ ಖ್ಯಾತ ಗಾಯಕಿ ಇದ್ದುದರಿಂದ ''ಕವಿತಾ''ಎಂದು ಹೊಸ ಹೆಸರು ಇಡಲಾಯಿತು. ಜಂಡುಬಾಮ್, ಉಜಾಲ, ವಾಷಿಂಗ್ ಪೌಡರ್ ನಿರ್ಮ ಮುಂತಾದ ಜಾಹಿರಾತು ಹಾಡುಗಳು ದೇಶಾದ್ಯಂತ ಜನಪ್ರಿಯವಾಗುತ್ತಿದ್ದ ಹಾಗೇ ಜಯಾ ಚಕ್ರವರ್ತಿ ಅವರ ಮೂಲಕ [[Laxmikant-Pyarelal|''ಲಕ್ಷ್ಮಿಕಾಂತ್-ಪ್ಯಾರೇಲಾಲ್]]'' ಅವರ ಅಂಗಳವನ್ನು ಕವಿತಾ ಸೇರಿದರು.
 
'''ಹಿನ್ನೆಲೆ ಗಾಯಕಿಯಾಗಿ''':
ಕವಿತಾ ಪೂರ್ಣಪ್ರಮಾಣದ ಗಾಯಕಿಯಾಗುವ ಮೊದಲು ಟ್ರ್ಯಾಕ್ ಸಿಂಗರ್ ಆಗಿ ಕೆಲಸ ಮಾಡಿದರು. [[Lata Mangeshkar|ಲತಾ ಮಂಗೇಶ್ಕರ್]], [[Asha Bhosle|ಆಶಾ ಭೋಂಸ್ಲೆ]] ಮುಂತಾದ ಹೆಸರಾಂತ ಗಾಯಕಿಯರಿಗೆಂದು ಟ್ರ್ಯಾಕ್ ಹಾಡುತ್ತಿದ್ದರು. ಈ ಹಿಂದೆಯೇ ಬಂಗಾಳಿ ಚಿತ್ರದಲ್ಲಿ ಲತಾ ಅವರ ಹಾಡೊಂದರಲ್ಲಿ ಸಹಗಾಯಕಿಯಾಗಿಯೂ ಹಾಡಿದ್ದರು.
ಹೀಗಿದ್ದ ಕವಿತಾ ಪೂರ್ಣಪ್ರಮಾಣದಲ್ಲಿ ಗಾಯಕಿ ಆಗಿ ತಮ್ಮ ಮೊದಲ ಹಾಡನ್ನು ಹಾಡಿದ್ದು [[Kannada language|ಕನ್ನಡ]] ಭಾಷೆಯಲ್ಲಿ. ೧೯೭೮
ರಲ್ಲಿ ಬಿಡುಗಡೆಯಾದ [[Ondanondu Kaladalli|ಒಂದಾನೊಂದು ಕಾಲದಲ್ಲಿ]] ಚಿತ್ರದಲ್ಲಿ ಕವಿತಾ ಅವರಿಗೆ ಮೊದಲ ಅವಕಾಶ ಕೊಟ್ಟವರು [[Girish Karnad|ಗಿರೀಶ್ ಕಾರ್ನಾಡ್]] ಅವರು. ''ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತಾ..'' ಎಂದು ಆರಂಭವಾಗುವ ಆ ಹಾಡನ್ನು ಬರೆದದ್ದು [[Chandrashekhara Kambara|ಚಂದ್ರಶೇಖರ ಕಂಬಾರ]]. ಸಂಗೀತ ನೀಡಿದವರು [[Bhaskar Chandavarkar|ಭಾಸ್ಕರ್ ಚಂದಾವರ್ಕರ್]]. ಮುಂಬೈನ ಸ್ಟುಡಿಯೋವೊಂದರಲ್ಲಿ ಈ ಹಾಡನ್ನು ಮುದ್ರಿಸಿಕೊಂಡ ಮೇಲೆ ಗಿರೀಶ್ ಕಾರ್ನಾಡರು "ಚೆನ್ನಾಗಿ ಬಂದಿದೆ, ಮುಂದೆ ಒಳ್ಳೆಯ ಭವಿಷ್ಯ ನಿನಗಿದೆ" ಎಂದಿದ್ದರು. ಆ ಮಾತು ನಿಜವಾಗಲು ಹೆಚ್ಚು ಕಾಲವೇನು ಬೇಕಾಗಲಿಲ್ಲ.
 
೧೯೮೦ರಲ್ಲಿ ಬಂದ [[Maang Bharo Sajana]] ಹಿಂದಿ ಚಿತ್ರಕ್ಕೆಂದು ಕವಿತಾರಿಂದ ಹಾಡು ಹಾಡಿಸಿದ್ದರೂ ಚಿತ್ರದಲ್ಲಿ ಆ ಹಾಡನ್ನು ಕೈಬಿಡಲಾಗಿತ್ತು. ಮುಂದೆ ೧೯೮೫ರಲ್ಲಿ ಬಂದ [[Pyaar Jhukta Nahin|ಪ್ಯಾರ್ ಝುಕ್ತಾ ನಹಿ]] ಚಿತ್ರದಲ್ಲಿನ ''ತುಂಸೆ ಮಿಲ್ಕರ್'' ಹಾಡು ಹಿಂದಿ ಸಿನಿರಸಿಕರ ಮೆಚ್ಚುಗೆ ಪಡೆಯಿತು. ಕವಿತಾ ಅಲ್ಲಿಂದ [[Bollywood|ಬಾಲಿವುಡ್]] ನ ಆದ್ಯತೆಯ ಗಾಯಕಿಯಾಗಿ ಸ್ಥಾನ ಪಡೆದರು.
 
[[Mr. India|''ಮಿಸ್ಟರ್ ಇಂಡಿಯಾ]]'' ಚಿತ್ರದಲ್ಲಿ ಆಶಾ ಭೋಸ್ಲೆಗಾಗಿ ಕವಿತಾ ಹಾಡಿದ ಟ್ರ್ಯಾಕ್ ಹಾಡು "ಹವಾ ಹವಾಯಿ". ಆದರೆ ಕವಿತಾ ಹಾಡಿದ ರೀತಿಗೇ ಲಕ್ಷ್ಮಿಕಾಂತ್-ಪ್ಯಾರೇಲಾಲ್ ''ಇದೇ ಅಂತಿಮ, ಮತ್ತೆ ಯಾರೂ ಹಾಡುವುದು ಬೇಡ'' ಎಂದು ನಿರ್ಧರಿಸಿ ಕವಿತಾ ಧ್ವನಿಯಲ್ಲೇ ಹಾಡನ್ನು ಉಳಿಸಿಕೊಂಡರು. ಮುಂದಿನದೆಲ್ಲ ಈಗ ಇತಿಹಾಸವೇ ಸರಿ.
ಭಾರತ ಚಿತ್ರರಂಗದ ಸರಿಸುಮಾರು ಎಲ್ಲಾ ಸಂಗೀತ ನಿರ್ದೇಶಕರೊಡನೆ ಕವಿತಾ ಕೆಲಸ ಮಾಡಿದ್ದಾರೆ. ಎಲ್ಲಾ ಭಾಷೆಯಲ್ಲೂ ಹಿಟ್ ಹಾಡುಗಳನ್ನೂ, ಅಭಿಮಾನಿಗಳನ್ನೂ ಸಂಪಾದಿಸಿಕೊಂಡಿದ್ದಾರೆ. ಲಕ್ಷ್ಮಿಕಾಂತ್-ಪ್ಯಾರೇಲಾಲ್, [[A. R. Rehman|ಎ. ಆರ್. ರೆಹಮಾನ್]], [[R. D. Burman|ಆರ್. ಡಿ. ಬರ್ಮನ್]], [[Sadhu Kokila|ಸಾಧು ಕೋಕಿಲ]], [[Hamsalekha|ಹಂಸಲೇಖ]], [[Guru Kiran|ಗುರು ಕಿರಣ್]] ಮೊದಲಾದವರ ಸಂಯೋಜನೆಯಲ್ಲಿ ಕವಿತಾ ಹಾಡಿದ ಹಾಡುಗಳು ಸದಾ ಹಸಿರು.
 
೧೯೯೦ರ ದಶಕ ಹಿಂದಿ ಸಿನಿಮಾ ಹೊಸ ಹೊಸ ಪ್ರತಿಭೆಗಳನ್ನು ಕಂಡ ಕಾಲ. ತಮ್ಮದೇ ಛಾಪು ಮೂಡಿಸಿದ [[Anuradha Paudwal|ಅನುರಾಧ ಪೊಡ್ವಾಲ್]], [[Alka Yagnik|ಅಲ್ಕಾ ಯಾಗ್ನಿಕ್]], [[Sadhana Sargam|ಸಾಧನಾ ಸರಿಗಮ್]] ಮುಂತಾದ ಹೊಸ ಪ್ರತಿಭಾವಂತ ಧ್ವನಿಗಳ ಮಧ್ಯೆ ಮರೆಯಲಾಗದ ಇನ್ನೊಂದು ಹೆಸರೇ ಕವಿತಾ ಕೃಷ್ಣಮೂರ್ತಿ.