ಮದಕರಿ ನಾಯಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೪ ನೇ ಸಾಲು:
ಬೆಟ್ಟದ ಮೇಲೆ ವಾಸಿಸುತ್ತಿದ್ದ ಬುಡಕಟ್ಟು ಜನಾಂಗದವರಾಗಿದ್ದ ಇವರು ಬೇಟೆ ಹಾಗು ದನ ಕಾಯುವ ಮೂಲಕ ಜೀವನ ಸಾಗಿಸುತ್ತಿದ್ದರು. ಇವರ ಮೂಲದ ಬಗೆಗಿರುವ ವಿವರಣೆಯು ಅಸ್ಪಷ್ಟವಾಗಿದೆ. ಒಂದು ಸಾಂಪ್ರದಾಯಿಕ ನಂಬಿಕೆಯ ಪ್ರಕಾರ, ಮೂರು ಬೇಡ ಸಮುದಾಯದ ಕುಟುಂಬಗಳು, ತಿರುಪತಿಯ ಜಡಿಕಲ್-ದುರ್ಗದಿಂದ ವಲಸೆ ಬಂದು ಭರಮಸಾಗರದ ಸಮೀಪದ ನೀರ್ಥಡಿಯಲ್ಲಿ ಸುಮಾರು ೧೪೭೫ರಲ್ಲಿ ನೆಲೆಗೊಳ್ಳುತ್ತವೆ. ಇವರನ್ನು ಕಮಗೆತಿ ಕುಟುಂಬ ಹಾಗು [[ವಾಲ್ಮೀಕಿ]] ''ಗೋತ್ರ'' ಕ್ಕೆ ಸೇರಿದವರೆಂದು ಹೇಳಲಾಗುತ್ತದೆ. ಇವರಲ್ಲಿ ಮಗ ಹಾಗು ಮೊಮ್ಮಗ, [[ಹಿರೇ ಹನುಮಪ್ಪ ನಾಯಕ]] ಹಾಗು [[ತಿಮ್ಮಣ್ಣ ನಾಯಕ]], [[ದಾವಣಗೆರೆ]] ''ತಾಲ್ಲೂಕಿನ'' ಮತ್ತಿಯಲ್ಲಿ ನೆಲೆಯಾಗುತ್ತಾರೆ. ಇವರಲ್ಲಿ [[ಕಮಗೇತಿ ತಿಮ್ಮಣ್ಣ ನಾಯಕ]]ನೆಂದು ಕರೆಯಲ್ಪಡುವ ಎರಡನೇಯವನನ್ನು [[ವಿಜಯನಗರ]]ದ ರಾಜನು ಮೊದಲು [[ಹೊಳಲ್ಕೆರೆ]]ಗೆ, ನಂತರ ಹಿರಿಯೂರಿಗೆ, ಹಾಗು ಅಂತಿಮವಾಗಿ ಚಿತ್ರದುರ್ಗದ ನಾಯಕನನ್ನಾಗಿ ನೇಮಿಸಿಕೊಳ್ಳುತ್ತಾನೆ. ಈತ ಚಿತ್ರದುರ್ಗದ ಬೆಟ್ಟವನ್ನು ಬಲಪಡಿಸಿ, ಅದನ್ನು ಯಾವ ರೀತಿ ನಿಭಾಯಿಸುತ್ತಾನೆಂದರೆ ಆತನ ವಿರುದ್ಧ ಸೆಣಸಲು ರಾಜನು ಸೈನ್ಯವನ್ನು ಕಳುಹಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮತ್ತೊಂದು ನಂಬಿಕೆ ಪ್ರಕಾರ, ತಿಮ್ಮಣ್ಣ ನಾಯಕನು [[ತಿರುಪತಿ]] ಸಮೀಪದ'' ಬೆಟ್ಟಗಳ'' ಕೆಳಗಿನ ಮದಕೇರಿ ಎಂಬ ಸ್ಥಳದಿಂದ ಒಂದು ಸಣ್ಣ ಸೈನ್ಯದೊಂದಿಗೆ ಇಲ್ಲಿಗೆ ಬಂದು [[ಬಸವಾಪಟ್ಟಣ]]ದ ಪಾಳೆಯಗಾರರಿಂದ ನೇಮಕಗೊಳ್ಳುತ್ತಾನೆ. ನಂತರದಲ್ಲಿ, ಆತ ಮತ್ತಿಯಲ್ಲಿ ಹೊಂದಿದ್ದ ಉಪಪತ್ನಿಗೆ ಸಂಬಂಧಿಸಿದ ಕೆಲ ಕಲಹಗಳು ಉಂಟಾಗುತ್ತವೆ. ಇದರಿಂದ ಆತ ಆ ಸ್ಥಳವನ್ನು ತೊರೆದು [[ಮಾಯಕೊಂಡ]]ದಲ್ಲಿ ಆಶ್ರಯ ಪಡೆಯುತ್ತಾನೆ. ಅಲ್ಲಿಂದಲೂ ಸ್ಥಳಾಂತರಗೊಂಡು, ಗುಂಟೂರಿನ ಸಮೀಪದ ಕಾಡಿನಲ್ಲಿ ತಲೆಮರೆಸಿಕೊಳ್ಳುತ್ತಾನೆ. ಅದಲ್ಲದೇ ತನ್ನದೇ ಆದ ತಂಡ ಕಟ್ಟಿಕೊಂಡ ನಂತರ, ಆ ಪ್ರದೇಶವನ್ನು ಲೂಟಿ ಮಾಡಲು ಆರಂಭಿಸಿದ. ಅಲ್ಲದೇ ಹಳೆಯೂರು ಸಮೀಪ ರಂಗಾಪಟ್ನವೆಂಬ ಒಂದು ಸಣ್ಣ ಕೋಟೆಯನ್ನು ನಿರ್ಮಿಸಿದ. ಈತ ಮಾಡುತ್ತಿದ್ದ ಲೂಟಿಯಿಂದ ಕೋಪಗೊಂಡ ಹರಪನಹಳ್ಳಿ, ನಿಡುಗಲ್, ಹಾಗು ಬಸವಾಪಟ್ಟಣದ ಪಾಳೆಯಗಾರರು, ಅವನ ವಿರುದ್ಧ ಒಂದಾಗಿ, ವಿಜಯನಗರದ ಕೆಲವು ಸೈನಿಕರೊಂದಿಗೆ, ರಂಗಾಪಟ್ನದೆಡೆಗೆ ಕ್ರಮಣ ಮಾಡುತ್ತಾರೆ. ತಿಮ್ಮಣ್ಣ ನಾಯಕನ ಸೈನ್ಯವು ಬಲವಂತದಿಂದ ಚಿತ್ರದುರ್ಗಕ್ಕೆ ಹಿಂದಿರುಗಬೇಕಾಗುತ್ತದೆ, ಅಲ್ಲಿ ಈತನ ಮೇಲೆ ಆಕ್ರಮಣ ಮಾಡಲಾಗುತ್ತದೆ. ಈ ಘಟನೆ ನಡೆದ ಸಂದರ್ಭದಲ್ಲೇ, ವಿಜಯನಗರದ ಅರಸರನ್ನು ಅವಲಂಬಿಸಿದ ನಾಯಕರುಗಳಲ್ಲಿ ಒಬ್ಬ ಎಂದು ಆತನನ್ನು ಪರಿಗಣಿಸಲಾಯಿತು. ಈ ಎಲ್ಲಾ ಘಟನೆಗಳು ನಡೆದದ್ದು ಸುಮಾರು ೧೫೬೨ ರ ಅವಧಿಯಲ್ಲಿ.
 
[[===ತಿಮ್ಮಣ್ಣ ನಾಯಕ ===]]
[[ತಿಮ್ಮಣ್ಣ ನಾಯಕ]]ನು, ತನ್ನ ವಿರುದ್ಧ ಸೈನ್ಯವನ್ನು ಕಳುಹಿಸಿದ [[ವಿಜಯನಗರ|ವಿಜಯನಗರದ]] ರಾಜಕುಮಾರ ಸಾಳುವ ನರಸಿಂಗ ರಾಯನ ಕುದುರೆಯನ್ನು ಅಪಹರಿಸುವ ಉದ್ದೇಶದಿಂದ ಕಗ್ಗತ್ತಲ ರಾತ್ರಿಯಲ್ಲಿ ಅವರ ಪಾಳೆಯಕ್ಕೆ ರಹಸ್ಯವಾಗಿ ನುಗ್ಗುವ ವಿಲಕ್ಷಣ ಸಾಹಸವೊಂದಕ್ಕೆ ಕೈ ಹಾಕುತ್ತಾನೆ. ರಾಜಕುಮಾರನು ಎಚ್ಚರಗೊಳ್ಳುತ್ತಾನೆ, ಹಾಗು ತಿಮ್ಮಣ್ಣ ಅವನ ಕಣ್ಣಿಗೆ ಬೀಳದಂತೆ ಒಣ ಹುಲ್ಲಿನಲ್ಲಿ ಅಡಗಿಕೊಳ್ಳುತ್ತಾನೆ. ರಾಜಕುಮಾರನು ನೆಲಕ್ಕೆ ಹಗ್ಗದ ಸಹಾಯದಿಂದ ಸಡಿಲುಗೊಂಡ ಕುದುರೆಯ ಗೂಟವನ್ನು ಮತ್ತೆ ಸರಿಮಾಡುತ್ತಾನೆ, ಹಾಗು ತಿಳಿಯದೆ ತಿಮ್ಮಣ್ಣನನ್ನೂ ಸೇರಿಸಿ ಅಲ್ಲಿ ಕಟ್ಟಿ ಹಾಕಿದಂತೆ ಬಂಧಿಸುತ್ತಾನೆ. ತಿಮ್ಮಣ್ಣ ನಿಶಬ್ದವಾಗಿ ಕೆಲಹೊತ್ತು ಹಾಗೇ ಅಡಗಿ ಕುಳಿತುಕೊಳ್ಳುತ್ತಾನೆ. ಅಲ್ಲದೇ ಮತ್ತೆ ಎಲ್ಲವೂ ಮತ್ತೆ ಮೊದಲಿನಂತಾದಾಗ, ಹಗ್ಗದ ಆಣಿಯಿಂದ ಬಂಧಿತನಾದ ಆತ ತನ್ನನ್ನು ತಾನು ಬಿಡುಗಡೆ ಮಾಡಿಕೊಂಡು ಕುದುರೆಯನ್ನು ಅಪಹರಿಸುತ್ತಾನೆ. ತಿಮ್ಮಣ್ಣನನ್ನು ಬೆದರಿಸಿ ಮುತ್ತಿಗೆ ಹಾಕಲು ಬಂದ ಸೈನ್ಯಕ್ಕೆ ಈ ಉದ್ದೇಶ ಸಫಲವಾಗುವುದಿಲ್ಲವೆಂಬುದು ಈ ಘಟನೆಯಿಂದ ತಿಳಿದುಬರುತ್ತದೆ. ಇದಾದ ನಂತರ, ಶಾಂತಿ ಸಂಧಾನದ ಮೂಲಕ ವ್ಯಾಜ್ಯ ಬಗೆಹರಿಸಲಾಗುತ್ತದೆ. ವಿಜಯನಗರದ ಅರಸನು ತಿಮ್ಮಣ್ಣನನ್ನು ರಾಜಧಾನಿಗೆ ಆಹ್ವಾನಿಸುತ್ತಾನೆ. ಅಲ್ಲದೇ ಆತನ ಸಾಹಸಕಾರ್ಯವನ್ನು ಮುಕ್ತಕಂಠದಿಂದ ಹೊಗಳುತ್ತಾನೆ. ರಾಜನ ಕೋರಿಕೆಯ ಮೇರೆಗೆ, ತಿಮ್ಮಣ್ಣ ನಾಯಕ ಗುಲ್ಬರ್ಗದ ಮೇಲೆ ಆಕ್ರಮಣ ನಡೆಸುತ್ತಾನೆ. ವಿಜಯನಗರ ಸೈನ್ಯವು ಗುಲ್ಬರ್ಗಕ್ಕೆ ಮುತ್ತಿಗೆ ಹಾಕಿದ ಆರು ತಿಂಗಳ ನಂತರವೂ ಅದನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಇದರಿಂದ ಸಂತುಷ್ಟನಾದ ಅರಸನು, ತಿಮ್ಮಣ್ಣನ್ನು ಆಸ್ಥಾನಕ್ಕೆ ಆಹ್ವಾನಿಸುತ್ತಾನೆ. ನಂತರದಲ್ಲಿ ತಿಮ್ಮಣ್ಣ, ಅರಸನ ಅಸಮಾಧಾನಕ್ಕೆ ಗುರಿಯಾಗುತ್ತಾನೆ. ಅಲ್ಲದೇ ವಿಜಯನಗರದ ಸೆರೆಮನೆಯಲ್ಲಿ ಬಂಧಿಯಾಗಿ ಅಲ್ಲಿಯೇ ಮರಣಹೊಂದುತ್ತಾನೆ.
 
"https://kn.wikipedia.org/wiki/ಮದಕರಿ_ನಾಯಕ" ಇಂದ ಪಡೆಯಲ್ಪಟ್ಟಿದೆ