ಸದಸ್ಯ:Indudhar Haleangadi/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪೨ ನೇ ಸಾಲು:
ಕಾಯ್ದಿರಿಸಿದ [[ವಿಧಾನ ಸಭೆ|ವಿಧಾನಸಭಾ]] ಕ್ಷೇತ್ರದ, [[ಕಾಂಗ್ರೆಸ್]] ಶಾಸಕರೊಬ್ಬರ ಸಂಬಂಧಿಯೊಬ್ಬರು ಆಗಸ್ಟ್ ೧೧, ೨೦೨೦ ರ ಸಂಜೆ [[ಫೇಸ್‌ಬುಕ್‌|ಫೇಸ್‌ಬುಕ್]] ಪೋಸ್ಟ್ ಈ ಎಲ್ಲಾ ಗಲಭೆಗೆ ಮೂಲ ಕಾರಣವಾಗಿದೆ. ನವೀನ್ ಹೆಸರಿನ ಸಂಬಂಧಿ, ಫೇಸ್‌ಬುಕ್ ನಲ್ಲಿ ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಪೋಸ್ಟ್ ಒಂದನ್ನು ಹಂಚಿದ್ದರು. ಇದಕ್ಕೆ ಮಹಮ್ಮದ್ ಅನುಯಾಯಿಗಳಿಂದ ತೀವೃ ವಿರೋಧ ವ್ಯಕ್ತವಾಯಿತು. ರಾತ್ರಿ ಸುಮಾರು ೮-೯ ಗಂಟೆಯ ಹೊತ್ತಿಗೆ, ಬೆಂಗಳೂರಿನ ಕಾವಲ್ ಬೈರಸಂದ್ರದಲ್ಲಿರುವ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆಯ ಹೊರಗೆ ದೊಡ್ಡ ಜನಸಮೂಹವೇ ಜಮಾಯಿಸಿತ್ತು. ಅಲ್ಲಿ "ಫೇಸ್‌ಬುಕ್ ನ ಅವಹೇಳನಕಾರಿ ಹೇಳಿಕೆಯ" ವಿರುದ್ಧ ಇವರು ಗರ್ಜಿಸಲು ಪ್ರಾರಂಭಿಸಿದರು. ಶ್ರೀನಿವಾಸ ಮೂರ್ತಿಯ ಸೋದರಳಿಯನೆಂದು ಹೇಳಲಾಗುವ ನವೀನ್‌ನನ್ನು ಬಂಧಿಸುವಂತೆ ಒತ್ತಾಯಿಸಿ ಜನಸಮೂಹ ಅಲ್ಲಿ ಅಕ್ಕಪಕ್ಕದಲ್ಲಿ ಸಿಕ್ಕ ವಸ್ತುಗಳಿಗೆ ಬೆಂಕಿ ಹಚ್ಚಲು ಪ್ರಾರಂಭಿಸಿದರು. ನೆರೆದಿದ್ದ ಜನರು, ಈ ವಿಧ್ವಂಸಕ ಕೃತ್ಯವನ್ನು ಪ್ರಾರಂಭಿಸಿದಾಗ, ಶಾಸಕರು ಮನೆಯಲ್ಲಿ ಇರಲಿಲ್ಲ. ಪ್ರತಿಭಟನಾಕಾರರು ಮನೆಯ ಮೇಲೆ ಕಲ್ಲುಗಳಿಂದ ದಾಳಿ ನಡೆಸಲು ಪ್ರಾರಂಭಿಸಿದರು<ref>https://zeenews.india.com/kannada/karnataka/restrictions-under-section-144-of-crpc-imposed-in-bengaluru-curfew-imposed-in-dj-halli-kg-halli-30454</ref>. ಶಾಸಕರ ಮನೆಯ ಹೊರಗೆ ನಿಲ್ಲಿಸಿದ್ದ ಕಾರುಗಳಿಗೂ ಅಪಾರ ಹಾನಿ ಮಾಡಿದರು.
 
ಇದೇ ವೇಳೆ, ಮತ್ತೊಂದು ಗುಂಪು, ಪೊಲೀಸ್ ಠಾಣೆಗೆ ತೆರಳಿ ಶಾಸಕರ ಸೋದರಳಿಯ ವಿರುದ್ಧ ಎಫ್‌ಐಆರ್ ದಾಖಲಿಸಲು ಹೋದರು. ಆದರೆ ಪೊಲೀಸರು ಎಫ್‌ಐಆರ್ ಬರೆಯಲು ನಿರಾಕರಿಸಿದಾಗ, ಅವರು ನೇರವಾಗಿ ಡಿಜೆ ಹಳ್ಳಿ ಪೊಲೀಸ್ ಠಾಣೆಯ ಮೇಲೆ ಹಿಂಸಾತ್ಮಕವಾಗಿ ದಾಳಿ ನಡೆಸಿದಲ್ಲದೆ, ಅಲ್ಲಿದ್ದ ವಾಹನಗಳನ್ನು ಮತ್ತು ಇತರ ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು<ref>https://vijaykarnataka.com/news/bengaluru-city/mob-attacks-on-police-in-dg-halli-police-station-over-controversial-fb-post/articleshow/77492141.cms</ref>. ಗಲಭೆಯಲ್ಲಿ ಕೆಲವರು, ಮೊಲೊಟೊವ್ ಕಾಕ್ಟೈಲ್ ಅನ್ನು ಸಹ ಬಳಸಿದರು. ಪರಿಸ್ಥಿತಿಯು ನಿಯಂತ್ರಣಕ್ಕೆ ಬಾರದಾಗ, ಪೊಲೀಸರು ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದರು. ಬಳಿಕ ನಡೆದ ಗೋಲಿಬಾರ್ ನಲ್ಲಿ ಮೂವರು ಪ್ರತಿಭಟನಾಕಾರರ ಬಲಿಯಾಗಿದೆ. ಗಲಭೆಯಲ್ಲಿ 60 [[ಪೋಲಿಸ್|ಪೊಲೀಸರು]] ಗಾಯಗೊಂಡಿದ್ದಾರೆ ಎಂದು ಪೊಲೀಸರು ವರದಿ ಮಾಡಿದ್ದಾರೆ.
 
ಜನಸಮೂಹದ ಹಲವು ಸದಸ್ಯರು, ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಯಾದ ಪಿಎಫ್‌ಐನ ರಾಜಕೀಯ ದಳ ಎಸ್‌ಡಿಪಿಐನ ಬೆಂಬಲಿಗರು ಎಂದು ಆರೋಪಿಸಲಾಗಿದೆ. ಆದರೆ, ಎಸ್.ಡಿ.ಪಿ.ಐ ನ ಅಧ್ಯಕ್ಷರು ಈ ಆರೋಪವನ್ನು ತಳ್ಳಿಹಾಕಿದ್ದು, ಪೋಲೀಸರ ನಿರ್ಲಕ್ಷ್ಯವೇ ಗಲಭೆಗೆ ಮೂಲ ಕಾರಣ ಎಂದಿದ್ದಾರೆ.<ref>https://suddivani.com/%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%a8%e0%b2%a1%e0%b3%86%e0%b2%a6-%e0%b2%97%e0%b2%b2%e0%b2%ad%e0%b3%86/</ref>