ಸದಸ್ಯ:Indudhar Haleangadi/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೦ ನೇ ಸಾಲು:
| color = #000000
| foot_montage = (ಮೇಲೆ) ಸುಟ್ಟು ಹೋಗಿರುವ ಗಾಡಿ , (ಕೆಳಗೆ) ಪಾರ್ಕಿಂಗ್‌ನಲ್ಲಿದ್ದ ನಾಗರಿಕ ವಾಹನಗಳು ಸುಟ್ಟುಹೋಗಿರುವುದು <ref>{{Cite web|date=2020-08-12|title=Bengaluru Violence Photos: Violence breaks out in Pulakeshinagar over post shared by Congress MLA’s nephew|url=https://bangaloremirror.indiatimes.com/photos/news/in-photos-violence-breaks-out-in-pulakeshinagar-over-derogatory-post-shared-by-congress-mlas-nephew/photostory/77498682.cms|access-date=2020-08-12|website=Bangalore Mirror|language=en}}</ref> }}
| date = ೧೧ ಆಗಸ್ಟ್‌, ೨೦೨೦ {{cn|date=August 2020}} <ref>{{Cite web|title=Bengaluru: CCTV footage of mob outside Congress MLA’s house accessed; ‘violence continued for over 3 hours’|url=https://www.timesnownews.com/bengaluru/article/bengaluru-cctv-footage-of-mob-outside-congress-mla-s-house-accessed-violence-continued-for-over-3-hours/635743|access-date=2020-08-12|website=www.timesnownews.com|language=en}}</ref>
| place =[[ಬೆಂಗಳೂರು]] , [[ಭಾರತ]]
| coordinates = {{coord|13.0245453|N|77.6010688|E|region:IN_type:city_source:GNS-enwiki|display=inline,title}}
೩೭ ನೇ ಸಾಲು:
}}
 
ಆಗಸ್ಟ್ ೧೧, ೨೦೨೦ ರ ರಾತ್ರಿ, [[ಕರ್ನಾಟಕ]] [[ಬೆಂಗಳೂರು|ರಾಜ್ಯ ರಾಜಧಾನಿ]] ಬೆಂಗಳೂರಿನಲ್ಲಿ ಹಿಂಸಾತ್ಮಕ ಗಲಭೆಗಳು ನಡೆದವು. 100 ಕ್ಕೂ ಹೆಚ್ಚು [[ಮುಸ್ಲಿಂ]] ಜನಸಮೂಹ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಶಾಸಕ, ಅಖಂಡ ಶ್ರೀವಾಸ ಮೂರ್ತಿ ಅವರ ನಿವಾಸಕ್ಕೆ ಬೆಂಕಿ ಹಚ್ಚಿ ದಾಳಿ ನಡೆಸಿದ್ದಾರೆ<ref>https://publictv.in/pulikeshi-nagar-congress-mla-akhanda-srinivas-murthy-house-vandalised-by-mob-bengaluru</ref>. ನಂತರ ಅದೇ ಜನಸಮೂಹವು ಡಿ.ಜೆ ಹಳ್ಳಿ ಪೊಲೀಸ್ ಠಾಣೆಯ ಮೇಲೆಯೂ ದಾಳಿಯನ್ನು ಮಾಡಿತು ಮತ್ತು ಅಲ್ಲಿ ನಿಲ್ಲಿಸಲಾಗಿದ್ದ ವಾಹನಗಳನ್ನು ಸುಟ್ಟುಹಾಕಲಾಯಿತು. ಶಾಸಕರ ಸಂಬಂಧಿಯೊಬ್ಬರು, [[ಪ್ರವಾದಿ ಮುಹಮ್ಮದ್]] ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿದ್ದರಿಂದ, ಜನಸಮೂಹ ಪ್ರತಿಭಟನೆಗೆ ಇಳಿಯಿತು ಎನ್ನಲಾಗಿದೆ. ಸುಮಾರು 3 ಗಂಟೆಗಳ ಕಾಲ ನಡೆದ ಗಲಭೆ ಮುಂದುವರೆಯಿತು<ref>https://www.timesnownews.com/bengaluru/article/bengaluru-cctv-footage-of-mob-outside-congress-mla-s-house-accessed-violence-continued-for-over-3-hours/635743</ref>. ಯಾವಾಗ ಇದು ನಿಯಂತ್ರಣಕ್ಕೆ ಬರಲಿಲ್ಲವೋ, ಪೋಲೀಸರು ಗಾಳಿಯಲ್ಲಿ ಗುಂಡನ್ನು ಹಾರಿಸಿದ್ದಾರೆ. ಆದರೂ ಕದಲದ ಜನರಿಂದ ಬೇಸತ್ತ ಪೋಲೀಸ್ ಪಡೆ, ಗೋಲಿಬಾರ್ ಶುರು ಹಚ್ಚಿದರು. ಇದರಿಂದಾಗಿ ಮೂವರು ಸಾವನ್ನಪ್ಪಿದರು<ref>https://www.tribuneindia.com/news/nation/mob-attacks-bengaluru-mlas-house-over-relatives-fb-post-3-dead-in-police-firing-125502</ref> ಮತ್ತು ಹಲವರಿಗೆ ಗಾಯಗಳಾಗಿವೆ. ಗಲಭೆಕೋರರು ನಡೆಸಿದ ದಾಳಿಯಲ್ಲಿ ಸುಮಾರು 60 ಪೊಲೀಸ್ ಸಿಬ್ಬಂದಿಗಳಿಗೆ ಗಾಯಗಳಾಗಿವೆ<ref>https://vijaykarnataka.com/news/karnataka/midnight-high-drama-police-and-protesters-clash-in-kg-halli-bengaluru/articleshow/77493367.cms</ref> ಎಂದು ವರದಿಯಾಗಿದೆ.
 
=ಹಿನ್ನೆಲೆ=
ಕಾಯ್ದಿರಿಸಿದ [[ವಿಧಾನ ಸಭೆ|ವಿಧಾನಸಭಾ]] ಕ್ಷೇತ್ರದ, [[ಕಾಂಗ್ರೆಸ್]] ಶಾಸಕರೊಬ್ಬರ ಸಂಬಂಧಿಯೊಬ್ಬರು ಆಗಸ್ಟ್ ೧೧, ೨೦೨೦ ರ ಸಂಜೆ [[ಫೇಸ್‌ಬುಕ್‌|ಫೇಸ್‌ಬುಕ್]] ಪೋಸ್ಟ್ ಈ ಎಲ್ಲಾ ಗಲಭೆಗೆ ಮೂಲ ಕಾರಣವಾಗಿದೆ. ನವೀನ್ ಹೆಸರಿನ ಸಂಬಂಧಿ, ಫೇಸ್‌ಬುಕ್ ನಲ್ಲಿ ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಪೋಸ್ಟ್ ಒಂದನ್ನು ಹಂಚಿದ್ದರು. ಇದಕ್ಕೆ ಮಹಮ್ಮದ್ ಅನುಯಾಯಿಗಳಿಂದ ತೀವೃ ವಿರೋಧ ವ್ಯಕ್ತವಾಯಿತು. ರಾತ್ರಿ ಸುಮಾರು ೮-೯ ಗಂಟೆಯ ಹೊತ್ತಿಗೆ, ಬೆಂಗಳೂರಿನ ಕಾವಲ್ ಬೈರಸಂದ್ರದಲ್ಲಿರುವ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆಯ ಹೊರಗೆ ದೊಡ್ಡ ಜನಸಮೂಹವೇ ಜಮಾಯಿಸಿತ್ತು. ಅಲ್ಲಿ "ಫೇಸ್‌ಬುಕ್ ನ ಅವಹೇಳನಕಾರಿ ಹೇಳಿಕೆಯ" ವಿರುದ್ಧ ಇವರು ಗರ್ಜಿಸಲು ಪ್ರಾರಂಭಿಸಿದರು. ಶ್ರೀನಿವಾಸ ಮೂರ್ತಿಯ ಸೋದರಳಿಯನೆಂದು ಹೇಳಲಾಗುವ ನವೀನ್‌ನನ್ನು ಬಂಧಿಸುವಂತೆ ಒತ್ತಾಯಿಸಿ ಜನಸಮೂಹ ಅಲ್ಲಿ ಅಕ್ಕಪಕ್ಕದಲ್ಲಿ ಸಿಕ್ಕ ವಸ್ತುಗಳಿಗೆ ಬೆಂಕಿ ಹಚ್ಚಲು ಪ್ರಾರಂಭಿಸಿದರು. ನೆರೆದಿದ್ದ ಜನರು, ಈ ವಿಧ್ವಂಸಕ ಕೃತ್ಯವನ್ನು ಪ್ರಾರಂಭಿಸಿದಾಗ, ಶಾಸಕರು ಮನೆಯಲ್ಲಿ ಇರಲಿಲ್ಲ. ಪ್ರತಿಭಟನಾಕಾರರು ಮನೆಯ ಮೇಲೆ ಕಲ್ಲುಗಳಿಂದ ದಾಳಿ ನಡೆಸಲು ಪ್ರಾರಂಭಿಸಿದರು<ref>https://zeenews.india.com/kannada/karnataka/restrictions-under-section-144-of-crpc-imposed-in-bengaluru-curfew-imposed-in-dj-halli-kg-halli-30454</ref>. ಶಾಸಕರ ಮನೆಯ ಹೊರಗೆ ನಿಲ್ಲಿಸಿದ್ದ ಕಾರುಗಳಿಗೂ ಅಪಾರ ಹಾನಿ ಮಾಡಿದರು.
 
ಇದೇ ವೇಳೆ, ಮತ್ತೊಂದು ಗುಂಪು, ಪೊಲೀಸ್ ಠಾಣೆಗೆ ತೆರಳಿ ಶಾಸಕರ ಸೋದರಳಿಯ ವಿರುದ್ಧ ಎಫ್‌ಐಆರ್ ದಾಖಲಿಸಲು ಹೋದರು. ಆದರೆ ಪೊಲೀಸರು ಎಫ್‌ಐಆರ್ ಬರೆಯಲು ನಿರಾಕರಿಸಿದಾಗ, ಅವರು ನೇರವಾಗಿ ಡಿಜೆ ಹಳ್ಳಿ ಪೊಲೀಸ್ ಠಾಣೆಯ ಮೇಲೆ ಹಿಂಸಾತ್ಮಕವಾಗಿ ದಾಳಿ ನಡೆಸಿದಲ್ಲದೆ, ಅಲ್ಲಿದ್ದ ವಾಹನಗಳನ್ನು ಮತ್ತು ಇತರ ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು<ref>https://vijaykarnataka.com/news/bengaluru-city/mob-attacks-on-police-in-dg-halli-police-station-over-controversial-fb-post/articleshow/77492141.cms</ref>. ಗಲಭೆಯಲ್ಲಿ ಕೆಲವರು, ಮೊಲೊಟೊವ್ ಕಾಕ್ಟೈಲ್ ಅನ್ನು ಸಹ ಬಳಸಿದರು. ಪರಿಸ್ಥಿತಿಯು ನಿಯಂತ್ರಣಕ್ಕೆ ಬಾರದಾಗ, ಪೊಲೀಸರು ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದರು. ಬಳಿಕ ನಡೆದ ಗೋಲಿಬಾರ್ ನಲ್ಲಿ ಮೂವರು ಪ್ರತಿಭಟನಾಕಾರರ ಬಲಿಯಾಗಿದೆ. ಗಲಭೆಯಲ್ಲಿ 60 ಪೊಲೀಸರು ಗಾಯಗೊಂಡಿದ್ದಾರೆ ಎಂದು ಪೊಲೀಸರು ವರದಿ ಮಾಡಿದ್ದಾರೆ.