ಸದಸ್ಯ:Indudhar Haleangadi/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬ ನೇ ಸಾಲು:
ಇದೇ ವೇಳೆ, ಮತ್ತೊಂದು ಗುಂಪು, ಪೊಲೀಸ್ ಠಾಣೆಗೆ ತೆರಳಿ ಶಾಸಕರ ಸೋದರಳಿಯ ವಿರುದ್ಧ ಎಫ್‌ಐಆರ್ ದಾಖಲಿಸಲು ಹೋದರು. ಆದರೆ ಪೊಲೀಸರು ಎಫ್‌ಐಆರ್ ಬರೆಯಲು ನಿರಾಕರಿಸಿದಾಗ, ಅವರು ನೇರವಾಗಿ ಡಿಜೆ ಹಳ್ಳಿ ಪೊಲೀಸ್ ಠಾಣೆಯ ಮೇಲೆ ಹಿಂಸಾತ್ಮಕವಾಗಿ ದಾಳಿ ನಡೆಸಿದಲ್ಲದೆ, ಅಲ್ಲಿದ್ದ ವಾಹನಗಳನ್ನು ಮತ್ತು ಇತರ ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು. ಗಲಭೆಯಲ್ಲಿ ಕೆಲವರು, ಮೊಲೊಟೊವ್ ಕಾಕ್ಟೈಲ್ ಅನ್ನು ಸಹ ಬಳಸಿದರು. ಪರಿಸ್ಥಿತಿಯು ನಿಯಂತ್ರಣಕ್ಕೆ ಬಾರದಾಗ, ಪೊಲೀಸರು ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದರು. ಬಳಿಕ ನಡೆದ ಗೋಲಿಬಾರ್ ನಲ್ಲಿ ಮೂವರು ಪ್ರತಿಭಟನಾಕಾರರ ಬಲಿಯಾಗಿದೆ. ಗಲಭೆಯಲ್ಲಿ 60 ಪೊಲೀಸರು ಗಾಯಗೊಂಡಿದ್ದಾರೆ ಎಂದು ಪೊಲೀಸರು ವರದಿ ಮಾಡಿದ್ದಾರೆ.
 
ಜನಸಮೂಹದ ಹಲವು ಸದಸ್ಯರು, ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಯಾದ ಪಿಎಫ್‌ಐನ ರಾಜಕೀಯ ದಳ ಎಸ್‌ಡಿಪಿಐನ ಬೆಂಬಲಿಗರು ಎಂದು ಆರೋಪಿಸಲಾಗಿದೆ. ಆದರೆ, ಎಸ್.ಡಿ.ಪಿ.ಐ ನ ಅಧ್ಯಕ್ಷರು ಈ ಆರೋಪವನ್ನು ತಳ್ಳಿಹಾಕಿದ್ದು, ಪೋಲೀಸರ ನಿರ್ಲಕ್ಷ್ಯವೇ ಗಲಭೆಗೆ ಮೂಲ ಕಾರಣ ಎಂದಿದ್ದಾರೆ.<ref>https://suddivani.com/%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B2%BF%E0%B2%A8%E0%B2%B2%E0%B3%8D%E0%B2%B2%E0%B2%BF-%E0%B2%A8%E0%B2%A1%E0%B3%86%E0%B2%A6-%E0%B2%97%E0%B2%B2%E0%B2%AD%E0%B3%86/</ref>
 
=ಪೊಲೀಸ್ ಕ್ರಮ=
ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಗಲಭೆಕೋರರು ಜಮಾಯಿಸಿದ್ದರಿಂದ, ಹೆಚ್ಚುವರಿ ಪೋಲೀಸ್ ಪಡೆಗಳನ್ನು ನಿಯೋಜಿಸಲು ಆದೇಶಿಸಿಸಲಾಯಿತು. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ನೇತೃತ್ವದ ಪೊಲೀಸರಿಗೆ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿಯ ಕಿರಿದಾದ ಬೀದಿಗಳಲ್ಲಿ ಸಂಚರಿಸುವುದು ಕಷ್ಟಕರವಾಗಿತ್ತು. ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಉಪ ಆಯುಕ್ತ (ಪೂರ್ವ) ಎಸ್‌ಡಿ ಶರಣಪ್ಪ ಅವರು ಜನಸಮೂಹವನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ವಿಫಲರಾದರು. ನಂತರ, ಪೊಲೀಸರು ಲಾಠಿಚಾರ್ಜ್ ಮೊರೆ ಹೋದರು ಮತ್ತು ಜನಸಮೂಹವನ್ನು ಚದುರಿಸಲು ಅಶ್ರುವಾಯು ನಿಯೋಜಿಸಲಾಯಿತು. ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರ ಆದೇಶದ ಮೇರೆಗೆ, ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು.<ref>http://m.varthabharati.in/article/2020_08_12/254723</ref> ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಭಾರಿ ಪೊಲೀಸ್ ನಿಯೋಜನೆಯ ಪರಿಣಾಮ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಬೆಂಗಳೂರು ಪೂರ್ವ-ವಿಭಾಗಕ್ಕೆ ಸೇರಿದ ಕನಿಷ್ಠ 150 ಪೋಲೀಸ್ ಸಿಬ್ಬಂದಿಯನ್ನು ತಡರಾತ್ರಿಯೇ ನಿಯೋಜಿಸಲಾಯಿತು.
 
ಬೆಂಗಳೂರಿನ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ಅವರ ಪ್ರಕಾರ ಗಲಭೆಗೆ ಸಂಬಂಧಿಸಿದಂತೆ, ಇದುವರೆಗೆ ಪೊಲೀಸರು 1೪೦ ಮಂದಿಯನ್ನು ಬಂಧಿಸಲಾಗಿದೆ. ಗಲಭೆಗೆ ಸಂಬಂಧಿಸಿದಂತೆ ಸ್ಥಳೀಯ ಎಸ್‌ಡಿಪಿಐ ನಾಯಕನನ್ನು ಪೊಲೀಸರು ಬಂಧಿಸಿದ್ದಾರೆ.