ಮೃಣಾಲಿನಿ ಸಾರಾಭಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧ ನೇ ಸಾಲು:
[[File:Photo by jayraj.jpg|thumb|ಸಾರಾಭಾಯಿ, ಮೃಣಾಲಿನಿ]]
ಸಾರಾಭಾಯಿ, ಮೃಣಾಲಿನಿ ೧೯೧೮-. ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯ ಕಲಾವಿದೆ. ನಿತ್ಯನೂತನ ಪ್ರಯೋಗಗಳ ರಂಗ ಸಂಯೋಜನೆಗಳಲ್ಲಿ ಹೆಸರುವಾಸಿಯಾದವರು. ಅರ್ಧ ಶತಮಾನಕ್ಕೂ ಹಿಂದೆ ೧೯೪೮ರಲ್ಲಿ ಅಹಮದಾಬಾದಿನಲ್ಲಿ ಸಂಗೀತ, ನೃತ್ಯ, ನಾಟಕ ಹಾಗೂ ಸೂತ್ರದಗೊಂಬೆ ಯಾಟ ಮೊದಲಾದ ಕಲೆಗಳ ಅಕಾಡೆಮಿ ದರ್ಪಣವನ್ನು ಸ್ಥಾಪಿಸಿ ರಾಷ್ಟ್ರದ ಸಾಂಸ್ಕೃತಿಕ ನೆಲೆಯನ್ನು ಪ್ರಪಂಚಮಾನ್ಯಗೊಳಿಸಿದ ಕೀರ್ತಿ ಇವರದು.<ref>https://books.google.co.in/books?id=JScXCLMIkHcC&pg=PA375&redir_esc=y#v=onepage&q&f=false</ref> ಇಂದಿಗೂ ಇವರೇ ದರ್ಪಣದ ನಿರ್ದೇಶಕಿ. ಅಭಿವೃದ್ಧಿಗಾಗಿ ದರ್ಪಣ ಎಂಬುದು ಇದರ ಘೋಷವಾಕ್ಯ.
 
ಬಾಲ್ಯದಿಂದಲೇ ತಮ್ಮ ಆಸಕ್ತಿಯನ್ನು ನೃತ್ಯಕಲೆಯಲ್ಲಿ ತೊಡಗಿಸಿ ಕೊಂಡರು. ಪಂದನಲ್ಲೂರು ಶೈಲಿಯ ಪ್ರಸಿದ್ಧ ಗುರು ಮೀನಾಕ್ಷಿ ಸುಂದರಮ್ ಪಿಳ್ಳೈಯವರಲ್ಲಿ ಭರತನಾಟ್ಯವನ್ನು ಕಲಿತರು. ಗುರು ಕುಂಜುಕುರುಪ್ ಅವರಲ್ಲಿ ಕಥಕ್ಕಳಿಯನ್ನೂ ಕಲ್ಯಾಣಿ ಕುಟ್ಟಿ ಅಮ್ಮಾ ಅವರಲ್ಲಿ ಮೋಹಿನಿ ಅಟ್ಟಮ್ ನೃತ್ಯವನ್ನೂ ಅಭ್ಯಾಸ ಮಾಡಿದರು. ಜಾವ ಮತ್ತು ಅಮೆರಿಕದಲ್ಲಿ ನಾಟಕಕಲೆಯಲ್ಲಿ ವಿಶೇಷ ತರಬೇತಿಯನ್ನು ಪಡೆದರು.