ದಕ್ಷಿಣ ಕನ್ನಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚುNo edit summary
೬೫ ನೇ ಸಾಲು:
}}
 
'''ದಕ್ಷಿಣ ಕನ್ನಡ''' ([[ತುಳು]]: ದಕ್ಷಿಣ ಕನ್ನಡ) [[ಕರ್ನಾಟಕ]] [[ರಾಜ್ಯ]]ದ ಒಂದು ಕರಾವಳಿ [[ಜಿಲ್ಲೆ]]. ಈ ಜಿಲ್ಲೆಯ ಕೇಂದ್ರಸ್ಥಳ ಹಾಗೂ ಮುಖ್ಯ ನಗರ [[ಮಂಗಳೂರು]]. ದಕ್ಷಿಣ ಕನ್ನಡ ಜಿಲ್ಲೆಯ ಜನಸಂಖ್ಯೆ ೨೦,೮೯,೬೪೯ ಆಗಿದ್ದು ಇದರಲ್ಲಿ ಪುರುಷರು ೧೦,೩೪,೭೧೪ ಹಾಗೂ ಮಹಿಳೆಯರು ೧೦,೫೪,೯೩೫ (೨೦೧೧ರ ಜನಗಣತಿಯಂತೆ ).<ref>http://www.censusindia.gov.in/pca/default.aspx</ref> . ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಳು ತಾಲೂಕುಗಳಿವೆ: [[ಮಂಗಳೂರು]], [[ಬಂಟ್ವಾಳ]], [[ಪುತ್ತೂರು]], [[ಸುಳ್ಯ]] ಹಾಗೂ [[ಬೆಳ್ತಂಗಡಿ]], [[ಮೂಡುಬಿದಿರೆ|ಮೂಡಬಿದಿರೆ]], [[ಕಡಬ]].
 
ಕೆಲವು ವರ್ಷಗಳ ಹಿಂದೆ ಇನ್ನೂ ಮೂರು ತಾಲೂಕುಗಳು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ್ದವು: [[ಉಡುಪಿ]], [[ಕುಂದಾಪುರ]] ಮತ್ತು [[ಕಾರ್ಕಳ]]. ಆಗಸ್ಟ್ ೧೯೯೭ ರಲ್ಲಿ ಈ ತಾಲೂಕುಗಳನ್ನು [[ಉಡುಪಿ]] ಜಿಲ್ಲೆಯ ಭಾಗವಾಗಿ ಘೋಷಿಸಲಾಯಿತು. ದಕ್ಷಿಣ ಕನ್ನಡ ಮತ್ತು [[ಉಡುಪಿ]] ಜಿಲ್ಲೆಗಳನ್ನು '''ತುಳುನಾಡು''' ಎಂದೂ ಕರೆಯಲಾಗುತ್ತದೆ. [[ತುಳು]] ಭಾಷೆ ಇಲ್ಲಿನ ಪ್ರಮುಖ ಭಾಷೆಯಾದ್ದರಿಂದ ಈ ಹೆಸರು ಬಂದಿದೆ.
೭೧ ನೇ ಸಾಲು:
 
==ಇತಿಹಾಸ==
ಹಿಂದೆ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಟ್ಟಾಗಿ '''ಕೆನರಾ '''(''ಕನ್ನಡ'' ಶಬ್ದದ ಆಂಗ್ಲೀಕೃತ ರೂಪ) ಎಂದು ಕರೆಯಲಾಗುತ್ತಿತ್ತು. ೧೮೬೦ ರಲ್ಲಿ ಬ್ರಿಟಿಷರು ಈ ಭಾಗವನ್ನು ಉತ್ತರ ಕೆನರ ಮತ್ತು ದಕ್ಷಿಣ ಕೆನರ ಎಂದು ವಿಂಗಡಿಸಿದರು. ೧೮೬೨ ರಲ್ಲಿ ಉತ್ತರ ಕೆನರವನ್ನು ಬೋಂಬೆ ಪ್ರೆಸಿಡೆನ್ಸಿ ಹಾಗೂ ದಕ್ಷಿಣ ಕೆನರವನ್ನು ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿಸಲಾಯಿತು. ಕುಂದಾಪುರ ತಾಲೂಕು ಮೊದಲು ಉತ್ತರ ಕೆನರದಲ್ಲಿದ್ದರೂ ನಂತರ ದಕ್ಷಿಣ ಕೆನರಕ್ಕೆ ಸೇರಿಸಲಾಯಿತು.
 
ಸ್ವಾತಂತ್ರ್ಯದ ನಂತರ ಈ ಜಿಲ್ಲೆ ಈಗಿನ ದಕ್ಷಿಣ ಕನ್ನಡ, ಉಡುಪಿ ಹಾಗು ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡಿತ್ತು. ೧೯೫೬ರ ಪುನರ್ ವಿಂಗಡನೆ ಸಂದರ್ಭದಲ್ಲಿ ಅವಿಭಜಿತ ದಕ್ಷಿಣ ಕನ್ನಡವನ್ನು ಮೈಸೂರು ರಾಜ್ಯಕ್ಕೆ ಹಾಗೂ ಕಾಸರಗೋಡು ಜಿಲ್ಲೆಯನ್ನು ಕೇರಳ ರಾಜ್ಯಕ್ಕೆ ಸೇರಿಸಲಾಯಿತು.
"https://kn.wikipedia.org/wiki/ದಕ್ಷಿಣ_ಕನ್ನಡ" ಇಂದ ಪಡೆಯಲ್ಪಟ್ಟಿದೆ