ಹೆಲೆನ್ ಬೈಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩ ನೇ ಸಾಲು:
==ಜೀವನ ಹಾಗು ವೃತ್ತಿ==
 
[[ಚಿತ್|thumb|ಹೆಲೆನ್ ಬೈಲೆಯ್]]
ಬೈಲಿಯವರು ಪೊಂಟೆಲ್ಯಾಂಡ್‌ನಲ್ಲಿ ಹುಟ್ಟಿ ಬೆಳೆದರು.ಇವರು ತಮ್ಮ ಪೊಂಟೆಲ್ಯಾಂಡ್ ಶಾಲೆಯಲ್ಲಿನ ಅನುಭವವನ್ನು ಹೀಗೆ ವಿವರಿಸಿದ್ದಾರೆ- "ನಾನು ಶಾಲೆಯಲ್ಲಿ ಕಿಟಕಿಯ ಪಕ್ಕ ಕುಳಿತುಕೊಂಡು ಅದರಾಚೆ ನೋಡುತ್ತಾ ಓದೊಂದನ್ನು ಬಿಟ್ಟು ಬೇರೆಯಲ್ಲದರ ಬಗ್ಗೆಯೂ ಕನಸು ಕಾಣುತ್ತಿದ್ದೆ.ಮನೆಗೆ ತೆರಳಿದ ನಂತರ ಡೈರಿಯಲ್ಲಿ ಯಾರು ಯಾರು ಏನೇನು ಮಾಡಿದರು. ನಾನು ಅದರ ಭಾಗಿ ಯಾಕಾಗಿರಲ್ಲಿಲ್ಲ ಎಂದು ಬರೆಯುತ್ತಿದೆ". ಬೈಲಿಯವರು ಥೇಮ್ಸ್ ಪೊಲಿಟೆಕ್ನಿಕ್ ಎಂಬ ಲಂಡನ್‌ನಿನ ವಿಶ್ವವಿದ್ಯಾಲಯದ [[ಶರೀರಶಾಸ್ತ್ರ]] ಪದವೀಧರರು.ಮೊದಲಿಗೆ ಫೋರೆನ್ಸಿಕ್ [[ವಿಜ್ಞಾನಿ]]ಯಾಗುವ ಹಂಬಲ ಹೊಂದಿದ್ದ ಬೈಲಿ ನಂತರ ಮೀಡಿಯಾದಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದರು.ಮೀಡಿಯಾ ಕ್ಷೇತ್ರದಲ್ಲಿ 'ರುಗ್ರಟ್ಸ್' ಮತ್ತು 'ಗಾರ್ಫೀಲ್ಡ್' ಎಂಬ ವ್ಯಂಗ್ಯ ಪಾತ್ರಗಳಿಗೆ ಪರವಾನಗಿ ಮತ್ತು ಮಾರುಕಟ್ಟೆ ಪ್ರಚಾರವನ್ನು ಮಾಡುತ್ತಿದ್ದರು.೧೯೯೬ರಲ್ಲಿ ಜಾನ್ ಸಿನ್ಫೀಲ್ಡ್‌ರವರನ್ನು ವಿವಾಹವಾದರು.ಬೈಲಿಯವರು "ಲೈಫ್ ಅಟ್ ದಿ ಶಾಲೊ ಎನ್ಡ್"(೨೦೦೮),"ಔಟ್ ಆಫ್ ಮೈ ದೆಪ್ಥ್"(೨೦೦೮),"ಸ್ವಿಮ್ಮಿಂಗ್ ಅಗ್ಯನ್ಸ್ಟ್ ದಿ ಟೈಡ್"(೨೦೦೯),"ಟೇಕಿಂಗ್ ದಿ ಪ್ಲನ್ಜ್"(೨೦೦೯) ಮತ್ತು "ಫಾಲಿಂಗ್ ಹೂಕ್, ಲೈನ್ ಅನ್ಡ್ ದಿ ಸಿಂಕರ್"(೨೦೧೦) ಎಂಬ ಪುಸ್ತಕಗಳನ್ನು ಬರೆದ್ದಿದ್ದಾರೆ.ಇವರು ೨೦೧೦ರ "ಕ್ವೀನ್ ಆಫ್ ಟೀನ್" ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.ಚಿಕ್ಕ ಮಕ್ಕಳಿಗಾಗಿ ಇವರು "ವಿಲ್ಲೊ ದಿ ವುಡ್‌‌‍‍‌‌ಸ್ಪ್ರೈಟ್" ಸೀರೀಸ್,"ಟೊಪಾಜ಼್" ಸೀರೀಸ್ ಮತ್ತು "ಫೆಲಿಸಿಟಿ ವಿಷಸ್" ಸೀರೀಸ್ ಬರೆದ್ದಿದ್ದಾರೆ.ಒಟ್ಟಾರೆ ಇವರ ೨೨ ಪುಸ್ತಕಗಳು ಪ್ರಕಟಗೊಂಡಿವೆ.
ಫೆಬ್ರವರಿ ೨೦೧೧,[[ಬಾರ್ಬಡೋಸ್|ಬಾರ್ಬಡೋಸ್‌]]ನಲ್ಲಿ ಬೈಲಿಯ ಗಂಡ ನೀರಿನಲ್ಲಿ ಮುಳುಗಿ ನಿಧನರಾದರು.ಇದಾದನಂತರ ಬೈಲಿ ಮೊದಲಬಾರಿಗೆ ವಯಸ್ಕರಿಗಾಗಿ "ವೆನ್ ಬ್ಯಾಡ್ ಥಿಂಗ್ಸ್ ಹ್ಯಾಪೆನ್ ಇನ್ ಗುಡ್ ಬಿಕಿನಿಸ್"(೨೦೧೫-ಪ್ಲಾನೆಟ್ ಗ್ರೀಫ್ ಬ್ಲಾಗ್)ಎಂಬ ಪುಸ್ತಕವನ್ನು ಪ್ರಕಟಿಸಿದರು.'ದಿ ಗಾರ್ಡಿಯನ್' ದಿನ ಪತ್ರಿಕೆಯು ಇದನ್ನು"ಗಂಡ ಸತ್ತ ನಂತರದ ದುಃಖ ಹಾಗು ಸಂಕಟ ತುಂಬಿರುವ ದುರಂತ ಕಥೆಯ ವಿವರಣೆ"ಎಂದು ವಿವರಿಸಿತು.ಈ ಪುಸ್ತಕವು, ಬೈಲಿಯ ಗಂಡ ಸತ್ತ ೮ ತಿಂಗಳ ನಂತರ ಅವಳ ಹಾಗು ಇಬ್ಬರು ವಯಸ್ಕರ ಅಪ್ಪನಾದ ಇಯನ್ ಸ್ಟಿವರ್ಟ್ ನಡುವೆ ಬೆಳೆದ ನವ ಸಂಬಂಧದ ಬಗ್ಗೆಯೂ ವಿವರಣೆ ನೀಡುತ್ತದೆ.[[wikipedia:BBC|ಬಿಬಿಸಿ]] ರೇಡಿಯೋವಿನ 'ವುಮೆನ್ಸ್ ಆವರ್'ನಲ್ಲಿ ಬೈಲಿ ಈ ಪುಸ್ತಕ ಹಾಗು ಅವರ ಅನುಭವಗಳ ಬಗ್ಗೆ ಮಾತನಾಡಿದರು.<ref>https://en.wikipedia.org/wiki/Helen_Bailey</ref>
 
==ಕಣ್ಮರೆ ಮತ್ತು ಮರಣ==
ಏಪ್ರಿಲ್ ೧೧,೨೦೧೬ರಲ್ಲಿ ಇಯನ್, ಬೈಲಿಯ ಸಂಗಾತಿ, ಬೈಲಿ ನಾಪತ್ತೆಯಾಗಿದ್ದಾರೆ ಎಂದು ವರದಿ ನೀಡಿದರು.ವಿಚಾರಣೆಯ ನಂತರ ಬೈಲಿ ತನ್ನ ಕುಟುಂಬದ ಜೊತೆ ಕಾಲ ಕಳೆಯಲು ಬ್ರಾಡ್‌ಸ್ಟೇರ್ಸ್‌ಗೆ ತೆರಳುತ್ತಿದ್ದೇನೆ ಎಂದು ಚೀಟಿ ಬರೆದಿಟ್ಟಿದ್ದ ವಿಷಯ ಬೆಳಕಿಗೆ ಬಂತು.ಆದರೆ ಬೈಲಿಯ ತಾಯಿ ಹಾಗು ತಮ್ಮ ಅವರು ಇಲ್ಲಿಗೆ ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿದರು.ಹೀಗಾಗಿ ಹೆಲೆನ್‌ನ ಕೇಸ್ ಪೋಲಿಸರನ್ನು ಸಹ ಕಂಗೆಡಿಸಿತು. ಜುಲೈ ೧೧ರಂದು ಪೋಲಿಸರು ೫೫ ವರುಷದ ವಯಸ್ಕನನ್ನು ಸಂಶಯದ ಆಧಾರದ ಮೇಲೆ ಬಂಧಿಸಿದರು.ನಂತರ ಅವನನ್ನು ಜಾಮೀನಿನಿಂದ ಬಿಡಿಸಿಕೊಳ್ಳಲಾಯಿತು. ಜುಲೈ ೧೫ ರಂದು ಬೈಲಿಯ ಹಾಗು ಅವರ ನಾಯಿಯ ಶರೀರದ ಅವಶೇಷಗಳು ಅವರ ಮನೆಯ ಸೆಸ್ ಪಿಟ್‌ನಲ್ಲಿ ಸಿಕ್ಕಿತು.ಜುಲೈ ೧೬ರಂದು ಇಯನ್‌ನನ್ನು ಬೈಲಿಯ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಮಾಡಲಾಯಿತು.
"https://kn.wikipedia.org/wiki/ಹೆಲೆನ್_ಬೈಲಿ" ಇಂದ ಪಡೆಯಲ್ಪಟ್ಟಿದೆ