ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಗ್ರಾಮೀಣ ಭಾರತಕ್ಕೆ ನಿರಂತರ ವಿದ್ಯುತ್ ಸರಬರಾಜು ಮಾಡಲು ವಿನ್ಯಾಸಗೊಳಿಸಲಾದ ಭಾರತ ಸರ್ಕಾರದ ಯೋಜನೆ
Content deleted Content added
ಹೊಸ ಪುಟ: ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಒಂದಾಗಿರುವ ಈ ಯೋಜನೆಯ ಉದ್...
( ಯಾವುದೇ ವ್ಯತ್ಯಾಸವಿಲ್ಲ )

೨೩:೩೦, ೩೧ ಜುಲೈ ೨೦೨೦ ನಂತೆ ಪರಿಷ್ಕರಣೆ

ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಒಂದಾಗಿರುವ ಈ ಯೋಜನೆಯ ಉದ್ದೇಶ ಪ್ರತೀ ಗ್ರಾಮಕ್ಕೂ ತಡೆಯಿಲ್ಲದೆ ವಿದ್ಯುತ್ ಒದಗಿಸುವುದು[೧]. ಗ್ರಾಮೀಣ ವಿದ್ಯುದೀಕರಣಕ್ಕಾಗಿಯೇ ಭಾರತ ಸರ್ಕಾರ ಸುಮಾರು ೭೫೬ ಬಿಲಿಯನ್ ರೂಪಾಯಿಗಳನ್ನು ಮೀಸಲಿರಿಸಿ ಯೋಜನೆಯ ಪ್ರಗತಿಗೆ ಮುಂದಾಗಿದೆ. ಈ ಹಿಂದೆ ಇದ್ದ ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆಯ ಹೊಸ ಅವತರಣಿಕೆಯೇ ಈ ಯೋಜನೆಯಾಗಿದೆ[೨].

ಯೋಜನೆ

ಈ ಯೋಜನೆಯ ಮೂಲಭೂತ ಉದ್ದೇಶಗಳೆಂದರೆ,

  1. ಎಲ್ಲ ಗ್ರಾಮಗಳಿಗೂ ವಿದ್ಯುತ್ ಸೌಲಭ್ಯ ಒದಗಿಸುವುದು.
  2. ಸ್ಥಳೀಯ ಎಲೆಕ್ಟ್ರಿಕ್ ಗ್ರಿಡ್ ಮಟ್ಟದಲ್ಲಿ ಫೀಡರ್ ಗಳನ್ನೂ ಬೇರ್ಪಡಿಸುವುದು. ಆ ಮೂಲಕ ಇತರೇ ಬಳಕೆದಾರರಿಗೂ ಹಾಗು ರೈತರಿಗೂ ಸರಬರಾಜು ಆಗುವ ವಿದ್ಯುತ್ ಮೇಲೆ ನಿಗಾ ಹಾಗು ರೈತರಿಗೆ ೨೪ ಗಂಟೆ ವಿದ್ಯುತ್ ಸೌಲಭ್ಯ.
  3. ವಿದ್ಯುತ್ ಸರಬರಾಜು ಮಾಡುವ ಜಾಲ ಹಾಗು ವಿತರಣಾ ಮಂಡಲಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ವಿದ್ಯುತ್ ಸರಬರಾಜಿನಲ್ಲಿ ಗುಣಮಟ್ಟವನ್ನು ಹಾಗು ಸ್ಥಿರತೆಯನ್ನು ಕಾಯ್ದುಕೊಳ್ಳುವುದು.
  4. ಮಾಪಕಗಳ ಬಳಕೆಯ ಮುಖೇನ ವಿದ್ಯುತ್ ನಷ್ಟವನ್ನು ತಡೆಗಟ್ಟುವುದು.

ಉಪಯೋಗಗಳು

  • ಭಾರತದ ಎಲ್ಲ ಗ್ರಾಮಗಳಿಗೂ ವಿದ್ಯುತ್ ಲಭ್ಯವಾಗುವುದು.
  • ಕೃಷಿಗೆ ಖರ್ಚಾಗುವ ವಿದ್ಯುತ್ ಮೇಲೆ ನಿಗಾ, ಇದರಿಂದ ಕೃಷಿ ಸಂಬಂಧಿತ ವಿದ್ಯುತ್ ಗೆ ವಿಶೇಷ ಪ್ಯಾಕೇಜ್ ಗಳನ್ನೂ ಘೋಷಿಸುವ ಸಂಧರ್ಭದಲ್ಲಿ ಅನುಕೂಲ.
  • ಸುಧಾರಿತ ವಿದ್ಯುತ್ ಸರಬರಾಜು.
  • ವಿದ್ಯುತ್ ಪೋಲು ತಡೆಯಲು ಅನುಕೂಲ.

ಇವನ್ನೂ ನೋಡಿ

ಆಕರಗಳು

  1. "ಪ್ರಧಾನಿ ಮೋದಿ ಸ್ಕೀಮ್ ನಿಂದ 23.9 ದಶಲಕ್ಷ ಮನೆಗಳಿಗೆ ವಿದ್ಯುತ್, ಇನ್ನೂ 1 ದಶಲಕ್ಷ ಬಾಕಿ!".
  2. "ಲೈವ್ ಮಿಂಟ್ ವೃತ್ತ ಪತ್ರಿಕೆಯ ಆಂಗ್ಲ ಮಾಹಿತ್ ತಾಣದ ಲೇಖನ".