ಸದಸ್ಯ:Maheshmmhshm/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೮ ನೇ ಸಾಲು:
 
==ಆಕರಗಳು==
 
 
'''ಕರ್ನಾಟಕ ವಿಸ್ತರಣೆ'''
 
ಹತ್ತರಿಂದ ಹನ್ನೆರಡನೇ ಶತಮಾನದ ಸುಮಾರಿಗೆ ಬದಲಾದ ರಾಜಕೀಯ ಸನ್ನಿವೇಶಗಳಲ್ಲಿ ಈಗಿನ [[ಕರ್ನಾಟಕ]]ದ ಉತ್ತರ ಭಾಗದಿಂದ [[ಉತ್ತರ ಭಾರತ]]ದೆಡೆಗೆ ಅಪಾರ ಸಂಖ್ಯೆಯ ಜನರು ವಲಸೆ ಹೊರಟರು. ಸಾಮಾನ್ಯ ಜನರಷ್ಟೇ ಅಲ್ಲದೆ ಬಲಶಾಲಿಯಾದ ಸೈನ್ಯ, ಅಧಿನಾಯಕರು, ಪಾಳೇಗಾರರು, ಸಾಮಂತರು, ರಾಜರು ಕೂಡ [[ಉತ್ತರ ಭಾರತ]]ದೆಡೆಗೆ ವಿವಿಧ ಕಾರಣಗಳಿಗೆ ಪ್ರಯಾಣ ಬೆಳೆಸಿದರು. ಈ ಮೂಲಕ ಕರ್ನಾಟಕ ಸಾಂಸ್ಕೃತಿಕ, ಧಾರ್ಮಿಕ ಘಮಲನ್ನು ಉತ್ತರ ಭಾರತದ ಕಡೆಗೂ ಹರಡಿಸಿದ್ದಾರೆ.
 
==ಉತ್ತರ ಭಾರತದ ಸಾಮ್ರಾಜ್ಯಗಳ ಉಗಮ==
[[ಕರ್ನಾಟಕ]]ದಲ್ಲಿ [[ಚಾಲುಕ್ಯ]] ಹಾಗೂ [[ರಾಷ್ಟ್ರಕೂಟ]]ರು(ಮುಂದೆ [[ರಾಜಸ್ಥಾನ]] ಪ್ರಾಂತದ [[ರಾಥೋಡ್]] ವಂಶದವರು ಇದೇ [[ರಾಷ್ಟ್ರಕೂಟ]] ಸಂತತಿಯವರು) ಇನ್ನೂ ಆಳ್ವಿಕೆ ನಡೆಸಿದ್ದಂತೆಯೇ ಅವರ ಶಾಖೆಗಳು [[ಉತ್ತರ ಭಾರತ]]ದೆಡೆಗೆ ಪಸರಿಸಿದ್ದವು. ಈಗಿನ [[ಗುಜರಾತ್]] ಮತ್ತು ದಕ್ಷಿಣ [[ರಾಜಸ್ಥಾನ]]ದಲ್ಲಿ [[ಕರ್ನಾಟಕ]] ವಲಸೆ ಜನಾಂಗ ಅತಿ ಪ್ರಭಾವಿತವಾಗಿ ಬೆಳೆಯಿತು. ಅವರ ಸಂತತಿಯು [[ಉತ್ತರ ಭಾರತ]]ದ ಇತರ ಭಾಗಗಳಲ್ಲಿಯೂ ಹರಡಿತು. [[ಕರ್ನಾಟಕ]]ದ [[ಮಾನ್ಯಖೇಟ]]ದ [[ರಾಷ್ಟ್ರಕೂಟ]]ರು ಆಗಿನ ಪ್ರಬಲ ರಾಜಕೀಯ ಕೇಂದ್ರವಾಗಿದ್ದ [[ಮಧ್ಯಪ್ರದೇಶ]]ದ [[ಕನೌಜ್]] ಬಳಿಯ ರಾಜ್ಯವೊಂದನ್ನು ಗೆದ್ದುಕೊಂಡಿದ್ದರು<ref>{{cite web|url=https://en.wikipedia.org/wiki/Carnatic_expansion | title=ಕರ್ನಾಟಕ ವಿಸ್ತರಣೆಯ ಕುರಿತ ಆಂಗ್ಲ ವಿಕಿ ಪುಟ}}</ref>.
 
ಸುಮಾರು ಅದೇ ಸಮಯಕ್ಕೆ [[ಕರ್ನಾಟಕ]] ಮೂಲದವರಾದ [[ಸೇನ ಸಾಮ್ರಾಜ್ಯ]](೧೦೯೭ - ೧೨೨೫) ಈಗಿನ [[ಬಂಗಾಳ]]ದ ಪ್ರದೇಶವನ್ನು ಆಳುತ್ತಿತ್ತು. ಮೊದ ಮೊದಲು [[ಬಂಗಾಳ]]ದಲ್ಲಿ ಅಸ್ತಿತ್ವದಲ್ಲಿದ್ದ [[ಪಾಲ ಸಾಮ್ರಾಜ್ಯ]]ದ ಸೇನಾ ದಂಡನಾಯಕರಾಗಿದ್ದ ಸೇನರು ಪಾಲ ಸಾಮ್ರಾಜ್ಯದ ಪತನಾನಂತರ ತಾವೇ ರಾಜ್ಯಾಡಳಿತ ಗಾದಿಗೆ ಕುಳಿತು ತಮ್ಮ ಸಾಮ್ರಾಜ್ಯವನ್ನು ಸೇನ ಸಾಮ್ರಾಜ್ಯ ಎಂದು ಕರೆದುಕೊಂಡರು.
 
ಹನ್ನೆರಡನೇ ಶತಮಾನದಲ್ಲಿ ಈಗಿನ [[ಒಡಿಶಾ]]ದಲ್ಲಿ ಪ್ರಬಲ ಆಡಳಿತ ವರ್ಗವಾಗಿ ಹೊರ ಹೊಮ್ಮಿದ [[ಪೂರ್ವದ ಗಂಗರು]] ಕೂಡ [[ದಕ್ಷಿಣ ಕರ್ನಾಟಕ]] ಪ್ರಾಂತದ [[ಪಶ್ಚಿಮ ಗಂಗ]]ರ (ಕ್ರಿ.ಶ ೩೦೦ - ೧೦೦೦) ಸಂತತಿಯವರೇ ಆಗಿದ್ದಾರೆ<ref>{{cite web|url=https://www.oxfordartonline.com/groveart/view/10.1093/gao/9781884446054.001.0001/oao-9781884446054-e-7000091247 |title=ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಜಾಲತಾಣದ ಗಂಗರ ಕುರಿತ ಆಂಗ್ಲ ಮಾಹಿತಿ ಪುಟ}}</ref><ref>{{cite web|url=https://onlinelibrary.wiley.com/doi/abs/10.1002/9781118455074.wbeoe402 | title=ಪೂರ್ವದ ಗಂಗರ ಕುರಿತ ಜಾಲತಾಣದ ಆಂಗ್ಲ ಪುಟ}}</ref>.
 
==ಭಾರತ ಉಪಖಂಡದಲ್ಲಿ ಇತರ ಸಾಮ್ರಾಜ್ಯಗಳ ಉಗಮ==
[[ವೆಂಗಿಯ ಚಾಲುಕ್ಯರು]] ಎಂದು ಕರೆಯಿಸಿಕೊಂಡ [[ಪೂರ್ವದ ಚಾಲುಕ್ಯರು]] ಸುಮಾರು ಏಳನೇ ಶತಮಾನದಿಂದ ಹನ್ನೊಂದನೇ ಶತಮಾನದವರೆವಿಗೂ [[ಆಂಧ್ರಪ್ರದೇಶ]]ವನ್ನು ಆಳಿದರು. [[ದೇವಗಿರಿ]]ಯ [[ಯಾದವ]] ಸಾಮ್ರಾಜ್ಯವೂ ಕೂಡ ಮೂಲತಃ [[ಕರ್ನಾಟಕ]] ಜಾತರಿಂದ ನಿರ್ಮಾಣವಾಗಿತ್ತು. ಇವರು ಸುಮಾರು ಕ್ರಿ.ಶ ೮೫೦ - ೧೩೨೦ ರವರೆಗೆ [[ಪಶ್ಚಿಮ ಭಾರತ]]ದ ಪ್ರದೇಶಗಳನ್ನಾಳಿದರು. ಭಾಷೆಯ ವಿಚಾರದಲ್ಲಿ [[ಕನ್ನಡ]]ಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದ ಇವರು ತಮ್ಮಆಡಳಿತ ಸಮಯದಲ್ಲಿ ಸ್ಥಳೀಯ ಭಾಷೆಗಳಿಗೂ ಮುನ್ನ [[ಕನ್ನಡ]] ಭಾಷೆ, ಸಾಹಿತ್ಯಗಳನ್ನು ಪ್ರೋತ್ಸಾಹಿಸಿ ಬೆಳೆಸಿದ್ದರು.
 
==ಸಾಂಸ್ಕೃತಿಕ ಪ್ರಭಾವ==
 
==ಧಾರ್ಮಿಕ ಪ್ರಭಾವ==
 
==ಆಕರಗಳು==
<ul>
<li>ಡಾ.ಸೂರ್ಯಕಾಂತ್ ಯು ಕಾಮತ್ ಅವರ ಪುಸ್ತಕ 'ಕರ್ನಾಟಕ ಸಮಗ್ರ ಇತಿಹಾಸ' (ಆಂಗ್ಲ), ೨೦೦೧.</li>
<li>ನೀಲಕಂಠ ಶಾಸ್ತ್ರೀ ಕೆ.ಎ ಅವರ ಪುಸ್ತಕ 'ದಕ್ಷಿಣ ಭಾರತದ ಒಂದು ಇತಿಹಾಸ' (ಆಂಗ್ಲ), ನವ ದೆಹಲಿ, ೨೦೦೨.</li>
<li>ಡಾ.ರೋಮಿಲಾ ಥಾಪರ್ ಅವರ ಪುಸ್ತಕ 'ಪೂರ್ವ ಭಾರತದ ಇತಿಹಾಸ'(ಆಂಗ್ಲ), ನವ ದೆಹಲಿ, ೨೦೦೩.</li>
</ul>
 
==ಕೊಂಡಿಗಳು==