ಕೂ ಸಾಮಾಜಿಕ ಜಾಲತಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಭಾರತದ ಜಾಲತಾಣ
Content deleted Content added
'''ಕೂ''' ಎಂಬುದು ಭಾರತದ ಮೈಕ್ರೋಬ್ಲಾಗಿಂಗ್ ಮತ್ತು ಸಾಮಾಜಿಕ ನೆಟ್‌ವರ್ಕಿಂಗ್
( ಯಾವುದೇ ವ್ಯತ್ಯಾಸವಿಲ್ಲ )

೦೭:೫೩, ೨೩ ಜುಲೈ ೨೦೨೦ ನಂತೆ ಪರಿಷ್ಕರಣೆ

ಕೂ ಎಂಬುದು ಭಾರತದ ಮೈಕ್ರೋಬ್ಲಾಗಿಂಗ್ ಮತ್ತು ಸಾಮಾಜಿಕ ನೆಟ್‌ವರ್ಕಿಂಗ್ ಸೇವೆಯಾಗಿದ್ದು, ಇದರಲ್ಲಿ ಬಳಕೆದಾರರು "ಕೂ " ಎಂದು ಕರೆಯಲ್ಪಡುವ ಸಂದೇಶಗಳನ್ನು ಪೋಸ್ಟ್ ಮಾಡುತ್ತಾರೆ ಮತ್ತು ಸಂವಹನ ನಡೆಸುತ್ತಾರೆ.ಇದು ಕನ್ನಡದಲ್ಲಿ ಮೊದಲು ಸೇವೆ ಪ್ರಾರಂಭಿಸಿತು , ನಂತರ ತೆಲುಗು , ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸೇವೆ ನೀಡುತ್ತಿದೆ . ಭಾರತೀಯ ಭಾಷೆಗಳಲ್ಲಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ವೇದಿಕೆ ಕಲ್ಪಿಸಿದೆ. [೧]


ನೋಂದಾಯಿತ ಬಳಕೆದಾರರು ಕೂಗಳನ್ನು ಪೋಸ್ಟ್ ಮಾಡಬಹುದು, ಲೈಕ್ ಮಾಡಬಹುದು ಮತ್ತು ರೀ ಕೂ ಮಾಡಬಹುದು, ನೋಂದಾಯಿಸದ ಬಳಕೆದಾರರು ಅವುಗಳನ್ನು ಓದಬಹುದು. ಬಳಕೆದಾರರು ಕೂ ಅನ್ನು ಅದರ ವೆಬ್‌ಸೈಟ್ ಇಂಟರ್ಫೇಸ್ ಮೂಲಕ, ಅಥವಾ ಅದರ ಮೊಬೈಲ್-ಸಾಧನ ಅಪ್ಲಿಕೇಶನ್ ಸಾಫ್ಟ್‌ವೇರ್ ("ಅಪ್ಲಿಕೇಶನ್" ಆಂಡ್ರಾಯ್ಡ್ ಮಾತ್ರ ) ಮೂಲಕ ಸೇವೆ ನೀಡುತ್ತಿದೆ .ಕೂ ಕಚೇರಿ ಭಾರತದ ಬೆಂಗಳೂರಿನಲ್ಲಿದೆ . ಕೂ ಮೂಲತಃ ೩೫೦ ಅಕ್ಷರಗಳಿಗೆ ಸೀಮಿತಗೊಳಿಸಲಾಗಿತ್ತು, ಆದರೆ ನಂತರ ೪೦೦ ಕ್ಕೆ ಹೆಚ್ಚಿಸಲಾಯಿತು .[೨]

  1. "Koo App: ಕನ್ನಡದಲ್ಲಿಯೇ ಈಗ ಕೂ ಮಾಡಿ.. ಬಂದಿದೆ ದೇಸಿ ಆ್ಯಪ್!". vijaykarnataka.com/. Retrieved 23 July 2020.
  2. "ಮೇಡ್‌ ಇನ್‌ ಇಂಡಿಯಾ ಕೂ". www.udayavani.com. Retrieved 23 July 2020.