ನಾಗಾಭರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೩ ನೇ ಸಾಲು:
 
===ಬೆಳ್ಳಿತೆರೆ===
ಬಿಎಸ್ಸಿ ನಂತರ ನಾಗಾಭರಣ ಎಲ್ ಎಲ್ ಬಿ ಪದವಿಗಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯ ಲಾ ಕಾಲೇಜು ಸೇರಿದರು. ವಿದ್ಯಾರ್ಥಿಯಾಗಿದ್ದಾಗಲೇ ಅವರು ಗಿರೀಶ್ ಕಾರ್ನಾಡ ಅವರ ಕಾಡು ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಮತ್ತು ಚೋಮನ ದುಡಿ ಚಿತ್ರಕ್ಕೆ ಬಿ ವಿ ಕಾರಂತ ಅವರಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದರು.[[೧೯೮೦]]ರಲ್ಲಿ [[ಬಂಗಾರದ ಜಿಂಕೆ]] ನಿರ್ದೇಶಿಸುವ ಮೂಲಕ ಪೂರ್ಣಪ್ರಮಾಣದ ನಿರ್ದೇಶನ ಪ್ರಾರಂಭಿಸಿದ ನಾಗಾಭರಣರವರು, ಇದುವರೆಗೆ ಸುಮಾರು ೩೬ ಕನ್ನಡ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರ ನಿರ್ದೇಶನದ ಚಲನಚಿತ್ರಗಳಲ್ಲಿ [[ಆಕಸ್ಮಿಕ]], ಚಿನ್ನಾರಿಮುತ್ತ, [[ಜನುಮದ ಜೋಡಿ]] ಮತ್ತು [[ಚಿಗುರಿದ ಕನಸು]] ಮುಖ್ಯವಾದುವು.ಇವರು ಕನ್ನಡದಲ್ಲಿ ಸರಾಸರಿ ೩೬ ಚಲನಚಿತ್ರಗಳನ್ನು ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ಅವರಿಗೆ ಚಿತ್ರ ನಿರ್ದೇಶಿಸುವ ಹಂಬಲವಾಗಿ ಬಹಳ ಕಷ್ಟಪಟ್ಟು ತಮ್ಮ ಮೊದಲ ಚಿತ್ರ
ಗ್ರಹಣ ನಿರ್ದೇಶಿಸಿದರು. ಈ ಚಿತ್ರಕ್ಕೆ ೧೯೭೯ರ ರಾಷ್ಟ್ರೀಯ ಐಕ್ಯತೆಯ ಅತ್ಯುತ್ತಮ ಚಿತ್ರ ಎಂದು ನರ್ಗಿಸ್ ದತ್ ರಾಷ್ಟ್ರಪ್ರಶಸ್ತಿ ಹಾಗೂ ಅತ್ಯುತ್ತಮ ಚಿತ್ರಕತೆ (ನಾಗಾಭರಣ ಮತ್ತು ಟಿ ಎಸ್ ರಂಗಾ) ಪ್ರಶಸ್ತಿಗಳು ದೊರಕಿದವು. ಜೊತೆಗೆ ೧೯೭೮-೭೯ರ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಮೊದಲ ಅತ್ಯುತ್ತಮ ಚಿತ್ರ, ಅತ್ಯುತ್ತಮ ಕಪ್ಪುಬಿಳಿ ಛಾಯಾಗ್ರಹಣ - ಎಸ್ ರಾಮಚಂದ್ರರವರಿಗೆ ನೀಡಲಾಯಿತು. ಅಲ್ಲದೆ ಈ ಚಿತ್ರ ಜರ್ಮನಿಯ ಮ್ಯಾನ್ಹೆಮ್ - ಹೈಡೆಲ್ಬರ್ಗ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಯಿತು.
 
====ಚಲನಚಿತ್ರಗಳು====
"https://kn.wikipedia.org/wiki/ನಾಗಾಭರಣ" ಇಂದ ಪಡೆಯಲ್ಪಟ್ಟಿದೆ