ಆಟಿಕಳಂಜ ಕುಣಿತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
#WPWP and #WPWPWLF
೨ ನೇ ಸಾಲು:
'''ಆಟಿ ಕಳೆಂಜ''' [[ತುಳು ನಾಡು|ತುಳು ನಾಡಿನ]] ಜನಪದ ಕುಣಿತಗಳಲ್ಲಿ ಒಂದು ಆಚರಣಾತ್ಮಕ ಕಲಾ ಪ್ರಕಾರ. [[ದಕ್ಷಿಣ ಕನ್ನಡ ಜಿಲ್ಲೆ]]ಯಲ್ಲಿ ಹೆಚ್ಚಾಗಿ ನಲಿಕೆ' ಜನವರ್ಗದಲ್ಲಿ ಕಾಣಸಿಗುವ ಕುಣಿತ. ಇದೇ ಕುಣಿತವನ್ನು [[ಬೆಳ್ತಂಗಡಿ]] ಭಾಗದಲ್ಲಿ '''ಮೇರ''' ಜನವರ್ಗದವರು ನಡೆಸಿಕೊಡುತ್ತಾರೆ.<ref>http://www.thehindu.com/news/cities/Mangalore/kalenja-a-fading-tradition/article3678199.ece</ref> ಈ ಕುಣಿತವನ್ನು ಆಷಾಡ ತಿಂಗಳಲ್ಲಿ ನಡೆಸುವುದರಿಂದ ಇದನ್ನು ಆಟಿ ಕಳಂಜ ಎಂತಲೂ ಕರೆಯಲಾಗಿದೆ. ಕಳೆಂಜ ಎಂದರೆ ಚಿಕ್ಕ ಬಾಲಕ, ದುಷ್ಟ ಶಕ್ತಿಗಳನ್ನು ಹೊಡೆದೋಡಿಸುವ ಮಾಂತ್ರಿಕ ಎಂದರ್ಥವೂ ಇದೆ. ಕಳಂಜನು ಊರಿಗೆ ಬಂದ ಮಾರಿಯನ್ನು (ರೋಗ-ರುಜಿನವನ್ನು) ಹೊಡೆದೋಡಿಸುತ್ತಾನೆ ಎನ್ನುವ ಆಶಯದಿಂದಾಗಿ ಈ ಕುಣಿತ ಪ್ರಕಾರವನ್ನು ಆಹ್ವಾನಿಸಿ ದಾನ ನೀಡುವರು. ನಲಿಕೆ ಜನವರ್ಗದವರು ನಡೆಸಿಕೊಡುವ ಈ ಕಳಂಜ ವೇಷ ಕಣಿಂಜ ಇದ್ದಿರಬಹುದೇನೋ ಎನ್ನುವ ಅನುಮಾನವೂ ಇದೆ. ಕಾರಣ: ಕಣಿಂಜ-ಎಂದರೆ ಮಾಟ-ಮಂತ್ರಗಳನ್ನು ದೂರ ಮಾಡುವವ ಎಂದರ್ಥ. ತುಳುವಿನ ಆಟಿ (ಆಷಾಢ: ಚಾಂದ್ರಮಾನದಲ್ಲಿ ನಾಲ್ಕನೆಯ ತಿಂಗಳು) ತಿಂಗಳಲ್ಲಿ [[ನಲಿಕೆ]] ಅಥವಾ [[ಪಾಣಾರ]] ಜನವರ್ಗದವರು ಆಟಿಕಳೆಂಜ ವೇಷವನ್ನು ಹಾಕಿಕೊಂಡು ಮನೆ ಮನೆಗೆ ಹೋಗಿ ಕುಣಿಯುತ್ತಾರೆ, ಸಣ್ಣ ಬಾಲಕನಿಗೆ ತಾಳೆಗರಿಯ ತತ್ರ (ಛತ್ರಿ) ಕೊಟ್ಟು ಕುಣಿಯಲು ಹಿಮ್ಮೇಳದಲ್ಲಿ 'ತೆಂಬರೆ'-ಯನ್ನು (ಚರ್ಮ ವಾದ್ಯ)ಪುರುಷ ವ್ಯಕ್ತಿ ನುಡಿಸುತಿರುತ್ತಾನೆ. ಕಳೆಂಜನ ವೇಷ ಭೂಷಣದಲ್ಲಿ ಮುಖ್ಯವಾಗಿ ಸೊಂಟಕ್ಕೆ ತೆಂಗಿನ ತಿರಿ, ಕಾಲಿಗೆ ಗಗ್ಗರ, ಅಥವಾ ಕೈಗೆ-ಮೈಗೆ ಬಣ್ಣ, ಮುಖ್ಯವಾಗಿ ಗಡ್ಡ ಮತ್ತು ಮೀಸೆ, ಅಡಿಕೆ ಹಾಳೆಯಿಂದ ಮಾಡಿದ ಮತ್ತು ಕಿಸಗಾರ ಹೂವಿನಿಂದ ಸಿಂಗರಿಸಿದ ಟೊಪ್ಪಿಗೆ ಇವುಗಳು ಆಟಿಕಳೆಂಜನ ವೇಷಗಳು.
== ಆಟಿಕಳೆಂಜ ವೇಷದ ವಿವರ ==
[[File:Aati kalenja 2 (ಆಟಿಕಳೆಂಜ).jpg|thumb|right|ಸಿದ್ಧವಾಗುತ್ತಿರುವ ಆಟಿಕಳಂಜ ವೇಷಗಾರ]]
ಬೆಳ್ತಂಗಡಿ ತಾಲ್ಲೂಕಿನ ಮೇರರಲ್ಲಿನ ಆಟಿ ಕಳೆಂಜ ವೇಷದಲ್ಲಿ ಕಳೆಂಜನ ವೇಷ ಹಾಕುವವರು ವಯಸ್ಕರು ಮತ್ತು ಕೈಯಲ್ಲಿ 'ದುಡಿ '-ಎನ್ನುವ ವಿಶೇಷ ವಾದ್ಯವನ್ನು ಹಿಡಿದು ನುಡಿಸುತ್ತಾ ಪಾಡ್ದನವನ್ನು ಹೇಳುತ್ತಾ ಕುಣಿಯುತ್ತಾರೆ.
 
"https://kn.wikipedia.org/wiki/ಆಟಿಕಳಂಜ_ಕುಣಿತ" ಇಂದ ಪಡೆಯಲ್ಪಟ್ಟಿದೆ