ಬೆಟ್ಟದಾವರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Macaranga indica" ಲೇಖನದ ಅನುವಾದ
 
+images #WPWP
 
೧ ನೇ ಸಾಲು:
[[ಚಿತ್ರ:Macaranga ¿ peltata - indica ? (5600699456).jpg|thumb|ಬೆಟ್ಟದಾವರೆ ಅಥವಾ ಉಪ್ಪಳಿಗೆ]]
'''ಬೆಟ್ಟದಾವರೆ'''ಯು ಭಾರತದ ಪಶ್ಚಿಮ ಘಟ್ಟಗಳು ಮತ್ತು ಶ್ರೀಲಂಕಾದಲ್ಲಿ ಕಂಡುಬರುವ ಒಂದು ನಿತ್ಯಹರಿದ್ವರ್ಣ ಸಸ್ಯವಾಗಿದೆ.<ref>http://indiabiodiversity.org/species/show/14614</ref> ಇದರ ಎಲೆಗಳು ಬಹಳ ಬಿಸಿಲನ್ನು ತಡೆದುಕೊಳ್ಳಬಲ್ಲವು. ಈ ಸಸ್ಯದಿಂದ "ಮಕರಂಗ ಅಂಟು" ಎಂದು ಕರೆಯಲಾಗುವ ಒಂದು ಕಡುಗೆಂಪು ಬಣ್ಣದ ರಾಳವನ್ನು ಪಡೆಯಲಾಗುತ್ತದೆ. ಎರಡೂ ದೇಶಗಳಲ್ಲಿ ಈ ಸಸ್ಯದ ಅನೇಕ ಭಾಗಗಳನ್ನು ಆಯುರ್ವೇದಿಕ ಔಷಧಿಗಾಗಿ ಬಳಸಲಾಗುತ್ತದೆ.
ಇದು ರಾಳವನ್ನು ಒಸರುವ ಮರವಾಗಿದ್ದು, ೧೬ ಮೀಟರ್‌ಗಳಷ್ಟು ಎತ್ತರವಿರುತ್ತದೆ. ಬೂದು ಬಣ್ಣದ ತೊಗಟೆಯು ವಿನ್ಯಾಸದಲ್ಲಿ ನಯವಾಗಿರುತ್ತದೆ. ಎಲೆಗಳು ಸರಳ ಮತ್ತು ಪರ್ಯಾಯವಾಗಿ ಜೋಡಣೆಗೊಂಡಿರುತ್ತವೆ, ಗುರಾಣಿಯಾಕಾರದ್ದಾಗಿದ್ದು, ಗೋಳಾಕಾರವಾಗಿರುತ್ತವೆ. ತುದಿಯು ತೀಕ್ಷ್ಣಾಗ್ರವಾಗಿರುತ್ತದೆ ಮತ್ತು ಎಲೆಗಳು ಅಂಗೈಯಾಕಾರವಾಗಿದ್ದು ೮ ರಿಂದ ೯ ನಾಳಗಳಿರುತ್ತವೆ. ಹೂವುಗಳು ಏಕಲಿಂಗಿಯಾಗಿರುತ್ತವೆ. ಒಂದೇ ಬೀಜವಿರುವ ಹಣ್ಣು ಗೋಳಾಕಾರದ ಕೋಶವಾಗಿರುತ್ತದೆ.
"https://kn.wikipedia.org/wiki/ಬೆಟ್ಟದಾವರೆ" ಇಂದ ಪಡೆಯಲ್ಪಟ್ಟಿದೆ