ತೆಂಗಿನಕಾಯಿ ಮರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಮರ: colour
ಟ್ಯಾಗ್: 2017 source edit
ಚು ಹೊಸ ಮಾಹಿತಿ ಸೇರ್ಪಡೆ
೭೭ ನೇ ಸಾಲು:
==ಮರ==
ನೇರವಾಗಿ ಎತ್ತರಕ್ಕೆ ಬೆಳೆಯುವ ಮರ. ಕೊಂಬೆಗಳಿರುವುದಿಲ್ಲ, ಗರಿಗಳಿರುತ್ತವೆ. ದೇಶವಾಳಿ ಮರ ೨೫-೩೦ ಮೀ. ಎತ್ತರ ಬೆಳೆಯುತ್ತದೆ. ಎಲೆಗಳು ಹಸ್ತ ರೂಪದಲ್ಲಿರುತ್ತವೆ. ಹಸ್ತಾಕಾರ ದಲ್ಲಿ ಪತ್ರಗಳು/ಎಲೆ/ಗರಿಗಳಿರುವ ಮರ, ಗಿಡಗಳನ್ನು '''ಪಾಮೇ'''ಸಸ್ಯ ಕುಟುಂಬಕ್ಕೆ ಸೇರಿಸಲಾಗಿದೆ. ತೆಂಗಿನಮರದ ಜೀವನ/ಕಾಲ ೮೦-೧೦೦ ವರ್ಷಗಳು. ಮರ ಹೂವುಗಳನ್ನು ೭-೧೦ ವರ್ಷದೊಳಗೆ ಬಿಡುತ್ತದೆ. ಮರದ ಕಾಂಡದ ಮೇಲಿನ ಕಡೆ ಭಾಗದಲ್ಲಿ ಗರಿಗಳನ್ನು ಬಿಡುತ್ತದೆ. ಮೇಲಿನ ಕಡೆ ಭಾಗದಲ್ಲಿ ೩೦ ಗರಿಗಳಿರುತ್ತವೆ. ಗರಿಗಳು ದೊಡ್ಡವಾಗಿ ೧೫-೨೦ ಅಡಿಗಳ ಉದ್ದ ಇರುತ್ತವೆ. ಮರದಲ್ಲಿ ೩೦ ಗರಿಗಳಿರುತ್ತವೆ. ತಿಂಗಳಿಗೊಂದು ಹೊಸ ಗರಿಯನ್ನು ಬಿಡುತ್ತದೆ. ಗರಿಯ ಜೀವನ ಕಾಲ ೩೦ ತಿಂಗಳುಗಳು, ಆಮೇಲೆ ಮರದಿಂದ ಗರಿ ಬೀಳುತ್ತದೆ. ಒಂದು ಮರದಿಂದ ೬೦ ಕಾಯಿಗಳು ಒಂದು ವರ್ಷಕ್ಕೆ ಬರುತ್ತವೆ. ಗಂಡು ಮತ್ತು ಹೆಣ್ಣು ಹೂವುಗಳು ಒಂದೇ ಮರದಲ್ಲಿ ಒಂದೇ ಕಡೆ ಇರುತ್ತವೆ. ಹೂವುಗಳು ಜೊಂಪಾಗಿ ಬಿಡುತ್ತವೆ. ಅವನ್ನು ಹೊಂಬಾಳೆಯೆಂದು ಕರೆಯುತ್ತಾರೆ. ಒಂದು ಮರದಲ್ಲಿ ೩೦ರ ತನಕ ಹೂ ಜೊಂಪೇ/ಗೊಂಚಲು (bunch) ಇರುತ್ತವೆ. ತಿಂಗಳಿಗೊಂದು ಹೂ ಗೊಂಚಲು ಹುಟ್ಟುತ್ತದೆ. ಒಂದು ಮರದಿಂದ ಒಂದು ಸಂವತ್ಸರ ಕಾಲದಲ್ಲಿ ೩೦-೬೦ ಕಾಯಿಗಳು ಉತ್ಪತ್ತಿಯಾಗುತ್ತವೆ. ಹೆಣ್ಣು ಹೂವು ಹುಟ್ಟಿದ ಮೇಲೆ ಕಾಯಿ ಆಗುವುದಕ್ಕೆ ಒಂದು ಸಂವತ್ಸರ ಕಾಲಬೇಕು.
 
== ಸಸ್ಯಲಕ್ಷಣ ==
ತೆಂಗು 70 - 80 ವರ್ಷಗಳ ಕಾಲ ಬದುಕಿ ಫಲಕೊಡುವ ಒಂಟಿ ಕಾಂಡದ ವೃಕ್ಷ. ಮರದ ಬುಡದಲ್ಲಿ ಭದ್ರವಾದ ಬೇರುಗಳುಂಟು. ಕಾಂಡ ಕೊಂಬೆರಹಿತವಾಗಿದ್ದು ಬಿದ್ದ ಗರಿಗಳ ಗುರುತಿನಿಂದ ಕೂಡಿ ಸ್ತಂಭಾಕೃತಿಯಿಂದ 20 - 25 m. ಗೂ ಹೆಚ್ಚು ಎತ್ತರವಾಗಿ ಬೆಳೆಯುವುದು. ಮರದ ತುದಿಯಲ್ಲಿ ದಟ್ಟವಾಗಿ ಬೆಳೆದ ಬೇರೆ ಬೇರೆ ವಯಸ್ಸಿನ ಸುಮಾರು 30 - 40 ಗರಿಗಳಿರುತ್ತವೆ.
 
ಗಿಡದ ತುದಿಯ ಕೇಂದ್ರದಲ್ಲಿ ಸುಳಿಯಿದೆ. ಗರಿಗಳ ಉದ್ದ ಸುಮಾರು 4-6m. ಮಧ್ಯದ ದಿಂಡಿನ ಎರಡು ಕಡೆಯೂ ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿರುವ 200 ರಿಂದ 300 ಕಿರುಪತ್ರಗಳುಂಟು. ಒಂದು ಸಿಂಗಾರದಲ್ಲಿ (ಹೊಂಬಾಳೆಯಲ್ಲಿ) ಗಂಡು ಮತ್ತು ಹೆಣ್ಣು ಹೂಗಳಿರುತ್ತವೆ. ಪ್ರತಿ ಎಲೆಯ ಕಂಕುಳಲ್ಲೂ ಒಂದು ಸಿಂಗಾರ ಬರುವುದು. ಸಿಂಗಾರ ಉದ್ದನೆಯ ಕವಚದಿಂದ ಮುಚ್ಚಿರುವುದು. ಕವಚ ಒಡೆದು ಸಿಂಗಾರ ಅರಳಿದಾಗ ಅದರ ನಡುದಿಂಡಿನ ಎರಡು ಭಾಗದಲ್ಲೂ ಜೋಡಣೆಗೊಂಡಿರುವ ಉಪಕವಲುಗಳ ಮೇಲೆ ಹೂಗಳು ಗೋಚರವಾಗುವುವು. ತುದಿಯಲ್ಲಿ ಗಂಡು ಹೂಗಳೂ, ಬುಡದಲ್ಲಿ ಹೆಣ್ಣು ಹೂಗಳೂ ಇವೆ. ಮೊದಲು ಗಂಡು ಹೂಗಳು ಅನಂತರ ಹೆಣ್ಣು ಹೂಗಳು ಅರಳುತ್ತವೆ. ಉತ್ತಮವಾಗಿ ಕೃಷಿಮಾಡಿದ ಮರದಿಂದ 100 - 200 ಕಾಯಿಗಳು ದೊರೆಯುವುವು. ಕಾಯಿಗಳ ಬಣ್ಣ ಹಳದಿ, ಕೆಂಪು, ಕಿತ್ತಳೆ, ಕಂದು, ಹಸಿರು - ಹೀಗೆ ವೈವಿಧ್ಯಮಯ. ಕಾಯಿ ಡ್ರೂಪ್ ಮಾದರಿಯದು.
 
*ಮರಗಳಲ್ಲಿ ಎರಡು ವಿಧಗಳಿವೆ. ಒಂದು ಎತ್ತರ/ಉದ್ದ ಪ್ರಭೇದ, ಎರಡನೆಯದು ಕುಳ್ಳ/ಗುಜ್ಜಾರಿ(dwarf)ತರಹದ್ದು. ಭಾರತ ದೇಶದಲ್ಲಿ ಬೆಳೆಸುವ ತೆಂಗಿನ ಮರಗಳಲ್ಲಿ ದೇಶವಾಳಿ ಜೊತೆಗೆ ಸಂಕರ ತಳಿ/ಮಿಶ್ರ ತಳಿ(hybrid)ಮರಗಳೂ ಇವೆ.
"https://kn.wikipedia.org/wiki/ತೆಂಗಿನಕಾಯಿ_ಮರ" ಇಂದ ಪಡೆಯಲ್ಪಟ್ಟಿದೆ