ಇಂಗ್ಲಿಷ್ ಸಾಹಿತ್ಯದ ಸಂಕ್ಷಿಪ್ತ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೪೩ ನೇ ಸಾಲು:
*ಹದಿನೇಳನೆಯ ಶತಮಾನ ಇಂಗ್ಲೆಂಡಿನ ಚರಿತ್ರೆಯಲ್ಲಿ ರಾಜಕೀಯ ಮತ್ತು ಧಾರ್ಮಿಕ ಜಿಜ್ಞಾಸೆಯ ಮತ್ತು ಕಲಹಗಳ ಕಾಲ. ಎಲಿಜಬೆತ್ತಳ ಯುಗದಂತೆ ತಾರುಣ್ಯದ ಉತ್ಸಾಹ, ಉದ್ವೇಗ, ಭಾವಾತಿಶಯಗಳು ಪ್ರಧಾನವಾಗಿರದೆ ಆಲೋಚನೆ, ವಿಮರ್ಶೆ ಈ ಕಾಲದಲ್ಲಿ ಪ್ರಾಬಲ್ಯಕ್ಕೆ ಬಂದುವು. ಇದಕ್ಕೆ ಅನುಗುಣವಾಗಿ ಚರ್ಚಾತ್ಮಕವಾದ ಗದ್ಯ ಸಾಹಿತ್ಯ ಈ ಶತಮಾನದಲ್ಲಿ ಬೆಳೆಯಿತು. ಆದರೆ ಕಾವ್ಯಸೃಷ್ಟಿಯೂ ನಡೆಯಿತು. ಇಡೀ ರಾಷ್ಟ್ರಜೀವನವನ್ನು ಪ್ರತಿಬಿಂಬಿಸುವ ಕಾವ್ಯ ಬಂದಿತು. ಪ್ರಾಟೆಸ್ಟಂಟ್ ಮತ ಮತ್ತು ಅದರ ಒಳಪಂಗಡಗಳು. ಕೆಥೊಲಿಕ ಮತ ಮೊದಲಾದುವನ್ನು ಪ್ರತಿನಿಧಿಸುವ ಕವಿಗಳು ಬಂದರು. ಲೌಕಿಕ ಕಾವ್ಯವೂ ಪ್ರಣಯಗೀತೆಗಳ ಮತ್ತು ರಾಜಕೀಯ ವಿಡಂಬನೆಗಳ ರೂಪವನ್ನು ತಳೆದು ಬೆಳೆಯಿತು. ಇಂಥ ಲೌಕಿಕ ಕವಿಗಳಲ್ಲಿ ಮೊದಲು ಹೆಸರಿಸಬೇಕಾದವ ಜಾನ್ ಡನ್ ಮತಸಂಬಂಧವಾದ ಕವಿತೆಗಳನ್ನೂ ಡನ್ ಬರೆದಿದ್ದಾನೆ. ಆದರೆ ಅವನು ತನ್ನ ಯೌವನದಲ್ಲಿ ಬರೆದ ಪ್ರಣಯಗೀತೆಗಳಿಗಿರುವ ಪ್ರಾಶಸ್ತ್ಯ ಅವಕ್ಕಿಲ್ಲ. ಆತ ದಿ ಮೆಟಫಿಜಿಕಲ್ ಸ್ಕೂಲ್ ಎಂಬ ಕಾವ್ಯವರ್ಗವನ್ನು ಆರಂಭಿಸಿದವ ಈ ಗುಂಪಿನ ಕವನಗಳ ಒಂದು ಲಕ್ಷಣ ಅವುಗಳಲ್ಲಿ ಬುದ್ಧಿಚಮತ್ಕಾರದ ಅಂಶವಿರುವುದು. ಕವಿ ಸಮಯಗಳನ್ನು ದೂರವಿರಿಸಿ, ಹೊಸ ಪ್ರತಿಮೆಗಳನ್ನು ಬಳಸಿ, ಬುದ್ಧಿ ಚಮತ್ಕಾರಕ್ಕೂ ಪ್ರಾಧಾನ್ಯವಿರುವ ಕವನಗಳನ್ನು ಬರೆದ. ಅವನ ಕವನಗಳು ತೀವ್ರಭಾವಕ್ಕೂ ಅರ್ಥಸ್ಪಷ್ಟತೆಗೂ ನಿಷ್ಕøಷ್ಟತೆಗೂ ಆಡುಮಾತಿನ ಬಳಕೆಗೂ ಗಮನಾರ್ಹವಾಗಿದೆ; ತತ್ಕಾರಣ ಅವು ಆಧುನಿಕ ಇಂಗ್ಲಿಷ್ ಕವಿಗಳ ಮತ್ತು ವಿಮರ್ಶಕರ ಮನ್ನಣೆ ಪಡೆದಿವೆ. ಡನ್ನನ ಅನಂತರ ಬಂದ ಪ್ರಣಯ ಕವಿಗಳಲ್ಲಿ ಕ್ಯಾರ್ಯೂ, ಹೆರಿಕ್, ಲವ್ಲೇಸ್, ಸಕ್ಲಿಂಗ್, ರಾಛೆಸ್ಟರ್, ಮೊದಲಾದವರ ಭಾವಗೀತೆಗಳು ಪ್ರಣಯದ ವಿವಿಧ ರೂಪದ ಆಭಿವ್ಯಕ್ತಿಯನ್ನು ಅತ್ಯಂತ ಆಕರ್ಷಕವಾದ ರೀತಿಯಲ್ಲಿ ಮಾಡುತ್ತವೆ. ಇವರೆಲ್ಲರಿಗೂ ಕ್ಯವಾಲಿಯರ್ ಪೊಯಟ್ಸ್ ಎಂದು ಹೆಸರು ಬಂದಿದೆ. ಹಗುರವಾದ ಪ್ರಣಯಭಾವದ ನಾನಾ ಛಾಯೆಗಳನ್ನು ಮನಮೋಹಕವಾದ ರೀತಿಯಲ್ಲಿ ವ್ಯಕ್ತಪಡಿಸುವುದರಲ್ಲಿ ಇವರು ಸಿದ್ಧಹಸ್ತರು. ಪ್ರಣಯನಿಷ್ಠೆಯಾಗಲಿ ಏಕಪತ್ನೀವ್ರತವಾಗಲಿ ಇವರಲ್ಲಿ ಅಪರೂಪ. ಹದಿನೇಳನೆಯ ಶತಮಾನದ ಪೂರ್ವಾರ್ಧದಲ್ಲಿ ಎಡ್ಮಂಡ್ ವ್ಯಾಲರ್, ಆಂಡ್ರ್ಯೂ ಮಾರ್ವೆಲ್, ಏಬ್ರಹಾಮ್ ಕೌಲಿ, ಜಾನ್ ಡ್ರ್ಯೆಡನ್-ಇವರೆಲ್ಲ ಉತ್ತಮ ಮಟ್ಟದ ಕೆಲವು ಭಾವಗೀತೆಗಳನ್ನೂ ಹಾಡುಗಳನ್ನೂ ಬರೆದರು. ಕೌಲಿ ಮಹಾಕಾವ್ಯವನ್ನು ಬರೆಯಬೇಕೆಂಬ ಬಯಕೆಯಿಂದ ಡೇವಿಡೇಯಿಸ್ ಎಂಬ ಬಹಳ ದೊಡ್ಡ ಕವನವನ್ನೇ ಬರೆದು ತನ್ನ ಕಾಲದಲ್ಲಿ ಬಹು ಪ್ರಖ್ಯಾತನಾಗಿದ್ದ. ಈಗ ಆ ಕಾವ್ಯವನ್ನು ಕೇಳುವವರೇ ಇಲ್ಲ. ಆ ಶತಮಾನಕ್ಕೆ ಸೇರಿದ ಜಾರ್ಜ್ ಹರ್ಬರ್ಟ್, ರಿಚರ್ಡ್ ಕ್ರಾಷಾ, ಹೆನ್ರಿ ವಾಹನ್, ಮತ್ತು ಥಾಮಸ್ ಟ್ರಹರ್ನ್ ಮೆಟಫಿಸಿಕಲ್ ಸ್ಕೂಲ್‍ಗೆ ಸೇರಿದ ಒಳ್ಳೆಯ ಕವಿಗಳು. ಎಲ್ಲರೂ ಅಲೌಕಿಕ ವಿಚಾರಗಳನ್ನು ಕುರಿತು ಅನುಭಾವಿ ಕವನಗಳನ್ನು ಬರೆದಿರುವರು. ಇವರ ಕವನಗಳು ಹದಿನೇಳನೆಯ ಶತಮಾನದ ಧಾರ್ಮಿಕ ದೃಷ್ಟಿಗೆ ದ್ಯೋತಕವಾಗಿವೆ.
===ಮಿಲ್ಟನ್===
[[File:Milton diktiert seinen Töchtern das »Paradise Lost« (Eugène Ferdinand Victor Delacroix).jpg|thumb|ಮಿಲ್ಟನ್ ತನ್ನ ಮೂರು ಹೆಣ್ಣುಮಕ್ಕಳಿಗೆ '''"ಪ್ಯಾರಡೈಸ್ ಲಾಸ್ಟ್"''' ಬರೆದುಕೊಳ್ಳಲು ನಿರ್ದೇಶಿಸುತ್ತಾನೆ" ,ca. 1826, by [[Eugène Delacroix]] ]]
*'''ಗದ್ಯ:''' ಡಿಲೋನಿ ( 1543-1600) ;ಸಿಡ್ನಿ (1554-1586) ;ಹೂಕರ್ (1554-1600);ಲೈಲೀ (1554-1606) ;ಬೇಕನ್ ( 1561-1626);ನ್ಯಾಶ್ (ನ್ಯಾಶೆ)(1567-1601);ಬರ್ಟನ್ (1577-1640);ಓವರ್ ಬರೀ (1581-1613) ;ಅರ್ಲ್ (1601-1665);ಬ್ರೌನ್ (1605-1682);ಫುಲ್ಲರ್ (1608-1661)''';ಮಿಲ್ಟನ್ (1608-1674)'''
 
Line ೧೪೯ ⟶ ೧೪೮:
*'''ನಾಟಕ:''' :ಲೈಲಿ (1554-1606);ಕಿಡ್ (1557-1595);ಪೀಲೆ (1558-1597);ಛಾಪ್‍ಮನ್ (1559-1634);ಮಾರ್ಲೋವ್ (1564-1593);ಷೇಕ್ಸಪಿಯರ್ (1564-1616) ;ಮಿಡಲ್‍ಟನ್ (1570-1627);ಡೆಕ್ಕರ್ (1570-1632);ಜಾನ್‍ಸನ್ (1572-1637);ಫ್ಲಚರ್ (1579-1625)
ವೆಬ್‍ಸ್ಟರ್ (1580-1625);ಮಸಿಂಜರ್ (1583-1640);ಬೀಮೌಂಟ್ 1584-1616);ಹೇವುಡ್ (ಮ.1650);ಫೋರ್ಡ್ (1619)
 
===ಪುನರುಜ್ಜೀವನಕಾಲ (ರೆಸ್ಟೋರೇಶನ್ ಕಾಲ)===
;ಕಾವ್ಯ :ಬಟ್ಲರ್ (1612-1680);ಡ್ರೈಡನ್ (1631-1700)