ಕಾನೂನು ಮತ್ತು ಸಾಂಸ್ಕೃತಿಕ ಮಾನವಶಾಸ್ತ್ರದಲ್ಲಿ, ವಿವಾಹಸಂಬಂಧವು ಯಾರದ್ದಾದರೂ ವಿವಾಹದ ಪರಿಣಾಮವಾಗಿ ಇಬ್ಬರು ಅಥವಾ ಹೆಚ್ಚು ಜನರ ನಡುವೆ ಸೃಷ್ಟಿಯಾದ ಅಥವಾ ಏರ್ಪಡುವ ಬಾಂಧವ್ಯ. ವಿವಾಹಸಂಬಂಧವು ರಕ್ತಸಂಬಂಧದಿಂದ ಭಿನ್ನವಾಗಿದೆ. ಇದು ವಿವಾಹದ ಪ್ರತಿ ಪಕ್ಷ ವಿವಾಹದ ಇತರ ಭಾಗಿಯ ಸಂಬಂಧಿಗಳೊಂದಿಗೆ ಹೊಂದಿರುವ ಸಂಬಂಧ; ಆದರೆ ಇದು ಸ್ವತಃ ವಿವಾಹದ ಪಕ್ಷಗಳ ವೈವಾಹಿಕ ಸಂಬಂಧವನ್ನು ಒಳಗೊಳ್ಳುವುದಿಲ್ಲ. ಕಾನೂನುಗಳು ಗಣನೀಯವಾಗಿ ಬದಲಾಗುತ್ತಾವಾದರೂ, ವಿವಾಹಸಂಬಂಧವು ಯಾವಾಗಲೂ ವಿವಾಹದ ಜೊತೆಗಾರರಲ್ಲಿ ಒಬ್ಬರ ಸಾವಿನಿಂದ, ಅಥವಾ ವಿವಾಹ ಜೊತೆಗಾರರ ವಿಚ್ಛೇದನದಿಂದ ಕೊನೆಗೊಳ್ಳುವುದಿಲ್ಲ. ವಿವಾಹದಿಂದ ಏರ್ಪಡುವ ಬಾಂಧವ್ಯದ ಜೊತೆಗೆ, "ವಿವಾಹಸಂಬಂಧ"ವು ಕೆಲವೊಮ್ಮೆ ದತ್ತು ಸ್ವೀಕಾರ ಹಾಗೂ ಮಲಸಂಬಂಧದಿಂದಾಗುವ ಬಾಂಧವ್ಯವನ್ನೂ ಒಳಗೊಳ್ಳಬಹುದು.

ಕಾನೂನಿನಡಿಯಲ್ಲಿ, ವಿವಾಹದಿಂದ ಸೃಷ್ಟಿಯಾಗುವ ಅಂತಹ ನೆಂಟರನ್ನು ವಿವಾಹಸಂಬಂಧಿಗಳು ಎಂದು ಕರೆಯಲಾಗುತ್ತದೆ.[n ೧]

ಕಾನೂನಿನಲ್ಲಿ, ವಿವಾಹಸಂಬಂಧವು ಅಗಮ್ಯಗಾಮಿ ಲೈಂಗಿಕ ಸಂಬಂಧಗಳ ಮೇಲಿನ ನಿರ್ಬಂಧಗಳ ವಿಷಯದಲ್ಲಿ ಮತ್ತು ನಿರ್ದಿಷ್ಟ ಜೋಡಿಗಳು ವಿವಾಹವಾಗಲು ನಿರ್ಬಂಧಿತರಾಗಿದ್ದಾರೆಯೇ ಎಂಬ ವಿಷಯದಲ್ಲಿ ಪ್ರಸ್ತುತವಾಗಿರಬಹುದು. ಯಾವ ಸಂಬಂಧಗಳು ನಿರ್ಬಂಧಿತವಾಗಿವೆ ಎಂಬುದು ದೇಶದಿಂದ ದೇಶಕ್ಕೆ ಬದಲಾಗುತ್ತವೆ, ಮತ್ತು ಕಾಲಾಂತರದಲ್ಲಿ ಬದಲಾಗಿವೆ. ಕೆಲವು ದೇಶಗಳಲ್ಲಿ, ವಿಶೇಷವಾಗಿ ಹಿಂದೆ ನಿರ್ಬಂಧಿತ ಸಂಬಂಧಗಳು ಧಾರ್ಮಿಕ ಕಾನೂನುಗಳನ್ನು ಆಧರಿಸಿದ್ದವು.

ಉಲ್ಲೇಖಗಳು

ಬದಲಾಯಿಸಿ
  1. This is standard for the closest degrees of kinship—father-in-law, daughter-in-law, &c.—but is frequently omitted in the case of more extended relations. As uncle and aunt are frequently used to refer indifferently to friends of the family, the terms may be used without specifying whether the person is a cognate or affine. Similarly, the spouse of a cousin may not be called a relation at all or may be referenced as a "cousin by marriage".