ವಿಳಂಬನ
ವಿಳಂಬನ ಎಂದರೆ ನಿರ್ದಿಷ್ಟ ಗಡುವಿನಲ್ಲಿ ನೆರವೇರಿಸಬೇಕಾದ ಒಂದು ಕಾರ್ಯವನ್ನು ಮಾಡುವುದನ್ನು ತಪ್ಪಿಸುವುದು.[೧] ಇದನ್ನು ಒಂದು ಕಾರ್ಯವನ್ನು ಶುರುಮಾಡುವ ಅಥವಾ ಮುಗಿಸುವ ರೂಢಿಯ ಅಥವಾ ಉದ್ದೇಶಪೂರ್ವಕ ಕಾಲಹರಣ ಎಂದು ಮತ್ತಷ್ಟು ವಿಸ್ತಾರವಾಗಿ ಹೇಳಬಹುದು, ಹಾಗೆ ಮಾಡುವುದರಿಂದ ನಕಾರಾತ್ಮಕ ಪರಿಣಾಮಗಳು ಆಗಬಹುದು ಎಂದು ಗೊತ್ತಿದ್ದರೂ.[೨] ಪ್ರತಿದಿನದ ಕೆಲಸಗಳಲ್ಲಿ ವಿಳಂಬ ಮಾಡುವುದು ಅಥವಾ ಭೇಟಿಗೆ ಹಾಜರಾಗುವುದು, ಉದ್ಯೋಗ ವರದಿಯ ಅಥವಾ ನಿಗದಿಮಾಡಿದ ಶೈಕ್ಷಣಿಕ ಕಾರ್ಯವನ್ನು ಒಪ್ಪಿಸುವುದು, ಅಥವಾ ಸಂಗಾತಿಯೊಂದಿಗಿನ ಒತ್ತಡಕರ ಸಮಸ್ಯೆಯನ್ನು ಎತ್ತುವಂತಹ ಪ್ರಮುಖ ಕಾರ್ಯಗಳನ್ನು ಮುಂದೂಡುವುದು ಸಾಮಾನ್ಯ ಮಾನವ ಅನುಭವವಾಗಿದೆ.
ಉಲ್ಲೇಖಗಳು
ಬದಲಾಯಿಸಿ- ↑ Karen K. Kirst-Ashman; Grafton H. Hull, Jr. (2016). Empowerment Series: Generalist Practice with Organizations and Communities. Cengage Learning. p. 67. ISBN 978-1-305-94329-2.
- ↑ Ferrari, Joseph (June 2018). "Delaying Disposing: Examining the Relationship between Procrastination and Clutter across Generations". Current Psychology. (New Brunswick, N.J.) (1046-1310), 37 (2) (2): 426–431. doi:10.1007/s12144-017-9679-4.