ವಿಪ್ರೊ ಟೆಕ್ನಾಲಜೀಸ್

ಭಾರತದ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸೇವೆ ಮತ್ತು ಸಲಹಾ ಕಂಪನಿ
(ವಿಪ್ರೋ ಇಂದ ಪುನರ್ನಿರ್ದೇಶಿತ)

ವಿಪ್ರೊ ಟೆಕ್ನಾಲಜೀಸ್ ೧೯೮೦ ರಲ್ಲಿ ಸ್ಥಾಪಿತವಾದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ. ಇದು ೧೯೪೫ ರಿಂದ ಅಸ್ತಿತ್ವದಲ್ಲಿರುವ ವಿಪ್ರೊ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ವಿಭಾಗ. ಇದರ ಮುಖ್ಯ ಕಛೇರಿ ಬೆಂಗಳೂರು ನಗರದಲ್ಲಿದೆ. ಈ ಸಂಸ್ಥೆ ಒಟ್ಟು ೭೯,೦೦೦ ಕ್ಕೂ ಹೆಚ್ಚು ಕೆಲಸಗಾರರನ್ನು ಹೊಂದಿದೆ.

ವಿಪ್ರೊ ಲಿಮಿಟೆಡ್
ಸಂಸ್ಥೆಯ ಪ್ರಕಾರಸಾರ್ವಜನಿಕ ಬಿಎಸ್‌ಇ: 507685
NYSEWIT
ಸ್ಥಾಪನೆ೧೯೪೫ ಭಾರತದಲ್ಲಿ
ಸಂಸ್ಥಾಪಕ(ರು)ಪ್ರೇಮ್‌ಜಿ
ಮುಖ್ಯ ಕಾರ್ಯಾಲಯಭಾರತ ಬೆಂಗಳೂರು, ಕರ್ನಾಟಕ, ಭಾರತ
ಪ್ರಮುಖ ವ್ಯಕ್ತಿ(ಗಳು)ಅಜಿಮ್ ಪ್ರೇಮ್‍ಜಿ, ಅಧ್ಯಕ್ಷ
ಗಿರೀಶ್ ಪರಾಂಜಪೆ, joint CEO
ಸುರೇಶ್ ವಾಸ್ವಾನಿ, joint CEO
ಎಸ್ ಎ ಸುದರ್ಶನ್, VP
ಉದ್ಯಮಮಾಹಿತಿ ತಂತ್ರಜ್ಞಾನ ,
ಸೇವೆಗಳುಮಾಹಿತಿ ತಂತ್ರಜ್ಞಾನ ಸಮಾಲೋಚನೆ, Business Process Outsourcing, Product Engineering Solutions, Technology Infrastructure Services
ಆದಾಯIncrease ರೂ 25,544 ಕೋಟಿ (2009)[೧]
ಉದ್ಯೋಗಿಗಳು97000+ (2009)
ಜಾಲತಾಣWipro.com

ವಿಪ್ರೊ ಟೆಕ್ನಾಲಜೀಸ್ ಒಟ್ಟು ಮುನ್ನೂರಕ್ಕೂ ಹೆಚ್ಚು ಸಂಸ್ಥೆಗಳಿಗೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಸೇವೆಯನ್ನು ಒದಗಿಸುತ್ತದೆ. ಈ ಗ್ರಾಹಕ ಸಂಸ್ಥೆಗಳು ಮುಖ್ಯವಾಗಿ ಅಮೆರಿಕ, ಯೂರೋಪ್ ಮತ್ತು ಜಪಾನ್ ಗಳಲ್ಲಿವೆ. ರೂ. ೫೦೦ ಕೋಟಿಗೂ ಹೆಚ್ಚು ವಾರ್ಷಿಕ ಆದಾಯ ಹೊಂದಿರುವ ಈ ಸಂಸ್ಥೆ ಭಾರತದ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದು.

ವಿಪ್ರೊ ಟೆಕ್ನಾಲಜೀಸ್ ನ ಪ್ರಸಕ್ತ ನಿರ್ದೇಶಕರು ಅಜಿಮ್ ಪ್ರೇಮ್‍ಜಿ.

ಹೊರಗಿನ ವಿಪ್ರೊ ವಿಪ್ರೊ ಟೆಕ್ನಾಲಜೀಸ್ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ