ವಿದ್ಯಾಶಂಕರ ದೇವಾಲಯ
ವಿದ್ಯಾಶಂಕರ ದೇವಾಲಯವು ತುಮಕೂರು ಜಿಲ್ಲೆ ತುಮಕೂರು ತಾಲೂಕಿನಲ್ಲಿ ಇದೆ. ಇದು ತುಮಕೂರು ನಗರದಿಂದ ಸುಮಾರು ೧೫ ಕಿ.ಮೀ ದೂರದಲ್ಲಿದೆ. ಇಲ್ಲಿ ಪುರಾತನವಾದ ವಿದ್ಯಾಶಂಕರ ದೇವಾಲಯವಿದೆ. ತುಮಕೂರಿನಿಂದ ದೇವರಾಯನದುರ್ಗ ಮಾರ್ಗದಲ್ಲಿ ಚಲಿಸಿದರೆ ನಾಮದ ಚಿಲುಮೆಯಿಂದ ಮುಂದಕ್ಕೆ ೧ ಕಿ.ಮೀ ಚಲಿಸಿದ ಮೇಲೆ ಎಡಕ್ಕೆ ತಿರುಗಿ ೧ ಕಿ.ಮೀ ಹೋದರೆ ವಿದ್ಯಾಶಂಕರ ದೇವಾಲಯವನ್ನು ತಲುಪಬಹುದು. ದೇವರಾಯನದುರ್ಗಕಾದಿಟ್ಟ ಅರಣ್ಯದ ಸೆರಗಿನಲ್ಲಿ ಇದ್ದು, ಸುತ್ತ ಮುತ್ತ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಇತ್ತೀಚೆನವರೆಗೂ ಪಾಳು ಬಿದ್ದಿದ್ದ ಈ ದೇವಾಲಯವನ್ನು ಬೆಂಗಳೂರಿನ ಪ್ರಖ್ಯಾತ ಸಾರ್ವಜನಿಕ ಸಂಸ್ಥೆಯೊಂದು ಜೀರ್ಣೋದ್ದಾರ ಮಾಡಿದೆ. ದೇವರಾಯನದುರ್ಗ ಬೆಟ್ಟದಿಂದ ಕೂಡ ಈ ದೇವಾಲಯದ ನೋಟ ಲಬ್ಯವಿದೆ.
ಸುತ್ತ ಮುತ್ತ ಇರುವ ಇತರ ಪ್ರಮುಖ ಸ್ಥಳಗಳೆಂದರೆ ದೇವರಾಯನದುರ್ಗ, ನಾಮದ ಚಿಲುಮೆ, ಜಿಂಕೆ ವನ, ಸಿದ್ದಗಂಗೆ ಮಠ, ಮಂದರಗಿರಿ. ಗೊರವನಹಳ್ಳಿ ಲಕ್ಷ್ಮಿ ದೇವಾಲಯವು ಇಲ್ಲಿಂದ ಬಹಳವೇನು ದೂರವಿಲ್ಲ.