ವಿತ್ತ ಮಂತ್ರಿ ಸರ್ಕಾರದಲ್ಲಿ ಒಂದು ಕಾರ್ಯಕಾರಿ ಅಥವಾ ಸಂಪುಟ ಸ್ಥಾನ. ಹಣಕಾಸು (ಅಥವಾ ಹಣಕಾಸು ವ್ಯವಹಾರ, ಖಜಾನೆ, ಅರ್ಥ, ಆರ್ಥಿಕ ವ್ಯವಹಾರ) ಮಂತ್ರಿಯು ಸರ್ಕಾರದಲ್ಲಿ ಹಲವು ವಿವಿಧ ಜವಾಬ್ದಾರಿಗಳನ್ನು ಹೊಂದಿರುತ್ತಾರೆ. ಮಂತ್ರಿಗಳು ಸರ್ಕಾರಿ ಬಜೆಟ್ ರಚಿಸುತ್ತಾರೆ, ಅರ್ಥವ್ಯವಸ್ಥೆಯನ್ನು ಪುನಶ್ಚೇತನಗೊಳಿಸುತ್ತಾರೆ, ಹಣಕಾಸುಗಳನ್ನು ನಿಯಂತ್ರಿಸುತ್ತಾರೆ.