ವಿಕಿಪೀಡಿಯ:ವಿಕಿಮೀಡಿಯ ಫೌಂಡೇಶನ್ ಬೋರ್ಡ್‌ ಚುನಾವಣೆ 2021

ವಿಕಿಮೀಡಿಯ ಫೌಂಡೇಶನ್ ಬಗ್ಗೆ

ಬದಲಾಯಿಸಿ

ವಿಕಿಮೀಡಿಯ ಫೌಂಡೇಶನ್ ಲಾಭರಹಿತ ಸಂಸ್ಥೆಯಾಗಿದ್ದು ಅದು ವಿವಿಧ ವಿಕಿಮೀಡಿಯ ಯೋಜನೆಗಳನ್ನು ಬೆಂಬಲಿಸುತ್ತದೆ. ವಿಕಿಮೀಡಿಯ ಯೋಜನೆಗಳ ಬೆಳವಣಿಗೆಗೆ ಅವರು ತಾಂತ್ರಿಕ ಬೆಂಬಲ, ಸ್ವಯಂಸೇವಕರು ಮತ್ತು ಅಂಗಸಂಸ್ಥೆಗಳಿಗೆ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಬೆಂಬಲಿಸುತ್ತಾರೆ.

ವಿಕಿಮೀಡಿಯ ಫೌಂಡೇಶನ್ ಅದರ ಅಂತಿಮ ಸಾಂಸ್ಥಿಕ ಪ್ರಾಧಿಕಾರವಾಗಿ ಮತ್ತು ಅದರ ಕಾರ್ಯಗಳನ್ನು ನೋಡಿಕೊಳ್ಳುವ ಟ್ರಸ್ಟಿಗಳ ಮಂಡಳಿಯನ್ನು ಹೊಂದಿದೆ. ಮಂಡಳಿಯು ಫೌಂಡೇಶನ್‌ನ ವಾರ್ಷಿಕ ಯೋಜನೆಯನ್ನು ಸಹ ನೋಡಿಕೊಳ್ಳುತ್ತದೆ, ಇದು ಒಂದು ವರ್ಷದಲ್ಲಿ ವಿವಿಧ ಯೋಜನೆಗಳು, ಪ್ರದೇಶಗಳು ಮತ್ತು ಸಮುದಾಯಗಳಿಗೆ ಬೆಂಬಲವನ್ನುನೀಡುವುದರ ಬಗ್ಗೆ ಫೌಂಡೇಶನ್‌ನ ನಿರ್ಧಾರ ನಿರ್ಣಾಯಕವಾಗಿದೆ.

2021 ಸಮುದಾಯ ಸ್ಥಾನಗಳಿಗೆ ಮಂಡಳಿಯ ಚುನಾವಣೆಗಳು

ಬದಲಾಯಿಸಿ

ಮಂಡಳಿಯ ಹದಿನಾರು ಟ್ರಸ್ಟಿಗಳಲ್ಲಿ ಒಬ್ಬರನ್ನು ಸಂಸ್ಥಾಪಕರಿಗೆ, ಏಳು ಮಂದಿಯನ್ನು ಅಗತ್ಯ ಪರಿಣತಿಗಾಗಿ ಟ್ರಸ್ಟಿಗಳು ನೇಮಕ ಮಾಡುತ್ತಾರೆ ಮತ್ತು ಸಮುದಾಯ ಚುನಾವಣಾ ಪ್ರಕ್ರಿಯೆಯ ಮೂಲಕ ಎಂಟು ಸ್ಥಾನಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಎಂಟು ಸ್ಥಾನಗಳಲ್ಲಿ ನಾಲ್ಕು ಈಗ ಚುನಾವಣೆಗೆ ಸಜ್ಜಾಗಿದೆ.

WMF (ವಿಕಿಮೀಡಿಯ ಫೌಂಡೇಶನ್) ಇತಿಹಾಸದ ಕಳೆದ 15 ವರ್ಷಗಳಲ್ಲಿ, ದಕ್ಷಿಣ ಏಷ್ಯಾ ಪ್ರದೇಶದ ಯಾರಿಗೂ ಮಂಡಳಿಯಲ್ಲಿ ಸೇವೆ ಸಲ್ಲಿಸಲು ಅವಕಾಶವಿರಲಿಲ್ಲ. ವಿಕಿಮೀಡಿಯ ಚಳವಳಿಯ ಉನ್ನತ ಮಟ್ಟದ ಆಡಳಿತ ರಚನೆಗಳಲ್ಲಿ ಸಮುದಾಯ ಮತ್ತು ಪ್ರದೇಶದಿಂದ ಪ್ರಾತಿನಿಧ್ಯದ ಕೊರತೆಯ ಮೇಲೆ ಇದು ಪರಿಣಾಮ ಬೀರುತ್ತಿದೆ.

ಈ ಸಮಯದಲ್ಲಿ, ಅದನ್ನು ಬದಲಾಯಿಸಲು ನಮಗೆ ಅವಕಾಶವಿದೆ. ದಯವಿಟ್ಟು ಕೆಳಗಿನ ಚುನಾವಣಾ ಸಮಯವನ್ನು ನೋಡಿ ಮತ್ತು ನೀವು ಅದರ ಭಾಗವಾಗುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

  • ಜೂನ್ 6-29: ಅಭ್ಯರ್ಥಿಗಳನ್ನು ಸ್ಪರ್ಧಿಸಲು ಆಹ್ವಾನಿಸುವುದು
  • ಜುಲೈ 2: ದೃಡಪಡಿಸಿದ ಅಭ್ಯರ್ಥಿಗಳ ಪ್ರಕಟಣೆ
  • ಜುಲೈ 7 - ಆಗಸ್ಟ್ 3: ಅಭ್ಯರ್ಥಿಗಳ ಚುನಾವಣಾ ಅಭಿಯಾನ
  • ಆಗಸ್ಟ್ 4-17: ಸಮುದಾಯ ಮತದಾನದ ಅವಧಿ
  • ಆಗಸ್ಟ್ 25: ಚುನಾವಣಾ ಫಲಿತಾಂಶಗಳ ಪ್ರಕಟಣೆ

ಮತ ಚಲಾಯಿಸಲು ಅರ್ಹರೋ ಇಲ್ಲವೋ ಎಂದು ಈ ಟೂಲ್ ಬಳಸಿ ಕಂಡುಕೊಳ್ಳಬಹುದು.

ಗಮನಿಸಿ: ನೀವು ಅರ್ಹರಲ್ಲದಿದ್ದರೆ ಮತ್ತು 2021 ರ ಜುಲೈ 5 ರ ವರೆಗೆ ಅರ್ಹತೆಯನ್ನು ಗಿಟ್ಟಿಸಿಕೊಳ್ಳಲು ಅವಕಾಶವಿದೆ. ದಯವಿಟ್ಟು ವಿಕಿಮೀಡಿಯ ಯೋಜನೆಗಳಿಗೆ ಕೊಡುಗೆ ನೀಡುವುದನ್ನು ಪರಿಗಣಿಸಿ.

ಅಭ್ಯರ್ಥಿಗಳು

ಬದಲಾಯಿಸಿ

ಪ್ರಸ್ತುತ ಎಲ್ಲ ಅಭ್ಯರ್ಥಿಗಳ ಹೆಸರು ಇಲ್ಲಿದೆ.

ಪ್ರಶ್ನೆಗಳಿವೆಯೇ?

ಬದಲಾಯಿಸಿ

ನಿಮ್ಮಲ್ಲಿ ಯಾವುದೇ ಪ್ರಶ್ನೆಗಳಿದ್ದರೆ, ದಯವಿಟ್ಟು ಚುನಾವಣಾ ಸ್ವಯಂಸೇವಕರನ್ನು ಅಥವಾ ಫೆಸಿಲಿಟೇಟರ್ ಅನ್ನು ಸಂಪರ್ಕಿಸಿ, ಅಥವಾ ಮಾತುಕತೆ ಪುಟದಲ್ಲಿ ಸಂದೇಶವನ್ನು ಪೋಸ್ಟ್ ಮಾಡಿ.