ವಸಂತ್ ದೇಸಾಯಿ (೧೯೧೨-೧೯೭೫) ಭಾರತದ ಚಲನಚಿತ್ರ ಸಂಗೀತ ನಿರ್ದೇಶಕರು. ಇವರು ವಿ.ಶಾಂತಾರಾಮ್ ನಿರ್ದೇಶಿಸಿದ "ದೋ ಆಂಖೆ ಬಾರಹ ಹಾತ್" (೧೯೫೩), ಜನಕ್ ಜನಕ್ ಪಾಯಲ್ ಬಾಜೆ" (೧೯೫೫), ವಿಜಯ ಭಟ್ ರವರ "ಗೂಂಜ್ ಉಟಿ ಶೆಹನಾಯಿ (೧೯೫೯) ಮತ್ತು ಹೃಷಿಕೇಶ ಮುಖರ್ಜಿ ಯವರ "ಗುಡ್ಡಿ" (೧೯೭೧) ಮುಂತಾದ ಚಲನಚಿತ್ರಗಳಿಗೆ ನೀಡಿದ ಸಂಗೀತದಿಂದ ಪ್ರಸಿದ್ಧರಾದರು.

Vasant Desai
ಜನನ(೧೯೧೨-೦೬-೦೯)೯ ಜೂನ್ ೧೯೧೨
ಸೊನಾವಾಡ ಗ್ರಾಮ, ಸಾವಂತವಾಡಿ, ಮಹಾರಾಸ್ಟ್ರ
ಮರಣ1975
ಉದ್ಯೋಗಚಲನಚಿತ್ರ ಸಂಗೀತ ನಿರ್ದೇಶಕರು

ಆರಂಭಿಕ ಜೀವನಸಂಪಾದಿಸಿ

೧೯೧೨ ರಲ್ಲಿ ಬೋಂಸ್ಲೆ ಕುಟುಂಬಸ್ಥರಿಂದ ಆಳಲ್ಪಡುತಿದ್ದ ಸಾವಂತವಾಡಿ ಪ್ರಾಂತ್ಯದ ಸೋನ್ವಾದ್ ಎಂಬ ಹಳ್ಳಿಯಲ್ಲಿ ಜನಿಸಿದರು. ಮುಂದೆ ಮಹಾರಾಷ್ಟ್ರ ರಾಜ್ಯದ ಸಿಂಧುದುರ್ಗ ಜಿಲ್ಲೆಯ ಕುಡಾಲ್ ಪ್ರಾಂತ್ಯದಲ್ಲಿ ಬೆಳೆದು ದೊಡ್ಡವರಾದರು.

ವೃತ್ತಿ ಜೀವನಸಂಪಾದಿಸಿ

ಇವರು ತಮ್ಮ ವೃತ್ತಿ ಜೀವನವನ್ನು ಅ ಕಾಲದಲ್ಲಿ ವಾಕಿ ಚಲನಚಿತ್ರಗಳನ್ನು ತಯಾರಿಸುತಿದ್ದ ಪ್ರಭಾತ್ ಫಿಲಂ ಕಂಪನಿಯಲ್ಲಿ ಪ್ರಾರಂಭಿಸಿದರು. ಅಲ್ಲಿ ಇವರು ನಟನಾಗಿ, ಕೆಲವೊಮ್ಮೆ ಗಿತರಚನಕಾರನಾಗಿ, ಹಾಡುಗಾರನಾಗಿ ಪ್ರಭಾತ ಕಂಪನಿಯ "ಧರ್ಮಾತ್ಮ", ಸಂತ ಜ್ಞಾನೇಶ್ವರ ಮುಂತಾದ ಚಲನಚಿತ್ರಗಳಲ್ಲಿ ಕೆಲಸಮಾಡಿದರು. ಸಂಗೀತ ರಚನೆಯ ಕಲೆಯನ್ನು ಕರಗತ ಮಾಡಿಕೊಂಡ ಮೇಲೆ ಮುಂದೆ ಸಂಗೀತಗಾರನಾಗಿಯೆ ಉಳಿದರು. ವಿ.ಶಾಂತಾರಾಮ್ ಪ್ರಭಾತ್ ಕಂಪನಿಯನ್ನು ತೊರೆದು ತನ್ನದೇ ಸ್ಟುಡಿಯೋ ಸ್ಥಾಪಿಸಿ ಚಲನಚಿತ್ರ ನಿರ್ಮಾಣ ಪ್ರಾರಂಭಿಸಿದ ಮೇಲೆ ವಸಂತ ದೇಸಾಯಿ ಇವರ ಹೆಚ್ಹಿನ ಎಲ್ಲ್ಲಾ ಚಿತ್ರಗಳಿಗೆ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿದರು. ೧೯೫೦ರ ನಂತರ ಇವರ ನಡುವಿನ ಸಂಬಂಧ ಹಳಸಿದ ಮೇಲೆ ದೇಸಾಯಿಯವರು ವಿ.ಶಾಂತಾರಾಮ್ ರವರೊಂದಿಗೆ ಮುಂದೆಂದೂ ಕೆಲಸ ಮಾಡಲಿಲ್ಲ. ಇವರು ನೀಡಿದ ಅಮರ ಗೀತೆಗಳಲ್ಲಿ "ಏ ಮಾಲಿಕ್ ತೆರೆ ಬಂದೆ ಹಂ" ಗುಡ್ಡಿ ಚಲನ ಚಿತ್ರದ "ಬೋಲಾರೆ ಪಪಿಹರ" ಮುಂತಾದವುಗಳು ಪ್ರಮುಖವಾಗಿವೆ. ಇವರು ಖ್ಯಾತ ಗಾಯಕಿ ವಾಣಿ ಜಯರಾಂ ರವರನ್ನು ಹಿಂದಿ ಚಲನಚಿತ್ರಗಳಿಗೆ ಪರಿಚಯಿಸಿದವರು.

ಇವರು ಸಂಗೀತ ನೀಡಿದ ಚಿತ್ರಗಳ ಅಂಶಿಕ ಪಟ್ಟಿಸಂಪಾದಿಸಿ

  • ಶಾಕುಂತಲ
  • ಅಮರ ಬ್ಹೊಪಾಲಿ (ಮರಾಠಿ)
  • ಮೊಲ್ಕರಿನ್ (ಮರಾಠಿ)
  • ದೇವ್ ದೀನಘರಿ ಧವಳ (ಮರಾಠಿ ನಾಟಕ)
  • ದೋ ಫೂಲ್ (1958)
  • ಜನಕ್ ಜನಕ್ ಪಾಯಲ್ ಭಾಜೆ (೧೯೫೫)
  • ದೋ ಅಂಖೆ ಬ್ಹಾರಃ ಹಾತ್ (1953)
  • ತೂಫಾನ್ ಆರ್ ದೀಯ
  • ಗುಂಜ್ ಉಥಿ ಶೆಹನಾಯಿ
  • ಡಾ.ಕೊಟ್ನಿಸ್ ಕಿ ಅಮರ್ ಕಹಾನಿ (1946) [೧]
  • ಗುಡ್ಡಿ
  • ಅಚಾನಕ್

ಆಕರಗಳುಸಂಪಾದಿಸಿ

  1. "Filmography". Archived from the original on 2011-09-28. Retrieved 2010-03-29.

ಬಾಹ್ಯ ಕೊಂಡಿಗಳುಸಂಪಾದಿಸಿ