ಭಾರತದಲ್ಲಿ ಅನೇಕ ಸಂತರು ಆಗಿ ಹೋಗಿರುವರು. ಅವರ ಸಂಖ್ಯೆ ಅಸಂಖ್ಯ. ಆದರೆ ಅನೇಕ ಸಂತರ ಹೆಸರು, ಮತ್ತು ಅವರ ಜೀವನ ಚರಿತ್ರೆಗಳು ಇಂದೂ ಉಳಿದಿವೆ. ಎಲ್ಲರ ಬಗ್ಗೆಯೂ ಬರೆಯಲು ಅಸಾಧ್ಯ ವಾಗಿರುವುದರಿಂದ ಸಾಧ್ಯವಾದಷ್ಟು ಸಂತರ ಪರಿಚಯ ಈ ಮೂಲಕ ಮಾಡಿಕೊಡಬೇಕೆಂಬ ಪ್ರಯತ್ನ ಇಲ್ಲಿ ನಡೆದಿದೆ.. ಈ ಪ್ರಯತ್ನದಲ್ಲಿ ಮೊದಲ ಪರಿಚಯ ಎಲ್ಲರಿಗಿಂತ ಹಿಂದಿನವರದೇ ಆಗಿರಬೇಕೆಂಬ ನಿಯಮವನ್ನು ಪಾಲಿಸಿಲ್ಲ.. ಮತ್ತು ಆ ವ್ಯಕ್ತಿಗಳ ಪೂರ್ಣ ವ್ರುತ್ತಾಂತವನ್ನು ಕೊಡುವ ಶಕ್ತಿ ನನ್ನಲ್ಲಿ ಇಲ್ಲ..ಆದರೆ ಸಾಧ್ಯವಾದಷ್ಟು ಸಂತರ ವಿಚಾರವನ್ನು ತಿಳಿಸಬೇಕೆಂಬ ಹಂಬಲದಿಂದ ಇಲ್ಲಿ ಬರೆಯುತ್ತೇನೆ.: ೧)== ನಾರದ ==: ದೇವರ್ಷಿ ನಾರದ ಭಕ್ತರಲ್ಲಿ ಶ್ರೇಷ್ಕ್ಠ. ಭಕ್ತಿಸೂತ್ರಗಳ ಕರ್ತೃ. ಕೇವಲ ಭಗವಂತನ ಚಿಂತನೆಯಲ್ಲಿ ಭಗವಂತನ ನಾಮ ಪಾಡುತ್ತಾ ಕಳೆದ ಸಂತ. ಈತನೇ ಮೊದಲ ವೀಣೆಯ ಜನಕ ಎಂದು ಹೇಳುವರು. ಆತ್ಮ`ಙ್ನಾನಿ ಯಾದ ನಾರದರು ಭಗವದ್ ಪ್ರಾಪ್ತಿಯ ಸುಲಭೋಪಾಯ ಭಕ್ತಿ ಎಂದು ಪ್ರತಿಪಾದಿಸಿರುವರು. ೨) === ಪ್ರಹ್ಲಾದ: : ನಾಸ್ತಿಕವಾದಿ ರಾಜ ಹಿರಣ್ಯ ಕಷಿಪುವಿನ ಮಗ ಪ್ರಹ್ಲಾದ. ಇನ್ನೂ ತಾಯಿಯ ಗರ್ಭದಲ್ಲಿರುವಾಗಲೇ ನಾರದರಿಂದ ಶ್ರೀ ಹರಿ ಭಕ್ತಿಯನ್ನು ಉಪದೇಶಿಸಲ್ಪಟ್ಟ ಭಾಗವತೋತ್ತಮ. ಭಗವಂತನು ಎಲ್ಲೆಲ್ಲೂ ಇರುವನೆಂಬ ಸತ್ಯವನ್ನು ಪ್ರತಿಪಾದಿಸಿದ ಸಂತ.

"ಪುರುಷ ಸಂತರು" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ ಈ ಕೆಳಗಿನ ಪುಟವೊಂದು ಇದೆ.