ಯಂತ್ರಮಾನವ

(ರೋಬಾಟ್ ಇಂದ ಪುನರ್ನಿರ್ದೇಶಿತ)

ಯಂತ್ರಮಾನವ ಒಂದು ಯಾಂತ್ರಿಕ ಅಥವಾ ಮಿಥ್ಯಾ ಸಾಧನ, ಸಾಮಾನ್ಯವಾಗಿ ಗಣಕ ಕ್ರಮವಿಧಿ ಅಥವಾ ವಿದ್ಯುನ್ಮಂಡಲದ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವ ಒಂದು ವಿದ್ಯುದ್ಯಾಂತ್ರಿಕ ಯಂತ್ರ. ಯಂತ್ರಮಾನವಗಳು ಸ್ವಯಮಾಧಿಕಾರದ್ದು ಅಥವಾ ಅರೆ-ಸ್ವಯಮಾಧಿಕಾರದ್ದಾಗಿರಬಹುದು ಮತ್ತು ಹೋಂಡಾಅಡ್‍ವಾನ್ಸ್‍ಡ್ ಸ್ಟೆಪ್ ಇನ್ ಇನವೇಟಿವ್ ಮೋಬಿಲಿಟಿ (ಅಶಿಮೊ) ಮತ್ತು ಟೋಸಿಟೋಸಿ ಪಿಂಗ್ ಪಾಂಗ್ ಪ್ಲೇಯಿಂಗ್ ರೋಬಾಟ್ (ಟೋಪಿಯೊ) ಹ್ಯೂಮನಾಯ್ಡ್‍ಗಳ ಶ್ರೇಣಿಯಿಂದ ಕೈಗಾರಿಕಾ ಯಂತ್ರಮಾನವಗಳು, ಒಟ್ಟಾಗಿ ಪ್ರೋಗ್ರಾಂ ಮಾಡಿದ ಸಮೂಹ ಯಂತ್ರಮಾನವಗಳು, ಮತ್ತು ಸೂಕ್ಷ್ಮದರ್ಶಕೀಯ ನ್ಯಾನೊ ಯಂತ್ರಮಾನವಗಳವರೆಗೆ ಸಹ ವ್ಯಾಪಿಸಿವೆ. ಜೀವಸದೃಶ ರೂಪ ಅಥವಾ ಚಲನೆಗಳನ್ನು ಸ್ವಯಂಚಾಲಿತಗೊಳಿಸಿ ಅನುಕರಿಸುವ ಮೂಲಕ, ಒಂದು ಯಂತ್ರಮಾನವವು ಅದರ ಸ್ವಂತದ ಬುದ್ಧಿವಂತಿಕೆ ಅಥವಾ ಯೋಚನೆಯ ಭಾವನೆಯನ್ನು ತಿಳಿಸಬಹುದು.

HONDA ASIMO.jpg

ಜಪಾನ್ ಮತ್ತು ರೊಬಾಟ್ಸಂಪಾದಿಸಿ

  • 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಹೊಸದೊಂದು ಮಾಯಾ ಲೋಕವನ್ನೇ ಸೃಷ್ಟಿಸಲು ಜಪಾನ್ ಸಿದ್ಧತೆ ನಡೆಸಿದೆ. ಚಾಲಕರಿಲ್ಲದ ಕಾರುಗಳು, ಜಲಜನಕ ಶಕ್ತಿಯಿಂದ ನಿಶ್ಶಬ್ದ ಚಲಿಸುವ ವಾಹನಗಳು, 5ಜಿ ಸಂಪರ್ಕ ವ್ಯವಸ್ಥೆ, ಗಂಟೆಗೆ 600 ಕಿ.ಮೀ ವೇಗದ ಸೂಪರ್ ಮ್ಯಾಗ್ಲೆವ್ ರೈಲುಬಂಡಿ, ಉಪಗ್ರಹದ ಮೂಲಕ ಉಲ್ಕಾವೃಷ್ಟಿ, ಈಗಿನ ಎಚ್‌ಡಿ ಟಿವಿಗಳಿಗಿಂತ 16 ಪಟ್ಟು ಹೆಚ್ಚು ಸ್ಪಷ್ಟವಾಗಿ ಚಿತ್ರಗಳನ್ನು ಬಿತ್ತರಿಸುವ 8ಕೆ ಟಿವಿ, ಜೊತೆಗೆ ಹೆಜ್ಜೆ ಹೆಜ್ಜೆಗೂ ರೋಬಾಟ್‌ಗಳು.
  • ಜಪಾನ್ ಎಂದರೆ ರೋಬಾಟ್‌ಗಳ ಜನ್ಮಸ್ಥಾನ ತಾನೆ? ಅಲ್ಲಿ ಎಳೆಯರ ಸಂಖ್ಯೆ ಕಡಿಮೆಯಾಗುತ್ತಿದೆ. ಹಿರಿಯ ನಾಗರಿಕರ ಸಂಖ್ಯೆ ದಿನದಿನವೂ ಹೆಚ್ಚುತ್ತಿದೆ. ಅವರ ಸೇವೆಗೆಂದು ತರಾವರಿ ರೋಬಾಟ್‌ಗಳು ಜನ್ಮ ತಾಳುತ್ತಿವೆ. ಸುದ್ದಿ ಓದುತ್ತ ಕತೆ ಹೇಳುತ್ತ, ಹಾಡುವ ಪುಟ್ಟ ಮುದ್ದಿನ ರೋಬಾಟ್‌ಗಳು; ಹಿರಿಯರನ್ನು ಮಂಚದಿಂದ ಎತ್ತಿ ಗಾಲಿಕುರ್ಚಿಯ ಮೇಲೆ ಕೂರಿಸುವ ಧಾಂಡಿಗ ರೋಬಾಟ್‌ಗಳು, ರಸ್ತೆಗಿಳಿದಾಗ ಮಾರ್ಗದರ್ಶಿ ರೋಬಾಟ್‌ಗಳು.
  • ಒಲಿಂಪಿಕ್ಸ್ ಕ್ರೀಡೆ ನಡೆಯುವ ಒಡಾಯಿಬಾ ಗ್ರಾಮದಲ್ಲಿ ರೋಬಾಟ್‌ಗಳದ್ದೇ ಪ್ರತ್ಯೇಕ ಗ್ರಾಮ ಇರುತ್ತದಂತೆ. ಅತಿಥಿಗಳ ಸಂಚಾರ ವ್ಯವಸ್ಥೆ, ಮನರಂಜನೆ, ಊಟೋಪಚಾರ ಮೇಲ್ವಿಚಾರಣೆ ಮತ್ತು 27 ಭಾಷೆಗಳಲ್ಲಿ ಮಾತಾಡಬಲ್ಲ ರೋಬಾಟ್‌ಗಳ ಸೈನ್ಯವೇ ಸಜ್ಜಾಗುತ್ತಿದೆ. ತಾನೇ ರೋಬಾಟಿಕ್ಸ್ ತಂತ್ರಜ್ಞಾನದ ಜಾಗತಿಕ ಮುಂದಾಳು ಎಂಬುದನ್ನು ತೋರಿಸಲು ಜಪಾನ್ ಹೊರಟಿದೆ. [೧]

ರೋಬೊ ಪರಿಚಾರಕಿಯರುಸಂಪಾದಿಸಿ

  • ಪಾಕಿಸ್ತಾನದ ಮುಲ್ತಾನ್‌ನ ಪಿಜ್ಜಾಡಾಟ್‌ಕಾಮ್‌ ರೆಸ್ಟೊರಂಟ್‌ನಲ್ಲಿ ಮೊದಲ ಬಾರಿಗೆ ರೋಬೊ ಪರಿಚಾರಕಿಯರು ಮುಗುಳುನಗೆಯೊಂದಿಗೆ ಪಿಜ್ಜಾ ಸರ್ವ್‌ ಮಾಡುತ್ತಾರೆ.[೨]

ರೊಬೊಟ್ ಕಾವಲು ತೋಳಸಂಪಾದಿಸಿ

  • ಗೋಡೆಯ ಮೇಲೆ ಹಲ್ಲಿಯಂತೆ ಸರಿದಾಡುವ ಅವುಗಳು ನೆಲದ ಮೇಲೆ ಮನುಷ್ಯರಂತೆ ಹೆಜ್ಜೆಯನ್ನೂ ಹಾಕುತ್ತವೆ. ಜಪಾನ್‌ನಲ್ಲಿ ‘ಸೂಪರ್‌ ಮಾನ್‌ಸ್ಟರ್‌ ತೋಳ’ವನ್ನು ನಿಲ್ಲಿಸುವ ಖಯಾಲಿ ಬೆಳೆದಿದೆ. 50 ಸೆಂಟಿ ಮೀಟರ್‌ ಎತ್ತರದ ಈ ಎಲೆಕ್ಟ್ರಿಕ್‌ ತೋಳ, ಹೊಲಕ್ಕೆ ನುಗ್ಗುವ ಜಿಂಕೆ ಮತ್ತಿತರ ಪ್ರಾಣಿಗಳನ್ನು ತನ್ನಲ್ಲಿರುವ ಸೆನ್ಸರ್‌ ಮೂಲಕವೇ ಕಂಡುಹಿಡಿದು ಓಡಿಸುತ್ತದಂತೆ. 48 ಬಗೆಯ ಧ್ವನಿಗಳನ್ನು ಗುರುತಿಸುವ ಸಾಮರ್ಥ್ಯವನ್ನು ಕೂಡ ಅದು ಹೊಂದಿದೆ.[೩]

ನೋಡಿಸಂಪಾದಿಸಿ

ಉಲ್ಲೇಖಸಂಪಾದಿಸಿ

  1. ನಾಗೇಶ್ ಹೆಗಡೆ;ರೋಬಾಟ್ ಆಳ್ವಿಕೆಯಲ್ಲಿ ನಾಳೆಗಳ ಸಮಾಧಿ;15 Jun, 2017
  2. http://www.prajavani.net/news/article/2017/07/12/505273.html
  3. ನಾನಾ ಬಗೆಯ ರೋಬಟ್