ರಾಜ (ಚದುರಂಗ)

ಚದುರಂಗ ಆಟದ ಪ್ರದಾನವಾದ ಒಂದು ಕಾಯಿ
(ರಾಜ (ಚದುರ೦ಗ) ಇಂದ ಪುನರ್ನಿರ್ದೇಶಿತ)

ಪುಸ್ತಕಗಳಲ್ಲಿ/ವಿವರಣೆಗಳಲ್ಲಿ ಚದುರಂಗದಲ್ಲಿನ ರಾಜನ ಚಿಹ್ನೆ
ರಾಜ (♔♚) ಚದುರಂಗದಲ್ಲಿ ಉಪಯೋಗವಾಗುವ ಕಾಯಿಗಳಲ್ಲಿ ಒಂದು. ಇದು ಈ ಆಟದ ಅತಿ ಮುಖ್ಯ ಕಾಯಿಯೂ ಹೌದು - ಎದುರಾಳಿಯ ರಾಜನನ್ನು ಹಿಡಿಯುವುದೇ ಇಡೀ ಆಟದ ಉದ್ದೇಶ. ರಾಜನ ಮೇಲೆ ದಾಳಿ ನಡೆಸಿ ರಾಜನಿಗೆ ತಪ್ಪಿಸಿಕೊಳ್ಳಲು ಯಾವ ಚೌಕಗಳೂ ಇಲ್ಲದೆ ಇದ್ದ ಹಾಗೆ ಮಾಡಿದಲ್ಲಿ ಆಟ ಮುಗಿದಂತೆ - ಇದಕ್ಕೆ "ಚೆಕ್ ಮೇಟ್" ಎಂದು ಹೆಸರು.

ಚದುರಂಗದಲ್ಲಿ ರಾಜ
ಗುರುತು ಹಾಕಿದ ಚೌಕಗಳಿಗೆ ರಾಜ ಕ್ರಮಿಸಬಹುದು.

ರಾಜ ಯಾವುದೇ ದಿಕ್ಕಿನಲ್ಲಾದರೂ ಸರಿಯಾಗಿ ಒಂದು ಚೌಕ ಕ್ರಮಿಸಬಹುದು. ಹಾಗೆಯೇ ಆ ಚೌಕಗಳಲ್ಲಿರುವ ಎದುರಾಳಿಯ ಕಾಯನ್ನು ಆಕ್ರಮಿಸಬಹುದು. ರಾಜನಿಗೆ ಇರುವ ಒಂದು ವಿಶೇಷ ಚಲನೆಯೆಂದರೆ "ಕ್ಯಾಸ್‍ಲಿಂಗ್". ಎರಡು ಕಾಯಿಗಳು ಒಂದೇ ನಡೆಯಲ್ಲಿ ಕ್ರಮಿಸುವುದು ಈ ಒಂದು ಉದಾಹರಣೆಯಲ್ಲಿ ಮಾತ್ರ.

ಎದುರಾಳಿಯ ಯಾವುದೇ ಕಾಯಿ ರಾಜನ ಮೇಲೆ ದಾಳಿ ನಡೆಸುವುದಕ್ಕೆ "ಚೆಕ್" ಎಂದು ಹೆಸರು. "ಚೆಕ್" ಇಂದ ತಪ್ಪಿಸಿಕೊಳ್ಳುವುದಕ್ಕೆ ಆಗದಿದ್ದಲ್ಲಿ "ಚೆಕ್ ಮೇಟ್." ರಾಜನನ್ನು ನಡೆಸುವಾಗ "ಚೆಕ್" ಬರುವ೦ಥ ಯಾವುದೇ ಚೌಕಕ್ಕೆ ಅದನ್ನು ಚಲಿಸುವ೦ತಿಲ್ಲ. ಹಾಗೆಯೇ, "ಚೆಕ್" ಇದ್ದಾಗ, ಕ್ಯಾಸ್‍ಲಿಂಗ್ ನಡೆಯನ್ನು ಮಾಡುವಹಾಗಿಲ್ಲ.

ಮೂಲ ಸ್ಥಾನಗಳು ಬದಲಾಯಿಸಿ

ಆಟ ಪ್ರಾರಂಭವಾಗುವಾಗ,

  • ಬಿಳಿಯ ರಾಜ, e1 ಸ್ಥಾನದಲ್ಲಿರುತ್ತದೆ. (ಅಂದರೆ, ಮೊದಲ ಸಾಲಿನಲ್ಲಿ ಎಡಗಡೆಯಿಂದ ಐದನೆ ಮನೆ)
  • ಕಪ್ಪನೆಯ ರಾಜ, e8 ಸ್ಥಾನದಲ್ಲಿರುತ್ತದೆ. (ಅಂದರೆ, ಎಂಟನೆ ಸಾಲಿನಲ್ಲಿ ಎಡಗಡೆಯಿಂದ ಐದನೆ ಮನೆ)

ಗಮನಿಸಿ: ಸಾಲುಗಳ ಸಂಖ್ಯ ಬಿಳಿಯ ಕಾಯಿ ನಡೆಸುವ ಸ್ಪರ್ಧಿಯ ಕಡೆಯಿಂದ.

ಚದುರಂಗದ ಕಾಯಿಗಳು

  ರಾಜ |   ರಾಣಿ |   ಆನೆ |   ಒಂಟೆ |   ಕುದುರೆ |   ಪದಾತಿ