ರಾಜಸ್ಥಾನಿ ಭಾಷೆ

ರಾಜಸ್ಥಾನಿ ಭಾಷೆಯೂ ದೇವನಾಗರಿ ಭಾಷೆಯಾಗಿದ್ದು, ಇಂಡೋ-ಆರ್ಯನ್ ಭಾಷೆಗಳ ಗುಂಪಿಗೆ ಸೇರಿದೆ. ಭಾರತದ ಹರಿಯಾಣ, ಪಂಜಾಬ್, ಗುಜರಾತ್, ಮತ್ತು ಮಧ್ಯಪ್ರದೇಶದ ಪಕ್ಕದ ಪ್ರದೇಶಗಳಲ್ಲಿ ರಾಜಸ್ಥಾನಿ ಭಾಷೆಯನ್ನು ಮಾತನಾಡುತ್ತಾರೆ. ಪಾಕಿಸ್ತಾನದ ಪ್ರಾಂತ್ಯಗಳಾದ ಸಿಂಧ್ ಮತ್ತು ಪಂಜಾಬ್ ನಲ್ಲಿ ರಾಜಸ್ಥಾನಿ ಮಾತನಾಡುವವರು ಇದ್ದಾರೆ.

ಇತಿಹಾಸಸಂಪಾದಿಸಿ

ರಾಜಸ್ಥಾನಿಯೂ ಸುಮಾರು ೧೫೦೦ ವರ್ಷಗಳಷ್ಟು ಹಳೆಯದಾದ ಸಾಹಿತ್ಯ ಶ್ರೀಮಂತ ಸಂಪ್ರದಾಯವನ್ನು ಹೊಂದಿದೆ. ರಾಜಸ್ಥಾನಿಯ ಪೂರ್ವಜರಾದ ಮಾರು ಅಥವಾ ಮಾರುವಾನಿಯವರು ಮಾತನಾಡುತ್ತಿದ್ದರು.ಈ ಭಾಷೆಯ ಪೂರ್ವಗಾಮಿಗಳ ಪಚಾರಿಕ ವ್ಯಾಕರಣವನ್ನು ಜೈನಸನ್ಯಾಸಿ ಮತ್ತು ಪ್ರಖ್ಯಾತ ವಿದ್ವಾಂಸ ಹೇಮಚಂದ್ರ ಸೂರಿ ಅವರು ಅನ್ವಿಲ್ವಾರಾದ (ಪಟಾನ್) ಸೋಲಂಕಿ ರಾಜ ಸಿದ್ದರಾಜ ಜಯಸಿಂಹ ಆಳ್ವಿಕೆಯಲ್ಲಿ ಬರೆದಿದ್ದಾರೆ.

ಬರವಣಿಗೆ ವ್ಯವಸ್ಥೆಸಂಪಾದಿಸಿ

ಭಾರತದಲ್ಲಿ ರಾಜಸ್ಥಾನಿಯನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ. ಇದು ಅಬುಗೀಡಾ ಅಂದರೆ ಇದನ್ನು ಎಡದಿಂದ ಬಲಕ್ಕೆ ಬರೆಯಲಾಗಿದೆ. ಈ ಮೊದಲು ರಾಜಸ್ಥಾನಿ ಬರೆಯಲು ಮಹಾಜನ ಲಿಪಿ ಅಥವಾ ಮರಿಯಾವನ್ನು ಬಳಸಲಾಗುತ್ತಿತ್ತು. ಪಾಕಿಸ್ತಾನದಲ್ಲಿ ರಾಜಸ್ಥಾನಿಯನ್ನು ಸಣ್ಣ ಭಾಷೆಯೆಂದು ಪರಿಗಣಿಸಲಾಗಿದೆ.ಸಿಂಧಿ ಲಿಪಿಯ ರೂಪಾಂತರವನ್ನು ರಾಜಸ್ಥಾನಿ ಉಪಭಾಷೆ ಬರೆಯಲು ಬಳಸಲಾಗುತ್ತದೆ.

ಉಪಭಾಷೆಗಳುಸಂಪಾದಿಸಿ

ರಾಜಸ್ಥಾನಿ ಭಾಷೆಗಳು ಪಾಶ್ಚಿಮಾತ್ಯ ಇಂಡೊ-ಆರ್ಯನ್ ಭಾಷಾ ಕುಟುಂಬಕ್ಕೆ ಸೇರಿವೆ. ಹಿಂದಿ ಭಾಷೆಯೊಂದಿಗೆ ವಿವಾದಾತ್ಮಕವಾದ ಸಂಬಂಧವನ್ನು ಹೊಂದಿದೆ.

 1. ಸ್ಟಾಂಡರ್ಡ್ ರಾಜಸ್ಥಾನಿ: ರಾಜಸ್ಥಾನಿ ಜನರ ಸಾಮಾನ್ಯ ಭಾಷೆ ಮತ್ತು ಇದನ್ನು ರಾಜಸ್ಥಾನದ ವಿವಿಧ ಭಾಗಗಳಲ್ಲಿ ೩೦ ದಶ ಲಕ್ಷಕ್ಕೂ ಹೆಚ್ಚು ಜನರು ಮಾತನಾಡುತ್ತಾರೆ.
 2. ಮಾರ್ವಾಡಿ: ಮಾರ್ವಾಡಿ ಭಾಷೆಯ ಇತಿಹಾಸ ಹೆಸರು ಮಾರು. ಮಾರ್ವಾಡಿ ಭಾಷೆಯನ್ನು ಬಿಕಾನೇರ್, ಚುರು, ಅಜ್ಮೀರ್, ನಾಗೌರ್, ಪಾಲಿ, ಜಲೊಇರ್, ಜೋಧ್ಪರ್, ಬಾರ್ಮರ್, ಮತ್ತು ಜೈಸಲ್ಮೇರ್ ಜಿಲ್ಲೆಗಳ ಜನರು ಮಾತನಾಡುತ್ತಾರೆ.[೧]
 3. ದುಂಧಾರಿ: ರಾಜಸ್ಥಾನದ ದುಂಧರ ಪ್ರದೇಶದಲ್ಲಿ ಸುಮಾರು ೮ ಮಿಲಿಯನ್ ಭಾಷಿಗರಿದ್ದಾರೆ.
 4. ಹರಾತಿ: ರಾಜಸ್ಥಾನದ ಹಡೋಟಿ ಪ್ರದೇಶದಲ್ಲಿ ಸುಮಾರು ೪ ಮಿಲಿಯನ್ ಭಾಷಿಗರಿದ್ದಾರೆ.
 5. ಮೇವರಿ: ರಾಜಸ್ಥಾನದ ಮೇವಾರ್ ಪ್ರದೇಶದಲ್ಲಿ ಮಾಲ್ವಾ ಪ್ರದೇಶದಲ್ಲಿ ೮ ಮಿಲಿಯನ್ ಭಾಷಿಗರಿದ್ದಾರೆ.
 6. ಅಹಿರ್ವತಿ: ದೆಹಲಿ, ಹರಿಯಾಣ, ರಾಜಸ್ಥಾನ ಒಳಗೊಂಡ ಅಹಿರ್ವಾಲ್ ಪ್ರದೇಶದಲ್ಲಿ ಸುಮಾರು ೩ ಮಿಲಿಯನ್ ಭಾಷಿಗರಿದ್ದಾರೆ.
 7. ವಾಗ್ಡಿ: ಡುಂಗರಪುರ ಮತ್ತು ಬನ್ಸಾವರ್ ಜಿಲ್ಲೆಗಳಲ್ಲಿ ೨.೨ ಮಿಲಿಯನ್ ಭಾಷಿಗರಿದ್ದಾರೆ.
 8. ಬಾಗ್ರಿ: ಉತ್ತರ ರಾಜಸ್ಥಾನ ಮತ್ತು ವಾಯುವ್ಯ ಹರಿಯಾಣದಲ್ಲಿ ೧.೪ ಮಿಲಿಯನ್ ಭಾಷಿಗರಿದ್ದಾರೆ.
 9. ನಿಮಾಡಿ: ರಾಜಸ್ಥಾನದ ನಿಮಾರ್ ಪ್ರದೇಶದಲ್ಲಿ ೨.೨ ಮಿಲಿಯನ್ ಭಾಷಿಗರಿದ್ದಾರೆ.
 • ಇತರ ರಾಜಸ್ಥಾನಿ ಭಾಷೆಗಳಾದ ಧಟ್ಕಿ, ಗೋಡ್ವಾರಿ, ಗುಜಾರಿ, ಗುರ್ಗುಲಾ, ಗೋರಿಯಾ ಮತ್ತು ಲಂಬಾಡಿಗಳಿವೆ.[೨]

ಭಾಷೆಯ ಸ್ಥಾನ-ಮಾನಸಂಪಾದಿಸಿ

ಇಂದು ಭಾರತದ ನ್ಯಾಷನಲ್ ಅಕಾಡೆಮಿ ಆಫ್ ಲೇಟರ್ಸ್, ಸಾಹಿತ್ಯ ಅಕಾಡೆಮಿ ಮತ್ತು ವಿಶ್ಯವಿದ್ಯಾಲಯ ಧನ ಸಹಾಯ ಆಯೋಗವು (ಯುಜಿಸಿ) ರಾಜಸ್ಥಾನಿಯನ್ನು ವಿಶಿಷ್ಟ ಸಾಹಿತ್ಯಿಕ ಭಾಷೆಯಾಗಿ ಗುರುತಿಸಿದೆ. ೨೦೦೩ ರಲ್ಲಿ ರಾಜಸ್ಥಾನದ ವಿಧಾನಸಭೆಯಲ್ಲಿ ರಾಜಸ್ಥಾನಿ ಮಾನ್ಯತೆಯನ್ನು ಭಾರತ ಸಂವಿಧಾನ೮ನೇ ವೇಳಾಪಟ್ಟಿಯಲ್ಲಿ ಸೇರಿಸಲು ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿದೆ. ಆದರೆ ಪ್ರಸ್ತುತವಾಗಿ ಸೇರಿಸಲಾಗಿಲ್ಲ. ೧೦ ಸ್ವರಗಳು ಮತ್ತು ೩೧ ವ್ಯಂಜನಗಳಿವೆ. ಲಾವಣಿಗಳು, ಹಾಡುಗಳು, ಗಾದೆಗಳು, ಜಾನಪದ, ಕಥೆಗಳು, ಮತ್ತು ಪ್ಯಾನೆಜಿರಿಕ್ಸ್ ನ್ನು ಒಳಗೊಂಡಿರುವ ಜಾನಪದ ಸಾಹಿತ್ಯ ನಿಧಿ. ರಾಜಸ್ಥಾನಿ ಎಂದರೆ ರಾಜಸ್ಥಾನದಲ್ಲಿ ಮಾತನಾಡುವ ಉಪಭಾಷೆಗಳ ಗುಂಪಿಗೆ ನೀಡಲಾಗಿದೆ. ಇದು ಕಡಿಮೆ ಪ್ರಸರಣವನ್ನು ಹೊಂದಿದ್ದು, ಸಮಗ್ರ ಉಲ್ಲೇಖ ವ್ಯಾಕರಣ ಕೊರತೆ ಮತ್ತು ರಾಜಸ್ಥಾನದ ಸಂಪೂರ್ಣ ಭಾಷಾ ಸಮೀಕ್ಷೆಯ ಆಧಾರದ ಮೇಲೆ ಸಿದ್ಧಪಡಿಸಿದ ಇತ್ತೀಚಿನ ನಿಘಂಟು.

ಪ್ರಮುಖ ಭಾಷಾತಜ್ಞರುಸಂಪಾದಿಸಿ

 • ಕಾನಸಿಂಗ್ ಪರಿಹಾರ್: ಇಂಗ್ಲೀಷ್, ಸಂಸ್ಕ್ರತ, ಹಿಂದಿ, ಮಾರ್ವಾಡಿ, ರಾಜಸ್ಥಾನಿ(೧೯೪೦)
 • ಅನ್ವಿತಾ ಅಬ್ಬಿ: ಬಾಗ್ರಿ(೧೯೯೩)
 • ಕ್ರಿಸ್ಟೋಫರ್ ಸಂಕೋಲೆ: ಬಾಗ್ರಿ ಮತ್ತು ಸಾರೈಕಿ(೧೯೭೬)
 • ಡೇವಿಡ್ ಮ್ಯಾಜಿಯರ್: ಮಾರ್ವಾಡಿ(೧೯೮೩)

ಸಾಹಿತ್ಯ ಅಕಾಡೆಮಿ ವಿಜೇತರರುಸಂಪಾದಿಸಿ

 • ೨೦೧೫ ಗವಾಡ್(ಕಾದಂಬರಿ) ಮಧು ಆಚಾರ್ಯ 'ಆಶಾವಡಿ'.
 • ೨೦೧೪ ಸುಂದರ್ ನೈನ್ ಸುಧಾ ರಾಂಪಾಲ್ ಸಿಂಗ್ ರಾಜಪುರೋಹಿತ್.
 • ೧೯೭೫ ಫಗ್ಫರೋ(ಕವನ) ಮಣಿ ಮಧುಕರ್.
 • ೧೯೭೪ ಬಟಾನ್ ರಿ ಪುಲ್ವರಿ ಸಂಪುಟ.(ಜಾನಪದ ಕಥೆಗಳು) ವಿಜಯ್ದಾನ್ ದೇಥಾ.

ಉಲ್ಲೇಖಗಳುಸಂಪಾದಿಸಿ

Reference / >

 1. https://www.theindianwire.com/languages/rajasthani-language-expressing-thoughts-fine-words-8268/
 2. https://www.omniglot.com/writing/rajasthani.htm