ಮಿತ್ರರಾದ ರಾಘವೇಂದ್ರ ಭಟ್ಟರು ಉಡುಪಿ ಮೂಲದವರು. ಇವರ ಹತ್ತು ಹಲವು ಆಸಕ್ತಿಗಳನ್ನು ಮೈಗೂಡಿಸಿಕೊಂಡ ಸ್ನೇಹಜೀವಿ. ಬದುಕಿನಲ್ಲಿ ಸಂಗೀತ ಮತ್ತು ಬರವಣಿಗೆಗಳೆರಡನ್ನು ತಬ್ಬಿಕೊಂಡವರು. ಇವರು ಸಣ್ಣಕತೆಗಾರರಾಗಿದ್ದಾರೆ. ಯಾವುದೇ ಕತೆಗಳನ್ನು ಮುಚ್ಚುಮರೆ ಇಲ್ಲದೆ ತೆರೆದಿಡುತ್ತಾರೆ.

ವ್ಯಕ್ತಿಯ ಸ್ವಭಾವ ಹೇಗೆಯೇ ಇರಲಿ ಆತನ ಬಗ್ಗೆಭಟ್ಟರಿಗೆ ಮಾನವೀಯ ಅನುಕಂಪ .ಒಂದು ರೀತಿಯ ದೋರಣೆ .ಹೆಣ್ಣನ ಮನದೊಳಗಿನ ತಳಮಳ ,ಕೋಪ, ಆವೇಶ, ಉದ್ವೇಗ ಸಂಗರ್ಷಗಳತ್ತ ಹೆಚ್ಚು 'ಫೋಕಸ್' ಮಾಡಲು ಹವಣಿಸುವ ಭಟ್ಟರು ಅದೇ ವೇಳೆ ಗಂಡಿನ ದೌರ್ಬಲ್ಯ-ಅಸಹಾಯಕತೆಗಳಿಗೂ ಕನ್ನಡಿ ಹಿಡಿಯುತ್ತಾರೆ.

ಕತೆಗಳುಸಂಪಾದಿಸಿ

  • ನದಿ-ತೀರ
  • ಪ್ರೀತಿ
  • ಆಳ
  • ಅನಪೇಕ್ಷಿತ ಅತಿಥಿ

ಇವರ ಕತೆಗಳು ಒದುಗರಿಗೆ ಸುಲಭವಾಗಿ ಮನಮುಟ್ಟಬಲ್ಲವು. ಈ ಸಂವಹನ ಸಾಮರ್ಥ್ಯವೇ ರಾಘವೇಂದ್ರ ಭಟ್ಟರ ಕತೆಗಳ ಜೀವಾಳ.