ಪಡುಬಿದ್ರೆಯ, ಪ್ರೊ. ರತ್ನಾಕರ ಶೆಟ್ಟಿಯವರು, ಮುಂಬಯಿನ ಕ್ರಿಕೆಟ್ ಅಸೋಸಿಯೇಷನ್ನ ಕೋಶಾಧಿಕಾರಿಯಾಗಿ ದುಡಿಯುತ್ತಿದ್ದರು. ಶೆಟ್ಟಿಯವರು ೨೦೧೧ ರಲ್ಲಿ ನಡೆಯಲಿರುವ ಭಾರತ, ಶ್ರೀಲಂಕಾ, ಬಂಗ್ಲಾದೇಶದ ಸಹಭಾಗಿತ್ವದಲ್ಲಿ ಜಂಟಿಯಾಗಿ ನಡೆಯಲಿರುವ ’ವಿಶ್ವಕಪ್ ಕ್ರಿಕೆಟ್’ ಆಡಳಿತನಿರ್ದೇಶಕ,’ರಾಗಿ ನೇಮಕಗೊಂಡಿದ್ದಾರೆ. ಮುಂಬಯಿನ ’ಮಜ್ ಗಾಂವ್,’ ನಲ್ಲಿವಾಸಿಸುತ್ತಿದ್ದಾರೆ. ’ವಿಶ್ವಕಪ್ ಫೈನಲ್ ಪಂದ್ಯ,’ ಮುಂಬಯಿ ನ ’ವಾಂಖಡೆ ಸ್ಟೇಡಿಯಂ,’ ನಲ್ಲಿ ನಡೆಯಲಿದ್ದು, ಈಗಿರುವ ಪ್ರಸ್ತುತ ಕ್ರೀಡಾಂಗಣವನ್ನು ವಿಶ್ವದರ್ಜೆಯ ಮಟ್ಟಕ್ಕೆ ಏರಿಸಲು, ಸುಮಾರು ೨೩೦ ಕೋಟಿ ಹಣದ ವೆಚ್ಚದಿಂದ ಪುನರ್ನಿರ್ಮಾಣದ ಕಾರ್ಯ, ಭರದಿಂದ ಸಾಗುತ್ತಿದೆ. ಈ ಕಾರ್ಯಗಳು, ೨೦೧೧ ರ ಒಳಗೇ ಸಮರ್ಥವಾಗಿಯೂ, ಅಚ್ಚುಕಟ್ಟಾಗಿಯೂ, ಮುಗಿಸುವ ಯೋಜನೆ ನಡೆದಿದೆ. ಮುಂಬಯಿನ ಉಪನಗರವಾದ ’ಕಾಂದಿವಲಿ’ ಹಾಗೂ ’ಬಿ. ಕೆ. ಸಿ,’ ಯಲ್ಲಿ ಹೊಸ ’ಪ್ರಾಜೆಕ್ಟ್,’ ಗಳು ಬರುತ್ತಿವೆ. ಪ್ರೊ. ರತ್ನಾಕರ ಶೆಟ್ಟಿಯವರು, ವೃತ್ತಿಯಲ್ಲಿ ರಸಾಯನಶಾಸ್ತ್ರದ ಬೋಧಕರು, ಆದರೆ ಅವರ ಪ್ರವೃತ್ತಿ, ಕ್ರೀಡೆಗಳು ; ಅದರಲ್ಲೂ ಕ್ರಿಕೆಟ್ ಅವರ ಅಚ್ಚು-ಮೆಚ್ಚಿನ ಆಟ. ಜೀವನರಂಗದಲ್ಲೂ ಅತ್ಯಂತ ಯಶಸ್ಸನ್ನು ಪಡೆದ ಶೆಟ್ಟಿಯವರು, ಅಧ್ಯಾಪನ, ಹಾಗೂ ಕ್ರೀಡೆಗಳು ಅವರೆದುರಿಗೆ ವಿಜೃಂಭಿಸಿದಾಗ, ಕನ್ನಡಿಗರಾದ ಪ್ರೊ. ರತ್ನಾಕರ ಶೆಟ್ಟಿಯವರು ಆರಿಸಿಕೊಂಡಿದ್ದು- ’ಕ್ರಿಕೆಟ್ ಕ್ರೀಡೆ, ಯನ್ನು.

ಹುಟ್ಟಿದ ಊರು, ಹಾಗೂ ಶಿಕ್ಷಕರಾಗಿ ಕಳೆದ ದಿನಗಳು ಬದಲಾಯಿಸಿ

ಮೂಲತಃ, ’ಪಡುಬಿದ್ರೆ ಪಾದೆಬೆಟ್ಟು ಅಗರ ಮೈಲ್ ಹೌಸ್,’ ಮನೆಯವರು. ೫೮ ರ ಹರೆಯದ ಮಿತಭಾಷಿ, ಪ್ರೊ. ರತ್ನಾಕರ್ ಶೆಟ್ಟಿಯವರು, ಎಮ್. ಎಸ್. ಸಿ ; ಎಮ್. ಫಿಲ್ ಪದವೀಧರರು. ಹಲವಾರು ವರ್ಷಗಳಕಾಲ ಮುಂಬಯಿನ ಚೌಪಾತಿಯಲ್ಲಿರುವ, ’ವಿಲ್ಸನ್ ಕಾಲೇಜ್', ನಲ್ಲಿ, ರಸಾಯನ ಶಾಸ್ತ್ರವಿಭಾಗದಲ್ಲಿ ಉಪನ್ಯಾಸಕರಾಗಿ, ಸೇವೆಸಲ್ಲಿಸಿದ ಪ್ರೊ. ಶೆಟ್ಟಿಯವರು, ತಾವೇ ತಮ್ಮ ಸ್ವ ಇಚ್ಛೆಯಿಂದ, ನಿವೃತ್ತಿಹೊಂದಿ, ಕ್ರಿಕೆಟ್ ನಲ್ಲಿ ತಮ್ಮನ್ನು ಪೂರ್ತಿಯಾಗಿ ತೊಡಗಿಸಿಕೊಂಡಿದ್ದಾರೆ.

ಕ್ರಿಕೆಟ್ ಆಟದ ಜನಪ್ರಿಯತೆ, ಹಾಗೂ ಅದರ ವ್ಯಾಪ್ತಿ, ಶೆಟ್ಟಿಯವರನ್ನು ಆಕರ್ಶಿಸಿತು ಬದಲಾಯಿಸಿ

ಕ್ರೀಡೆಗಳಲ್ಲಿ ಅತಿಯಾದ ಆಸಕ್ತಿ ಅವರಿಗೆ ಬಾಲ್ಯದಿಂದಲೂ ಇತ್ತು. ಮುಂಬಯಿ ವಿಶ್ವವಿದ್ಯಾಲಯದ ಕ್ರಿಕೆಟ್ ಕಮಿಟಿಯ ಸದಸ್ಯರಾಗಿ, ನಂತರ, ’ಮುಂಬಯಿ ಸ್ಪೋರ್ಟ್ಸ್ ಅಸೋಸಿಯೇಶನ್,’ ಕಾರ್ಯದರ್ಶಿಯಾಗಿ, ಕೆಲಸಮಾಡಿದರು. ಅವರು ಕೆಲಸಮಾಡುತ್ತಿದ್ದ ’ವಿಲ್ಸನ್ ಕಾಲೇಜ್’ ನ ’ಜಿಮ್ ಖಾನಾ ಕ್ಲಬ್,’ ನಲ್ಲಿ ಕಳೆದ ೨ ದಶಕಗಳಿಂದ ಸದಸ್ಯರಾಗಿದ್ದಾರೆ.

೨೦೧೧ ರಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ ಸ್ಪರ್ಧೆ ಬದಲಾಯಿಸಿ

'ಭಾರತ', 'ಶ್ರೀಲಂಕಾ', 'ಪಾಕೀಸ್ತಾನ', ಮತ್ತು 'ಬಂಗ್ಲಾದೇಶ, ಗಳ ನಡುವೆ ಸಹಭಾಗಿತ್ವದಲ್ಲಿ ಈ ಪಂದ್ಯಗಳು ನಡೆಯಬೇಕಿತ್ತು. ಆದರೆ ಪಾಕೀಸ್ತಾನದಲಿ ಶ್ರೀಲಂಕಾ ಆಟಗಾರರ ಮೇಲೆ ನಡೆದ ಆತಂಕವಾದಿ ದಾಳಿಯಿಂದ ಬಿ. ಸಿ. ಸಿ. ಐ, ಪಾಕೀಸ್ತಾನದಲ್ಲಿ ಪಂದ್ಯ ನಡೆಸುವುದನ್ನು ನಿಷೇಧಿಸಿದೆ. ಆದುದರಿಂದ, ಭಾರತ, ಶ್ರೀಲಂಕಾ, ಬಂಗ್ಲಾದೇಶಗಳ ಸಂಚಾಲಕತ್ವದಲ್ಲಿ ಒಟ್ಟು ೪೯ ಪಂದ್ಯಗಳು ನಡೆಯಲಿವೆ. ಭಾರತದಲ್ಲಿ ೨೯ ಪಂದ್ಯಗಳು ವಿವಿಧ ಕೆಂದ್ರಗಳಲ್ಲಿ ನಡೆಯಲಿದ್ದು, ಶ್ರೀಲಂಕಾದಲ್ಲಿ ೧೨ ಮತ್ತು ೮ ಪಂದ್ಯಗಳು ಬಂಗ್ಲಾದೇಶದಲ್ಲಿ ನಡೆಯಲಿವೆ. ವಿಶ್ವಕಪ್ ಸುರಕ್ಷತೆಗೆ ಆದ್ಯತೆಯಲ್ಲಿ ೩ ದೇಶಗಳ ಸರ್ಕಾರಗಳೂ ಹೆಚ್ಚಿನ ನಿಗಾವಹಿಸಿವೆ. ೩ ರಾಷ್ಟ್ರಗಳೂ ಜಂಟಿಯಾಗಿ ಸೆಕ್ಯೂರಿಟಿ ಕಮಿಟಿಗಳನ್ನು ಸ್ಥಾಪಿಸಿವೆ. ಐ. ಸಿ. ಸಿ, 'ಸೆಕ್ಯೂರಿಟಿ ಕನ್ಸಲ್ಟೆಂಟ್', ನೇಮಕ ಮಾಡಿದೆ. ದೇಶಗಳ ಸಹಕಾರವಿದೆ.

'ಬಿ.ಸಿ. ಸಿ. ಐ,' ನ ಪಾತ್ರ ಬದಲಾಯಿಸಿ

ಮುಖ್ಯ ಕಾರ್ಯಾಲಯ ಮುಂಬಯಿನಲ್ಲಿದೆ. ಆಟಗಾರರ ಆಯ್ಕೆ, ಮೈದಾನದ ನಿರ್ವಹಣೆ, ಜಾಹಿರಾತು, ಪಂದ್ಯದ ವೇಳಾಪಟ್ಟಿ, ಮಂಡಳಿಯ ಆದೇಶದಂತೆ ನಡೆಯುತ್ತದೆ.

ಆಟಗಾರರ ಆಯ್ಕೆಯಲ್ಲಿ ಮಾನದಂಡ ಬದಲಾಯಿಸಿ

ಪ್ರೊ. ರತ್ನಾಕರ್ ಶೆಟ್ಟಿಯವರ ಪ್ರಕಾರ, ಯಾವುದೇ ಆಟಗಾರನ ಆಯ್ಕೆಗೆ, ಆತನ ಪ್ರತಿಭೆಯೊಂದೇ ಮಾನದಂಡವಾಗಿದೆ. ಕ್ರಿಕೆಟ್ ಆಯ್ಕೆಮಂಡಳಿಗಳು ಪ್ರತಿರಾಜ್ಯದಲ್ಲೂ ಇವೆ. ಯಲ್ಲಿ ಪೂರ್ವ ಯಶಸ್ವೀ ಆಟಗಾರರಿರುತ್ತಾರೆ. ಅಂಡರ್ ೧೬, ೨೦ ೨೨ ವರ್ಷದ ’ಇಂಟರ್ ಸ್ಕೂಲ್ ಮ್ಯಾಚ್’, ಮತ್ತು ’ರಣಜಿ ಪಂದ್ಯಗ’ ಳಲ್ಲಿ ಆಟಗಾರರ ನಿರ್ವಹಣಾ ಸಾಮರ್ಥ್ಯವನ್ನು ಪರಿಗಣಿಸಿ, ’ರಾಷ್ಟ್ರದ ಕ್ರಿಕೆಟ್ ತಂಡ,’ ಕ್ಕೆ ಆಯ್ಕೆ ಮಾಡುತ್ತಾರೆ. ಎಲ್ಲೆಡೆ ಪ್ರತಿಭೆಗೆ ಪುರಸ್ಕಾರವಿದೆ. ಮೊದಲು ೧೨ ಆಟಗಾರರು ಆಯ್ಕೆಯಾಗುತ್ತಾರೆ. ಕೊನೆಯ ಇಬ್ಬರು ಆಟಗಾರರ ಆಯ್ಕೆ, ಪ್ರತಿಭೆ, ನಿರ್ವಹಣೆಗಳನ್ನು ಗಮನಿಸಿ, ಅಂತಿಮ ಪಟ್ಟಿಯನ್ನು ತಯಾರಿಸಲಾಗುವುದು.

ಕ್ರೀಡೆಗಳಲ್ಲಿ ಮಾಲಕರ ಪಾಲು ಬದಲಾಯಿಸಿ

ಈಗ ಕ್ರಿಕೆಟ್ ನಂತೆ, ಫುಟ್ಬಾಲ್, ಬ್ಯಾಸ್ಕೆಟ್ ಬಾಲ್, ಕ್ಲಬ್ ಗಳು ಮಾಲಕರನ್ನು ಹೊಂದಿರುವುದನ್ನು ನಾವು ಕಾಣುತ್ತೇವೆ. ಅದರಂತೆ ಮಾಲಕರು, ಕ್ರೀಡಾಳುಗಳನ್ನು ಖರೀದಿಸುವುದು, ಸರ್ವೇಸಾಮಾನ್ಯವಾಗಿದೆ. ಒಟ್ಟಿನಲ್ಲಿ ಮಾಲೀಕನೊಬ್ಬನಿಗೆ ಖರೀದಿಯ ಮಿತಿ, ೫ ಮಿಲಿಯನ್ ಸೀಮಿತವಾಗಿದೆ. 'ಬಿ. ಸಿ. ಸಿ. ಐ ', ಕಾನೂನಿನ ಮಿತಿಯಲ್ಲಿ ಇವೆಲ್ಲಾ ನಿರ್ಣಯವಾಗುತ್ತವೆ.