ಮುಖ್ಯ ಮೆನು ತೆರೆ

ರಕ್ಷಿತ್ ಶೆಟ್ಟಿ ಒಬ್ಬ ಕನ್ನಡ ಚಲನಚಿತ್ರ ನಟ. ಕಾರ್ಕಳದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ವಿದ್ಯಾಲಯ(NMAMIT)ದಿಂದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ಸ್ ಪದವಿ ಪಡೆದಾನಂತರ, ನಾಟಕಗಳಲ್ಲಿ ಅಭಿನಯಿಸುವುದಕ್ಕೂ ಮುನ್ನ ಎರಡು ವರ್ಷಗಳ ಕಾಲ ಸಾಫ್ಟ್‍‌ವೇರ್ ಉದ್ಯೋಗಿಯಾಗಿ ಕೆಲಸಮಾಡಿದರು.[೧][೨]

ರಕ್ಷಿತ್ ಶೆಟ್ಟಿ
ಜನನ (1983-06-06) 6 June 1983 (age 36)
ರಾಷ್ಟ್ರೀಯತೆಭಾರತೀಯ
Alma materNMAM ತಾಂತ್ರಿಕ ವಿದ್ಯಾಲಯ
Years active೨೦೦೯ರಿಂದ
Titleಸಿಂಪಲ್ ಸ್ಟಾರ್

ಶೆಟ್ಟಿ ಅವರ ಚೊಚ್ಚಲ ಚಿತ್ರ ೨೦೧೦ರಲ್ಲಿ ಬಿಡುಗಡೆಯಾದ ನಮ್ ಏರಿಯಾಲ್ ಒಂದಿನ. ೨೦೧೩ರ ಪ್ರಣಯ ಮತ್ತು ಹಾಸ್ಯ ಕಥೆಯುಳ್ಳ ಸಿಂಪಲ್ಲಾಗ್ ಒಂದ್ ಲವ್‍ ಸ್ಟೋರಿ ಪ್ರೇಕ್ಷಕರ ಪ್ರಶಂಸೆಗೊಳಪಟ್ಟಿತು. ನಂತರ ೨೦೧೪ರಲ್ಲಿ ಅವರು ನಿರ್ದೇಶಿಸಿ ನಟಿಸಿದ ಕ್ರೈಂ-ಡ್ರಾಮಾ ಚಿತ್ರ ಉಳಿದವರು ಕಂಡಂತೆ ಚಿತ್ರ ವ್ಯಾಪಕ ವಿಮರ್ಶಾತ್ಮಕ ಪ್ರಶಂಸೆ ಪಡೆಯಿತು.[೩] ಈ ಚಿತ್ರವು ಅವರಿಗೆ ಅತ್ಯುತ್ತಮ ಚೊಚ್ಚಲ ನಿರ್ದೇಶಕನಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ನಿರ್ದೇಶಕನಾಗಿ (ದಕ್ಷಿಣ) ಫಿಲಂಫೇರ್ ಪ್ರಶಸ್ತಿಗಳನ್ನು ತಂದುಕೊಟ್ಟಿತು.[೪] ನಂತರ ಅವರು ವಾಸ್ತು ಪ್ರಕಾರ (೨೦೧೫) ಹಾಗೂ ಗೋಧಿ ಬಣ್ಣ ಸಾಧಾರಣ ಮೈಕಟ್ಟು (೨೦೧೬) ಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮ ಯಶಸ್ಸಿನ ಓಟವನ್ನು ಮುಂದುವರಿಸಿದರು. ಶೆಟ್ಟಿಯವರಿಗೆ ತಮ್ಮ ಮುಂದಿನ ವಿಮರ್ಶಾತ್ಮಕ ಮತ್ತು ವಾಣಿಜ್ಯ ಯಶಸ್ಸುಗಳಿಸಿಕೊಟ್ಟದ್ದು, ತಾವೇ ಬರೆದು ನಿರ್ಮಿಸಿದ ೨೦೧೬ರ ಹಾಸ್ಯಪ್ರಧಾನ ಚಿತ್ರ ಕಿರಿಕ್ ಪಾರ್ಟಿ.[೫]

ಪವನ್ ಕುಮಾರ್, ಅನುಪ್ ಭಂಡಾರಿ ಹಾಗೂ ಇತರ ನಿರ್ದೇಶಕರೂ ಸೇರಿದಂತೆ ಶೆಟ್ಟಿಯವರಿಗೆ ಕನ್ನಡ ಸಿನಿಮಾ ವಲಯದಲ್ಲಿ ಹೊಸ ಸಿನಿಮಾ ಸಂಚಲನವನ್ನು ಸೃಷ್ಟಿಸಿದ ಮನ್ನಣೆಯಿದೆ.  ಇದು ಅವರಿಗೆ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವರ್ಛಸ್ಸನ್ನು ಸೃಷ್ಟಿಸಿದೆ.[೬][೭]

ಚಲನಚಿತ್ರಗಳ ಪಟ್ಟಿಸಂಪಾದಿಸಿ

ವರ್ಷ ಚಿತ್ರ ಪಾತ್ರ ಟಿಪ್ಪಣಿಗಳು
೨೦೧೦ ನಮ್ ಏರಿಯಾಲ್ ಒಂದಿನ ಅರವಿಂದ
೨೦೧೨ ತುಘಲಕ್ ರಾಘು
೨೦೧೩ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಕುಶಾಲ್ "ಜೆರೀನ್"
೨೦೧೪ ಉಳಿದವರು ಕಂಡಂತೆ ರಿಚರ್ಡ್ "ರಿಚಿ" ಆಂಟನಿ ಸಹ ನಿರ್ದೇಶಕ, ಚಿತ್ರಕಥೆಗಾರ
೨೦೧೪ ಬಹುಪರಾಕ್ ರಿಚಿ ಅತಿಥಿಪಾತ್ರ
೨೦೧೫ ವಾಸ್ತು ಪ್ರಕಾರ ಕುಬೇರ
೨೦೧೫ ಜಾತ್ರೆ ಸ್ವತಃ ಅತಿಥಿಪಾತ್ರ
೨೦೧೬ ರಿಕ್ಕಿ ರಾಧಾಕೃಷ್ಣ "ರಿಕ್ಕಿ"
೨೦೧೬ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಶಿವ ವಿ ರಾವ್
೨೦೧೬ ಜಿಗರ್ಥಂಡಾ ಸ್ವತಃ ಅತಿಥಿಪಾತ್ರ
೨೦೧೬ ಕಿರಿಕ್ ಪಾರ್ಟಿ ಕರ್ಣ ಸಹ ನಿರ್ಮಾಪಕ, ಬರಹಗಾರ
೨೦೧೯ ಅವನೇ ಶ್ರೀಮನ್‌ನಾರಾಯಣ  ನಾರಾಯಣ ಸಹ ಚಿತ್ರಕಥೆಗಾರ[೮]
೨೦೧೯ 777 ಚಾರ್ಲೀ  ಧರ್ಮ ಸಹ ನಿರ್ಮಾಪಕ
೨೦೨೦ ಪುಣ್ಯಕೋಟಿ  ಸ್ವತಃ ಸಹ ನಿರ್ದೇಶಕ
೨೦೨೦ ರಿಚ್ಚಿ  ರಿಚ್ಚಿ
೨೦೨೦ ತೆನಾಲಿ  ತೆನಾಲಿ
  ಇನ್ನೂ ಬಿಡುಗಡೆಯಾಗದ ಚಿತ್ರ

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳುಸಂಪಾದಿಸಿ

ಪ್ರಶಸ್ತಿಗಳುಸಂಪಾದಿಸಿ

ವರ್ಷ[lower-alpha ೧] ವರ್ಗ ಪ್ರಶಸ್ತಿ ಚಿತ್ರ ಫಲಿತಾಂಶ
೨೦೧೫ ಅತ್ಯುತ್ತಮ ನಿರ್ದೇಶಕ ಫಿಲಂಫೇರ್ ಪ್ರಶಸ್ತಿ (ದಕ್ಷಿಣ) ಉಳಿದವರು ಕಂಡಂತೆ ಗೆದ್ದಿದ್ದಾರೆ[೯]
೨೦೧೫ ಅತ್ಯುತ್ತಮ ನಟ ಫಿಲಂಫೇರ್ ಪ್ರಶಸ್ತಿ (ದಕ್ಷಿಣ) ಉಳಿದವರು ಕಂಡಂತೆ ನಾಮನಿರ್ದೇಶಿತ[೯]
೨೦೧೫ ಅತ್ಯುತ್ತಮ ಸಾಹಿತಿ ಫಿಲಂಫೇರ್ ಪ್ರಶಸ್ತಿ (ದಕ್ಷಿಣ) ಉಳಿದವರು ಕಂಡಂತೆ ನಾಮನಿರ್ದೇಶಿತ[೯]
೨೦೧೫ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಉಳಿದವರು ಕಂಡಂತೆ ಗೆದ್ದಿದ್ದಾರೆ[೪]
  1. ಪ್ರಶಸ್ತಿ ಪ್ರದಾನ ಸಮಾರಂಭ ನಡೆದ ವರ್ಷ

ಉಲ್ಲೇಖಗಳುಸಂಪಾದಿಸಿ