ಮುಖ್ಯ ಮೆನು ತೆರೆ
Yahoo! (2019).svg

ಯಾಹೂ (NASDAQ: YHOO) ಮೂಲತಃ ಅಮೆರಿಕಾದಲ್ಲಿ ಪ್ರಾರಂಭವಾದ ಅಂತರ್ಜಾಲ ಸೌಕರ್ಯಗಳನ್ನು ಒದಗಿಸುವ ಒಂದು ಸಂಸ್ಥೆ. ಇದರ ಮುಖ್ಯ ಕಛೇರಿ ಕ್ಯಾಲಿಫೋರ್ನಿಯಾ ದ ಸನಿವೇಲ್ ನಗರದಲ್ಲಿದೆ. ಅಂತರ್ಜಾಲ ಪೋರ್ಟಲ್, ವಿ-ಅಂಚೆ, ಶೋಧಕ, ಅಂತರ್ಜಾಲ ವಾರ್ತೆಗಳು ಮೊದಲಾದ ಸೌಕರ್ಯಗಳನ್ನು ಈ ಸಂಸ್ಥೆ ಒದಗಿಸುತ್ತದೆ. ಯಾಹೂ ಸಂಸ್ಥೆಯ ಸ್ಥಾಪಕರು ಸ್ಟಾನ್ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದ ಜೆರ್ರಿ ಯಾಂಗ್ ಮತ್ತು ಡೆವಿಡ್ ಫೈಲೊ.

ಯಾಹೂ ಅಂತರ್ಜಾಲ ತಾಣ ಪ್ರಪಂಚದಲ್ಲಿ ಅತಿ ಹೆಚ್ಚು ಜನರು ಭೇಟಿ ಕೊಡುವ ತಾಣಗಳಲ್ಲಿ ಒಂದಾಗಿದೆ. ಅಮೆರಿಕದಲ್ಲಿಯೇ ಪ್ರತಿ ತಿಂಗಳು ೧೩ ಕೋಟಿಗೂ ಹೆಚ್ಚು ಜನರು ಯಾಹೂ ತಾಣಕ್ಕೆ ಭೇಟಿ ಕೊಡುತ್ತಾರೆ.

ಫೆಬ್ರವರಿ ೧, ೨೦೦೮ ರಂದು ಮೈಕ್ರೋಸಾಫ್ಟ್ ಸಂಸ್ಥೆ ಯಾಹೂ ವನ್ನು ಶೇರ್ ಒಂದಕ್ಕೆ ೩೧ ಡಾಲರ್ ಬೆಲೆ ಕೊಟ್ಟು ಖರೀದಿಸಲು ಮುಂದಾಯಿತು. ಎಂದರೆ ಒಟ್ಟು ಸಂಸ್ಥೆಗೆ ಸುಮಾರು ೪೪೬೦ ಕೋಟಿ ಡಾಲರ್ ತೆರಲು ಮುಂದಾಯಿತು. ಆದರೆ ಯಾಹೂ ಸಂಸ್ಥೆಯ ನಿರ್ದೇಶಕ ಮಂಡಲಿ ಈ ಬೆಲೆಯನ್ನು ತೀರ ಕಮ್ಮಿ ಎಂದು ತಿರಸ್ಕರಿಸಿದ ನಂತರ, ಮೇ ೩, ೨೦೦೮ ರಂದು ಮೈಕ್ರೊಸಾಫ್ಟ್ ಈ ಪ್ರಯತ್ನವನ್ನು ಕೈ ಬಿಟ್ಟಿತು.

"https://kn.wikipedia.org/w/index.php?title=ಯಾಹೂ&oldid=941603" ಇಂದ ಪಡೆಯಲ್ಪಟ್ಟಿದೆ