ಮೌರ್ಯ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

"ಮೌರ್ಯ" ೨೦೦೪ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದ್ದು, ಇದನ್ನು ಎಸ್. ನಾರಾಯಣ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಮತ್ತು ಮೀರಾ ಜಾಸ್ಮಿನ್ ಮುಖ್ಯ ಭೂಮಿಕೆಯಲ್ಲಿದ್ದರು. ಇದು ಮೀರಾ ಜಾಸ್ಮಿನ್ ಅವರ ಮೊದಲ ಕನ್ನಡ ಚಿತ್ರ. ಈ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿದ್ದಾರೆ.[೧][೨]

ಮೌರ್ಯ
ನಿರ್ದೇಶನಎಸ್. ನಾರಾಯಣ್
ನಿರ್ಮಾಪಕರಾಕ್‌ಲೈನ್ ವೆಂಕಟೇಶ್
ಲೇಖಕಪುರಿ ಜಗನ್ನಾಥ್
ಪಾತ್ರವರ್ಗಪುನೀತ್ ರಾಜ್‌ಕುಮಾರ್
ಮೀರಾ ಜಾಸ್ಮಿನ್
ಸಂಗೀತಗುರುಕಿರಣ್‌
ಛಾಯಾಗ್ರಹಣಪಿ.ಕೆ.ಎಚ್. ದಾಸ್
ಸಂಕಲನಪಿ.ಆರ್. ಸೌಂದರ್ ರಾಜ್
ವಿತರಕರುರಾಕ್ ಲೈನ್ ಪ್ರೊಡಕ್ಷನ್ಸ್
ಬಿಡುಗಡೆಯಾಗಿದ್ದು೨೨ ಅಕ್ಡೋಬರ್ ೨೦೦೪
ಅವಧಿ೧೬೨ ನಿಮಿಷಗಳು
ದೇಶಭಾರತ
ಭಾಷೆಕನ್ನಡ


ಕಥಾ ಹಂದರ ಬದಲಾಯಿಸಿ

ತಾಯಿ ಮೀನಾಳೇ ಮನುವಿನ ಜಗತ್ತು. ಈಕೆ ಕಾಲೇಜು ಉಪನ್ಯಾಸಕಿ. ಇಬ್ಬರೂ ಒಟ್ಟಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿರುತ್ತಾರೆ.. ಮನು ಚಿಕ್ಕ ಹುಡುಗನಾಗಿದ್ದಾಗ, ಮೀನಾ ತನ್ನ ಪತಿ ಪ್ರತಾಪನಿಂದ ದೂರವಾಗಿರುತ್ತಾಳೆ. ಮನು ಒಬ್ಬ ಅತ್ಯುತ್ತಮ ಕಿಕ್ ಬಾಕ್ಸರ್ ಆಗಿರುತ್ತಾನೆ. ಮನು ನಂತರ ಅಲಮೇಲು ಅಥವಾ ಅಂದ್ರ ಅಂದರೆ ಆಂಧ್ರದ ತೆಲುಗು ಹುಡುಗಿಯನ್ನು ಭೇಟಿಯಾಗುತ್ತಾನೆ ಮತ್ತು ಅವಳನ್ನು ಪ್ರೀತಿಸಲು ಪ್ರಾರಂಭಿಸುತ್ತಾನೆ. ತಾಯಿ ಹೃದಯಾಘಾತದಿಂದ ಮರಣಹೊಂದಿದಾಗ ಮನುವಿನ ಸಂತೋಷದ ಜೀವನವು ಇದ್ದಕ್ಕಿದ್ದಂತೆ ಅಲುಗಾಡಿ ಬಿಡುತ್ತದೆ. ತನ್ನ ಮರಣಶಯ್ಯೆಯಲ್ಲಿ, ಸತತ ಆರು ಬಾರಿ ಚಾಂಪಿಯನ್‌ಶಿಪ್ ಗೆದ್ದ ಕಿಕ್‌ಬಾಕ್ಸಿಂಗ್ ಚಾಂಪಿಯನ್ ಆಗಿರುವ ಪ್ರತಾಪ್‌ನನ್ನು ಭೇಟಿಯಾಗಲು ಮಗನಿಗೆ ಹೇಳುತ್ತಾಳೆ. ಮನು ಪ್ರತಾಪ್ ಬಳಿ ಹೋಗುತ್ತಾನೆ. ಮನು ತನ್ನ ತಂದೆ ಪ್ರತಾಪನನ್ನು ಭೇಟಿಯಾಗುತ್ತಾನೆ. ಆದರೆ ಅವನಿಗೆ ಇನ್ನೊಬ್ಬ ಹೆಂಡತಿ ಮತ್ತು ಮಗಳು ಇರುವುದು ಕಂಡು ಕೋಪಗೊಳ್ಳುತ್ತಾನೆ. ಅದರೂ ಅವನು ತನ್ನ ತಂದೆಯ ಕಿಕ್‌ಬಾಕ್ಸಿಂಗ್ ಅಕಾಡೆಮಿಯಲ್ಲಿ ಕೆಲಸ ಮಾಡಲು ತೊಡಗುತ್ತಾನೆ.ಆನಂದ್ ಎಂಬಾತ ಪ್ರತಾಪನ ಅತ್ಯುತ್ತಮ ವಿದ್ಯಾರ್ಥಿಯಾಗಿದ್ದು, ಆನಂದ್ ಚಾಂಪಿಯನ್‌ಶಿಪ್ ಗೆಲ್ಲುವುದು ಖಚಿತವಾಗಿರುತ್ತದೆ. ಆನಂದ್, ಮನುವಿನ ಮಲ ತಂಗಿಯನ್ನು, ಅಂದರೆ ಪ್ರತಾಪನ ಎರಡನೇ ಪತ್ನಿಯ ಮಗಳನ್ನು ಗರ್ಭಿಣಿಯಾಗಿಸಿ ತ್ಯಜಿಸುತ್ತಾನೆ. ಬಳಿಕ ಬೇರೊಬ್ಬ ತರಬೇತುದಾರರನ್ನು ಹಾಗೂ ಬೇರೆಯೇ ಪ್ರಾಯೋಜಕರನ್ನು ಪಡೆಯುವ ಮೂಲಕ ಆನಂದ್ ಕೂಡ ಪ್ರತಾಪ್‌ನನ್ನು ತ್ಯಜಿಸುತ್ತಾನೆ. ಆನಂದ್‌ನ ಹಲವಾರು ಪ್ರಾಯೋಜಕರು ಪ್ರತಾಪ್ ಮೇಲೆ ದಾಳಿ ಮಾಡುತ್ತಾರೆ, ಆದರೆ ಮನು ನಂತರ ಅವರನ್ನು ಥಳಿಸಿ,ಪ್ರತಾಪನನ್ನು ರಕ್ಷಣೆ ಒದಗಿಸುತ್ತಾನೆ. ಮನು ಒಬ್ಬ ಮಹಾನ್ ಕಿಕ್-ಬಾಕ್ಸರ್ ಎಂದು ಪ್ರತಾಪ್ ಕಂಡುಕೊಳ್ಳುತ್ತಾನೆ. ಮನು ಕೂಡ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿದ್ದನೆಂದು ಪ್ರತಾಪ್‌ಗೆ ತಿಳಿಯುತ್ತದೆ. ಪ್ರತಾಪ್ ಮನುಗೆ ಹೇಗೆ ತರಬೇತಿ ನೀಡಿ ಚಾಂಪಿಯನ್ ಶಿಪ್ ಗೆಲ್ಲುತ್ತಾನೆ ಎಂಬುದೇ ಉಳಿದ ಕಥೆ.

ಪಾತ್ರ ವರ್ಗ ಬದಲಾಯಿಸಿ

ಹಾಡುಗಳು ಬದಲಾಯಿಸಿ

"ಮೌರ್ಯ" ಚಿತ್ರಕ್ಕೆ ಗುರುಕಿರಣ್‌ ಹಿನ್ನಲೆ ಹಾಗೂ ಹಾಡುಗಳಿಗೆ ಸಂಗೀತವನ್ನು ಸಂಯೋಜಿಸಿದ್ದಾರೆ.

ಸಂ.ಹಾಡುಸಾಹಿತ್ಯಹಾಡಿದವರುಸಮಯ
1."ಅಮ್ಮಾ ಅಮ್ಮಾ.. ಐ ಲವ್ ಯು"ಎಸ್. ನಾರಾಯಣ್ಶಾನ್೦೪:೧೪
2."ಹಾಡಲಿ ಕರುನಾಡಲಿ"ವಿ.ಮನೋಹರ್ಉದಿತ್‌ ನಾರಾಯಣ, ಲಕ್ಷ್ಮಿ ನಟರಾಜ್೦೪:೦೪
3."ಮಚ್ಚಲ್ಲಿ ಕೊಚ್ಚೋದಲ್ಲ"ಉಪೇಂದ್ರಪುನೀತ್ ರಾಜ್‌ಕುಮಾರ್‌೦೪:೨೯
4."ಪಿಲ್ಲಾ ಪಿಲ್ಲಾ"ಎಸ್. ನಾರಾಯಣ್ಉದಿತ್‌ ನಾರಾಯಣ, ಚೈತ್ರಾ ಎಚ್.ಜಿ.‌೦೩:೪೯
5."ಸಿಂಪಲ್ ಆಗ್ ಹೇಳ್ತೀನ್ ಕೇಳೆ"ಎಸ್. ನಾರಾಯಣ್ಪುನೀತ್ ರಾಜ್‌ಕುಮಾರ್೦೩:೫೭
6."ಉಸಿರಾಗುವೆ ಹಸಿರಾಗುವೆ"ಕೆ.ಕಲ್ಯಾಣ್ಶ್ರೇಯಾ ಘೋಶಾಲ್, ಶ್ರೀನಿವಾಸ್೦೪:೨೨

ನಿರ್ಮಾಣ ಮತ್ತು ಬಿಡುಗಡೆ ಬದಲಾಯಿಸಿ

ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರವು ೨೨ ಅಕ್ಟೋಬರ್ ೨೦೦೪ರಂದು ಬಿಡುಗಡೆಯಾಯಿತು.[೩] ಬಿಡುಗೊಂಡ ಬಳಿಕ ಕರ್ನಾಟಕದ ೧೬ ಕೇಂದ್ರಗಳಲ್ಲಿ ೧೦೦ ದಿನಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಕಂಡಿತು. ಅಷ್ಟೇ ಅಲ್ಲದೆ, ೧೦೦ ದಿನಗಳಷ್ಟು ಪ್ರದರ್ಶನ ಕಂಡ ಪುನೀತ್ ರಾಜ್‌ಕುಮಾರ್ ಅವರ ನಾಲ್ಕನೇ ನಿರಂತರ ಚಿತ್ರವಾಗಿದೆ.[೪]

ಉಲ್ಲೇಖಗಳು ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2022-07-01. Retrieved 2022-07-01.
  2. "Mourya film review - a film of Puneeth Rajkumar and Meera Jasmine directed by S. Narayan".
  3. Deepak, S. N. (24 October 2004). "Maurya". Deccan Herald. Archived from the original on 25 May 2006. Retrieved 24 November 2021.
  4. "Top 5 films of power star Puneeth Rajkumar that were Telugu remakes". The Times of India (in ಇಂಗ್ಲಿಷ್). 29 October 2021.