ಮೊಹಮ್ಮದ್ ಶಾಹಿದ್

ಭಾರತೀಯ ಫೀಲ್ಡ್ ಹಾಕಿ ಆಟಗಾರ

ಮೊಹಮ್ಮದ್ ಶಾಹಿದ್ (೧೯೬೯ ರ ಏಪ್ರಿಲ್ ೧೪ ರಂದು ಜನಿಸಿದರು.)ಅವರು ಭಾರತದ ಮಾಜಿ ಹಾಕಿ ಆಟಗಾರರಾಗಿದ್ದಾರೆ. ಇವರು ಉತ್ಸಾಹಪೂರ್ಣ ಮುಂಚೂಣಿ ಆಟಗಾರರಾಗಿದ್ದು, ಚೆಂಡನ್ನು ಉರುಳಿಸಿಕೊಂಡು ಹೋಗುವ ಅದ್ಭುತ ಕೌಶಲದೊಂದಿಗೆ ಯಾವುದೇ ಎದುರಾಳಿಯಿಂದಲಾದರೂ ತಪ್ಪಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದರು. ಇವರು ಮಾಸ್ಕೋನಲ್ಲಿ ನಡೆದ ೧೯೮೦ ರ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ(ಆಟಗಳಲ್ಲಿ) ಚಿನ್ನದ ಪದಕ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ಅಲ್ಲದೇ ೧೯೮೫ - ೮೬ ರಲ್ಲಿ ಭಾರತ ಹಾಕಿ ತಂಡದ ನಾಯಕರಾಗಿದ್ದರು. ಪ್ರಪಂಚದ ಅತ್ಯುತ್ತಮ ಡ್ರಿಬ್ಲರ್(ಚೆಂಡನ್ನು ಸ್ವಲ್ಪಸ್ವಲ್ಪವಾಗಿ ಉರುಳಿಸುತ್ತಾ ಹೋಗುವ) ಎಂಬ ಖ್ಯಾತಿಯ ಹೊರತಾಗಿ, ಶಾಹಿದ್ ಬಹುಮುಖ್ಯವಾದ ಇನ್ ಸೈಡ್-ಎಡಭಾಗದ(ಮೈದಾನದ ಮಧ್ಯಭಾಗಕ್ಕೆ ಹತ್ತಿರವಾಗಿರುವ ಎಡಭಾಗದ ಮುಂಚೂಣಿ ಆಟಗಾರ) ಆಗಿದ್ದರು. ಲೆಫ್ಟ್-ಔಟ್ ಜಾಫರ್ ಇಕ್ಚೆಂಡು ರವರ ಜೊತೆಯಲ್ಲಿ ಇವರ ವೇಗದ ಗೋಲ್ ಗಳು ಬಹುಪಾಲು ಪ್ರತಿಸ್ಪರ್ಧಿಗಳ ಅಣಕುಗೊಳಿಸುವಂತಿದ್ದವು. ಇವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜನಿಸಿದ್ದು, ಭಾರತದ ಪ್ರತಿನಿಧಿಯಾಗಿ ಮೊದಲಬಾರಿಗೆ ಫ್ರಾನ್ಸ್ ನಲ್ಲಿ ನಡೆದ ೧೯೭೯ ರ ಕಿರಿಯರ ವಿಶ್ವ ಕಪ್ ನಲ್ಲಿ ಆಡಿದರು. ಇವರಿಗೆ ೧೯೮೦ - ೧೯೮೧ ರಲ್ಲಿ ಅರ್ಜುನ ಪ್ರಶಸ್ತಿ ಮತ್ತು ೧೯೮೬ ರಲ್ಲಿ ಪದ್ಮಶ್ರೀಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈಗ ಅವರು ನಿವೃತ್ತಿ ಜೀವನ ನಡೆಸುತ್ತಿದ್ದಾರೆ.[]

ಒಲಂಪಿಕ್ ಪದಕ ಪಟ್ಟಿ
Men's field hockey
Gold medal – first place 1980 Moscow Team Competition

ಅವರ ೧೯ ನೇ ವಯಸ್ಸಿನಲ್ಲಿ ಭಾರತದ ಕಿರಿಯರ ಹಾಕಿ ತಂಡಕ್ಕೆ ಆಯ್ಕೆಯಾದರು. ಈ ಮೂಲಕ ಫ್ರಾನ್ಸ್ ನಲ್ಲಿ ನಡೆದ ಕಿರಿಯರ ವಿಶ್ವ ಕಪ್ ನಲ್ಲಿ ಭಾಗವಹಿಸಿದರು. ಕೇವಲ ಒಂದು ವರ್ಷದವಧಿಯೊಳಗೆ, ಅವರು ಭಾರತದ ಹಿರಿಯರ ರಾಷ್ಟ್ರೀಯ ಹಾಕಿ ತಂಡದಲ್ಲಿ ಸ್ಥಾನ ಗಳಿಸಿಕೊಳ್ಳಲು ಸಮರ್ಥರಾದರು. ಈ ತಂಡವು ಕರಾಚಿಯಲ್ಲಿ ೧೯೮೦ ರಲ್ಲಿ ನಡೆದ ಅಂತರರಾಷ್ಟ್ರೀಯ ಹಾಕಿ ಪಂದ್ಯಾವಳಿ, ಕೌಲಾಲಂಪುರ್ ಅಂಡ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ದೇಶವನ್ನು ಪ್ರತಿನಿಧಿಸಿತ್ತು.

ಭಾರತದ ತಂಡವು ಕರಾಚಿ ಪಂದ್ಯಾವಳಿಯಲ್ಲಿ ಚೆನ್ನಾಗಿ ಆಟವಾಡದಿದ್ದರೂ ಕೂಡ, ಮೊಹಮ್ಮದ್ ಶಾಹಿದ್ ಆ ಪಂದ್ಯಾವಳಿಯ ಅತ್ಯುತ್ತಮ ಮುಂಚೂಣಿಯ ಆಟಗಾರನೆಂಬ ಖ್ಯಾತಿಗೆ ಪಾತ್ರರಾದರು. ತರುವಾಯ ಇವರು ೧೯೮೦ ರ ಮಾಸ್ಕೋ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ(ಆಟಗಳಲ್ಲಿ) ಭಾರತದ ತಂಡವನ್ನು ಪ್ರತಿನಿಧಿಸಿದರು. ಅಲ್ಲದೇ ತಂಡವು ಚಿನ್ನದ ಪದಕ ಗಳಿಸುವಲ್ಲಿ ಯಶಸ್ವಿಯಾಯಿತು. ಇವರು ಬಾಂಬೆಯಲ್ಲಿ (ಈಗ ಮುಂಬಯಿ) ನಡೆದ ೧೯೮೧ - ೮೨ ರ ವಿಶ್ವ ಕಪ್ ಹಾಕಿ ಪಂದ್ಯಾವಳಿಯಲ್ಲಿಯೂ ಕೂಡ ಆಡಿದರು. ಇಲ್ಲಿ ಭಾರತ ತಂಡವು ಪಂದ್ಯಾವಳಿಯ ಅಂತಿಮ ಪಟ್ಟಿಯ ೫ ನೇ ಸ್ಥಾನದಲ್ಲಿತ್ತು. ತದನಂತರ ಅವರು ಕರಾಚಿಯಲ್ಲಿ ೧೯೮೩ ಮತ್ತು ೧೯೮೪ ರಲ್ಲಿ ನಡೆದ ಚಾಂಪಿಯನ್ ಟ್ರೋಫಿ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಿದರು. ಅಲ್ಲದೇ ಆಸ್ಟ್ರೇಲಿಯಾದ ಪರ್ಥ್ ನಲ್ಲಿ ನಡೆದ ಇಸ್ಯಾಂಡ ವಿಶ್ವ ಹಾಕಿ ಪಂದ್ಯಾವಳಿಯಲ್ಲಿಯೂ ಆಡಿದರು.

ಶಾಹಿದ್ ರವರು ೧೯೮೪ ರ ಲಾಸ್ ಏಂಜಲಿಸ್ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಮತ್ತು ೧೯೮೮ ರ ಸಿಯೊಲ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಆಡಿದ ಭಾರತ ಹಾಕಿ ತಂಡದ ಭಾಗವಾಗಿದ್ದರು. ಆದರೂ ಕೂಡ ಈ ಆಟಗಳಲ್ಲಿ ಭಾರತ ತಂಡ ಯಾವುದೇ ಪದಕವನ್ನು ಪಡೆಯಲಾಗಲಿಲ್ಲ. ಅವರು ೧೯೮೨ ರ ಡೆಲ್ಲಿ ಏಷ್ಯನ್ ಕ್ರೀಡಾಕೂಟಗಳಲ್ಲೂ ಕೂಡ ಭಾರತ ತಂಡವನ್ನು ಪ್ರತಿನಿಧಿಸಿ, ದೇಶಕ್ಕೆ ಬೆಳ್ಳಿ ಪದಕ ಗಳಿಸಿಕೊಟ್ಟರು. ಅಲ್ಲದೇ ೧೯೮೬ ರ ಸಿಯೊಲ್ ಏಷ್ಯನ್ ಕ್ರೀಡಾಕೂಟಗಳಲ್ಲಿ ತಂಡಕ್ಕೆ ಕಂಚಿನ ಪದಕವನ್ನು ಗಳಿಸಿಕೊಟ್ಟರು. ೧೯೮೬ ರ ಸಿಯೊಲ್ ಏಷ್ಯನ್ ಕ್ರೀಡಾಕೂಟದಲ್ಲಿನ ಅತ್ಯುತ್ತಮ ಪ್ರದರ್ಶನದಿಂದಾಗಿ ಅವರನ್ನು ಏಷ್ಯನ್ ಆಲ್ ಸ್ಟಾರ್ ಹಾಕಿ ತಂಡಕ್ಕೆ ಆಯ್ಕೆ ಮಾಡಲಾಯಿತು. ಶಾಹಿದ್ ರವರು ಭಾರತ ತಂಡವನ್ನು ಪ್ರತಿನಿಧಿಸುತ್ತ ೧೯೮೬ ರ ಲಂಡನ್ ವಿಶ್ವ ಕಪ್ ಹಾಕಿ ಪಂದ್ಯಾವಳಿಯಲ್ಲಿ ಆಡಿದರು. ಇಲ್ಲಿ ಭಾರತ ತಂಡಕ್ಕೆ ಕೇವಲ ೧೨ ನೇ ಸ್ಥಾನವನ್ನು ಮಾತ್ರ ಉಳಿಸಿಕೊಳ್ಳಲು ಸಾಧ್ಯವಾಯಿತು.

ಇತರ ಸಾಧನೆಗಳು

ಬದಲಾಯಿಸಿ

ಮೊಹಮ್ಮದ್ ಶಾಹಿದ್ ರವರು ಅತ್ಯುತ್ತಮವಾದ ಡ್ರಿಬ್ಲಿಂಗ್ ಕೌಶಲಗಳನ್ನು ಹೊಂದಿದ್ದರು ಹಾಗು ಪ್ರಪಂಚದ ಅತ್ಯುತ್ತಮ ಡ್ರಿಬ್ಲರ್ ಎಂಬ ಖ್ಯಾತಿಗೂ ಪಾತ್ರರಾಗಿದ್ದರು. ಭಾರತೀಯ ರೈಲ್ವೆ ಇಲಾಖೆಯ ಕ್ಷೇಮಾಭಿವೃದ್ಧಿ ಪರೀಕ್ಷಾಧಿಕಾರಿಯಾಗಿ ಸೇವೆಸಲ್ಲಿಸುವ ಮೂಲಕ, ಮೊಹಮ್ಮದ್ ಶಾಹಿದ್ ರವರು ಅನೇಕ ರಾಷ್ಟ್ರೀಯ ಹಾಕಿ ಚಾಂಪಿಯನ್ಷಿಪ್ ಗಳಲ್ಲಿ ಭಾರತೀಯ ರೈಲ್ವೆ ಹಾಕಿ ತಂಡವನ್ನು ಪ್ರತಿನಿಧಿಸಿದ್ದರು. ಅಲ್ಲದೇ ೧೯೮೮ ನೇ ವರ್ಷದಲ್ಲಿ ದೆಹಲಿಯಲ್ಲಿ ಆಡುವ ಮೂಲಕ ತಂಡಕ್ಕೆ ರಾಷ್ಟ್ರೀಯ ಚಾಂಪಿಯನ್ಷಿಪ್ ಗೌರವ ತಂದುಕೊಟ್ಟಿದ್ದಾರೆ. ಇವರು ಭಾರತ ಹಾಕಿ ತಂಡದ ನಾಯಕನಾಗಿ ಅದನ್ನು ೧೯೮೫ - ೮೬ ರಲ್ಲಿ ಮುನ್ನಡೆಸಿದರು.

ಪ್ರಶಸ್ತಿಗಳು

ಬದಲಾಯಿಸಿ

ದೇಶಕ್ಕಾಗಿ ಅವರು ಹಾಕಿ ಕ್ರೀಡೆಯಲ್ಲಿ ಸಲ್ಲಿಸಿರುವ ಅತ್ಯುತ್ತಮ ಸೇವೆಗಾಗಿ ಮೊಹಮ್ಮದ್ ಶಾಹಿದ್ ರವರಿಗೆ ೧೯೮೦ - ೮೧ ನೇ ಸಾಲಿನ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತದನಂತರ ಅವರಿಗೆ ೧೯೮೬ ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಮೊಹಮ್ಮದ್ ಶಾಹಿದ್ ರವರು ಎಷ್ಟು ಸರಾಗವಾಗಿ ಪ್ರತಿಸ್ಪರ್ಧಿಗಳಿಂದ ತಪ್ಪಿಸಿಕೊಳ್ಳುತ್ತಿದ್ದರೋ ಅಷ್ಟೇ ಸರಾಗವಾಗಿ ಪ್ರಚಾರದಿಂದ ದೂರವಿರುತ್ತಿದ್ದರು. ಅವರು ಎಷ್ಟೇ ದೂರಸರಿದರೂ ಪ್ರಸಿದ್ಧಿಯು ಡ್ರಿಬಲ್ ನ ಅಭಿಮಾನಿ ದೇವತೆಯ ಹತ್ತಿರ ಮತ್ತೆ ಮತ್ತೆ ಬರುತ್ತಿತ್ತು.ಇದು ಯಾವಾಗಲೂ ಮರೆತ ಬಾಲ್ಯದ ನಾಯಕನನ್ನು ಭೇಟಿಮಾಡಿದಂತಿರುತ್ತಿತ್ತು. ಇದು ಹಳೆಯ ಶಿಕ್ಷಕಿಯ ಬಳಿ ಕಲಿತಿದ್ದನ್ನು ಜ್ಞಾಪಿಸುವಂತಿತ್ತು ಹಾಗು ಮಾರ್ಪಡಿಸಲಾಗದ ಹೊಸ ಶಿಕ್ಷಣದಂತಿರುತ್ತಿತ್ತು.ಪ್ರಾಚೀನ ವಾರಣಾಸಿಯ ಹೊರವಲಯದಲ್ಲಿನ ಅವರ ಅತ್ಯಂತ ಚಿಕ್ಕ ಕಚೇರಿಯು ಯಾವುದೇ ಗದ್ದಲದಿಂದ ಮುಕ್ತವಾಗಿತ್ತು.ಅವರು ಅಲ್ಲಿಯೇ ಕುಳಿತುಕೊಳ್ಳುತ್ತಿದ್ದರು.ಏಕೆಂದರೆ ವಾರಣಾಸಿ ಅತ್ಯಂತ ಚಟುವಟಿಕೆಯ ಸ್ಥಳವಾದರೂ ಅವರು ಮಾತ್ರ ಪ್ರಶಾಂತತೆಯಲ್ಲಿದ್ದರು. ಇಂತಹ ಇಕ್ಕಟ್ಟಾದ ಜಾಗವು, ಡೀಸಲ್ ಲೊಕೊಮೊಟಿವ್ ವರ್ಕ್ಸ್ (DLW) ಸಂಕೀರ್ಣದಿಂದ ಸಾಗುವ ರೈಲುಗಳ ನಿರಂತರ ಶಬ್ದದಿಂದ ಅವರನ್ನು ತಪ್ಪಿಸುತ್ತಿತ್ತು. ಆದರೂ ಅಭ್ಯಾಸಬಲದ ಮೂಲಕ, ಶಾಹಿದ್ ರವರು ವಾರಣಾಸಿಯ ಕ್ಯಾಂಟ್ಟ್ ನಿಲ್ದಾಣದ ಕಡೆಗೆ ನಿಧಾನವಾಗಿ ಸಾಗುತ್ತಿರುವ ಪ್ರತಿಯೊಂದು ರೈಲನ್ನು ಕೂಡ ಗುರುತಿಸುತ್ತಿದ್ದರು. ಈ ರೈಲುಗಳಿಂದ ಸಣ್ಣ ಶಬ್ದ ಕೇಳಿಬರುತ್ತಿತ್ತು. ಅವರು ಸಹಿ ಹಾಕಬೇಕಿದ್ದ ಕಾಗದಪತ್ರಗಳನ್ನು ಪರಿಶೀಲಿಸುತ್ತ "ಸ್ವತಂತ್ರ ಇಂದು ತಡವಾಗಿ ಹೋಗುತ್ತಿದೆ... " ಎಂದು ತಲೆಯೆತ್ತದೆಯೇ ಮೆಲುದನಿಯಲ್ಲಿ ಹೇಳುತ್ತಿದ್ದರು. ಹಿಂದೊಮ್ಮೆ ಚುರುಕಾದ ಚಟುವಟಿಕೆಯುಳ್ಳ ಶಾಹಿದ್ ಈಗ ಆರಿಸಿಕೊಂಡಂತಹ ವಿಧಾನವು ಮಂದಗತಿಯಲ್ಲಿ ಸಾಗುವ ಜೀವನಕ್ರಮವಾಗಿದೆ. ಕ್ರೀಡೆಯ ಮುಖ್ಯಾಧಿಕಾರಿಯಾಗಿ, DLW ಕೇಂದ್ರಕಚೇರಿಗಳ ಕಾರಿಡಾರ್ ಗಳಲ್ಲಿ ಅತ್ಯಂತ ಧೈರ್ಯದ ವ್ಯಕ್ತಿ ಎಂಬ ಹೆಸರಿಗೆ ಪಾತ್ರರಾಗಿದ್ದರು. ಅಭಿವೃದ್ಧಿಯ ಕೊರತೆಯನ್ನು ತುಂಬಲು ರೈಲ್ವೆಯ ಭಾರಿ ಜಟ್ಟಿಗಳಿಗೆ ಮತ್ತು ನೀಳಕಾಲಿನ ಬಾಸ್ಕೆಟ್ ಬಾಲ್ ಆಟಗಾರರಿಗೆ ಸೂಚನೆಗಳನ್ನು ಸಿದ್ಧಪಡಿಸಿಕೊಡುತ್ತಿದ್ದರು. ಅವರು ಅಸಂಖ್ಯಾತ ಪ್ರೇಕ್ಷಕರನ್ನು ಹೊಂದಿದ್ದರೂ ಕೂಡ ಅಭಿಮಾನಿಗಳು ಅವರನ್ನು ಅನುಕರಿಸುವಂತೆ ಮಾಡಲು ಶ್ರಮಿಸುತ್ತಿದ್ದರು.ಬಹುಶಃ ಇದು ಮನುಷ್ಯನು ಆತನ ಗತಕಾಲದ ಅನುಭವಗಳನ್ನು ಮತ್ತೊಮ್ಮೆ ಅನುಭವಿಸುವ ಕ್ಷಣಗಳಾಗಿವೆ. ಬಹುಶಃ ಅವರು ತಮ್ಮೊಳಗೆ ಹೆಮ್ಮೆಯ ಆನಂದವನ್ನು ಅನುಭವಿಸುತ್ತಿದ್ದರು. ಇದು ಮಂದಗತಿಯ ಜೀವನ ಆದರೂ ಕೂಡ ಅವರ ಎದುರಿಗಿನ ದೈನಂದಿನ ಚಟುವಟಿಕೆಯ ವೇಗ ಕಣ್ಣಿಗೆ ಮಬ್ಬುಕವಿಯುವಷ್ಟಾಗಿತ್ತು. ರಜನೀಕಾಂತ್ ನ ಕೆಲವು ಹೋಲಿಕೆಯ ವ್ಯಕ್ತಿತ್ವದಂತಿದ್ದರೂ(ಕುಳ್ಳ ಆಕಾರ), ಅವರದೇ ಆದ ಕೇಶವಿನ್ಯಾಸ ಮತ್ತು ಆಶ್ಚರ್ಯಗೊಳಿಸುವ ಅವರ ಸರಳವಾದ ಮಾತುಗಳು ನೀವು ಶಾಹಿದ್ ರನ್ನು ನೋಡಲು ಬಂದಿದ್ದರೆ ಅವರ ನೋಟವು ಇಂದಿಗೂ ಕೂಡ ನಿಮ್ಮ ಗಮನ ಸೆಳೆಯುತ್ತದೆ. ಶಾಹಿದ್ ರವರ ಜೀವನದಲ್ಲಿ ಈಗ ಹಾಕಿ ಇಲ್ಲ. ಅಲ್ಲದೇ ಅವರು ಇದಕ್ಕೆ ತೀರಸ್ಕೃತರಾಗಿಯೂ ಇಲ್ಲ. ಜೀವನದ ಈ ಬದಲಾವಣೆಯಲ್ಲಿ ನೀವು ಅವರನ್ನು ಅಣುಕಿಸುತ್ತಿರುವಂತೆ ಅವರಿಗೆ ಗೋಚರವಾದಲ್ಲಿ, ಅವರು ಫೈಲ್ ಗಳನ್ನು ಬದಿಗೊತ್ತಿ ಅವರ ಮೇಜಿನ ಮೇಲೆ ಮೆಲ್ಲನೆ ಗುದ್ದಿ, "ಹಾ ಗೆಳೆಯನೆ, ಹೇಳು..." ಎಂದು ಹೇಳುತ್ತಾರೆ. ಅದಕ್ಕೆ ನೀವು ಏಕೆ ಎಂದು ಕೇಳುತ್ತೀರಿ? ಅದರಲ್ಲಿದ್ದ ಗಡಿಬಿಡಿಯ ಚಟುವಟಿಕೆಯನ್ನು ಅವರು ಅರ್ಥಮಾಡಿಕೊಳ್ಳಲಾರರು. "ನೋಡು, ನಾನು ಮೊಹಮ್ಮದ್ ಶಾಹಿದ್. ಇದೆಂದಿಗೂ ಬದಲಾಗುವುದಿಲ್ಲ. ಹೌದು, ನಾನು ಭಾರತದ ನಾಯಕನಾಗಿದ್ದೆ; ಜನರು ನನ್ನನ್ನು ಡ್ರಿಬ್ಲಿಂಗ್ ಕೌಶಲಗಳೊಂದಿಗೆ ದೇವರು ಕೊಟ್ಟ ಪ್ರತಿಭೆಯನ್ನು ಹೊಂದಿದ್ದಾನೆ ಎನ್ನುತ್ತಿದ್ದರು. ಮುಜೆ ಭಿ ಯಾದ್ ಹೈ, ಹರ್ ವಕ್ತ್ ಮಾರ್ ಡಾಜ್, ಮಾರ್ ಡಾಜ್(ಪ್ರತಿ ಸಮಯದಲ್ಲೂ ಚಂಡು ಚಲಿಸುವಂತಾಗಲು ಹೊಡಿ ಹೊಡಿ ಎನ್ನುತ್ತಿದ್ದದ್ದು ನನಗೂ ನೆನಪಿದೆ). ಪರ್ ಏಕ್ ಟೈಮ್ ಕೆ ಬಾದ್ ಮನ್ ಭರ್ ಗಯಾ (ಆದರೆ ಒಂದು ಸಮಯದ ನಂತರ ತೃಪ್ತಿಯಾಯಿತು)(ನಾನು ಕೂಡ ಯಾವಾಗಲೂ ತಬ್ಬಿಬ್ಬು ಮಾಡುವ ಹಳೆಯ ಆಟಗಾರರನ್ನು ನೆನಪಿಸಿಕೊಳ್ಳುತ್ತೇನೆ. ಆದರೆ ಆ ಕಾಲದ ನಂತರ, ಅದು ಸಾಕೆನಿಸುತ್ತದೆ)," ಎಂದು ಅವರು ಹೇಳುತ್ತಾರೆ.

ಇದರಲ್ಲಿ ಯಾವುದೇ ದ್ವೇಷವಿಲ್ಲ, ಯಾವುದೇ ಕಹಿಯೂ ಇಲ್ಲ. ಬದಲಿಗೆ ಅವರ ಮಾತಿನ ಏರಿಳಿತದಲ್ಲಿ ಅವರು ಬೆಳೆದು ಬಂದ ಸಂಸ್ಕೃತಿಯ ನಿಷ್ಕಪಟತೆ ಎದ್ದು ಕಾಣುತ್ತದೆ. ಉಹಾಹರಣೆಗೆ: " ಪಾಕಿಸ್ತಾನ್ ತೋ ಅಯ್ಸೆ ಜಾತೆ ಥೆ, ಜೈಸೆ ಆರ್ಡರ್ಲಿ ಬಾಜಾರ್ ಸೆ ಕಚೇರಿ..."(ಆಗ ಪಾಕಿಸ್ತಾನಕ್ಕೆ ಹೋಗುವುದೆಂದರೆ ನಿಯಮಿತವಾಗಿ ಕೆಲಸಗಾರ ಸಂತೆಯಿಂದ ಕಚೇರಿಗೆ ಹೋಗುವಂತೆ ಹೋಗುತ್ತಿದ್ದೆವು). ಇದು ಒಂದು ಕಾಲದಲ್ಲಿ ಹಾಕಿಯಲ್ಲಿ ನಮ್ಮ ಬದ್ಧ ವೈರಿಯಾಗಿದ್ದ ಪಾಕಿಸ್ತಾನದೊಂದಿಗಿನ ವೈಷಮ್ಯದ ಸಂಬಂಧದ ಮೇಲಿನ ಅಭಿಪ್ರಾಯದ ಹೇಳಿಕೆಯಾಗಿದೆ.

ಅವರು ವಾರಣಾಸಿಯು ಕಥೆ ಹೇಳುವವರ ನಗರವಾಗಿದೆ ಎಂದು ಹೇಳುತ್ತಾರೆ. ಆದರೂ, ಮೊಹಮ್ಮದ್ ಶಾಹಿದ್ ಅವರದೇ ಆದ ವಿಶೇಷ ಘಟನೆಗಳನ್ನೊಳಗೊಂಡ ಕಥೆಯನ್ನು ಹೆಣೆದಿದ್ದಾರೆ: ಚುರುಕಾದ ವ್ಯವಹಾರ, ಇಲ್ಲಿನ ಅನಿರೀಕ್ಷಿತ ತಿರುವುಗಳು ಮತ್ತು ಬದಲಾವಣೆಗಳನ್ನು ಕಾಲಗಿಂತ ಮನುಷ್ಯನಿಂದ ಸುಧಾರಿಸಲ್ಪಟ್ಟವು ಆಗಿವೆ. "ಅವರು ಬನಾರಸ್ ನಿಂದ ಸ್ಥಳಾಂತರಗೊಂಡರು, ನಂತರ ಶಾಹಿದ್ ಏನೋ ಆಗಿದ್ದಾರೆಂದು ಜನರು ಹೇಳುತ್ತಾರೆ. ಬಹುಶಃ, ಇದು ಸತ್ಯ. ಆದರೆ ಅವರಿಗೆ, ಬನಾರಸ್ ಇಲ್ಲದಿದ್ದರೆ ಮೊಹಮ್ಮದ್ ಶಾಹಿದ್ ಇರುತ್ತಿರಲಿಲ್ಲವೆಂದು ಎಂದು ಅವರು ಹೇಳುತ್ತಿದ್ದರು".

ನಿಮಗೆ ಸಲೀಮ್ ರವರನ್ನು ನೆನಪಿಸಲಾಗುತ್ತದೆ, ಇವರು ೯೦ ರಲ್ಲಿನ ರಾಷ್ಟ್ರೀಯ ಮಾಜಿ ಕ್ಯಾಂಪರ್ ಆಗಿದ್ದು, ಪ್ರಸ್ತುತ ಈಶಾನ್ಯ ವಿಭಾಗದ ರೈಲುಗಾಡಿಯ ಟಿಕೆಟ್ ಪರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಥಳಾವಕಾಶವನ್ನು ಕಾಯ್ದಿರಿಸುವ ಸ್ಥಿತಿಯ ಕೊನೆಯ ನಿಮಿಷದ ಸಂದಿಗ್ದ ಸಂದರ್ಭದಲ್ಲಿ ಒಬ್ಬಾತ ಅವರ ಬಳಿ ಓಡಿ ಬಂದ. ವಾರಾಣಸಿ ಜನರಿಗಾಗಿ ಸಲೀಮ ಹೆಚ್ಚು ಭಾವಾನಾತ್ಮಕತೆ ಹೊಂದಿದ್ದು ಅದು ಅವನ ಪಾಲಿಗೆ ಮನೆ ತೊರೆದ ವ್ಯಾಕುಲತೆಯಾಗಿದೆ.ಆತ ಪ್ರಯಾಣಿಕರ ಟಿಕೆಟ್ ಗಳನ್ನು ಸರಿಹೊಂದಿಸಿ ಅವರಿಗೆ ಸ್ಥಳಾವಕಾಶ ಕಲ್ಪಿಸುತ್ತಾನೆ. "ಅವರ ಹಿಂದಿನ ತಂಡದವರೆಲ್ಲ ಇಂದು ಎಲ್ಲಿದ್ದಾರೆಂಬುದ್ದನ್ನು ನೋಡಿ, ಅದೇ ಶಾಹಿದ್ ಭಾಯ್ ರವರು ಎಲ್ಲಿದ್ದಾರೆಂಬುದನ್ನೂ ನೋಡಿ. ಜನರು ಮುಂಬಯಿ ಅಥವಾ ದೆಹಲಿಯಲ್ಲಿ ಒಂದು ತಿಂಗಳಿಗೆ ಒಂದು ಲಕ್ಷದಷ್ಟು ಗಳಿಸುತ್ತಿರುವಾಗ ಅವರು ಕೇವಲ ೪೦,೦೦೦ ರೂಪಾಯಿ ಮೌಲ್ಯದ ಮನೆಯನ್ನು ತೆಗೆದುಕೊಂಡಿದ್ದಾರೆ" ಎಂದು ಅವರು ಹೇಳಿದ್ದಾರೆ. ಲೇಕಿನ್, ಅರೆ ಭಾಯ್,(ಆದರೆ ಭಾಯ್)ಇದು ಬನಾರಸ್. ಇದರ ಜೊತೆಯಲ್ಲಿ ಶಾಹಿದ್ ಭಾಯ್ ರವರು ಎಂದಿಗೂ ರೂಢಿಗೆ ಹೊರತಾಗಿರಲಿಲ್ಲ," ಎಂಬುದನ್ನು ಸಲೀಮ್ ರವರು ಸೇರಿಸಿದ್ದಾರೆ.

ಶಾಹಿದ್ ರವರು ತಮಗಾಗಿ ವೃತ್ತಿ ನಂತರ ಜೀವನವನ್ನು ಸುಗಮವಾಗಿ ಸಾಗಿಸಲು ಅನುಕೂಲಕರವಾದ ವ್ಯವಸ್ಥೆ ಮಾಡಿಕೊಂಡಿದ್ದಾರೆ. "ಗೆಳೆಯ, ಇದು ನನ್ನ ಬದುಕು," ಎಂದು ಟ್ರೋಫಿಗಳೊಂದಿಗೆ ತುಂಬಿದ್ದ ಅವರ ಇಕ್ಕಟ್ಟಾದ ಕಚೇರಿಯನ್ನು ಕುರಿತು ಅವರು ಹೇಳುತ್ತಾರೆ. "ಇದನ್ನೇನಾದರು ನಾನು ಬಿಟ್ಟರೆ, ನಾನು ಎಲ್ಲಿಗೆ ಹೋಗಲಿ? ನನ್ನ ಕುಟುಂಬ ಇಲ್ಲಿದೆ. ನನ್ನ ಅವಳಿ ಮಕ್ಕಳು ಅವರ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿದ್ದಾಗ. ಯಾಕೆ ಅವರಿಗೆ ತೊಂದರೆಕೊಡಬೇಕು?" ಅವರು ನಮ್ಮನ್ನು, ಹಳೆಯ ನಗರವನ್ನು ಚಿತ್ರಿಸುವ ಸಂಕೀರ್ಣವಾದ ಬೀದಿಗಳಿಗೆ ಪ್ರವಾಸಕ್ಕೆ ಕರೆದುಕೊಂಡು ಹೋದಾಗ ಏಕೆ ಅವರು ತರಬೇತಿಯನ್ನು ತೆಗೆದುಕೊಳ್ಳಲಿಲ್ಲ ಎಂಬುದನ್ನು ವಿವರಿಸಿದರು. "ಆಟಗಾರನಾಗಿ ೧೪ ವರ್ಷಗಳ ಕಾಲ ನಾನು ಮನೆಯಿಂದ ದೂರವಿದ್ದೆ. ನಾನೇಕೆ ನನ್ನ ಜೀವನದ ಉಳಿದಿರುವ ಕಾಲವನ್ನು ಹೊರಗೆ ಕಳೆಯಲಿ?"

ಜನಪ್ರಿಯ ಘಾಟ್(ಘಟ್ಟ) ಗಳೊಂದಿಗೆ ಅವರ ಬದುಕಿನ ಬಂಡಿ ನಿಧಾನವಾಗಿ ಸಾಗಿತ್ತು, ಆದರೆ ಇದು ಹೇಗೆ ಈ ಗದ್ದಲ-ಗುಂಪಿನಿಂದ ತಪ್ಪಿಸಿಕೊಳ್ಳಬೇಕೆಂಬ ಚಿಂತೆ ಅವರದಾಗಿದೆ. ಶಾಹಿದ್ ರವರು ಇಂಥ ಗೋಜಲಾದ ಹಾದಿಗಳಲ್ಲಿ ಆಶ್ಚರ್ಯಕರವಾಗಿ ಅಸ್ತವ್ಯಸ್ಥರಾಗಿದ್ದಾರೆನಿಸುತ್ತದೆ. ಅವರಿಗೆ ಹೇಗೆ ಮತ್ತು ಎಲ್ಲಿ ತಪ್ಪಿಸಿಕೊಳ್ಳುವಂತಹ ಆ ಜನಪ್ರಿಯ ಕೌಶಲಗಳು ಬಂದವು ಎಂಬ ಚಿತ್ರಣವನ್ನು ನಮಗೆ ನೀಡುತ್ತ ಗಲ್ಲಿಯೊಳಗೆ ಪ್ರವೇಶಿಸುವ ಮೊದಲೆ ಅವರು ಪ್ರತಿ ಗಲ್ಲಿಯಿಂದ ಹೊರಬರುತ್ತಿದ್ದರು ಎಂಬುದನ್ನು ಅವರು ವಿವರಿಸುತ್ತಾರೆ.

ಅವರ ತಂಡದ ಮೊದಲನೆಯ ನಾಯಕ ವಾಸುದೇವನ್ ಭಾಸ್ಕರನ್ ರವರ ಮಾತು ಮನಸ್ಸಿನೊಳಗೆ ಬಂತು. "ಮೈದಾನದಲ್ಲಿ ಶಾಹಿದ್ ನ ಚಲನೆಯನ್ನು ವಿವರಿಸುವುದು ಸುಲಭವಲ್ಲ. ಆದರೆ ನೀವು ಕಡಿದ ಮೇಲೆ ಬಾಳೆಹಣ್ಣಿನ ಮರ ಬೀಳುವ ರೀತಿಯನ್ನು ನೋಡಿದರೆ ಈ ಜಾಣ್ಮೆಯನ್ನು ದೃಶ್ಯೀಕರಿಸಬಹುದು. ಮರವು ಎಂದಿಗೂ ರಭಸವಾಗಿ ಬೀಳುವುದಿಲ್ಲ. ಅದು ಯಾವಾಗಲೂ ನಿಧಾನವಾಗಿ ಬೀಳುತ್ತದೆ, ಅದನ್ನು ಕತ್ತರಿಸಿದ ವ್ಯಕ್ತಿಯಿಂದ ದೂರದಲ್ಲಿ ಬಾಗಿಕೊಂಡು ಬೀಳುತ್ತದೆ. ಶಾಹಿದ್ ಆಶ್ಚರ್ಯಕರವಾಗಿ ದೇಹವನ್ನು ಅನಿರೀಕ್ಷಿತ ತಿರುವುಗಳ ಮೂಲಕ ಮಣಿಸಿ ಪ್ರತಿಸ್ಪರ್ಧಿಗಳಿಂದ ತಪ್ಪಿಸಿಕೊಳ್ಳುತ್ತಿದ್ದರು- ಕಲಿಸಲು ಅಥವಾ ಅನುಕರಿಸಲು ಸಾಧ್ಯವಾಗದ ಅಪರೂಪದ ಗುಣ" ಹೀಗೆಂದು ಭಾರತದ ಮಾಜಿ ನಾಯಕ ಹೇಳುತ್ತಾರೆ.

"ನಾನು ಯಾರ ಬಳಿಯೂ ಹೋಗಲಾರೆ,ನನಗಾಗಿ ಅವರಿಂದ ಏನನ್ನೂ ಕೇಳಲಾರೆ,"ಮೇವಿಗಾಗಿ ಮಿಣಿ ಹಗ್ಗ ಕಟ್ಟಿಸಿಕೊಂಡ ಮೇಕೆ ಹಸುವಿನ ಸುತ್ತಲೂ ಸುತ್ತುವ ಜಾಯಮಾನ ನನ್ನದಲ್ಲ.ಅದು ಮಸಣದ ಹಾದಿಯ ಮೆರವಣಿಗೆಯೇ ಎಂದು ತಮ್ಮೊಳಗೇ ತಾವು ಹೇಳಿಕೊಳ್ಳುತ್ತಾರೆ. "ನಾನು ಮೂರು ವಿಶ್ವ ಕಪ್ ಗಳನ್ನು ಆಡಿದ್ದೇನೆ, ಆದರೆ ನನ್ನನ್ನು ಆಮಂತ್ರಿಸದಿದ್ದರೆ(ನವ ದೆಹಲಿಯಲ್ಲಿ ನಡೆದ ವಿಶ್ವ ಕಪ್ ಗೆ) ನಾನು ಹೋಗುವುದಿಲ್ಲ. ನಾನು ಮೈದಾನದ ಗೇಟ್ ನಲ್ಲಿ ಬೇರೊಂದು ಕಡೆಗೆ ಮುಖಮಾಡಿಕೊಂಡಿರಲೂ ಬಯಸುವುದಿಲ್ಲ. ಯಾವುದೇ ಪೋಲಿಸ್ ನನ್ನನ್ನು ಭಾರತದ ನಾಯಕನೆಂದು, ಅರ್ಜುನ ಪ್ರಶಸ್ತಿ ವಿಜೇತನೆಂದು ಪದ್ಮಶ್ರೀ ಪ್ರಶಸ್ತಿ ವಿಜೇತನೆಂದು ಗುರುತಿಸುವುದೂ ಇಲ್ಲ ಅಥವಾ ನೆನಪು ಮಾಡಿಕೊಳ್ಳುವುದೂ ಇಲ್ಲ. ಜನರು ನಾನು ಇಂತಹ ಆಟಗಾರನನ್ನು ಅನುಕರಿಸಿದ್ದೇನೆ ಎಂದು ಹೇಳುತ್ತಾರೆ, ಆದರೆ ನೆರೆಹೊರೆಯ ಪಂದ್ಯಗಳಲ್ಲಿ ಚೆನ್ನಾಗಿ ಆಡುವವರು ಯಾರನ್ನೇ ನೋಡಿದರೂ, ನಾನು ಅವರ ವೃತ್ತಿಪರ ಶೈಲಿಯನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಒಮ್ಮೆ ಶ್ರೇಷ್ಠರಾದ ಅಶೋಕ್ ಕುಮಾರ್ ಲಖ್ನೌವ್ ನಲ್ಲಿ ಕ್ರೀಡಾ ವಸತಿ ನಿಲಯಕ್ಕೆ ಭೇಟಿನೀಡಿದ್ದರು. ಅವರು ಡ್ರಿಬ್ಲಿಂಗ್ ಮಾಡಿದ್ದನ್ನು ನಾವು ನೋಡಿದೆವು. ಅದನ್ನು ನೋಡಿ ನಾನು ಸಮ್ಮೋಹಕ್ಕೊಳಗಾದೆ. ಚೆಂಡು ಅವರ ಸ್ಟಿಕ್ (ಕೋಲು) ಗೆ ಅಂಟಿಕೊಂಡಿತು, ಅದು ಚರ್ ಚರ್ ಎಂದು ಹೋಯಿತು..."

ಯಾರು ತಂಡಕ್ಕಾಗಿ ಬಂದರೂ ಅವರಿಗೆ, ಮೊಹಮ್ಮದ್ ಶಾಹಿದ್, ರವರು ಪುಣೆಯಿಂದ ಬಂದ ಧನರಾಜ್ ಪಿಳ್ಳೈಯ ಪ್ರತಿರೂಪವಾಗಿದ್ದರು. ೮೦ ರಲ್ಲಿ ತಂಡದ ಪ್ರತಿಭಾವಂತ ಸದಸ್ಯ ಮತ್ತು ಸಾಂದರ್ಭಿಕ ನಾಯಕರಾಗಿದ್ದ ಶಾಹಿದ್ ರವರು ಮಧ್ಯ- ಮುಂಚೂಣಿಯ ಆಟಗಾರರಾಗಿದ್ದರು. ಇವರು ಅತ್ಯಂತ ಸುಸಂಸ್ಕೃತರಾದ ಜಾಫರ್ ಇಕ್ಬಾಲ್ ರವರ ಜೊತೆಗೂಡಿ ಸ್ಮರಣೀಯ ಆಕ್ರಮಣಕಾರಿ ಆಟವನ್ನು ಆಡಿದ್ದರು. ಕ್ರೀಡೆಯಲ್ಲಿ ಸಾರ್ವಜನಿಕರ ನೆನಪಿನಿಂದ ಅತ್ಯಂತ ಬೇಗ ಕಣ್ಮರೆಯಾಗುವ ಮೂಲಕ ಅವರು ಕ್ರೀಡೆಗೆ ವಿದಾಯ ಹೇಳಿದರು.ಪ್ರಾಯಶಃ ೧೯೮೦ ನೇ ವರ್ಷ, ಮೈದಾನದಲ್ಲಿ ಆಕ್ಷ್ಯನ್ ಗೆ ಹೆಸರುವಾಸಿಯಾಗಿದ್ದ ಆಟಗಾರರ ಕೊನೆಯ ಪೀಳಿಗೆಯನ್ನು ಜನ ಸಮೂದಾಯ ನೋಡಿತು. ತಂಡವು ಅದಷ್ಟಕ್ಕದೇ ಅನೇಕ ಪ್ರಶಸ್ತಿ-ಗೌರವಗಳನ್ನು ಗೆದ್ದುಕೊಳ್ಳಲಿಲ್ಲ. ಮಾಸ್ಕೋ ಒಲಿಂಪಿಕ್ಸ್ ನ ಚಿನ್ನದ ಪದಕವು ಚರ್ಚಾಸ್ಪದವಾಗಿ ಶಾಹಿದ್ ರವರದು ಎಂದು ಪರಿಗಣಿಸಬಹುದಾದ ಏಕಮಾತ್ರ ಪದಕವಾಗಿದೆ; ೧೯೮೨ ರಲ್ಲಿ ನಡೆದ ಏಷ್ಯನ್ ಕ್ರೀಡಾಕೂಟಗಳ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ೭ - ೧ ಗೋಲ್ ಗಳಿಂದ ಸೋಲುವ ಮೂಲಕ ತಂಡವು ಭಾರತ ಹಾಕಿಯ ಅತ್ಯಂತ ದೊಡ್ಡ ಅವಮಾನವನ್ನು ಕೂಡ ಅನುಭವಿಸಿದೆ.

ಹಾಕಿ ಈಗಲೂ ಕ್ರಿಕೆಟ್ ಪ್ರಭಾವದ-ಪ್ರವಾಹದಿಂದ ಮುಳುಗಿ ಹೋಗಿದೆ. ಅಲ್ಲದೇ ರಾಷ್ಟ್ರೀಯ ದೂರದರ್ಶನವು ಎರಡನ್ನೂ ಕೂಡ ಸಮನಾಗಿ ಪ್ರಸಾರಮಾಡುವ ಕಾಲಾವಧಿ ನೀಡುತ್ತಿದೆ. ಇದು ನೋಡಲು ಆಕರ್ಷಕ ಗೋಲು ಮಾಡುವ ತಂಡದಂತೆ ಕಂಡುಬರುತ್ತಿತ್ತು. ಈ ತಂಡದಲ್ಲಿ ಸೋದರ ಮಾವ ಇಕ್ಬಾಲ್ ಮತ್ತು ವಿನೀತ್ ಕುಮಾರ್, ಮಣಿಪುರ್ ನಿಂದ ಬಂದಿದ್ದ ಹುಡುಗುತನದ ಥೊಯ್ಬಾ ಸಿಂಗ್ ರವರಿದ್ದರು; ಅಲ್ಲದೇ ಇಲ್ಲಿ MM ಸೋಮಯ್ಯರವರ ಮತ್ತು ಮರ್ವಿನ್ ಫರ್ನ್ಯಾಂಡಿಸ್ ರವರ ನಗರದ ಸಂಸ್ಕೃತಿ ಹಾಗು ಮೊಹಿಂದರ್ ಪಾಲ್ ಸಿಂಗ್ ಮತ್ತು ಜೊಕ್ವಿಮ್ ಕಾರ್ವಲ್ಹೊ ರವರ ಭಾರಿ ವ್ಯಕ್ತಿತ್ವಗಳೂ ಇದ್ದವು. ಇದರಲ್ಲಿ ಶಾಹಿದ್, ತಂಡದಲ್ಲಿದ್ದ ಅತ್ಯಂತ ಕಿರಿಯರೊಂದಿಗಿನ ಸಾಲಿನ ಕೊನೆಯಲ್ಲಿ ನಿಲ್ಲುತ್ತಿದ್ದರು. ಲಜ್ಜೆ ಮತ್ತು ಅಂತರ್ಮುಖಿ ಸ್ವಭಾವದವರಾಗಿದ್ದ ಅವರನ್ನು ಮೈದಾನಕ್ಕೆ ಕೊಂಡೊಯ್ದಾಗ ಅವರ ವ್ಯಕ್ತಿತ್ವ ಕ್ರಿಯಾಶೀಲತೆಯಿಂದಾಗಿ ಬೆಳೆಯಲು ಆರಂಭವಾಯಿತು.

ಅನಂತರ ಈ ಕಿರಿಯನ ಬೆಳವಣಿಗೆ ಆರಂಭವಾಯಿತು. ನಿಜವಾಗಿಯೂ ಆಗ ಸ್ವದೇಶೀ(ಸ್ಥಳೀಯತೆಯಲ್ಲಿಯೇ ಬೆಳೆದ) ಸೂಪರ್ ಸ್ಟಾರ್ ಆಗಿದ್ದರು. ಆಕರ್ಷಿಸುವ ವೇಗ, ಉತ್ತಮ ನಿಯಂತ್ರಿತ ಹಿಡಿತದೊಂದಿಗೆ ಡ್ರಿಬ್ಲರ್ ನಂತಹ ಸಹಜ ಕೌಶಲವನ್ನು ಮೈಗೂಡಿಸಿಕೊಂಡಿದ್ದರು - ಓರೆಯಾಗಿ ಚಲಿಸುವ, ಅವರ ಈ ಆಟದ ವೈಖರಿ ಎಲ್ಲರನ್ನೂ ಅನಿರೀಕ್ಷಿತವಾಗಿ ಖುಷಿಪಡಿಸುತಿತ್ತು. "ಉತ್ಕೃಷ್ಟತೆಯನ್ನು ನೀವು ಎರವಲು ಪಡೆಯಲಾರಿರಿ, ಶಾಹಿದ್ ರವರು ಹುಟ್ಟಿನೊಂದಿಗೆ ಅದನ್ನು ಬಳವಳಿಯಾಗಿ ಪಡೆದಿದ್ದಾರೆ," ಎಂದು ಭಾಸ್ಕರನ್ ರವರು ವಿವರಿಸುತ್ತಾರೆ. "ನಾನು ಲೆಫ್ಟ್ -ಹಾಫ್ ಮತ್ತು ಶಾಹಿದ್ ರವರು ಲೆಫ್ಟ್- ಇನ್. ನಾನು ಫೀಡರ್ ಆಗಿದ್ದೆ.(ಚೆಂಡನ್ನು ಇನ್ನೊಬ್ಬರಿಗೆ ಕಳುಹಿಸುವವ) ಒಮ್ಮೆ ನಾನು ಶಾಹಿದ್ ನ ಕಡೆಗೆ ಚೆಂಡನ್ನು ರವಾನಿಸಿದೆನೆಂದರೆ ಅಷ್ಟೇ ಸಾಕು,ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅವರು ಮಾಡುತ್ತಿದ್ದ ಡ್ರಿಬ್ಲಿಂಗ್ ಅನ್ನು ಮಾತ್ರ ನೀವು ನೋಡಬಹುದಾಗಿತ್ತು. ಅದು ಮೊದಲೇ ಎಲ್ಲಾ ಪ್ರೋಗ್ರಾಂಗಳನ್ನು ಸಿದ್ಧಪಡಿಸಲಾದ ಕಂಪ್ಯೂಟರ್ ಆಟದಂತಿರುತ್ತಿತ್ತು," ಎಂದು ಅವರು ಹೇಳುತ್ತಾರೆ.

ತಂಡದ ಹಿಂದಿನ ಸದಸ್ಯರಾದ ಸೋಮಯ್ಯರವರನ್ನು ಜ್ಞಾಪಿಸಿಕೊಳ್ಳುತ್ತ "೧೯೮೨ ರಲ್ಲಿ ನಡೆದ ವಿಶ್ವಕಪ್ ಅನ್ನು ನಾನು ನೆನಪುಮಾಡಿಕೊಂಡೆ". "ಇದು ಡಚ್ ರ ವಿರುದ್ಧದ ಪಂದ್ಯವಾಗಿತ್ತು. ಟೈಸ್ ಕ್ರೂಸ್, ಪೌಲ್ ಲಿಟ್ಜೆನ್ಸ್ ಮತ್ತು ಇತರ ಇಬ್ಬರು ಆಟಗಾರರು ಶಾಹಿದ್ ರವರನ್ನು ಮುತ್ತಿಕೊಂಡಿದ್ದರು. ಅವರಲ್ಲಿ ನಾಲ್ಕು ಜನ ಇಕ್ಕಾಟ್ಟಾದ ನಾಲ್ಕು ಅಡಿ ಉದ್ದದ ನಾಲ್ಕು ಅಡಿ ಅಗಲವಾದ ಜಾಗದಲ್ಲಿದ್ದರೆ, ಈ ಯುವಕ ಅದರಿಂದ ಹೊರಗೆ ಚೆಂಡನ್ನು ಸ್ವಲ್ಪ ಸ್ವಲ್ಪವಾಗಿ ಮುಂದಕ್ಕೆ ಉರುಳಿಸಿಕೊಂಡು ಹೋಗುತ್ತಿದ್ದುದು ಆಕರ್ಷಕವಾಗಿತ್ತು. ಇದನ್ನು ಅವರು ಮಾತ್ರ ಮಾಡಬಲ್ಲರು," ಎಂದು ಸೋಮಯ್ಯರವರು ಹೇಳಿದ್ದಾರೆ. ಇದರ ಜೊತೆಯಲ್ಲಿ "ಬಹುಶಃ, ಅವರೆಂದು ತರಬೇತಿಗಾಗಿ ಬಯಸಲಿಲ್ಲ, ಏಕೆಂದರೆ ಮುಂಬರುವ ಪೀಳಿಗೆ ಇವರ ಕೌಶಲಗಳನ್ನು ಬಹುಶಃ ಬಳಸುತ್ತಾರೆಂದು ಭಾವಿಸಿದ್ದರು". ಎಂದೂ ಅವರು ತಿಳಿಸುತ್ತಾರೆ.

ದಶಕದ ನಂತರ ಪಿಳ್ಳೈ ಒಬ್ಬ ಅತ್ಯುತ್ತಮ ಆಟಗಾರನಾಗಿ ಹೊರಬಂದಾಗ ಅವರನ್ನು ನೋಡಿದವರು ಸುಧೃಡವಾದ ಸಶಕ್ತ, ಬಳಕುವ ಪ್ರಾಣಿಯನ್ನು ನೋಡಿದಂತೆ ಆಕರ್ಷಿತರಾಗುತ್ತಿದ್ದರು. ಆದರೆ ಇದು ನೀವು ಇದನ್ನು ಮೊದಲೇ ನೋಡಿದ್ದೀರಿ ಎಂಬ ಭಾವನೆಯನ್ನು ಹುಟ್ಟಿಸುತ್ತದೆ. ಖಂಡಿತವಾಗಿ, ಪಿಳ್ಳೈರವರ ಅವೇಶ, ಆವೇಗದ ಆಟದ ಹೊರತಾಗಿ ಅವರನ್ನು ಹೆಚ್ಚಿನ ಕಾಲದ ವರೆಗೆ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡುವುದು ಅವರು ಹೊಂದಿದ್ದ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿನ ಧ್ವನಿ. ಅಲ್ಲದೇ ಅದನ್ನು ಅವರು ಸಮರ್ಪಕವಾಗಿ ಬಳಸಲು ಆಗಾಗ ವ್ಯಾಯಾಮ ಮಾಡುತ್ತಿದ್ದರು. ಕ್ರೀಡೆಯಲ್ಲಿ ವಿಚಿತ್ರವಾದ ಹಾಕಿಯಷ್ಠೇ ನಿರರ್ಗಳವಾಗಿ ತಡೆಯಿಲ್ಲದೆ ಹರಿಯುವಂತಹ ಶಾಹಿದ್ ರ ಧ್ವನಿಯನ್ನು ನಾವೆಂದಿಗೂ ನೆನಪಿಸಿಕೊಳ್ಳುವುದಿಲ್ಲ.

ಪಾಕಿಸ್ತಾನದ ಪ್ರಸಿದ್ಧ ಆಟಗಾರರಾದ ಹಸನ್ ಸರ್ದಾರ್ ರವರು ೧೯೮೬ ಟೆಸ್ಟ್ ಸರಣಿಗಳ ಸಂದರ್ಭದಲ್ಲಿ ಶಾಹಿದ್ ರವರ ಮಾಂತ್ರಿಕತೆ ಅವರನ್ನು ಹೇಗೆ ಕೆರಳುವಂತೆ ಮಾಡಿತು ಎಂಬುದಕ್ಕೆ ಜನಪ್ರಿಯ ಕಥೆಯೇ ಇದೆ. ಈ ಸಂದರ್ಭದಲ್ಲಿ ಆತ ಹಲ್ಲೆಗೆ ಯತ್ನಿಸಿದ್ದ. "ಶಾಹಿದ್,ಸಹಆಟಗಾರ ಸರ್ದಾರ್ ರವರ ಕಾಲುಗಳ ನಡುವೆ ಚೆಂಡನ್ನು ತಳ್ಳಿ, ಅನಂತರ ಅದನ್ನು ಹಿಂದಕ್ಕೆ ಎಳೆದುಕೊಳ್ಳುತ್ತಿದ್ದರು. ಕೇವಲ ತಮಾಷೆಗಾಗಿ. ಅವರು ಹೀಗೆ ಎರಡು ಬಾರಿ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದ ಹಸನ್ ಸರ್ದಾರ್ ರವರು ಶಾಹಿದ್ ರವರನ್ನು ಕುರಿತು ಅವನು ನಮ್ಮ ವಸತಿನಿಲಯದ ಕೊಠಡಿಗೆ ಬರಬೇಕು ಅನಂತರ ವಿಚಾರಿಸಿಕೊಳ್ಳುತ್ತೇನೆ ಎಂದು ಹೇಳಿದ್ದರೆಂದು," ಸೋಮಯ್ಯರವರು ನಗುವಿನೊಂದಿಗೆ ನೆನಪಿಸಿಕೊಳ್ಳುತ್ತಾರೆ. ಈ ಘಟನೆಯನ್ನು ನೆನಪಿಸಿದಾಗ ಶಾಹಿದ್ ಕೂಡ ನಗೆಯುಕ್ಕಿಸುತ್ತಾರೆ. "ಅವರು ಕೆಲವು ನೆನಪಿಸಿಕೊಳ್ಳಬಲ್ಲ ಪ್ರತಿಸ್ಪರ್ಧಿಗಳನ್ನು ಹೊಂದಿದ್ದರು . ಅವರು ಈ ಅತ್ಯಂತ ಆಕರ್ಷಕ,ಸೊಗಸಿನ( ಬಹುತ್ ಖೂಬ್ ಸೂರತ್ ಸಾ) ಆಟಗಾರರಾದ (ಈ ಅತ್ಯಂತ ಸುಂದರನಾದ ಆಟಗಾರ) ಕ್ವಾಸಿಮ್ ಜಿಯಾ ರವರನ್ನು ಹೊಂದಿದ್ದರು. ನಾವು ಅವರನ್ನು ರಿಷಿ ಕಪೂರ್ ಎಂದು ಕರೆಯುತ್ತಿದ್ದೆವು; ಹಾಗು ಹೀಗೆ ಕರೆಯುತ್ತಾ ಅವರನ್ನು ಹೆಚ್ಚು ಸತಾಯಿಸುತ್ತಿದ್ದೆವು.

"ನಮ್ಮ ಆಟವು ಆಗ ಬಹಳಷ್ಟು ಜನರ ಅಭಿಪ್ರಾಯದಂತೆ ಬಹುತೇಕರಿಗೆ ಇಷ್ಟವಾಗುತ್ತಿತ್ತು. ಹಿರಿಯರು,ವೃದ್ಧರು ಬರುತ್ತಿದ್ದರು ಮತ್ತು ನನ್ನ ಕೈಗಳಿಗೆ ಮುತ್ತಿಕ್ಕಬೇಕೆನ್ನುತ್ತಿದ್ದರು," ಎಂದು ಅವರು ಇದ್ದಕ್ಕಿದ್ದಂತೆ ಹೇಳುತ್ತಾರೆ. '" ಆ ಜಾದುವನ್ನು ನಿರ್ಮಿಸಿದ ಕೈಗಳು ಇವೆನಾ?' ಎಂದು ಅವರು ಕೇಳುತ್ತಿದ್ದರು ಮತ್ತು ಅವರ ತುಟಿಗೆ ಒತ್ತಿಕೊಳ್ಳುತ್ತಿದ್ದರು. ಇದು ವಿನೀತನನ್ನಾಗಿಸುವ ಕ್ಷಣವಾಗಿದೆ."

ಶಾಹಿದ್ ಭಾರತದ ಕ್ರೀಡಾ ಸನ್ನಿವೇಶದಲ್ಲಿ ಎಳೆಯ ವಯಸ್ಸಿನ ೧೯ ವರ್ಷದ ಹುಡುಗನಂತೆ, ೧೯೭೯ ರಲ್ಲಿ ಮಲೇಷಿಯಾದಲ್ಲಿ ನಡೆದ ನಾಲ್ಕು-ದೇಶಗಳ ಪಂದ್ಯಾವಳಿಯ ಸಂದರ್ಭದಲ್ಲಿ ಏಕಾಏಕಿ ಕಾಣಿಸಿಕೊಂಡರು. "ಪಾಕಿಸ್ತಾನವು ಎದುರಿಸಲಾಗದ ಅತ್ಯಂತ ದುರ್ಗಮ ತಂಡವನ್ನು ಹೊಂದಿತ್ತು. ಶಾಹಿದ್ ರವರು ಹದಿವರ್ಷದ ಹುಡುಗನಿಗಿಂತ ಸ್ವಲ್ಪ ದೊಡ್ಡವರಾಗಿದ್ದರೂ ಕೂಡ ಅತ್ಯಂತ ದೊಡ್ಡ ಪ್ರಭಾವಿ ಛಾಪು ಮೂಡಿಸಿದರು," ಎಂದು ಬಾಸ್ಕರನ್ ಹೇಳುತ್ತಾರೆ. ಶಾಹಿದ್ ಕೂಡ ಇದನ್ನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತಾರೆ. "ನಾನು ಪಾಕಿಸ್ತಾನದ ಆಟಗಾರರ ಸುತ್ತಲೂ ಸುತ್ತುತ್ತಿರುವಾಗ, ಅಕ್ತರ್ ರಾಸೂಲ್ ಸುರ್ಜೀತ್ ಸಿಂಗ್ ರವರನ್ನು ಕುರಿತು, 'B******* d, ಯೆ ಕಿಸ್ ಕಕ್ರಿ ಕೊ ಪಕಡ್ಕೆ ಲೇ ಆಯಾ ಹೊ...' ಎಂದು ಹೇಳಿದ್ದರೆಂದು" ಅವರು ನಕ್ಕರು.

ಇಂದು ನಿಷ್ಕ್ರಿಯವಾಗುತ್ತಿರುವ, ಹಾಕಿ ಸ್ಟಿಕ್ ಅನ್ನು ಅವರು ದೂರವಿರಿಸಿದ್ದಾರೆ ಹಾಗು ಪಲಾಯನದ ಬಗೆಗೆ ಹೆದರಲು ಕಲಿತಿದ್ದಾರೆ (" ಇನೋವವನ್ನು ಕಳುಹಿಸು ಅಥವಾ ರೈಲು ನಿಲ್ದಾಣದಿಂದ ನನ್ನನ್ನು ಕರೆದುಕೊಂಡು ಹೋಗು, ಆದರೆ ಪಲಾಯನ ಮಾಡು ಎಂದು ಮಾತ್ರ ಹೇಳಬೇಡ. ಅದು ನನಗೆ ಹೆದರಿಕೆ ತರುತ್ತದೆ" ), ಶಾಹಿದ್ ಅವರು ಆಯ್ಕೆ ಮಾಡಿಕೊಂಡ ಜೀವನದ ಬಗ್ಗೆ ಸಂತೋಷದಿದ್ದಾರೆ. ಪ್ರಚಾರದಿಂದ ದೂರವಾಗಿ ಮತ್ತು ಕ್ರೀಡೆಯಿಂದ ದೂರವಾಗಿ ಅನೇಕ ಪ್ರೀತಿಗಳಲ್ಲಿ ಮುಳುಗೆದ್ದು ಮುಂದೆ ಸಾಗಿದ್ದಾರೆ.

ಮೊಹಮ್ಮದ್ ಶಾಹಿದ್, ಎಲ್ಲರನ್ನು ಸ್ನೇಹಿತರೆಂದು ಭಾವಿಸುವ ಬನಾರಸ್ ನ ಕಿರೀಟವಿಲ್ಲದ ರಾಜರಾಗಿದ್ದಾರೆ. ನಿಮ್ಮ ನಗರಕ್ಕೆ ರಾತ್ರಿಯಲ್ಲಿ ಬರುವ ರೈಲುಗಳ ದೀಪವನ್ನು ಆರಿಸಿದ ನಂತರವೂ ಅವರು ನಿಮ್ಮ ಬಗ್ಗೆ ಮಾತನಾಡುತ್ತಿರುತ್ತಾರೆ. "ಅರೇ! ಶಾಹಿದ್ ಜೀ? ಕ್ಯಾ ಕಮಾಲ್ ಕೆ ಡ್ರಿಬ್ಲರ್ ಥೆ..."

ಉಲ್ಲೇಖಗಳು

ಬದಲಾಯಿಸಿ
  1. ಅವರು ಪ್ರಸ್ತುತ ಭಾರತೀಯ ರೈಲ್ವೆ ಇಲಾಖೆಯಲ್ಲಿ ಟಿಟಿಇಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ "Dhillon gets visa power; Vivek assured help-Sports-The Times of India". timesofindia.indiatimes.com. 3 June 2004. Retrieved 2008-03-27.