ಮೇರಿ (ಏರಮ್, ಇವ್ರಿತ್: מרים, ಮರಿಯಮ್ ಮಿರೀಯಮ್ ಅರಬ್ಬೀ:مريم, ಮರ್ಯಮ್), ಇದರ ಅರ್ಥ ಪ್ರಾಯಶಃ 'ಕ್ರಾಂತಿಕಾರಿಣಿ' ಅಥವಾ 'ಧೈರ್ಯವಂತಳು' ಆಗಿರಬಹುದೆಂಬ ಊಹೆಯಿದೆ. ಈಕೆಯ ತಂದೆ ಜೋಕಿಂ ಮತ್ತು ತಾಯಿ ಆನಾ.

ಗಂಡಿನ ಸಂಪರ್ಕವಿಲ್ಲದೇ ಈಕೆ ಯೇಸುಕ್ರಿಸ್ತರಿಗೆ ತಾಯಿಯಾದ ಕಾರಣಕ್ಕೆ ಈಕೆ ಕನ್ಯಾಮೇರಿ' (ವರ್ಜಿನ್ ಮೇರಿ)ಎಂದು ಕರೆಯಲ್ಪಟ್ಟಳು ಹಾಗೂ ದೇವ ಕುಮಾರ ಯೇಸುವಿನ ತಾಯಿಯಾಗಲು ಒಪ್ಪಿದಳಾದ್ದರಿಂದ ಆಕೆಸಂತ ಮೇರಿ ಎಂದು ಕರೆಯಲ್ಪಟ್ಟಳು.ಹೊಸ ಒಡಂಬಡಿಕೆಯಲ್ಲಿ ನಜರತ್‌ನ ಏಸುವಿನ ತಾಯಿಯೆಂದು ಗುರುತಿಸಲಾದ ಗಲಿಲೀಯ ಪ್ರಾಂತ್ಯದಲ್ಲಿನ ನಜರತ್‍ ಎಂಬ ಸುಂದರವಾದ ಊರಿನ ಒಬ್ಬ ಯಹೂದಿ ಮಹಿಳೆಯಾಗಿದ್ದಳು. ಮುಸ್ಲಿಮರು ಕೂಡ ಅವಳನ್ನು ”’ವರ್ಜಿನ್ ಮೇರಿ”’ ಅಥವಾ ನಮ್ಮ ಕನ್ಯಾಮೇರಿ ಎಂಬ ಅರ್ಥನೀಡುವ ಸಯ್ಯೀದಾ ಮರಿಯಮ್ ಎಂದು ಹೇಳುತ್ತಾರೆ. ಇಸ್ಲಾಮ್ ಧರ್ಮದಲ್ಲಿ ಅವಳು ಪ್ರವಾದಿ ಏಸು(ಅರಬ್ಬೀ ಭಾಷೆಯಲ್ಲಿ ಯೇಸುವನ್ನು 'ಈಸಾ' عيسى )ವಿನ ತಾಯಿ.

"https://kn.wikipedia.org/w/index.php?title=ಮೇರಿ&oldid=155786" ಇಂದ ಪಡೆಯಲ್ಪಟ್ಟಿದೆ