ಮೂಡಲ್
ಮೂಡಲ್ (ಮಾಡ್ಯೂಲರ್ ಆಬ್ಜೆಕ್ಟ್-ಓರಿಯೆನ್ಟೆಡ್ ಡೈನಾಮಿಕ್ ಲರ್ನಿಂಗ್ ಎನ್ವಿರಾನ್ಮೆಂಟ್ ನ ಸಂಕ್ಷಿಪ್ತ ರೂಪ) ಎಂಬುದು ಒಂದು ಸ್ವತಂತ್ರ ಹಾಗು ಓಪನ್ ಸೋರ್ಸ್(ಮುಕ್ತ ಆಕರ)ಯ ಇ-ಲರ್ನಿಂಗ್ ಸಾಫ್ಟ್ ವೇರ್ ನ ವೇದಿಕೆಯಾಗಿದೆ. ಇದನ್ನು ಕೋರ್ಸ್ ಮ್ಯಾನೇಜ್ಮೆಂಟ್ ಸಿಸ್ಟಂ, ಲರ್ನಿಂಗ್ ಮ್ಯಾನೇಜ್ಮೆಂಟ್ ಸಿಸ್ಟಂ, ಅಥವಾ ವರ್ಚ್ಯುಯಲ್ ಲರ್ನಿಂಗ್ ಎನ್ವಿರಾನ್ಮೆಂಟ್ (VLE) ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. As of ಜನವರಿ 2010[update]ಇದು 45,721 ನೋಂದಣಿಯಾದ ಹಾಗು ಪರಿಶೀಲನೆಗೊಂಡ ಜಾಲತಾಣಗಳ ಬಳಕೆದಾರ ನೆಲೆಯನ್ನು ಹೊಂದಿದೆ, ಇದು 3 ದಶಲಕ್ಷ ಕೋರ್ಸ್‌ಗಳಲ್ಲಿ 32 ದಶಲಕ್ಷ ಬಳಕೆದಾರರಿಗೆ ಸೇವೆಯನ್ನು ಒದಗಿಸುತ್ತಿದೆ.[೩]
ಚಿತ್ರ:Moodle logo.png | |
ಚಿತ್ರ:Moodle 1.3 sample course screengrab.png | |
ಅಭಿವೃದ್ಧಿಪಡಿಸಿದವರು | Martin Dougiamas |
---|---|
Stable release | 4.5[೧]
/ 7 ಅಕ್ಟೋಬರ್ 2024 |
Repository | |
ಕ್ರಮವಿಧಿಯ ಭಾಷೆ | PHP |
ಕಾರ್ಯಾಚರಣಾ ವ್ಯವಸ್ಥೆ | Cross-platform |
ವಿಧ | Course Management System |
ಪರವಾನಗಿ | GPLv2+[೨] |
ಅಧೀಕೃತ ಜಾಲತಾಣ | moodle.org |
ಮೂಡಲ್ ನ್ನು ಮಾರ್ಟಿನ್ ಡೌಗಿಯಮಾಸ್ ಅಭಿವೃದ್ಧಿಪಡಿಸಿದ್ದಾರೆ. ಇದು ಶಿಕ್ಷಕರು ಆನಲೈನ್ ಕೋರ್ಸ್‌ಗಳನ್ನು ಸೃಷ್ಟಿಸುವುದಕ್ಕೆ ನೆರವಾಗುತ್ತದೆ. ಪರಸ್ಪರ ಸಂಪರ್ಕ ಹೊಂದಿ, ವಿಷಯವನ್ನು ಜತೆಗೂಡಿ ರಚನೆಮಾಡುವುದಕ್ಕೆ ಗಮನವಹಿಸಲಾಗುತ್ತದೆ.
ಮೂಡಲ್ Pty Ltd (ಪರ್ತ್, ವೆಸ್ಟರ್ನ್ ಆಸ್ಟ್ರೇಲಿಯದಲ್ಲಿ ನೆಲೆಗೊಂಡಿದೆ) ಮೂಡಲ್‌ನ ಹೆಚ್ಚಿನ ಅಭಿವೃದ್ಧಿ ಕಾರ್ಯವನ್ನು ನಿರ್ವಹಿಸುತ್ತದೆ. ಮೂಡಲ್‌ನ ಮುಕ್ತ ಬಳಕೆ ಪರವಾನಗಿ ಹಾಗು ಮಾಡ್ಯೂಲ್‌ಗಳ ವಿನ್ಯಾಸವು ಯಾವುದೇ ಒಬ್ಬ ಅಭಿವರ್ಧಕನಿಗೆ ಇನ್ನೂ ಹೆಚ್ಚಿನ ಮಾಡ್ಯೂಲ್‌ಗಳು ಹಾಗು ವೈಶಿಷ್ಟ್ಯತೆಗಳನ್ನು ಸೃಷ್ಟಿಸಲು ಅವಕಾಶ ಮಾಡಿಕೊಡುತ್ತದೆ.
ವೈಶಿಷ್ಟ್ಯಗಳು
ಬದಲಾಯಿಸಿಮೂಡಲ್, ಒಂದು ಇ-ಲರ್ನಿಂಗ್ ವೇದಿಕೆಯ ಹಲವಾರು ವಿಶಿಷ್ಟ ಲಕ್ಷಣಗಳನ್ನು ಹೊಂದಿರುವುದರ ಜೊತೆಗೆ ಕೆಲವು ಮೂಲ ನಾವೀನ್ಯಗಳನ್ನೂ ಒಳಗೊಂಡಿರುತ್ತದೆ(ಅದರ ಶೋಧಕ ವ್ಯವಸ್ಥೆಯ ರೀತಿ). ಮೂಡಲ್, ಒಂದು ಕಲಿಕೆ ನಿರ್ವಹಣಾ ವ್ಯವಸ್ಥೆಗೆ ತುಂಬಾ ಹತ್ತಿರದಲ್ಲಿ ಹೋಲುತ್ತದೆ, ಆದರೆ ಇದು ಹತ್ತು ಹಲವು ಮುಖ್ಯ ವೈಶಿಷ್ಟ್ಯಗಳನ್ನು ಒಳಗೊಂಡಿದೆ[ಸೂಕ್ತ ಉಲ್ಲೇಖನ ಬೇಕು]. ಮೂಡಲ್ ಅನ್ನು ಹಲವು ಮಾದರಿಗಳಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಉದಾಹರಣೆಗೆ ಶಿಕ್ಷಣ, ತರಬೇತಿ ಹಾಗು ಅಭಿವೃದ್ಧಿ, ಹಾಗು ವ್ಯಾಪಾರ ಸ್ಥಾಪನೆ.
ಅಭಿವರ್ಧಕರು ನಿರ್ದಿಷ್ಟವಾದ ಹೊಸ ಪ್ರಯೋಗಗಳಿಗೆ ಪ್ಲಗ್ ಇನ್ ಗಳನ್ನು ಸೃಷ್ಟಿಸುವ ಮೂಲಕ ಮೂಡಲ್ ನ ಮಾಡ್ಯೂಲರ್ ರಚನೆಯನ್ನು ವಿಸ್ತರಿಸಬಹುದು. ಮೂಡಲ್ ನ ಆಧಾರರಚನೆಯು ಹಲವು ವಿಧದ ಪ್ಲಗ್-ಇನ್ ಗಳಿಗೆ ಸಹಾಯಕವಾಗಿದೆ:
- ಕಾರ್ಯಚಟುವಟಿಕೆಗಳು (ವರ್ಡ್ ಹಾಗು ಸಂಖ್ಯಾ ಆಟಗಳನ್ನು ಒಳಗೊಂಡು)
- ಸಂಪನ್ಮೂಲ ಮಾದರಿಗಳು
- ಪ್ರಶ್ನಾ ಮಾದರಿಗಳು (ಆಯ್ಕೆ ಬಾಹುಳ್ಯದ ಪ್ರಶ್ನೆಗಳು, ಸರಿ ಹಾಗು ತಪ್ಪು, ಬಿಟ್ಟ ಪದ ತುಂಬಿರಿ, ಮುಂತಾದವು)
- ಡಾಟಾ ಫೀಲ್ಡ್ ಟೈಪ್ಸ್ (ದತ್ತಾಂಶ ಸಂಗ್ರಹದ ಚಟುವಟಿಕೆಗಾಗಿ)
- ಗ್ರ್ಯಾಫಿಕಲ್ ವಿಷಯಗಳು
- ದೃಢೀಕರಣ ವಿಧಾನಗಳು (ಇದಕ್ಕೆ ಬಳಕೆದಾರನ ಹೆಸರು ಹಾಗು ಪಾಸ್ ವರ್ಡ್(ಸಂಕೇತ ಪದ)ನ ಪ್ರವೇಶ್ಯತೆಯ ಅಗತ್ಯ ಬೀಳಬಹುದು)
- ದಾಖಲಾತಿ ಮಾದರಿಗಳು
- ವಿಷಯಸೂಚಿಯ ಶೋಧಕಗಳು
ಮುಕ್ತವಾಗಿ ದೊರಕುವ ಹಲವು ತೃತೀಯ ಮೂಡಲ್ ಪ್ಲಗ್ ಇನ್ ಗಳು ಈ ಆಧಾರರಚನೆಯನ್ನು ಬಳಕೆ ಮಾಡಿಕೊಳ್ಳುತ್ತವೆ.[೪]
ಮೂಡಲ್ ನ ಬಳಕೆದಾರರು ರಚನೆಗೆ PHP ಯನ್ನು ಬಳಸಿಕೊಂಡು ಹೊಸ ಮಾಡ್ಯೂಲ್ ಗಳಿಗೆ ನೆರವಾಗಬಹುದು. ಮೂಡಲ್ ಮುಕ್ತ ಆಕರ ಪ್ರೋಗ್ರಾಮರ್‌ಗಳ ಕೆಲಸದ ನೆರವಿನೊಂದಿಗೆ ಅಭಿವೃದ್ಧಿಯನ್ನು ಹೊಂದುತ್ತಿದೆ.[೫] ಇದು ಅದರ ಶೀಘ್ರ ಬೆಳವಣಿಗೆ ಹಾಗು ಶೀಘ್ರವಾದ ಬಗ್ ಫಿಕ್ಸಸ್ ಗೆ ನೆರವಾಗುತ್ತದೆ.
ಅಭಾವದ ಕಾರಣದಿಂದಾಗಿ ಮೂಡಲ್ TCPDFಭಂಡಾರವನ್ನು ಒಳಗೊಂಡಿದೆ, ಇದು ಪುಟಗಳಿಂದ PDF ದಾಖಲೆಗಳ ಸೃಷ್ಟಿಗೆ ಅವಕಾಶ ನೀಡುತ್ತದೆ.
ರಚನೆ
ಬದಲಾಯಿಸಿಆಕರದಿಂದ ಬಳಕೆದಾರರು ಮೂಡಲ್‌ನ್ನು ಅಳವಡಿಸಿಕೊಳ್ಳಬಹುದು, ಆದರೆ ಇತರ ಸ್ವಯಂಚಾಲಿತ ಮಾರ್ಗಗಳಿಗಿಂತ ಇದಕ್ಕೆ ಹೆಚ್ಚಿನ ತಾಂತ್ರಿಕ ಕುಶಲತೆಯ ಅಗತ್ಯವಿರುತ್ತದೆ ಉದಾಹರಣೆಗೆ ಒಂದು ಡೇಬಿಯನ್ ಪ್ಯಾಕೇಜ್‌ನಿಂದ ಅಳವಡಿಸುವುದು, ಬಳಕೆಗೆ ಸಿದ್ಧವಾದ ಟರ್ನ್‌ಕೀ ಮೂಡಲ್ ಸಾಧನ ನಿಯೋಜಿಸುವುದಜು[೬] ಅಥವಾ ಬಿಟ್ನಾಮಿ ಅಳವಡಿಕೆಯನ್ನು ಬಳಸುವುದು.
ಮೂಡಲ್ ಸೇವೆಯನ್ನು ಮುಕ್ತವಾಗಿ ಒದಗಿಸುವ ಕೆಲವು ಸರಬರಾಜುದಾರರು, ಶಿಕ್ಷಕರಿಗೆ ಅದರ ಅಳವಡಿಕೆಯಿಲ್ಲದೆ ಅಥವಾ ಸರ್ವರ್ ನ ಬಗ್ಗೆ ಮಾಹಿತಿಯಿಲ್ಲದೆಯೂ ಸಹ ಮೂಡಲ್-ಆಧಾರಿತ ಆನ್ಲೈನ್ ತರಗತಿಗಳನ್ನು ರೂಪಿಸಲು ಅವಕಾಶ ಮಾಡಿಕೊಡುತ್ತಾರೆ. ಹಣ ಪಡೆದು ಮೂಡಲ್ ಸೇವೆಯನ್ನು ಒದಗಿಸುವ ಕೆಲವು ಪ್ರೌವೈಡರ್‌ಗಳು ಮೌಲ್ಯವರ್ಧಿತ ಸೇವೆಗಳಾದ ಗ್ರಾಹನ ಆದೇಶಾನುಸಾರವಾಗಿ ಪಠ್ಯಕ್ರಮದ ತಯಾರಿಕೆ ಹಾಗು ವಿಷಯಸೂಚಿಯ ಅಭಿವೃದ್ಧಿಯಂತಹ ಸೇವೆಯನ್ನೂ ಸಹ ಒದಗಿಸುತ್ತಾರೆ.
ಪರಸ್ಪರ-ಕಾರ್ಯಾಚರಣೆಯ ಸಾಧ್ಯತೆಗಳು
ಬದಲಾಯಿಸಿಮೂಡಲ್, ಯೂನಿಕ್ಸ್, ಲಿನಕ್ಸ್, FreeBSD, ವಿಂಡೊಸ್, Mac OS X,NetWare ಹಾಗು ಬಹುತೇಕ ವೆಬ್‌ಹಾಸ್ಟ್ ಸೇವೆನೀಡುವವರು ಸೇರಿದಂತೆ PHPಮತ್ತು ಡಾಟಾಬೇಸ್‌ಗೆ ಬೆಂಬಲಿಸುವ ಇತರೆ ಸಿಸ್ಟಮ್‌ಗಳಲ್ಲಿ ಬದಲಾವಣೆಯಿಲ್ಲದೇ ಕಾರ್ಯನಿರ್ವಹಿಸುತ್ತದೆ.
ದತ್ತಾಂಶವು ಒಂದು ಒಂಟಿಯಾದ ದತ್ತಾಂಶ ಸಂಗ್ರಹದಲ್ಲಿ ಒಳಗೊಂಡಿರುತ್ತದೆ. ಮೂಡಲ್ 1.6ರ ಆವೃತ್ತಿವು MySQL ಅಥವಾ PostgreSQLನ್ನು ಬಳಕೆ ಮಾಡಬಹುದು. ನವೆಂಬರ್ 2006ರಲ್ಲಿ ಬಿಡುಗಡೆಯಾದ 1.7ರ ಆವೃತ್ತಿವು ಬೇರ್ಪಟ್ಟ ದತ್ತಾಂಶ ಸಂಗ್ರಹದ ಸಂಪೂರ್ಣ ಬಳಕೆಯನ್ನು ಮಾಡಿಕೊಳ್ಳುತ್ತದೆ, ಇದರ ಪರಿಣಾಮವಾಗಿ ಅಳವಡಿಕೆ ಮಾಡಿಕೊಂಡವರು ಹಲವು ವಿಧದ ದತ್ತಾಂಶ ಸಂಗ್ರಹದ ಸರ್ವರ್‌ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು ಉದಾಹರಣೆಗೆ ಒರಾಕಲ್ ಹಾಗು ಮೈಕ್ರೋಸಾಫ್ಟ್ SQL ಸರ್ವರ್.
ಇ-ಲರ್ನಿಂಗ್ ವ್ಯವಸ್ಥೆಗಳು ಪರಸ್ಪರ ಕಾರ್ಯಾಚರಣೆಯ ಹಲವು ಆಯಾಮಗಳನ್ನು ಹೊಂದಿರಬಹುದು. ಮೂಡಲ್ ನ ಪರಸ್ಪರ ಕಾರ್ಯಾಚರಣೆಯ ವೈಶಿಷ್ಟ್ಯಗಳಲ್ಲಿ ಈ ಕೆಳಕಂಡ ಅಂಶಗಳು ಒಳಗೊಂಡಿವೆ:
- LDAP, ಶಿಬ್ಬೋಲೆಥ್, ಅಥವಾ ಇತರ ಹಲವು ಪ್ರಮಾಣಕ ಮಾದರಿಗಳನ್ನು(ಉದಾಹರಣೆಗೆ IMAP) ಬಳಕೆ ಮಾಡಿಕೊಂಡ ದೃಢೀಕರಣ,
- ಇತರ ಪ್ರಮಾಣಕ ವಿಧಾನಗಳಲ್ಲಿ IMS ಎಂಟರ್ಪ್ರೈಸ್ ಅಥವಾ ಒಂದು ಬಾಹ್ಯ ದತ್ತಾಂಶ ಸಂಗ್ರಹದೊಂದಿಗಿನ ನೇರವಾದ ಪಾರಸ್ಪರಿಕ ಕ್ರಿಯೆಯನ್ನು ಬಳಕೆ ಮಾಡಿಕೊಂಡ ನೋಂದಣಿ
- ಕ್ವಿಸ್ ಗಳು ಹಾಗು ಕ್ವಿಸ್ ನ ಪ್ರಶ್ನೆಗಳು, ಹಲವು ರೂಪಗಳಲ್ಲಿ ಆಯಾತ/ನಿರ್ಯಾತಕ್ಕೆ ಅವಕಾಶ ನೀಡುವುದು: GIFT(ಮೂಡಲ್‌ನ ಸ್ವ ರೂಪ), IMS QTI, XML ಹಾಗು XHTML(NB ಆದಾಗ್ಯೂ ನಿರ್ಯಾತವು ಉತ್ತಮವಾಗಿ ಕಾರ್ಯ ನಿರ್ವಹಿಸಿದರೆ, ಪ್ರಸಕ್ತ ಆಯಾತವು ಸಂಪೂರ್ಣಗೊಂಡಿಲ್ಲ) ಮೂಡಲ್ ಹಲವಾರು ಮಾದರಿಯ ಪ್ರಶ್ನೆಗಳನ್ನು ಒದಗಿಸುತ್ತದೆ - ಲೆಕ್ಕಹಾಕಿದ, ವಿವರಣೆ, ಪ್ರಬಂಧ, ಹೊಂದಿಸಿ ಬರೆಯುವುದು, ಸೇರಿಸಿದ ಉತ್ತರಗಳು, ಬಹು ಆಯ್ಕೆ, ಕಿರು ಉತ್ತರ, ಸಂಖ್ಯಾತ್ಮಕ, ರಾಂಡಮ್ ಕಿರು-ಉತ್ತರ ಹೊಂದಿಸುವುದು, ಸರಿ/ತಪ್ಪು.
- IMS ಕಂಟೆಂಟ್ ಪ್ಯಾಕೇಜಿಂಗ್, SCORM, AICC (CBT), LAMSನ್ನು ಬಳಕೆ ಮಾಡಿಕೊಂಡ ಸಂಪನ್ಮೂಲಗಳು
- ಇತರ ವಿಷಯಸೂಚಿ ನಿರ್ವಹಣಾ ವ್ಯವಸ್ಥೆಗಳ ಜೊತೆ ಸಮಗ್ರೀಕರಣ ಉದಾಹರಣೆಗೆ ಪೋಸ್ಟ್‌ನ್ಯೂಕ್(ತೃತೀಯ ವಿಸ್ತರಣೆಗಳ ಮೂಲಕ)
RSS ಅಥವಾ ಆಟಂ ನ್ಯೂಸ್ ಫೀಡ್ ಗಳನ್ನು ಬಳಕೆ ಮಾಡಿಕೊಂಡು ಲೇಖನ ಪ್ರಕಟಿಸುವುದು - ಬಾಹ್ಯ ನ್ಯೂಸ್ ಫೀಡ್ ಗಳನ್ನು ಒಂದು ಕೋರ್ಸ್‌ನಲ್ಲಿ ಪ್ರದರ್ಶಿಸಬಹುದು, ಹಾಗು ಚರ್ಚೆಗಳು, ಬ್ಲಾಗ್ ಗಳು ಹಾಗು ಇತರ ವಿಶೇಷತೆಗಳನ್ನು ಬೇರೆಯವರಿಗೆ ನ್ಯೂಸ್ ಫೀಡ್‌ಗಳ ರೂಪದಲ್ಲಿ ದೊರಕಿಸಿ ಕೊಡಬಹುದು.
ಮೂಡಲ್ ಇತರ ನಿರ್ದಿಷ್ಟ ವ್ಯವಸ್ಥೆಗಳೊಂದಿಗೆ ಬಳಕೆಯಾಗಲು ಸೂಚನಾ ವಿಶೇಷತೆಗಳನ್ನು ಸಹ ಹೊಂದಿದೆ, ಉದಾಹರಣೆಗೆ ಕ್ವಿಸ್ ಗಳು ಹಾಗು ಸಂಪೂರ್ಣ ಕೋರ್ಸ್‌ಗಳನ್ನು ಬ್ಲಾಕ್ ಬೋರ್ಡ್ ಅಥವಾ WebCTಯಿಂದ ಆಮದು ಮಾಡಿಕೊಳ್ಳಬಹುದು. ಆದಾಗ್ಯೂ ಆಮದು ಮಾಡಿಕೊಂಡ ಈ ಸಾಧನಗಳು ನಿಖರತೆಯನ್ನು ಹೊಂದಿರುವುದಿಲ್ಲ. ಅದರ ಬರವಣಿಗೆ ಸಂದರ್ಭದಲ್ಲಿ(ಫೆಬ್ರವರಿ 2010), ಮೂಡಲ್, php ಕೋಡ್-ಬಿಡುಗಡೆಗಳಲ್ಲಿ ಆದ ಕೆಲವು ಬದಲಾವಣೆಯ ಕಾರಣದಿಂದ ಬ್ಲಾಕ್ ಬೋರ್ಡ್ ಅನುಕ್ರಮವನ್ನು ಆಮದು ಮಾಡುವುದಿಲ್ಲ.
ಹಿನ್ನೆಲೆ
ಬದಲಾಯಿಸಿಮೂಲಗಳು
ಬದಲಾಯಿಸಿಆಸ್ಟ್ರೇಲಿಯದ ಕರ್ಟಿನ್ ವಿಶ್ವವಿದ್ಯಾಲಯದ ಒಬ್ಬ WebCT ಕಾರ್ಯನಿರ್ವಾಹಕರಾಗಿದ್ದ ಮಾರ್ಟಿನ್ ದೌಗಿಯಮಾಸ್, ಕಂಪ್ಯೂಟರ್ ವಿಜ್ಞಾನ ಹಾಗು ಶಿಕ್ಷಣದಲ್ಲಿ ಪದವಿ ಗಳಿಸಿದ್ದರು. ಇವರು ಮೂಡಲ್ ನ ಮೊದಲ ಆವೃತ್ತಿವನ್ನು ರಚಿಸಿದರು; ಟಾಡ್ ಬಲ್ಲಬನ್ ಹಾಗು ಅಲೆಕ್ಸ್ ಟ್ರಿವಾಸ್ ರ ಜಂಟಿ ಪ್ರಯತ್ನದಿಂದಾಗಿ ಈ ವ್ಯವಸ್ಥೆಯು ಜನಪ್ರಿಯತೆಯನ್ನು ಗಳಿಸಿತು. ದೌಗಿಯಮಾಸ್ "ಚಿಂತನಾಶೀಲ ವಿಚಾರಣೆಯನ್ನು ಒಳಗೊಂಡ ಅಂತರಜಾಲ ಆಧಾರಿತ ಸಮುದಾಯಗಳ ಒಳಗೆ ಕಲಿಕೆಯನ್ನು ಪ್ರಾರಂಭಿಸುವುದಕ್ಕಾಗಿ ಒಬ್ಬ ಸಾಮಾಜಿಕ ರಚನೆಕಾರನ ಶಿಕ್ಷಣದ ಬಗೆಗಿನ ಜ್ಞಾನ ಮೀಮಾಂಸೆಗೆ ಸಹಾಯಕವಾಗುವ ಓಪನ್ ಸೋರ್ಸ್ ಸಾಫ್ಟ್ ವೇರ್ ನ ಬಳಕೆ" ಯನ್ನು ಪರೀಕ್ಷಿಸುವುದಕ್ಕಾಗಿ Ph.Dಯನ್ನು ಆರಂಭಿಸಿದರು.
ಆದಾಗ್ಯೂ ನಿಖರವಾಗಿ ಸಾಮಾಜಿಕ ರಾಚನಿಕಾ ವಾದವು ಮೂಡಲ್ ನ್ನು ಇತರ ಇ-ಲರ್ನಿಂಗ್ ವೇದಿಕೆಗಳಿಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ತೋರಿಸುವುದು ಬಹಳ ಕಷ್ಟ, ಮೂಡಲ್ ನ್ನು ಅಳವಡಿಸಿಕೊಂಡವರು ಇದನ್ನು ಒಂದು ಅತಿ ಮುಖ್ಯ ಅಂಶವೆಂದಷ್ಟೇ ಉಲ್ಲೇಖಿಸಿದ್ದಾರೆ[೭][೮]. ಮೂಡಲ್‌ನ ಸೇವೆಯನ್ನು ಪಡೆದುಕೊಳ್ಳುವ ಇತರರು, ಉದಾಹರಣೆಗೆ UK ಯ ಮುಕ್ತ ವಿಶ್ವವಿದ್ಯಾಲಯವು, ಕಲಿಕೆ ನಿರ್ವಹಣಾ ವ್ಯವಸ್ಥೆಗಳನ್ನು "ಸಂಬಂಧಿತ ತಟಸ್ಥ ಶಿಕ್ಷಣಶಾಸ್ತ್ರ"ಕ್ಕೆ ಸಮಾನವಾಗಿ ಕಾಣಬಹುದು ಎಂದು ವಿವರ ನೀಡಿದೆ[೯].
ಸಾಫ್ಟ್ ವೇರ್ ನ ವಿಕಿ ಭಾಗವು ErfurtWikiಯಿಂದ ಕವಲೊಡೆದಿದೆ[by whom?].[೧೦]
ಶೈಕ್ಷಣಿಕ ಮಾರ್ಗ
ಬದಲಾಯಿಸಿಮೂಡಲ್ ನ ನಿರ್ಧಾರಿತ ತತ್ವವು[೧೧] ಒಂದು ರಾಚನಿಕವಾದಿ ಹಾಗು ಶಿಕ್ಷಣಕ್ಕೆಸಾಮಾಜಿಕ ರಚನೆಯ ಮಾರ್ಗವನ್ನು ಒಳಗೊಂಡಿರುತ್ತದೆ. ಇದು ಕಲಿಕೆದಾರರು(ಕೇವಲ ಶಿಕ್ಷಕರು ಮಾತ್ರವಲ್ಲದೆ) ಸಹ ಶೈಕ್ಷಣಿಕ ಅನುಭವಕ್ಕೆ ನೆರವಾಗಬಹುದೆಂಬುದನ್ನು ಸ್ಪಷ್ಟಪಡಿಸುತ್ತದೆ. ಆದಾಗ್ಯೂ, ಮೂಡಲ್ ನ್ನು ಸಕೈ ಅಥವಾ ಬ್ಲಾಕ್ ಬೋರ್ಡ್ನಂತ ಇತರ ಕಲಿಕೆ ನಿರ್ವಹಣಾ ವ್ಯವಸ್ಥೆಗಳ ಜೊತೆಗೆ ಹೋಲಿಸುವ ಯಾವುದೇ ಸಮಾನವಾದ ವಿಮರ್ಶಾ ಅಧ್ಯಯನಗಳಿಲ್ಲ, ಉದಾಹರಣೆಗೆ ಮೂಡಲ್ ಇತರ ಯಾವುದೇ ಒಂದು ವ್ಯವಸ್ಥೆಗಳಿಗಿಂತ ಒಂದು ಹೆಚ್ಚಿನ ರಾಚನಿಕಾವಾದಿ ಪರಿಸರವನ್ನು ಒದಗಿಸುತ್ತದೆಂದು ಕಂಡುಹಿಡಿದಿವೆ.[ಸೂಕ್ತ ಉಲ್ಲೇಖನ ಬೇಕು] ಅಲ್ಲದೆ, ಮೂಡಲ್ ಹಾಗು ಇತರ ಸಮಾನಾಂತರ ವ್ಯವಸ್ಥೆಗಳ ವೈಶಿಷ್ಟ್ಯತೆಗಳ ಒಂದು ಹೋಲಿಕೆಯಲ್ಲಿ, ಮೂಡಲ್ ಇತರ ಮುಕ್ತ ಆಕರ ಅಥವಾ ವಾಣಿಜ್ಯ ಕಲಿಕಾ ನಿರ್ವಹಣಾ ವ್ಯವಸ್ಥೆಗಳಿಗಿಂತ ಭಿನ್ನವಾದ ಮುಖ್ಯವಾಗಿ ವಿವಿಧ ಸಾಧನಗಳು ಅಥವಾ ಕ್ರಿಯೆಗಳನ್ನು ಒದಗಿಸುವುದಿಲ್ಲ ಎಂಬುದನ್ನು ತೋರಿಸುತ್ತವೆ.[ಸೂಕ್ತ ಉಲ್ಲೇಖನ ಬೇಕು]
ಮೂಡಲ್ ಗೆ ಒಂದು ರಾಚನಿಕಾವಾದಿ ಶೈಕ್ಷಣಿಕ ಸಾಧನದ ಅಗತ್ಯವಿರುವುದಿಲ್ಲ. ರಾಚನಿಕವಾದವನ್ನು ಕೆಲವು ಬಾರಿ ಶಿಕ್ಷಣದ ಬಗ್ಗೆ ಜವಾಬ್ದಾರಿ ಕೇಂದ್ರಿತ ಕಲ್ಪನೆಗಳ ಅಧಿಕ ಸಂಭಾವ್ಯತೆಯೆಂದು ಕಾಣಲಾಗುತ್ತದೆ.ಯುನೈಟೆಡ್ ಸ್ಟೇಟ್ಸ್[ಸೂಕ್ತ ಉಲ್ಲೇಖನ ಬೇಕು]ನಲ್ಲಿರುವ ನೋ ಚೈಲ್ಡ್ ಲೆಫ್ಟ್ ಬಿಹೈಂಡ್ ಆಕ್ಟ್ (NCLB). ಜವಾಬ್ದಾರಿಯು ಪರೀಕ್ಷಿಸಿದ ಫಲಿತಾಂಶಗಳಿಗೆ ಹೆಚ್ಚು ಒತ್ತುನೀಡುತ್ತದೆ. ಕಲಿಕಾ ಕುಶಲತೆಯಾಗಲಿ, ಶೈಕ್ಷಣಿಕ ಮೌಲ್ಯವಾಗಲಿ, ಅಥವಾ ಶಿಕ್ಷಣಶಾಸ್ತ್ರವಾಗಲಿ ಅಲ್ಲ. ಮೂಡಲ್ ಫಲಿತಾಂಶ ಆಧಾರಿತ ಕಲಿಕೆಯ ಪರಿಸರಕ್ಕೆ ಬೆಂಬಲ ನೀಡುತ್ತದೆ. [ಸೂಕ್ತ ಉಲ್ಲೇಖನ ಬೇಕು]
ಹೆಸರಿನ ಮೂಲ
ಬದಲಾಯಿಸಿಮೂಡಲ್ ನ ಪ್ರಥಮಾಕ್ಷರವು ಮಾಡ್ಯೂಲರ್ ಆಬ್ಜೆಕ್ಟ್-ಓರಿಯೆನ್ಟೆಡ್ ಡೈನಾಮಿಕ್ ಲರ್ನಿಂಗ್ ಎನ್ವಿರಾನ್ಮೆಂಟ್ ಎಂಬುದಕ್ಕೆ ಸೂಚಿತವಾಗಿದೆ, ಆದಾಗ್ಯೂ, ಮೂಲವಾಗಿ "M" ಅಕ್ಷರವು "ಮಾರ್ಟಿನ್'ಸ್" ಗೆ ಸೂಚಿತವಾಗಿತ್ತು. ಇದು ಮೂಡಲ್ ನ ಮೂಲ ಅಭಿವರ್ಧಕರಾದ ಮಾರ್ಟಿನ್ ದೌಗಿಯಮಾಸ್ ರ ಹೆಸರಿನಲ್ಲಿದೆ.[೧೨]
"ಮೂಡಲ್" ಎಂಬ ಪದವು ಒಂದು ಕ್ರಿಯಾಪದವಾಗಿ ಸಹ ಬಳಕೆಯಾಗುತ್ತದೆ. ಇದು ನಮಗೆ ಮಾಡಬೇಕೆನಿಸುವ ಕೆಲಸಗಳ ಸಾಮಯಿಕ ಕಲ್ಪನಾ ಪ್ರಕ್ರಿಯೆಯನ್ನು ವಿವರಿಸುತ್ತದೆ, ಸಾಮಾನ್ಯವಾಗಿ ಒಳನೋಟ ಹಾಗು ಸೃಜನಶೀಲತೆಗೆ ಎಡೆ ಮಾಡಿಕೊಡುವ ಒಂದು ಸಂತೋಷಕರವಾದ ಕೆಲಸ. ಮೇಲೆ ಹೇಳಲಾದಂತೆ,ಮೂಡಲ್ ಅಭಿವೃದ್ಧಿಯ ಎರಡೂ ವಿಧದಲ್ಲಿ ಇದು ಅನ್ವಯವಾಗುತ್ತದೆ. ಜೊತೆಗೆ ಒಂದು ಆನ್ಲೈನ್ ಪಠ್ಯಾನುಕ್ರಮವನ್ನು ಅಧ್ಯಯನ ಮಾಡಲು ಅಥವಾ ಬೋಧನೆಮಾಡಲು ಒಬ್ಬ ವಿದ್ಯಾರ್ಥಿ ಅಥವಾ ಶಿಕ್ಷಕ ಹಿಡಿಯುವ ಮಾರ್ಗಕ್ಕೂ ಇದು ಅನ್ವಯವಾಗುತ್ತದೆ.
"ಮೂಡಲ್" ಒಂದು ರಕ್ಷಿತ [by whom?] ವ್ಯಾಪಾರ ಮುದ್ರೆಯನ್ನು ಹೊಂದಿದೆ. ಕೇವಲ ಮೂಡಲ್ ನ ಪಾಲುದಾರರು ಮಾತ್ರ ವ್ಯಾಪಾರಮುದ್ರೆಯನ್ನು ಬಳಸುವ ಹಕ್ಕನ್ನು ಹೊಂದಿರುತ್ತಾರೆ. ಇವರು ತಮ್ಮ ಸೇವೆಗಳಾದ ಮೂಡಲ್ ಹಾಸ್ಟಿಂಗ್, ಮೂಡಲ್ ಕಸ್ಟಮೈಸೇಷನ್ ಮುಂತಾದವುಗಳ ಸೇವೆಗಳನ್ನು ನೀಡುವುದಕ್ಕೆ ಬಳಸಬಹುದು.
ಮೂಡಲ್ ನ ಅಂಕಿಅಂಶಗಳು ಹಾಗು ಮಾರುಕಟ್ಟೆ ಅಂಶ
ಬದಲಾಯಿಸಿ- ಕಳೆದ ಜನವರಿ 2010ರ ಹೊತ್ತಿಗೆ, ಮೂಡಲ್ 75ಕ್ಕೂ ಹೆಚ್ಚಿನ ಭಾಷೆಗಳಲ್ಲಿ ಬೋಧನಾ ವ್ಯವಸ್ಥೆಯೊಂದಿಗೆ 209 ರಾಷ್ಟ್ರಗಳಲ್ಲಿ 3,161,291 ವಿವಿಧ ಕೊರ್ಸ್‌ಗಳಿಗೆ 32,464,992 ಬಳಕೆದಾರರೊಂದಿಗೆ 46,624 ನೋಂದಾಯಿತ ಜಾಲತಾಣಗಳ ಬಳಕೆದಾರ ನೆಲೆಯನ್ನು ಹೊಂದಿತ್ತು.[೧೩]
- ಹೆಚ್ಚಿನ ಬಳಕೆದಾರರನ್ನು ಹೊಂದಿರುವ moodle.org ಜಾಲತಾಣವು 63 ಕೋರ್ಸ್‌ಗಳನ್ನು ಹಾಗು 838,109 ಬಳಕೆದಾರರನ್ನು ಹೊಂದಿದೆ. ಕಳೆದ 2005ರಲ್ಲಿ, £5 ದಶಲಕ್ಷ ಹಣ ಹೂಡಿಕೆಯ ಹಿನ್ನೆಲೆಯಲ್ಲಿ, UKಯ ದಿ ಓಪನ್ ಯುನಿವರ್ಸಿಟಿಯು 607,536 ಬಳಕೆದಾರರು ಹಾಗು 4,731 ಕೋರ್ಸ್‌ಗಳೊಂದಿಗೆ ಬಳಕೆದಾರರನ್ನು ಆಧರಿಸಿದ ಎರಡನೇ ಅತ್ಯಂತ ದೊಡ್ಡ ಮೂಡಲ್ ನಿಯೋಜನೆಯಾಗಿದೆ. ಮೇಲೆ ನೀಡಲಾಗಿರುವ ಅಗ್ರ ಹತ್ತು ಮೂಡಲ್ ಜಾಲತಾಣಗಳ(ಕೋರ್ಸ್‌ಗಳನ್ನು ಹಾಗು ಬಳಕೆದಾರರನ್ನು ಆಧರಿಸಿ) ಒಂದು ವ್ಯಾಪಕ ಪಟ್ಟಿಯನ್ನು moodle.org ನಲ್ಲಿ ನಿರ್ವಹಿಸಲಾಗಿದೆ.[೧೪]
- ಬರ್ಮಿಂಗ್ಹ್ಯಾಮ್ ಸಿಟಿ ಯುನಿವರ್ಸಿಟಿಯು 2004ರಿಂದ ಮೂಡಲ್ ನ್ನು ಒಂದು ವಿಶ್ವವಿದ್ಯಾಲಯ ವ್ಯಾಪಿ VLE ಯಾಗಿ ಬಳಕೆ ಮಾಡುತ್ತಿದೆ. ಅಬರ್ಡೀನ್ ನ ರಾಬರ್ಟ್ ಗೊರ್ಡನ್ ಯುನಿವರ್ಸಿಟಿಯು ಕಳೆದ 2007ರಲ್ಲಿ 12,790 ಮಂದಿ ವಿದ್ಯಾರ್ಥಿ ಸಮುದಾಯಕ್ಕೆ ಎಲ್ಲ ಬೋಧನಾ ಕಾರ್ಯಕ್ರಮಗಳಿಗೆ ಮೂಡಲ್‌ನ್ನು ಬಳಕೆ ಅಳವಡಿಸಿಕೊಂಡಿತು.[೧೫] ಇದನ್ನು ಇತ್ತೀಚಿಗೆ ಯುನಿವರ್ಸಿಟಿ ಆಫ್ ಕೆಂಟ್[೧೬] ತನ್ನ ಸಂಪೂರ್ಣ ಕ್ಯಾಂಪಸ್‌ಗೆ ಅಳವಡಿಸಿಕೊಳ್ಳುವುದರ ಜೊತೆಗೆ WebCTಯ ಸ್ಥಾನವನ್ನು ಆಕ್ರಮಿಸಿಕೊಂಡಿತು.
- ಅರ್ಜೆಂಟೈನಾದಲ್ಲಿ, ಇದನ್ನು ಯುನಿವರ್ಸಿದದ್ ಡೆ ಸ್ಯಾನ್ ಆಂಡ್ರೆಸ್ ಬಳಕೆ ಮಾಡುತ್ತದೆ.
- ಕಿಂಗ್ಡಮ್ ಆಫ್ ಸೌದಿ ಅರೇಬಿಯದಲ್ಲಿ, ಉಮ್ಮ್ ಅಲ್ ಕುರ [೧] Archived 2019-05-25 ವೇಬ್ಯಾಕ್ ಮೆಷಿನ್ ನಲ್ಲಿ. ವಿಶ್ವವಿದ್ಯಾಲಯದ ಆಂಗ್ಲ ವಿಭಾಗವು 2003ರಲ್ಲಿ Dr. ಅಲಿ ಅಬುರೀಶ್ ರ ಪ್ರೊಪ್ರೈಅಟರಿ ಮೂಡಲ್ [೨] Archived 2010-10-06 ವೇಬ್ಯಾಕ್ ಮೆಷಿನ್ ನಲ್ಲಿ. makkahelearning.netನ್ನು ಬಳಕೆ ಮಾಡಲು ಪ್ರಾರಂಭಿಸಿತು.
ತಂತ್ರಾಂಶ ಅಭಿವೃದ್ಧಿ
ಬದಲಾಯಿಸಿಮೂಡಲ್ ನ 1999ರಿಂದಲೂ ಕ್ರಮವಾಗಿ ಬೆಳೆಯುತ್ತಾ ಬಂದಿದೆ (2001ರಿಂದ ಪ್ರಸಕ್ತ ವಿನ್ಯಾಸದವರೆಗೆ). 1.9.8 current[update]ನ ಆವೃತ್ತಿ, ಇದನ್ನು ಮಾರ್ಚ್ 2010ರಲ್ಲಿ ಬಿಡುಗಡೆ ಮಾಡಲಾಯಿತು. ಇದು 82 ವಿವಿಧ ಭಾಷೆಗಳಿಗೆ ಅನುವಾದಗೊಂಡಿದೆ. ಅದರ ಸುಲಭ ಗಮ್ಯತೆ ಹಾಗು ಪ್ರದರ್ಶನ ನಮ್ಯತೆಯಲ್ಲಿ ಪ್ರಮುಖ ಸುಧಾರಣೆಗಳನ್ನು 1.5ರ ಆವೃತ್ತಿಲ್ಲಿ ಅಭಿವೃದ್ಧಿಪಡಿಸಲಾಗಿದೆ. ಪ್ರಸಕ್ತ, ಮೂಡಲ್ ನ 2.0ರ ಆವೃತ್ತಿ ಬಿಡುಗಡೆಗೆ ಕಾರ್ಯಗಳು ಜಾರಿಯಲ್ಲಿದೆ.
ಪರವಾನಗಿ ಶುಲ್ಕಗಳನ್ನು ಪಾವತಿ ಮಾಡುವ ಅಗತ್ಯವಿಲ್ಲದೇ ಅಥವಾ ಬೆಳವಣಿಗೆಯನ್ನು ಸೀಮಿತಗೊಳಿಸದೇ,ಸಂಸ್ಥೆಯು ಎಷ್ಟು ಬೇಕಾದರೂ ಮೂಡಲ್ ಸರ್ವರ್‌ಗಳನ್ನು ಸೇರಿಸಬಹುದು. UKಯ ಓಪನ್ ಯುನಿವರ್ಸಿಟಿಯು ಪ್ರಸಕ್ತ 200,000 ಬಳಕೆದಾರರಿಗೆ ಒಂದು ಮೂಡಲ್ ಅಳವಡಿಕೆಯನ್ನು ರಚನೆ ಮಾಡುತ್ತಿದೆ.[೧೭] ಮಿತಿಯಿಲ್ಲದ ವೈಶಿಷ್ಟ್ಯದ ಬಳಕೆಯು ಶಿಕ್ಷಣ ಸಂಸ್ಥೆಗಳ ಪ್ರತ್ಯೇಕ ವಿಭಾಗಗಳಿಗೆ ಸಾಮಾನ್ಯವಾಗಿ ತಿಳಿದಿರುತ್ತದೆ. ಉದಾಹರಣೆಗೆ ಯುನಿವರ್ಸಿಟಿ ಆಫ್ ಯಾರ್ಕ್ನ ಗಣಿತ ವಿಭಾಗ.
ಮೂಡಲ್‌ನ ಅಭಿವೃದ್ಧಿಯು ಪ್ರೋಗ್ರಾಮರ್‌ಗಳ ಒಂದು ತಂಡ ಹಾಗು ಒಂದು ಅಂತಾರಾಷ್ಟ್ರೀಯ ಬಳಕೆದಾರರ ಸಮುದಾಯದಿಂದ ಬೆಂಬಲಿತವಾದ ಒಂದು ಮುಕ್ತ ಸಾಫ್ಟ್‌ವೇರ್ ಯೋಜನೆಯಾಗಿ ಮುಂದುವರಿಯುತ್ತದೆ. ಇದು ಆನ್ಲೈನ್ ಮೂಡಲ್ ಕಮ್ಯೂನಿಟಿ ಅಂತರಜಾಲಕ್ಕೆ ಕಳಿಸಲಾದ ಲೇಖನಗಳ ಮೂಲಕ ಚರ್ಚೆಗಳಿಗೆ ಪ್ರೋತ್ಸಾಹಿಸುವುದರ ಜೊತೆಗೆ ವಿಮರ್ಶೆಗಳನ್ನು ಆಹ್ವಾನಿಸುತ್ತದೆ.
GNU ಜನರಲ್ ಪಬ್ಲಿಕ್ ಲೈಸೆನ್ಸ್ನ ಆವೃತ್ತಿ 2 ಅಥವಾ ನಂತರದ ಯಾವುದೇ ಆವೃತ್ತಿಗೆ ಬಳಕೆದಾರರು ಸಾಫ್ಟ್ ವೇರ್‌ನ್ನು ಮುಕ್ತವಾಗಿ ಹಂಚುವುದರ ಜೊತೆಗೆ ಮಾರ್ಪಾಡು ಮಾಡಬಹುದು.[೨]
ಸದೃಶ ವೇದಿಕೆಗಳು
ಬದಲಾಯಿಸಿಇವನ್ನೂ ನೋಡಿ
ಬದಲಾಯಿಸಿ- ಕಲಿಕೆ ನಿರ್ವಹಣಾ ವ್ಯವಸ್ಥೆ
- ಆನ್ಲೈನ್ ಕಲಿಕಾ ಸಮುದಾಯ
- ಮೂಡಲ್ on WikEd Archived 2010-07-13 ವೇಬ್ಯಾಕ್ ಮೆಷಿನ್ ನಲ್ಲಿ.
ಆಕರಗಳು
ಬದಲಾಯಿಸಿ- ↑ "Moodle 4.5 Release Notes".
- ↑ ೨.೦ ೨.೧ "Moodle License". Archived from the original on 2010-06-26. Retrieved 2010-06-29.
- ↑ "Moodle stats page". Moodle.org.
- ↑ "Modules and Plugins". Moodle.org.
- ↑ "About Moodle". Moodle.org Documentation. Archived from the original on 2010-01-11. Retrieved 2010-06-29.
- ↑ "Moodle Appliance". TurnKey Linux Virtual Appliance Library.
- ↑ Weller, M. (2006), VLE 2.0 and future directions in learning environments, Proceedings of the first LAMS Conference, Sydney
- ↑ McMulli & Munroe (2004), VMoodle at DCU, archived from the original on 2013-05-13, retrieved 2010-06-29
- ↑ Sclater, Neil (2008), A Large-scale Open Source eLearning Systems at the Open University, Educase, archived from the original on 2012-07-26, retrieved 2010-06-29
- ↑ Using Moodle - Google Books. Books.google.com. Retrieved 2009-06-27.
- ↑ "ಮೂಡಲ್ ಫಿಲಾಸಫಿ". Archived from the original on 2014-01-16. Retrieved 2010-06-29.
- ↑ "The chicken or the egg". Moodle.org Lounge.
- ↑ ಕರೆಂಟ್ ಮೂಡಲ್ ಸ್ಟ್ಯಾಟಿಸ್ಟಿಕ್ಸ್
- ↑ ಮೂಡಲ್ ಸ್ಟ್ಯಾಟಿಸ್ಟಿಕ್ಸ್
- ↑ "RGU ಕ್ಯಾಂಪಸ್ ಮೂಡಲ್". Archived from the original on 2010-03-15. Retrieved 2010-06-29.
- ↑ ಕೆಂಟ್ ಮೂಡಲ್
- ↑ "A Policy Dialogue Platform | Promoting Better Governance". eGov monitor. 2005-11-08. Archived from the original on 2009-07-17. Retrieved 2009-06-27.