ಮುರುಗಲ ಹಣ್ಣು, ಕೋಕಂ ಅಥವಾ ಪುನರ್ಪುಳಿ
For Wiki.jpg
Egg fossil classification
Genus:
ಗಾರ್ಸಿನಿಯಾ ಇಂಡಿಕ
Species:
ಗಟ್ಟಿಫೆರೆ
Binomial nomenclature
ಗಾರ್ಸಿನಿಯಾ ಇಂಡಿಕ

ಮುರುಗಲ ಹಣ್ಣು, ಕೋಕಂ ಅಥವಾ ಪುನರ್ಪುಳಿ ಬೆಳೆಯು ಭಾರತದ ಪಶ್ಚಿಮಘಟ್ಟ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಿದ್ದು ಪ್ಲಾಂಟೇಶನ್ ಬೆಳೆಯಾಗಿ ಬೆಳೆಯಲು ಸೂಕ್ತವಾದ ಮೈನರ್ ಹಣ್ಣು ಅಥವಾ ಸಾಂಬಾರು ಬೆಳೆ. ಇದರ ಉಗಮ ಸ್ಥಾನ ಭಾರತ. ವೈಜ್ಞಾನಿಕವಾಗಿ ಇದನ್ನು ಗಾರ್ಸಿನಿಯಾ ಇಂಡಿಕ ಎಂದು ಕರೆಯಲಾಗುತ್ತಿದ್ದು ಇದು ಗಟ್ಟಿಫೆರೆ ಕುಟುಂಬಕ್ಕೆ ಸೇರಿದೆ.ಇದೊಂದು ಶೀಘ್ರವಾಗಿ ೧೦-೧೫ ಮೀ. ಎತ್ತರಕ್ಕೆ ಬೆಳೆಯುವ ಗಡಸು ಮರವಾಗಿದ್ದು, ಬಾಗಿರುವ ರೆಂಬೆಗಳನ್ನು ಹೊಂದಿರುತ್ತದೆ.[೧]

ಉಪಯೋಗಸಂಪಾದಿಸಿ

ಕೋಕಂ ತಿರುಳನ್ನು ಹುಣಸೆ ಹುಳಿಗೆ ಪರ್ಯಾಯವಾಗಿ ಬಳಸಬಹುದು. ಪ್ರತಿ ೧೦೦ ಗ್ರಾಂ ತಿರುಳಿನಿಂದ ೮೦ ಗ್ರಾಂ ತೇವಾಂಶ, ೨.೪ ಗ್ರಾಂ ಆಂತೊಸಯನಿನ್, ೧.೦ ಗ್ರಾಂ ಸಸಾರಜನಕ, ೧.೭ ಗ್ರಾಂ ಟ್ಯಾನಿನ್, ೪.೧ ಗ್ರಾಂ ಸಕ್ಕರೆ, ೧.೪ ಗ್ರಾಂ ಕಚ್ಚಾಕೊಬ್ಬು, ೦.೯ ಗ್ರಾಂ ಪೆಕ್ಟಿನ್ ಮತ್ತು ೫.೯ ಗ್ರಾಂ ಆರ್ಗಾನಿಕ್ ಆಮ್ಲ ದೊರೆಯುತ್ತದೆ.[೨] ಇದನ್ನು ಆಹಾರದಲ್ಲಿ ಬಳಕೆ ಮಾಢಬಹುದು.ಸಿರಪ್‌, ಇದರ ಸಿಪ್ಪೆಗಳಿಂದ- ಪಾನೀಯ, ಸಾರು, ತಂಬುಳಿಗಳ ರೂಪದಲ್ಲಿ ಬಳಸುತ್ತಾರೆ. ಮಹಾರಾಷ್ಟ್ರದ ಕೊಂಕಣ್‌ ಪ್ರದೇಶ ಮತ್ತು ಗೋವಾಗಳಲ್ಲಿ ಹಣ್ಣಿನ ಸಿಪ್ಪೆಯನ್ನು ಅಡುಗೆಯಲ್ಲಿ ವ್ಯಾಪಕವಾಗಿ ಬಳಸುತ್ತಾರೆ. ಹಣ್ಣಿಗೆ ಬಾಯಾರಿಕೆ ನೀಗುವ ವಿಶೇಷ ಗುಣವಿದೆ. ಮಣ್ಣಿನ ಪಾತ್ರೆಯಲ್ಲಿ ಪುನರ್ಪುಳಿ ಹಣ್ಣಿನ ಒಣ ಸಿಪ್ಪೆಗಳನ್ನು ಹಾಕಿಟ್ಟು, ಹತ್ತಿಬಟ್ಟೆಯಿಂದ ಮಡಕೆಯ ಬಾಯನ್ನು ಬಿಗಿದಿಟ್ಟರೆ ಮೂರು ವರುಷವಾದರೂ ತಾಜಾ ಆಗಿಯೇ ಉಳಿಯುತ್ತದೆ ಎನ್ನಲಾಗಿದೆ.[೩]

ಕೃಷಿಸಂಪಾದಿಸಿ

ಪುನರ್ಪುಳಿ ಮರ ನವೆಂಬರ್-ಫೆಬ್ರವರಿಯಲ್ಲಿ ಹೂವು ಬಿಟ್ಟು ಏಪ್ರಿಲ್-ಮೇ ತಿಂಗಳಲ್ಲಿ ಹಣ್ಣುಗಳು ಕೊಯ್ಲಿಗೆ ಸಿದ್ದವಾಗುತ್ತವೆ. ಸುಮಾರು ೧೫ ವರ್ಷಗಳ ಮರ ೩೦-೫೦ ಕಿ.ಗ್ರಾಂ ಹಣ್ಣು ನೀಡಬಲ್ಲದು. ದುಂಡಾದ ಮಾಗಿದ ಹಣ್ಣುಗಳು ೨.೫-೩.೦ ಸೆಂ.ಮೀ. ವ್ಯಾಸ ಹೊಂದಿದ್ದು ದಟ್ಟ ಕೆಂಪು/ನೇರಳೆಬಣ್ಣ ಮತ್ತು ತಿರುಳಿನಲ್ಲಿ ೩-೮ ದೊಡ್ಡ ಬೀಜಗಳಿರುತ್ತವೆ. ಕೋಕಂನಲ್ಲಿ ಗಂಡು ಮತ್ತು ಹೆಣ್ಣು ಮರಗಳಿದ್ದು ಗಂಡು ಮರದಲ್ಲಿ ಕಾಯಿ ಕಚ್ಚುವುದಿಲ್ಲ. ಆದರೆ ಬೀಜದ ಸಸಿಗಳಿಂದ ತೋಟ ಮಾಡಿದರೆ ಹೆಣ್ಣು ಹೂವುಗಳ ಪರಾಗ ಸ್ಪರ್ಶ ಕ್ರಿಯೆಗೆ ಗಂಡು ಮರಗಳು ಅಗತ್ಯ. ವಾಣಿಜ್ಯ ಉದ್ದೇಶದ ತೋಟಗಳಲ್ಲಿ ಸಾಮಾನ್ಯವಾಗಿ ಕಸಿಗಿಡಗಳನ್ನು ಬಳಸುತ್ತಾರೆ. ಕೋಕಂನಲ್ಲಿ ಬೀಜದಿಂದ ಬೆಳೆಸಿದ ಬೇರುಗಿಡಗಳಿಗೆ ಹೆಣ್ಣು ಗಿಡಗಳಿಂದ ತಂದ ೯ ತಿಂಗಳ ಬೆಳವಣಿಗೆಯ ಕಸಿಕೊಂಬೆಗಳನ್ನು ಉಪಯೋಗಿಸಿ ಮೆದುಕಾಂಡಕಸಿ ಮಾಡಿ ಕಸಿಗಿಡಗಳನ್ನು ಬೆಳೆಸುತ್ತಾರೆ. ಅಕ್ಟೋಬರ್ ತಿಂಗಳು ಕಸಿಕಟ್ಟಲು ಸೂಕ್ತ ಕಾಲ. ಒಂದು ಎಕರೆ ಪ್ರದೇಶಕ್ಕೆ ೬ ಮೀ. x ೬ ಮೀ. ಅಂತರದಲ್ಲಿ ೧೧೦-೧೧೫ ಕಸಿ ಗಿಡಗಳು ಬೇಕಾಗುತ್ತವೆ[೪]

ಬಾಹ್ಯಕೊಂಡಿಗಳುಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

  1. "ರೆಸೋನೆನ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ". Retrieved 13 June 2020.
  2. https://vijaykarnataka.com/lifestyle/health/surprising-health-benefits-of-drinking-kokum-juice-every-day/articleshow/72394772.cms
  3. "ಫ್ರಜಾವಾಣಿ ವರದಿ". Retrieved 13 June 2020.
  4. "ಮುರುಗಲ ಹಣ್ಣು ಬೆಳುಯುವ ವಿಧಾನ".