ಪಂಡಿತ ಮಧುಸೂದನ ಗುಪ್ತ, ಒಬ್ಬ (Bengali: মধুসূদন গুপ্ত)), (೧೮೦೦–೧೫ ವವೆಂಬರ್ ೧೮೫೬) ಭಾರತೀಯ ವೈದ್ಯರು. ಕಲ್ಕತ್ತದಲ್ಲಿ ಮೊಟ್ಟಮೊದಲು ವಿದೇಶಿ ಪದ್ಧತಿಯಲ್ಲಿ ಸತ್ತ ವ್ಯಕ್ತಿಯ ಹೆಣವನ್ನು 'ಶಸ್ತ್ರ-ವಿಧಿ'ಯ ಮೂಲಕ ಕತ್ತರಿಸಿ, ದೇಹದ ಒಳಗಿನ ಭಾಗಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ದುಡಿದ ಭಾರತೀಯ ವ್ಯಕ್ತಿ. ಕಲ್ಕತ್ತಾದಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆಯಾಯಿತು. [೨] ಗುಪ್ತರವರು ಬಹಳ ಕಾಲದಿಂದಲೂ ಮುತ್ಸದ್ಧಿಗಳ ಮನಸ್ಸಿನಲ್ಲಿದ್ದ ಪ್ರಶ್ನಾತೀತವಾಗಿದ್ದ ಶವ ಪರೀಕ್ಷೆಯ ವಿಚಾರಗಳನ್ನು ಪ್ರಶ್ನಿಸಲು ಮುಂದೆ ಬಂದರು. ೨೮ ಅಕ್ಟೋಬರ್ ೧೮೩೬, ಸಮಯದಲ್ಲಿ ಸಾಮಾಜಿಕ ವಲಯದಲ್ಲಿ, ಮಾಡಬಾರದ್ದು ಎಂದು ಉಚ್ಚ ವರ್ಗದವರು ನಿಷೇಧಿಸಿದ ಪ್ರದೇಶದಲ್ಲಿ ಪ್ರವೇಶಿಸಿ, ಒಂದು ವಿಕ್ರಮವನ್ನೇ ಸಾಧಿಸಿದರು.

ಮಧುಸೂದನ್ ಗುಪ್ತ
মধুসূদন গুপ্ত
ಪಂ. ಮಧುಸೂದನ್ ಗುಪ್ತ ,
oil on canvas by S.C. Belnos
ಜನನ1800[೧]
ಮರಣ೧೫ ನವೆಂಬರ್ ೧೮೫೬ (ವಯಸ್ಸು ೫೬)
ಮರಣಕ್ಕೆ ಕಾರಣಡಯಬೆಟಿಸ್ (Diabetic septicemia)
ರಾಷ್ಟ್ರೀಯತೆಬ್ರಿಟಿಷ್ ಭಾರತ
ಉದ್ಯೋಗಆಯುರ್ವೇದಿಕ್ ವೈದ್ಯರು
ಇದಕ್ಕೆ ಖ್ಯಾತರುಭಾರತದಲ್ಲಿ (ಏಷ್ಯಾದಲ್ಲಿ) ಆಧುನಿಕ ಭಾರತದಲ್ಲಿ ಪ್ರಪ್ರಥಮವಾಗಿ ಶವವನ್ನು ಕತ್ತರಿಸಿ ಒಳಗಿನ ಭಾಗಗಳ ಅಭ್ಯಾಸಮಾಡಿದ ಪ್ರಥಮ ವ್ಯಕ್ತಿ.
ಮಕ್ಕಳುಗೋಪಾಲ್ ಚಂದ್ರ ಗುಪ್ತಾ.
ಪೋಷಕರುಬಲರಾಮ್ ಗುಪ್ತಾ

ಪ್ರಥಮ ಶಸ್ತ್ರ ವಿಧಿ ಬದಲಾಯಿಸಿ

ಡಾ.ಗುಪ್ತ, ಮೊಟ್ಟಮೊದಲು ಒಂದು ಶವವನ್ನು 'ಶಸ್ತ್ರ ವಿಧಿ ಪದ್ಧತಿ'ಯ ಮೂಲಕ ಅದರ ಭಾಗಗಳನ್ನು ಪ್ರತ್ಯೇಕಿಸಿ, ಅಭ್ಯಸಿಸಿದ ಭಾರತೀಯ ಸಮಾಜದ 'ಮೊಟ್ಟಮೊದಲ ಬಂಗಾಳದ ಉಚ್ಚವರ್ಗದ ವ್ಯಕ್ತಿ' ಎಂದು ಗುರುತಿಸಲ್ಪಟ್ಟಿದ್ದಾರೆ. ಅವರ ಕೆಲಸದಲ್ಲಿ ನೆರವಾದವರು :

  1. ರಾಜ್ ಕೃಷ್ಣ ಡೇ,
  2. ಉಮಾ ಚರಣ್ ಸೇಠ್,
  3. ದ್ವಾರಕಾ ನಾಥ್ ಗೂಪ್ತು,
  4. ನಬೀನ್ ಚಂದ್ರ ಮಿತ್ರ.

ಇವರೆಲ್ಲಾ 'ಕಲ್ಕತ್ತಾ ಮೆಡಿಕಲ್ ಕಾಲೇಜಿನ ಛಾತ್ರರು'. ಈ ಕಾರ್ಯವನ್ನು ಶ್ಲಾಘಿಸಿ, ಆಗಿನ 'ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ'ಯ ಆಡಳಿತಗಾರರು ಡಾ.ಗುಪ್ತ ಹಾಗೂ ಅವರ ಮಿತ್ರರನ್ನು ಗೌರವಿಸಿದರು. 'ಸೇಂಟ್ ವಿಲಿಯಮ್ಸ್ ಕೋಟೆ' ಯಿಂದ ತೋಪಿನ ಗುಂಡುಗಳನ್ನು ಹಾರಿಸಿ 'ಸೆಲ್ಯೂಟ್' ಮಾಡಿದರು. ಪ್ರಾಚೀನಕಾಲದ ಆಯುರ್ವೇದ ವೈದ್ಯರುಗಳಲ್ಲಿ ವಿಖ್ಯಾತರಾಗಿದ್ದ ಶುಶ್ರುತಾಚಾರ್ಯರು,, ಪುರಾತನಕಾಲದಲ್ಲಿ ಮೃತ ವ್ಯಕ್ತಿಯ ಮರಣಾನಂತರದ ಶಸ್ತ್ರವಿಧಿಯನ್ನು ಮಾಡಿ ಮಾಹಿತಿಗಳನ್ನು ಸಂಗ್ರಹಿಸಿದ್ದರು, ಎನ್ನುವ ವಿಷಯಗಳು ಪುರಾಣದಲ್ಲಿ ದಾಖಲಿಸಲ್ಪಟ್ಟಿದೆ.

ಜನನ ಬದಲಾಯಿಸಿ

ಮಧುಸೂದನರು, ವಂಶಪಾರಂಪರ್ಯವಾಗಿ ಆಯುರ್ವೇದ ಪದ್ಧತಿಯ ವೈದ್ಯವೃತ್ತಿಯಲ್ಲಿ ನಿರತರಾದವರ ವಂಶದಲ್ಲಿ ಜನಿಸಿದರು. ಕಲ್ಕತ್ತಾದ ಹೂಗ್ಲಿ ಜಿಲ್ಲೆಯ ಬೈದ್ಯಬಾತಿ ಬಲರಾಮ್ ಗುಪ್ತ ರ ಮಗನಾಗಿ ೧೮೦೦ ರಲ್ಲಿ ಜನಿಸಿದರು. ಪ್ರಾಥಮಿಕ ಶಾಲೆ ಹಾಗು ಪ್ರೌಢಶಾಲೆಗಳ ವಿದ್ಯಾಭ್ಯಾಸಗಳ ಬಳಿಕ, ಸಂಸ್ಕೃತ ಕಾಲೇಜಿನಲ್ಲಿ ಪ್ರವೇಶ ಗಳಿಸಿದರು. 'ಬೈದ್ಯಕ್' ನಲ್ಲಿ ವಿದ್ಯಾರ್ಥಿಯಾದರು. [೩]

ಶಿಕ್ಷಕನಾಗಿ ಬದಲಾಯಿಸಿ

೧೮೩೦ ರಲ್ಲಿ ಸಂಸ್ಕೃತ ಕಾಲೇಜಿನಲ್ಲಿ 'ಖುದಿರಾಮ್ ವಿಶಾರದ್' ರವರ ಸ್ಥಾನದಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಈ ಬೆಳವಣಿಗೆ ಅಂದಿನ ಕಾಲೇಜ್ ವಿದ್ಯಾರ್ಥಿಗಳಲ್ಲಿ ಬೇಸರವನ್ನು ಮೂಡಿಸಿತು.

ಮೆಡಿಕಲ್ ಕಾಲೇಜ್ ಸ್ಥಾಪನೆ ಬದಲಾಯಿಸಿ

೧೮೩೫ ರಲ್ಲಿ ಕಲ್ಕತ್ತಾದಲ್ಲಿ ಮೆಡಿಕಲ್ ಕಾಲೇಜಿನ ಸ್ಥಾಪನೆಯಾಯಿತು. ಸಂಸ್ಕೃತ ಕಾಲೇಜಿನಲ್ಲಿ 'ಬೈದ್ಯಕ್ ವಿಭಾಗ'ವನ್ನು ಸ್ಥಗಿತಗೊಳಿಸಲಾಯಿತು. ಗುಪ್ತರು ಸಹಾಯಕ ಅಧ್ಯಾಪಕರಾಗಿ ಮೆಡಿಕಲ್ ಕಾಲೇಜ್ ಸೇರಿದರು. ಇತರ ಭಾರತೀಯ ವಿದ್ಯಾರ್ಥಿಗಳ ಜೊತೆಸೇರಿ, 'ಪಾಶ್ಚಿಮಾತ್ಯ ಅಲೋಪತಿಕ್ ವೈದ್ಯ ಪದ್ಧತಿಯ ಶಿಕ್ಷಣ'ವನ್ನು ಅಭ್ಯಾಸಮಾಡಿ, ೧೮೪೦ ರಲ್ಲಿ ತೇರ್ಗಡೆಯಾದರು. ೧೮೪೫ ರಲ್ಲಿ ಹಿಂದುಸ್ಥಾನಿ ಮೀಡಿಯಂ ನ ವಿಭಾಗಾಧಿಕಾರಿಯಾಗಿ ನೇಮಕಗೊಂಡರು. ೧೮೪೮ ರಲ್ಲಿ 'ಫಸ್ಟ್ ಕ್ಲಾಸ್ ಸಬ್ ಆಸಿಸ್ಟೆಂಟ್ ಸರ್ಜನ್' ಆಗಿ ಅವರಿಗೆ ಭಡ್ತಿ ದೊರೆಯಿತು. ೧೮೫೨ ರಲ್ಲಿ ಮೊದಲಬಾರಿಗೆ ಮೆಡಿಕಲ್ ಕಾಲೇಜಿನಲ್ಲಿ 'ಬೆಂಗಾಲಿ ಮೀಡಿಯಂ' ಪ್ರಾರಂಭವಾಯಿತು. ಆಗ ಗುಪ್ತರು ಬೆಂಗಾಲಿ ಮೀಡಿಯಂ ವಿಭಾಗದ ವಿಭಾಗಾಧಿಕಾರಿಯಾಗಿ ಪದಗ್ರಹಣ ಮಾಡಿದರು. ಕಲ್ಕತ್ತ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ CMC) ಇತಿಹಾಸದಲ್ಲಿ ಗುಪ್ತರ ಸೇವೆ ಬಹಳ ಮಹತ್ವದ ಸ್ಥಾನ ಪಡೆದಿತ್ತು.

ಮೆಡಿಕಲ್ ವಿಭಾಗಕ್ಕೆ ವಿದ್ಯಾರ್ಥಿಗಳು ಬರಲು ಇಷ್ಟಪಡುತ್ತಿರಲಿಲ್ಲ ಬದಲಾಯಿಸಿ

ಆರಂಭಿಕ ದಿನಗಳಲ್ಲಿ 'ಮೆಡಿಕಲ್ ಕೋರ್ಸ್' ನಲ್ಲಿ ಪ್ರಶಿಕ್ಷಣಗಳಿಸಲು ಇಚ್ಚಿಸಿ ಬರುತ್ತಿದ್ದ ಭಾರತೀಯ ವಿದ್ಯಾರ್ಠಿಗಳು, ಭಾರತೀಯ ಐಶ್ವರ್ಯವಂತ ಕುಲೀನ ಮನೆತನದವರು. ಮೆಡಿಕಲ್ ಶಿಕ್ಷಣದಲ್ಲಿ ಆಸಕ್ತರಾದರೂ ಮೃತದೇಹಗಳನ್ನು ಮುಟ್ಟಲು ಹಾಗೂ ಅವುಗಳ ಭಾಗಗಳನ್ನು ಕತ್ತರಿಸಿ ಮಾಡುವ ಪರೀಕ್ಷೆಗಳು ಮತ್ತು ಹೆಚ್ಚಿನ ಅಭ್ಯಾಸ ಮೊದಲಾದವುಗಳಲ್ಲಿ ಅವರು ನಿರಾಸಕ್ತರಾಗಿರುತ್ತಿದ್ದರು. ಅವರಿಗೆಲ್ಲಾ ಆಗಿನ ಕಾಲದಲ್ಲಿ ಚಾಲ್ತಿಯಲ್ಲಿದ್ದ 'ಯುನಾನಿ' ಹಾಗೂ ಆಯುರ್ವೇದಿಕ್ ಪದ್ಧತಿಯ ಔಷಧಗಳನ್ನು ಪ್ರಯೋಗಮಾಡಲು ಹೆಚ್ಚಿನ ಆಸಕ್ತಿಯಿತ್ತು. ಅವರಲ್ಲಿ ಕೆಲವರು ಸಂಸ್ಕೃತ ಭಾಷಾ ಪಂಡಿತರೂ, ಹಾಗು ಆಯುರ್ವೇದಿಕ್ ವೈದ್ಯರಾಗಿದ್ದವರು, ಮೆಡಿಕಲ್ ಕಾಲೇಜಿಗೆ ಸೇರಿದ ಕೂಡಲೇ ಶವಗಳನ್ನೂ ಕತ್ತರಿಸಿ ಪರೀಕ್ಷೆಗೆ ಒಳಪಡಿಸುವ ವಿಧಿ-ವಿಧಾನಗಳನ್ನು ಅನಿವಾರ್ಯತೆಯನ್ನು ಯೋಚಿಸಲೂ ಬೇಸರಪಟ್ಟುಕೊಳ್ಳುತ್ತಿದ್ದರು.

ಬ್ರಿಟಿಷರು ವಿಶೇಷ ಸೌಲಭ್ಯಗಳನ್ನು ಕೊಡುತ್ತಿದ್ದರು ಬದಲಾಯಿಸಿ

ಮೆಡಿಕಲ್ ಕಾಲೇಜಿಗೆ ಸೇರಿಕೊಳ್ಳುತ್ತಿದ್ದ ವಿದ್ಯಾರ್ಥಿಗಳನ್ನು ಪುಸಲಾಯಿಸಲು ಬ್ರಿಟಿಷ್ ಕಂಪೆನಿ ಸರಕಾರದವರು ಹಲವಾರು ಉಪಾಯಗಳನ್ನೂ ಮಾಡುತ್ತಿದ್ದರು. ಅವುಗಳಲ್ಲಿ ೫೦ [೪] ತುಪಾಕಿಗಳನ್ನು ಹಾರಿಸಿ 'ಸೆಲ್ಯೂಟ್' ಸಲ್ಲಿಸುತ್ತಿದ್ದ ಗೌರವ ಬಹಳ ಪ್ರಚಲಿತವಾಗಿತ್ತು. ಡಾ.ಗುಪ್ತರು, ಮೊದಲನೆಯ ಬ್ಯಾಚ್ ನಲ್ಲಿ ತೇರ್ಗಡೆಯಾದ CMC ವಿದ್ಯಾರ್ಥಿಗಳಲ್ಲಿ ಒಬ್ಬರು. ಶವಗಳನ್ನೂ ಕತ್ತರಿಸಿ ಪರೀಕ್ಷೆಮಾಡುವ ಕಾರ್ಯದಲ್ಲಿ ಮೊದಲಿಗರಲ್ಲದಿದ್ದರೂ, (ಆದರೆ ಈಸ್ಟ್ ಇಂಡಿಯಾ ಕಂಪೆನಿಯ ಚಾರ್ಲ್ಸ್ ಹ್ಯಾವ್ ಲಾಕ್ ಪ್ರಕಾರ) [೫] ಡಾ. ಪಂಡಿತ ಮಧುಸೂದನ ಗುಪ್ತರು, ಮೊದಲ ಆಧುನಿಕ ಅನಾಟೊಮಿಕಲ್ ಶಿಕ್ಷಣ ಪದ್ಧತಿಯ 'ಮೊಟ್ಟಮೊದಲ ಆರಂಭಿಕ ವ್ಯಕ್ತಿ' ಎಂದು ಗುರುತಿಸಲ್ಪಟ್ಟು ಗೌರವಿಸಲ್ಪಟ್ಟಿದ್ದಾರೆ.

ಪುಸ್ತಕಗಳು ಬದಲಾಯಿಸಿ

  1. Anatomy arthat Sharir Vidya in (Bengali)
  2. Translated London Pharmacopoeia in (Bengali)
  3. Translated Anatomist Vade Mecum in (Sanskrit)

ಉಲ್ಲೇಖಗಳು ಬದಲಾಯಿಸಿ

  1. Pradip Kumar Bose (7 February 2006). Health and Society in Bengal: A Selection From Late 19th Century Bengali Periodicals. SAGE Publishing India. pp. 273–. ISBN 978-93-5280-271-5.
  2. [Sengupta, Subhodh Chandra; Basu, Anjali, eds. (January 2002). "মধুসূদন গুপ্ত" [Madhusudan Gupta]. Samsad Bangali Charitabhidhan (Bibliographical Dictionary) (in Bengali). Volume 1 (4th ed.). Kolkata: Shishu Sahitya Samsad. pp. 392–393. ISBN 81-85626-65-0.]
  3. [Dutta, Krishna (2003). Calcutta: A Cultural and Literary History. Signal Books. p. 202. ISBN 1902669592. Retrieved April 14, 2012]
  4. [Bhattacharya, Jayanta (10 November 2011). "The first dissection controversy: introduction to anatomical education in Bengal and British India" (PDF). Current Science. Current Science Association. 101 (9): 1228–1231. Retrieved April 14, 2012].
  5. [ R. Havleock Charles, "The Progress of the Teaching of Human Anatomy in Northern India," British Medical Journal, 30 September 1899, pp. 841-844.]

ಬಾಹ್ಯ ಸಂಪರ್ಕಗಳು ಬದಲಾಯಿಸಿ

  1. [Bose, Debasis (1994). "Madhusudan Gupta" (PDF). Indian Journal of History of Science. 29 (1): 31–41. Retrieved 2 December 2013]