(ಪರಾಶರಮುನಿಯನ್ನು ಕೂಡುವ ಮೊದಲು ಮತ್ಸ್ಯಗಂಧಿ-ಮೈ ಮೀನಿನ ವಾಸನೆಯಿಂದ ಕೂಡಿತ್ತು; ಪರಾಶರರು ಇನ್ನು ಯೋಜನಗಂಧಿಯಾಗೆಂದು ಹರಸಿದರು ; ನಂತರ ಅವಳು ಸುವಾಸನೆಯುಳ್ಳವಳಾದಳು; ಶಂತನುವನ್ನು ವಿವಾಹವಾದ ನಂತರ ಅವಳ ಹೆಸರು ಸತ್ಯವತಿಯೆಂದು ಬದಲಾಯಿಸಲಾಯಿತು ಅಥವಾ ಹೊಸದಾಗಿ ನಾಮಕರಣಮಾಡಲಾಯಿತು .

ಸತ್ಯವತಿಯನ್ನು ಸಂತೈಸುತ್ತಿರುವ ಶಂತನು.ಚಿತ್ರ:ರಾಜಾ ರವಿವರ್ಮ
ಮಹಾಭಾರತದಲ್ಲಿ ಬರುವ ಮತ್ಸ್ಯಗಂಧಿನಿ ಎಂಬ ಈ ಹೆಣ್ಣು ಮೀನಿನ ಗರ್ಭದಲ್ಲಿ ಜನಿಸಿದವಳು. ಮುಂದೆ ಪರಾಶರಮುನಿಯೊಂದಿಗೆ ನಿಯೋಗದಲ್ಲಿ ತೊಡಗಿ ವೇದವ್ಯಾಸ ಮಹರ್ಷಿ ಗಳಿಗೆ ಜನ್ಮನೀಡುತ್ತಾಳೆ. ಆಗ ಪರಾಶರ ಮುನಿಯು ನಿನಗೆ "ಮುನ್ನಿನ ಕನ್ನ್ಯೆತನ ಕೆಡದಿರಲಿ" ಎಂಬ ವರದೊಂದಿಗೆ ಪುನಃ ಆಕೆಗೆ ಕನ್ಯತ್ವವನ್ನು ಕರುಣಿಸುತ್ತಾನೆ. ಮತ್ಸ್ಯಗಂಧಿಯೋಜನಾ ಗಂಧಿ, ಸತ್ಯವತಿ ಎಂಬ ಹೆಸರುಗಳು ಆಕೆಗಿವೆ.
ಆಕೆ ಮುಂದೆ ಸತ್ಯವತಿ ಎಂಬ ಹೆಸರಿನೊಂದಿಗೆ ಶಂತನು ಮಹಾರಾಜನ್ನು ವಿವಾಹವಾಗುತ್ತಾಳೆ. ವಿವಾಹಕ್ಕೆ ಮೊದಲು ಅವಳ ತಂದೆ ಶಂತನು ಮಹಾರಾಜನಿಗೆ ಕೆಲವು ಶರತ್ತುಗಳನ್ನು ವಿಧಿಸುತ್ತಾನೆ. ನಂತರ ಅದನ್ನು ಗಂಗೆಯ ಮಗ ದೇವವ್ರತ ಅಥವಾ ಭೀಷ್ಮ ಅದನ್ನು ಪೂರೈಸುತ್ತಾನೆ.ಶಂತನು ಮಹಾರಾಜ ಮತ್ತು ಯೋಜನಾಗಂದಿ ಮತ್ಸ್ಯಗಂಧಿಗೆ ಚಿತ್ರಾಂಗದ ಮತ್ತು ವಿಚಿತ್ರವೀರ್ಯರೆಂಬ ಇಬ್ಬರು ಮಕ್ಕಳು ಜನಿಸುತ್ತಾರೆ.
ಚಿತ್ರಾಂಗದ (ಕಲ್ಕಿಯ ಆಗಮನವನ್ನು ತಡೆಯಲು ಹೋಗಿ) ಅವನ ಹೆಸರಿನ ಗಂಧರ್ವನೊಡನೆ ಯುದ್ಧಮಾಡಿ ವಿವಾಹಕ್ಕೂ ಮುನ್ನವೇ ಸಾಯುತ್ತಾನೆ.ಚಿತ್ರಾಂಗಧನೆಂಬ ಗಂಧರ್ವನು ತನ್ನ ಹೆಸರನ್ನು ಇಟ್ಟುಕಂಡಿರವುದರಿಂದ ಸಿಟ್ಟುಗೊಂಡು ಹೆಸರು ಬದಲಿಸಿಕೊಖೊಳ್ಳಲು ಹೇಳುತ್ತಾನೆ ; ಒಪ್ಪದಿದಾಗ ರಾಜಕುಮಾರನನ್ನು ಯುದ್ಧದಲ್ಲಿ ಕೊಲ್ಲುತ್ತಾನೆ. . ವಿಚಿತ್ರವೀರ್ಯ ಅಂಬಿಕೆ, ಅಂಬಾಲಿಕೆಯರನ್ನು ಮದುವೆಯಾದ ನಂತರ ಸಾಯುತ್ತಾನೆ. ನಂತರ ಸತ್ಯವತಿ ತನ್ನ ಮಗ ವೇದವ್ಯಾಸರನ್ನು ನಿಯೋಗದಿಂದ ಅಂಬಿಕೆ, ಅಂಬಾಲಿಕೆಯರ ಮೂಲಕ ಸಂತಾನ ಕೊಡಲು ಕೋರುತ್ತಾಳೆ; ಅವರಿಂದ ದೃತರಾಷ್ಟ್ರ ಮತ್ತು ಪಾಂಡು ಜನಿಸುತ್ತಾರೆ ; ಹೀಗೆ ತನ್ನ ವಂಶವನ್ನು ಬೆಳೆಸುತ್ತಾಳೆ.
  • ನೆನಪಿಡಬೇಕಾದ ಅಂಶ :- ಮತ್ಸಗಂಧಿ ಮತ್ತು ಪರಾಶರ ಮಹರ್ಷಿ ಗೆ ಹುಟ್ಟಿದವರು - ವೇದವ್ಯಾಸ ಮಹರ್ಷಿ.ಇವರ ಮೂಲ ಹೆಸರು ಕೃಷ್ಣದ್ವೈಪಾಯನ -ಕಪ್ಪಾಗಿದ್ದುದರಿಂದ ಕೃಷ್ಣ ; ದ್ವೀಪದಲ್ಲಿ ಹುಟ್ಟಿದುದರಿಂದ ದ್ವೈಪಾಯನ
  • ಯೋಜನಾಗಂಧಿ -(ಮತ್ಸ್ಯಗಂಧಿ)-ಸತ್ಯವತಿ ಮತ್ತು ಶಂತನು ಮಹಾರಾಜರ ಮಕ್ಕಳು;(ಹುಟ್ಟಿದವರು) - ಚಿತ್ರಾಂಗದ ಮತ್ತು ವಿಚಿತ್ರವೀರ್ಯ