ಮುಖ್ಯ ಮೆನು ತೆರೆ
ಹಳದಿಬಣ್ಣದ ಪ್ರದೇಶ - ಮಣಿಪುರ

ಮಣಿಪುರ ಭಾರತದೇಶದ ಈಶಾನ್ಯ ಭಾಗದ ರಾಜ್ಯ. ಪ್ರಶಾಂತ ಭೂ ದೃಶ್ಯಗಳು, ವಿಲಕ್ಷಣ ವನ್ಯ ಜೀವಿಗಳು ಇರುವ ಕಾರಣದಿಂದ ಸ್ವಿಟ್ಜರ್ಲ್ಯಾಂಡ್ ಆಫ್ ಇಂಡಿಯಾ ಎಂದು ಕರೆಯುವರು. ಉತ್ತರಕ್ಕೆ ನಾಗಾಲ್ಯಾಂಡ್, ದಕ್ಷಿಣಕ್ಕೆ ಮಿಜೋರಾಂ ಹಾಗೂ ಪಶ್ಚಿಮಕ್ಕೆ ಅಸ್ಸಾಂ ಹಾಗೂ ಪೂರ್ವಕ್ಕೆ ಬರ್ಮಾದ ಅಂತಾರಾಷ್ಟ್ರೀಯ ಗಡಿರೇಖೆ ಇದೆ.

ಮಣಿಪುರ ವಿಧಾನಸಭೆ
Type
Type
Leadership
ವಿಧಾನಸಭೆಯ ಸ್ಪೀಕರ್
ಟಿಬಿಎ, ಬಿಜೆಪಿ
Since 2017
ಉಪ ಸ್ಪೀಕರ್
ಟಿಬಿಎ, ಬಿಜೆಪಿ
Since 2012
ಎನ್ ಬಿರೇನ್ ಸಿಂಗ್ ಬಿಜೆಪಿ
Structure
Seats60
Manipur Legislative Assembly 2017.svg
Political groups
ಸಮ್ಮಿಶ್ರ ಸರ್ಕಾರ (32)

ವಿರೋಧ ಪಕ್ಷ (28)

Elections
ಫರ್ಸ್ಟ್-ಪಾಸ್ಟ್-ದಿ-ಪೋಸ್ಟ್
Last election
2017

ಪರಿವಿಡಿ

ವಿಧಾನ ಸಭೆಸಂಪಾದಿಸಿ

 • ಭಾರತದ ರಾಜ್ಯವಾದ ಮಣಿಪುರದ 2012 ರ ವಿಧಾನಸಭೆಯ ಚುನಾವಣೆ, ಫೆಬ್ರವರಿ-ಮಾರ್ಚ್ 2012 ರಲ್ಲಿ, ಮಣಿಪುರ ವಿಧಾನಸಭೆಗೆ 60 ಸದಸ್ಯರ ಆಯ್ಕೆ ನಡೆಯಿತು. [1]

ಫಲಿತಾಂಶಗಳುಸಂಪಾದಿಸಿ

 • ಮತ ಚಲಾಯಿಸಿದವರು 79,19% ಆಗಿತ್ತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬಹುತೇಕ ಸ್ಥಾನಗಳನ್ನು ಗಳಿಸಿದೆ. ಹಾಲಿ ಮುಖ್ಯಮಂತ್ರಿಯಾಗಿರುವ ಓಕ್ರಮ್ ಇಬೊಬಿ ಸಿಂಗ್ ಹುದ್ದೆಗೆ ಮರು ಆಯ್ಕೆಯಾದರು.

ಮಣಿಪುರದ ವಿಧಾನಸಭೆಯ ಚುನಾವಣೆ 2012 ರ ಫಲಿತಾಂಶಸಂಪಾದಿಸಿ

ಪಾರ್ಟಿವಾರು / ಶೇಕಡಾವಾರು ಓಟು 2012
Party Percent
INC
  
42.42%
AITC
  
17.00%
MSCP
  
8.39%
NPF
  
7.50%
NCP
  
7.23%
Others and IND
  
17.46%
ರಾಜಕೀಯ ಪಕ್ಷ ಸ್ಪರ್ಧಿಸಿದವರು ಆಯ್ಕೆಯಾದವರು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 60 42 (47 MSCP ವಿಲೀನವಾದ ನಂತರ
ಅಖಿಲ ಭಾರತ ತೃಣಮೂಲ ಕಾಂಗ್ರೆಸ್ 47 7 (ಉಪಚುನಾವಣೆ ನಂತರ 5 ಜನ ಬದಲಾದರು)
ಮಣಿಪುರ ರಾಜ್ಯ ಕಾಂಗ್ರೆಸ್ ಪಕ್ಷ 31 5 (ನಂತರ ಐ.ಎನ್.ಸಿಜೊತೆ ವಿಲೀನಗೊಂಡಿತು
ನಾಗ ಪೀಪಲ್ಸ್ ಫ್ರಂಟ್ 12 4
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ 22 1
ಲೋಕ ಜನಶಕ್ತಿ ಪಕ್ಷ 2 1
ಓಟ್ಟು 279 60

[೧][೨] [೩]

ಅಂತಿಮ ಪಕ್ಷ ಬಲಸಂಪಾದಿಸಿ

 • ಭಾ.ರಾ.ಕಾಂಗ್ರೆಸ್ (50);ವಿರೋಧ (5)> ಬಿಜೆಪಿ (1): AITC (0)ಎನ್.ಪಿ.ಎಫ್ (4);ಎನ್ಸಿಪಿ (0); ಎಲ್.ಜೆ ಪಿ (0);

ಖಾಲಿ / ಅನರ್ಹಗೊಳಿಸಲಾಗಿದೆ (5)

ಕಾರ್ಯನಿರ್ವಾಹಕರು --ಸರ್ಕಾರಸಂಪಾದಿಸಿ

 • ಗವರ್ನರ್ : ನಜ್ಮಾ ಹೆಪ್ತುಲ್ಲಾ
 • ಮುಖ್ಯಮಂತ್ರಿ : ಒಕ್ರಮ್ ಇಬೊಬಿ ಸಿಂಗ್ (Okram Ibobi Singh)
 • ವಿಧಾನ ಸಭಾ ಸ್ಪೀಕರ್ :ಥೊಕ್ಚಾಮ್ ಲೋಕೇಶ್ವರ್ ಸಿಂಗ್ (Thokchom Lokeshwar Singh)

ಮಣಿಪುರದ ವಿಧಾನಸಭೆಯ ಚುನಾವಣೆ 2017 ರ ಫಲಿತಾಂಶಸಂಪಾದಿಸಿ

 • ಮಣಿಪುರದ 60 ವಿಧಾನಸಭಾಪೀಠಕ್ಕೆ ಮತದಾನದ ಮೊದಲ ಹಂತದಲ್ಲಿ ಶೇಕಡಾ 84 ದಾಖಲೆ ಮತ ಚಲಾಯಿಸಿದೆ. [೪]
 • Mar 8, 2017, ಬುಧವಾರ, 22 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಎರಡನೇ ಮತ್ತು ಕೊನೆಯ ಹಂತದಲ್ಲಿ ಶೇ 86 ದಾಖಲೆ ಸಂಖ್ಯೆ, ಮತದಾನವಾಗಿದೆ.[೫]

ಫಲಿತಾಂಶ- ಮಣಿಪುರಸಂಪಾದಿಸಿ

ಒಟ್ಟು ಬಿಜೆಪಿ ಕಾಂಗ್ರೆಸ್ ಟಿಎಂಸಿ(TMC) ಎನ್.ಡಿಎಫ್(NDF) ಇತರೆ:
60 21 28 1 4 6

[೬]

ಬಿಜೆಪಿ ಸರ್ಕಾರಸಂಪಾದಿಸಿ

 • ಮಣಿಪುರದಲ್ಲಿ 21 ಸ್ಥಾನ ಗೆದ್ದಿರುವ ಬಿಜೆಪಿ, ಎನ್‌ಪಿಪಿ (ನ್ಯಾಷನಲ್ ಪೀಪಲ್ಸ್‌ ಪಾರ್ಟಿ) ಮತ್ತು ಎಲ್‌ಜೆಪಿ (ಲೋಕ ಜನಶಕ್ತಿ ಪಾರ್ಟಿ), ಟಿಎಂಸಿ ಬೆಂಬಲ ಗಿಟ್ಟಿಸಿಕೊಂಡಿದೆ.
 • ಬಲ:ಬಿಜೆಪಿ 21; ಎನ್ಸಿಎಫ್ (NCF)4; ಎಲ್,ಜೆ, ಪಿ 1; ಟಿಎಂಸಿ 1;= ಒಟ್ಟು 31
 • ಎನ್‌ಪಿಎಫ್‌ ಪಕ್ಷವು ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಕಾಂಗ್ರೆಸ್‌ಗೆ ಸರ್ಕಾರ ರಚನೆಗೆ ಬೆಂಬಲ ನೀಡುವುದಿಲ್ಲ ಎಂಬ ಪತ್ರವನ್ನು ಪಕ್ಷ ರಾಜ್ಯಪಾಲರಿಗೆ ಬರೆದಿದೆ.
 • ಎನ್‌ಪಿಪಿ ಮತ್ತು ಎಲ್‌ಜೆಪಿ ಕೇಂದ್ರದಲ್ಲಿ ಎನ್‌ಡಿಎ ಅಂಗಪಕ್ಷಗಳು. ‘ನಾಲ್ಕು ಸ್ಥಾನ ಗೆದ್ದಿರುವ ಎನ್‌ಪಿಎಫ್‌ (ನಾಗಾ ಪೀಪಲ್ಸ್‌ ಫ್ರಂಟ್‌) ಜೊತೆಗಿನ ಒಪ್ಪಂದದ ಪ್ರಕಾರ, ಆ ಪಕ್ಷ ಬಿಜೆಪಿಯನ್ನು ಬೆಂಬಲಿಸಲಿದೆ. ಒಬ್ಬ ಪಕ್ಷೇತರ ಶಾಸಕರಿಂದ ಬೆಂಬಲ ಪಡೆಯಲಾಗುವುದು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.[೭]

ಮುಖ್ಯಮಂತ್ರಿಯಾಗಿ ಬಿಜೆಪಿಯ ಎನ್‌. ಬಿರೇನ್‌ ಸಿಂಗ್‌ಸಂಪಾದಿಸಿ

 • 15 Mar, 2017
 • ಮಣಿಪುರ ಮುಖ್ಯಮಂತ್ರಿಯಾಗಿ ಬಿಜೆಪಿಯ ಎನ್‌. ಬಿರೇನ್‌ ಸಿಂಗ್‌ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಿಜೆಪಿ ಮತ್ತು ಮಿತ್ರ ಪಕ್ಷಗಳ ಎಂಟು ಮಂದಿ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಬಿಜೆಪಿಗೆ ಈಗ ಬೆಂಬಲ ಸೂಚಿಸಿರುವ ಶಾಸಕರು ವಿಶ್ವಾಸಮತ ಸಂದರ್ಭದಲ್ಲಿ ಮನಸ್ಸು ಬದಲಿಸದಂತೆ ಸಚಿವ ಸ್ಥಾನಗಳನ್ನು ಹಂಚಲಾಗಿದೆ. ಎನ್‌ಪಿಪಿಯ ವೈ. ಜಾಯ್‌ಕುಮಾರ್‌ ಅವರನ್ನು ಉಪ ಮುಖ್ಯಮಂತ್ರಿಯಾಗಿ ನೇಮಿಸಲಾಗಿದೆ. ನಾಲ್ವರು ಸದಸ್ಯರನ್ನು ಹೊಂದಿರುವ ಎನ್‌ಪಿಪಿಯ ಎನ್‌. ಕಯಿಸಿ ಅವರನ್ನೂ ಸಚಿವರನ್ನಾಗಿ ಮಾಡಲಾಗಿದೆ. ನಾಲ್ವರು ಶಾಸಕರನ್ನು ಹೊಂದಿರುವ ನಾಗಾ ಪೀಪಲ್ಸ್‌ ಫ್ರಂಟ್‌ನ ಮೂವರಿಗೆ ಸಚಿವ ಸ್ಥಾನ ನೀಡಲಾಗಿದೆ. ಎಲ್‌ಜೆಪಿಯ ಏಕೈಕ ಶಾಸಕ ಕರಮ್‌ ಶ್ಯಾಮ್‌ ಅವರಿಗೂ ಸಚಿವ ಸ್ಥಾನ ಸಿಕ್ಕಿದೆ. ಕಾಂಗ್ರೆಸ್‌ನಿಂದ ಪಕ್ಷಾಂತರ ಮಾಡಿ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿರುವ ಟಿ. ಶ್ಯಾಮಕುಮಾರ್‌ ಅವರೂ ಸಚಿವರಾಗಿದ್ದಾರೆ.[೮]

ನೋಡಿಸಂಪಾದಿಸಿ

ಉಲ್ಲೇಖಸಂಪಾದಿಸಿ