ಭೇಲ್ ಪುರಿ ದಕ್ಷಿಣ ಭಾರತದ ಜನಪ್ರಿಯ ಖಾದ್ಯ. ಇದನ್ನು ಮಂಡಕ್ಕಿಯೊಂದಿಗೆ ಸ್ವೀಟ್, ಖಾರ (ಪುದೀನಾ, ಕೊತ್ತಂಬರಿ ಬೆರೆಸಿ ತಯಾರಿಸಿದ ಚಟ್ನಿ), ಟೊಮೇಟೊ, ಈರುಳ್ಳಿ, ಪುರಿ, ಬೇಯಿಸಿದ ಆಲೂಗಡ್ಡೆ, ಬಟಾಣಿ ಬೆರೆಸಿ ತಯಾರಿಸಲಾಗುವುದು. ಇದನ್ನು ತಯಾರಿಸಿದ ಕೂಡಲೆ ತಿನ್ನುವುದು ಉತ್ತಮ ಹಾಗು ರುಚಿಕರ. ಬೇರೆ ಬೇರೆ ವಿಧದಲ್ಲಿ ತಯಾರಿಸಿದ ಚಟ್ನಿಯೊಂದಿಗೆ ಸೇವಿಸಿದಲ್ಲಿ ಇನ್ನು ರುಚಿ. ಭಾರತದಲ್ಲೆಡೆ ದಾರಿಯಲ್ಲಿ ಗಾಡಿಗಳನ್ನು ಇಟ್ಟುಕೊಂಡು, ಇದನ್ನು ತಯಾರಿಸಿ ಮಾರುವವರೆ ಜಾಸ್ತಿ.

ಭೇಲ್ ಪುರಿ

Gallery ಬದಲಾಯಿಸಿ