ಭುವನಗಿರಿ ಭುವನೇಶ್ವರಿ ದೇವಸ್ಥಾನ

ಭುವನೇಶ್ವರಿ ತಾಯಿಯು ಹತ್ತು ಮಹಾವಿದ್ಯಾ ದೇವತೆಗಳಲ್ಲಿ ಒಬ್ಬಳು ಹಾಗೂ ತಾಯಿ ದುರ್ಗೆಯ ಒಂದು ಅಂಶ."ಭುವನೇಶ್ವರಿ" ಅಂದರೆ ಈ ವಿಶ್ವದ ತಾಯಿ."ವಿಶ್ವ"ವೆಂದರೆ ತ್ರಿ-ಭುವನಗಳು,ಭೂಮಿ,ವಾತಾವರಣ ಮತ್ತು ಸ್ವರ್ಗ.[೧]

ಸ್ಥಳ ಪರಿಚಯ ಬದಲಾಯಿಸಿ

ಶ್ರೀ ಭುವನೇಶ್ವರಿ ದೇವಾಲಯ,ಭುವನಗಿರಿ,ಸಿದ್ಧಾಪುರ ತಾಲ್ಲೂಕು,ಉತ್ತರ ಕನ್ನಡ ಜಿಲ್ಲೆ.ಸಿದ್ಧಾಪುರದಿಂದ ಭುವನಗಿರಿಗೆ ಸರಿಸುಮಾರು ೮ ಕಿಲೋ.ಮೀಟರ್ ಅಂತರವಿದೆ.[೨]


ದೇವಾಲಯದ ಇತಿಹಾಸ ಬದಲಾಯಿಸಿ

ಭುವನೇಶ್ವರಿ ದೇವಾಲಯದ ನಿರ್ಮಾಣವು ಕದಂಬರ ಕಾಲದಲ್ಲಿಯೇ ಪ್ರಾರಂಭಗೊಂಡಿತು. ಆದರೆ ಅದರ ನಿರ್ಮಾಣದ ಕಾರ್ಯ ಪೂರ್ಣಗೊಳ್ಳಲಿಲ್ಲ. ನಂತರ ವಿಜಯನಗರದ ಸಾಮ್ರಾಜ್ಯದ ಕಾಲದಲ್ಲಿ ಆ ದೇವಸ್ಥಾನದ ನಿರ್ಮಾಣದ ಕಾರ್ಯ ಮುಂದುವರಿಯಿತು. ಕೊನೆಗೆ ೧೬೯೨ರಲ್ಲಿ ಬಿಳಗಿ ಸಾಮ್ರಾಜ್ಯದ ಅರಸರು ಆ ದೇವಸ್ಥಾನವನ್ನು ಪೂರ್ಣವಾಗಿ ಕಟ್ಟಿದರು. ಇದನ್ನು ಪೂರ್ಣವಾಗಿ ಕಟ್ಟುವುದರ ಜವಬ್ದಾರಿಯನ್ನು ವಹಿಸಿಕೊಂಡವರು ಬಿಳಗಿ ಸಾಮ್ರಾಜ್ಯದ ಕೊನೆಯ ಅರಸ ಬಸವೇಂದ್ರ. ಬಿಳಗಿಯ ಹಿಂದಿನ ಹೆಸರು ಶ್ವೇತಪುರವೆಂದಾಗಿತ್ತು.[೩]

ನಮ್ಮ ಕರ್ನಾಟಕ ರಾಜ್ಯದಲ್ಲಿಯೇ ಕನ್ನಡಮಾತೆಯಾದ ಭುವನೇಶ್ವರ ತಾಯಿಯ ತ್ರಿಕಾಲ ಪೂಜೆಯ ಏಕೈಕ ದೇವಾಲಯ ಸಿದ್ದಾಪುರದಲ್ಲಿ ಕಾಣಸಿಗುತ್ತದೆ. ಈ ದೇವಾಲಯದ ಬಳಿ ಒಂದು ತಿಳಿ ನೀರಿನ ಕೆರೆ ಇದೆ. ಈ ಕೆರೆಯ ನೀರನ್ನು ಆ ದೇವಿಯ ಕಾರ್ಯಕ್ರಮಗಳಿಗೆ ಮಾತ್ರ ಬಳಸಲಾಗುವುದು. ಅದನ್ನು ಹೊರತುಪಡಿಸಿ ಜಾನುವಾರುಗಳಿಗಾಗಲಿ, ಮೀನು ಹಿಡಿಯುವುದಕ್ಕಾಗಲಿ ಮತ್ತು ಬಟ್ಟೆಗಳನ್ನು ಒಗೆಯುವುದಕ್ಕಾಗಲಿ ಅಲ್ಲಿ ಅನುಮತಿ ಇಲ್ಲ. ಕೆರೆಯನ್ನು ದಾಟಿದ ಬಳಿಕ ದೇವಸ್ಥಾನಕ್ಕೆ ಹೋಗಲು ಮೆಟ್ಟಿಲುಗಳು ಇವೆ. ೩೫೦ ಮೆಟ್ಟಿಲುಗಳು ದೇವಸ್ಥಾನದ ದ್ವಾರಕ್ಕೆ ತಲುಪಲು ಇವೆ. ಈ ದೇಗುಲವು ೩೦೦ ಅಡಿ ಎತ್ತರದ ಭುವನಗಿರಿ ಬೆಟ್ಟದ ಮೇಲೆ ಸ್ಥಾಪಿತಗೊಂಡಿದೆ. ಈ ದೇವಾಲಯವು ಅರಣ್ಯದ ಮಧ್ಯಭಾಗದಲ್ಲಿ ಇದೆ. ಅದು ಪಶ್ಚಿಮಘಟ್ಟಗಳ ಒಂದು ಭಾಗ. ಭುವನೇಶ್ವರಿ ದೇವಿಯ ದೇವಾಲಯವಲ್ಲದೆ ಇನ್ನೂ ಹಲವಾರು ದೇವಸ್ಥಾನಗಳು ಗಣಪತಿ, ಗೋಪಾಲಕೃಷ್ಣ, ನಂದೀಕೇಶ್ವರನ ದೇವಸ್ಥಾನ ಮತ್ತು ನಾಗರದೇವತೆಗಳ ದೇವಾಲಯವಿದೆ. ಮುಂಜಾನೆ ಸಮಯದಲ್ಲಿ ಮಹಾಮಂಗಳಾರತಿ ಮಾಡುವುದು ರೂಢಿ. ಈ ದೇವಾಲಯವು ಕರುನಾಡ ರಾಜರಾಜೇಶ್ವರಿ ಭುವನಗಿರಿಯ ಭುವನೇಶ್ವರಿ ಎಂದು ಹೆಸರುವಾಸಿ. ಶ್ರೀ ಭುವನೇಶ್ವರಿ ದೇವಿಯ ಉದ್ಭವಲಿಂಗವು ಆ ದೇವಿಯ ಪಾದತಳದಲ್ಲಿದೆ. ಶ್ರೀಧರ ಭಟ್ಟರು ಪ್ರಸ್ತುತ ಆ ದೇವಾಲಯದ ಅರ್ಚಕರು. ಭುವನೇಶ್ವರಿ ದೇವಾಲಯದಷ್ಟೇ ಪುರಾತನವಾದ್ದು ಮತ್ತೊಂದು ದೇವಾಲಯವು ಆದ ಹನುಮಂತನ ದೇವಸ್ಥಾನವು ಇದೆ. ಆ ದೇವಸ್ಥಾನವು ಸಿದ್ದಾಪುರದಿಂದ ೫ ಕಿಲೋಮೀಟರುಗಳು ಇವೆ. ಹೀಗೆ ಎರಡು ಪುರಾತನ ದೇವಾಲಯಗಳು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಸಮೀಪದಲ್ಲಿ ಕಾಣಸಿಗುತ್ತವೆ.[೪]

ಉಲ್ಲೇಖಗಳು ಬದಲಾಯಿಸಿ

  1. http://kannadashining.blogspot.in/2016/04/bhuvaneshwari-devi.html
  2. https://www.ixigo.com › siddapur tourism › places to visit
  3. matthuga.in/bhuvanagiri.php
  4. https://en.wikipedia.org/wiki/Siddapur_taluk