ಭಾಷೆಯ ಅಸ್ತಿತ್ವದಲ್ಲಿ ಭಾಷಾ ರಾಚನೆಯು ಯಾವ ರೀತಿ ಕೆಲಸ ಮಾಡುತ್ತದೆ ಎಂದು ತಿಳಿಯಬೇಕೆಂದರೆ ನಾವು ಮೊದಲು ಒಬ್ಬ ವ್ಯಕ್ತಿಯ ಸಂವಹನ ಕಾರ್ಯ [individual act of speech] ಮತ್ತು ಆ ಕ್ರಿಯೆಯು ಯಾವ ಯಾವ ಅಂಶಗಳನ್ನು ಒಳಗೊಂಡಿರುತ್ತದೆ ಎಂಬುದನ್ನು ಅಧ್ಯಯನ ಮಾಡಬೆಕಾಗುತ್ತದೆ. ಸಂವಹನ ಕಾರ್ಯ ನಡೆಯಬೇಕೆಂದರೆ ಕನಿಷ್ಥ ಇಬ್ಬರು ವ್ಯಕ್ತಿಗಳು ಇರಬೇಕು.

ಉದಾಹರಣೆಗೆ; ಎ ಮತ್ತು ಬಿ ಎಂಬ ಇಬ್ಬರು ವ್ಯಕ್ತಿಗಳು ಪರಸ್ಪರ ಮಾತನಾಡುತ್ತಿದ್ದಾರೆ ಎಂದುಕೊಳ್ಳೋನಾ. ಇಬ್ಬರು ವ್ಯಕ್ತಿಗಳ ನಡುವೆ ನಡೆಯುವ ಸಂವಹನ ಕಾರ್ಯದ ಮೊದಲನೆ ಹಂತವು ಒಬ್ಬ ವ್ಯಕ್ತಿಯ ಮೆದುಳಿನಿಂದ ಪ್ರಾರಂಭವಾಗುತ್ತದೆ.

ಉದಾಹರಣೆಗೆ ಎ ಎಂಬ ವ್ಯಕ್ತಿಯ ಮೆದುಳಿನಲ್ಲಿ ಯಾವುದಾದರು ವಿಷಯಬಂದರೆ ಆ ವ್ಯಕ್ತಿಯು ಅದನ್ನು ಸಂಕೇತಗಳ[SIGN] ಆಥವಾ ಧ್ವನಿ ಮಾದರಿಯಾ[sound] ಮೂಲಕ ವ್ಯಕ್ತಪಡಿಸುತ್ತಾನೆ. ಅಂದರೆ ಯಾವುದೆ ವಿಷಯವಸ್ತುವಿಗೆ ಮೆದುಳು ಅದಕ್ಕೆ ಅನುರೂಪವಾದ ಧ್ವನಿಯನ್ನು ಸ್ರುಷ್ಟಿಸುತ್ತದೆ. ಈ ಕ್ರಿಯೆಯನ್ನು ಮನೊವೈಜ್ನಾನಿಕ[psychological] ಕ್ರಿಯೆ ಎಂದು ಕರೆಯುತ್ತಾರೆ. ಇದು ಮುಂದೆ physiological process ನ ಮುಖಾಂತರ ವ್ಯಕ್ತವಾಗುತ್ತದೆ.

ಅಂದರೆ ಮೆದುಳು ತನ್ನಲ್ಲಿರುವ ಒಂದು ವಿಷಯವನ್ನು ಧ್ವನಿ ಮಾದರಿಯ ಮೂಲಕ ಶರೀರದ ಆವಯವಕ್ಕೆ[organs of phonation] ರವಾನಿಸುತ್ತದೆ. ನಂತರ ಧ್ವನಿಯು ಎ ನ ಬಾಯಿಯಿಂದ ಬಿ ನ ಕಿವಿಗಳಿಗೆ ಹೊಗುತ್ತದೆ.

ನಂತರದ ಹಂತದಲ್ಲಿ ಈ ಕಾರ್ಯ ಬಿ ಎಂಬ ವ್ಯಕ್ತಿಯಲ್ಲಿ ವಿರುದ್ಧ ಮಾರ್ಗದಲ್ಲಿ ನಡೆಯುತ್ತದೆ. ಅಂದರೆ ಎ ಎಂಬ ವ್ಯಕ್ತಿಯಲ್ಲಿ ಸಂವಹನ ಕಾರ್ಯ ಮೆದುಳಿನಿಂದ ಬಾಯಿಗೆ ಚಲಿಸಿದಂತೆ ಬಿ ಎಂಬ ವ್ಯಕ್ತಿಯಲ್ಲಿ ಈ ಸಂವಹನ ಕಾರ್ಯ ಕಿವಿಯಿಂದ ಮೆದುಳಿಗೆ ಚಲಿಸುತ್ತದೆ. ಅದೆ ರೀತಿ ಬಿ ಎಂಬ ವ್ಯಕ್ತಿಯು ಮಾತನಾಡಿದರೆ ಈ ಕ್ರಿಯೆಯು ಬಿ ನ ಬಾಯಿಯಿಂದ ಎ ನ ಕಿವಿಗೆ ಹೋಗುತ್ತದೆ.

ಮೇಲೆ ವಿವರಿಸಿದ ವಿಶ್ಲೇಷಣೆಯನ್ನು ಹೋರೆತುಪಡಿಸಿಯು ನಾವು auditory sensetion ನಲ್ಲೂ ವ್ಯತ್ಯಾಸಕಾಣಬಹುದು. ಈ auditory sensetion ಧ್ವನಿ ಮಾದರಿಯ ಮೂಲಕ ಗುರುತಿಸಬಹುದು. ಈ ಕಾರ್ಯದಲ್ಲಿ ನಾವು ಅಗ್ತ್ಯವಾದ ಮೂಲಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಿದ್ದೇವೆ. ಆದರೆ ನಮ್ಮ schematisation ಭೌತಶಾಸ್ತ್ರ, ಜೀವ ಶಾಸ್ತ್ರ ಮತ್ತು ಮನೊವೈಜ್ನಾನಗಳನ್ನು ಬೇರೇ ಬೇರೇಯಾಗಿ ಭಾಗ ಮಾಡುತ್ತದೆ. ಒಂದು ಮುಖ್ಯವಾದ ಅಂಶವೇನೆಂದರೆ ಪದಗಳ ಧ್ವನಿಯನ್ನು ವಸ್ತುಗಳಿಂದಾಗುವ ಶಬ್ದಕ್ಕೆ ಸೇರಿಸಬಾರದು.

ಮೇಲೆ ವ್ಯಕ್ತಪಡಿಸಿದಂತ ವಿಶ್ಲೇಷಣೆಯನ್ನು ಈ ಕೆಳಕಂಡಂತೆ ಮತ್ತೆ ಮೂರು ಭಾಗಗಳಾಗಿ ವಿಂಗಡಿಸಬಹುದು. ಅವುಗಳೆಂದರೆ ೧ ಬಾಹ್ಯ ಭಾಗ[external part] ಮತ್ತು ಆಂತರಿಕ ಭಾಗ[internal part].

೨ ಮನೋವೈಜ್ಞಾನಿಕ[psychological] ಮತ್ತು ಮನೋವೈಜ್ಞಾನಿಕವಲ್ಲದ[non psychological]

೩ ಕರ್ತರಿ ಪ್ರಯೊಗ[active part] ಮತ್ತು ಕರ್ಮಣಿ ಪ್ರಯೊಗ[passive part].


ಮೆದುಳಿನ ಮನೋವೈಜ್ಞಾನಿಕ ಭಾಗದಲ್ಲಿ ಕರ್ತರಿ ಪ್ರಯೊಗವನ್ನು ಕಾರ್ಯ ನಿರ್ವಾಹಕ ಮಂಡಲಿ ಎಂದು ಮತ್ತು ಕರ್ಮಣಿ ಪ್ರಯೋಗವನ್ನು ವಿಚಾರಗಳನ್ನು ಗ್ರಹಿಸುವ ಮಂಡಲಿ ಎಂದು ಕರೆಯುತ್ತಾರೆ.

ಭಾಷೆ ಮತ್ತು ಸಂವಹನ ಮಧ್ಯೆ ವ್ಯತ್ಯಸಗಳನ್ನು ಮಾಡುವಾಗ ನಾವು ಮತ್ತೆ ೨ ವಿಷಯದಲ್ಲಿ ವ್ಯತ್ಯಾಸಗಳನ್ನು ಮಾಡುತ್ತೇವೆ. ಅವುಗಳೆಂದರೆ

೧ ಯಾವುದು ಸಾಮಾಜಿಕವಾದದ್ದು ಮತ್ತು ಯಾವುದು ವೈಯಕ್ತಿಕವಾದದ್ದು.

೨ ಯಾವುದು ಅಗತ್ಯವಾದದ್ದು ಮತ್ತು ಯಾವುದು ಅದೀನವದದ್ದು.

ಭಾಷೆಯು ಮುಂಚೆಯಿಂದ ಇರುವ ಸಂಪ್ರದಾಯವೇನಲ್ಲ ಬದಲಾಗಿ ಜನರು ಪರಸ್ಪರ ಮಾತಾನಾಡಲು ಸ್ರುಷ್ಟಿಸಿರುವ ಒಂದು ಮಾಧ್ಯಮ. ಅಂದರೆ ಮಾನವನಿಗಿಂತ ಮುಂಚೆ ಭಾಷೆಯು ಅಸ್ತಿತ್ವದಲ್ಲಿರಲಿಲ್ಲ ಬದಲಾಗಿ ಜನರು ದಿನನಿತ್ಯದ ಕಾರ್ಯಗಳಿಗಾಗಿ ಮತ್ತು ತಮ್ಮ ಸ್ವಂತ ಉಪಯೋಗಕ್ಕಾಗಿ ಭಾಷೆಯನ್ನು ಸ್ರುಷ್ಟಿದಸಿದರು. ಭಾಷೆಯನ್ನು ಮಾತನಾಡುವಾಗ ಯಾವುದೆ ಮುಂದಾಲೋಚನೆಗಳು ಅಥವಾ ಪ್ರತಿಬಿಂಬಗಳು ಅಗತ್ಯವಾಗುವುದಿಲ್ಲ.

ಇದಕ್ಕೆ ವಿರುದ್ಧವಾಗಿ ಸಂವಹನ ಒಬ್ಬ ವ್ಯಕ್ತಿಯ ವೈಯಕ್ತಿಕ ಕ್ರಿಯೆ. ಅದು ಅವನು ತನ್ನ ಇಚ್ಚೆ ಮತ್ತು ಭೌದ್ಧಿಕ ಶಕ್ತಿಯಿಂದ ವ್ಯಕ್ತಪಡಿಸುತ್ತಾನೆ. ಸಂವಹನ ಎರಡು ರೀತಿಯಲ್ಲಿ ವ್ಯಕ್ತವಾಗುತ್ತದೆ.

೧ ಒಬ್ಬ ವ್ಯಕ್ತಿ ಸಂಕೇತಗಳ ಮೂಲಕ ತನ್ನ ಆಲೋಚನೆಯನ್ನು ವ್ಯಕ್ತ ಪದಿಸುತ್ತಾನೆ.

೨ ಭೌಧಿಕ ಶಕ್ತಿಯು ಅವನಿಗೆ ಸಂಕೇತಗಳನ್ನು ವ್ಯಕ್ತ ಪಡಿಸಲು ಸಹಾಯಮಾಡುತ್ತದೆ.

ಭಾಷೆಯ ರಚನೆಯನ್ನು ಈ ಕೆಳಕಂಡಂತೆ ತಿಳಿಯಬಹುದು.

೧ ಭಾಷೆಯು ತನ್ನದೆ ಆದ ಸ್ವತಂತ್ರ ಅಸ್ತಿತ್ವವನ್ನು ಹೋಂದಿದೆ. ಸಂವಹನ ಭಾಷೆಯ ಒಂದು ಸಾಮಾಜಿಕಾ ಅಂಗವಾಗಿದೆ. ಭಾಷೆ, ಸಂವಹನಕ್ಕಿಂತ ಭಿನ್ನವಾದದ್ದು. ಉದಾ; ಒಬ್ಬ ವ್ಯಕ್ತಿ ತಾನು ಮಾತನಾಡುವ ಶಕ್ತಿಯನ್ನು ಕಳೆದುಕೊಂಡರು, ಅವನಿಗೆ ಭಾಷೆಯು ತಿಳಿದಿದ್ದರೆ, ಸಂಕೇತಗಳ ಮೂಲಕ ಅರ್ಥಮಾಡಿಕೊಳ್ಳುತ್ತಾನೆ.

೨ ಭಾಷೆಯು ಒಂದು ವಿಷಯವಸ್ತು, ಅದನ್ನು ಯಾರಾದರು ಅಭ್ಯಾಸಮಾಡಬಹುದು.

೩ ಭಾಷೆಯು ಸಾಮಾನ್ಯವಾಗಿ heterogeneous ಆದರೆ ಭಾಷೆಯ ರಚನೆ ಸಮಜಾತಿಯದ್ದು.

ನೋಡಿಸಂಪಾದಿಸಿ

ಭಾಷೆ  ; ಭಾಷೆಯ ರಚನೆ  ; ಭಾಷಾ ವಂಶವೃಕ್ಷ  ; ಭಾಷಾ ವಿಜ್ಞಾನ  ; ಭಾಷಾವೈಶಿಷ್ಟ್ಯ  ; ಭಾಷಾಶಾಸ್ತ್ರ ಚಿಂತನೆಯ ಇತಿಹಾಸ ; ಭಾಷಾ ಪ್ರಯೋಗಾಲಯ ; ಭಾಷಿಕ ಸಾಪೇಕ್ಷತೆ  ; ಭಾಷಾಂತರ;ಭಾಷಾ ಕುಟುಂಬಗಳ ಪಟ್ಟಿ;ಭಾರತದ ಭಾಷೆಗಳು

ಹೆಚ್ಚಿನ ಓದಿಗೆಸಂಪಾದಿಸಿ

ಉಲ್ಲೇಖಸಂಪಾದಿಸಿ