ಭಾರತ ಸರ್ಕಾರದ ಬಜೆಟ್ ೨೦೧೭-೧೮
೨೦೧೭-೧೮ ರ ಬಜೆಟ್‌ನ ವಿಶೇಷ
ಬದಲಾಯಿಸಿ- ಈ ಬಾರಿಯ ಕೇಂದ್ರದ ಬಜೆಟ್‍ನ್ನು ದಿ.1 ಫೆಬ್ರ, 2017, ಬುಧವಾರ ಬೆಳಿಗ್ಗೆ ೧೧ ಗಂಟೆಗೆ ಮಂಡಿಸಲಾಗಿದೆ. ಇದು ಅರುಣಜೇಟ್ಲಿಯವರ ನಾಲ್ಕನೇ ಬಜೆಟ್.
- ಸಾಮಾನ್ಯ ಬಜೆಟ್‌ನೊಂದಿಗೆ ರೈಲ್ವೆ ಬಜೆಟ್ ವಿಲೀನಗೊಳಿಸಿರುವುದು ಈ ಬಾರಿಯ ಬಜೆಟ್‌ನ ವಿಶೇಷ. ಎರಡನೆಯದು ಫೆಬ್ರುವರಿ 1ರಂದು ಬಜೆಟ್ ಮಂಡಿಸಿರುವುದು. ಸಾಮಾನ್ಯವಾಗಿ ಕೇಂದ್ರದ ಮುಂಗಡಪತ್ರವನ್ನು (ಬಜೆಟ್‍ನ್ನು) ಫೆಬ್ರವರಿ ಅಂತ್ಯದಲ್ಲಿ ಅಥವಾ ಮಾರ್ಚಿ ಮೊದಲವಾರ ಮಂಡಿಸುವುದು ರೂಢಿ. ರೈಲ್ವೆ ಆದಾಯ ವೆಚ್ಚದ ಮತ್ತು ಯೋಜನೆಗಳ ಬಜೆಟ್‍ನ್ನು ಪ್ರಥಮದಲ್ಲಿಯೇ ಲೋಕಸಬೆಯಲ್ಲಿ ಮಂಡಿಸಲಾಗುತ್ತಿದ್ದಿತು. ಈಗ ೨೦೧೭ ರಲ್ಲಿ ೨೦೧೭-೧೮ ರ ಸಾಮಾನ್ಯ ಬಜೆಟ್‍ನಲ್ಲಿ ರೈಲ್ವೇ ಬಜೆಟ್‍ನ್ನು ವಿಲೀನಗೊಳಿಸಲಾಗಿದೆ. ವಿಶೇಷವೆಂದರೆ ಒಂದು ತಿಂಗಳ ಮುಂಚೆ ಬಜೆಟ್ ಮಂಡಿಸಲಾಗಿದೆ. ಇದರಿಂದ ಆರ್ಥಿಕ ವರ್ಷದ ಪ್ರಾರಂಭದಿಂದಲೇ ಸಚಿವಾಲಯಗಳ ಕಾರ್ಯಾರಂಭಕ್ಕೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.[೧]
- ಈ ಬಾರಿಯ ಬಜೆಟ್ ಮಂಡನೆಯ ಮುಂಚೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ೩೧-೧-೨೦೧೭ ಮಂಗಳವಾರ ಸಂಸತ್‌ನಲ್ಲಿ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುತ್ತಿದ್ದಾಗ, ಮಧ್ಯಾಹ್ನ 2.15ರ ಸುಮಾರಿಗೆ ಕೇರಳದ ಇಂಡಿಯನ್ ಮುಸ್ಲಿಂ ಲೀಗ್‌ನ ಸಂಸದ ಅಹಮದ್ ಅವರು ಹೃದಯ ಸ್ತಂಭನಕ್ಕೆ ತುತ್ತಾಗಿ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟರು. ಅದರಿಂದ ನಮ್ಮನ್ನಗಲಿದ ಹಿರಿಯ ಮುತ್ಸದಿ ಇ.ಅಹಮದ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಇಂದಿನ ಕಲಾಪ ಮುಂದೂಡ ಬೇಕಿತ್ತು. ಈ ಸಂದರ್ಭದಲ್ಲಿ ಬಜೆಟ್ ಮಂಡನೆ ನಡೆಸುತ್ತಿರುವುದು ಸರಿಯಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಖರ್ಗೆ ಅವರ ಮಾತುಗಳನ್ನು ನಿಲ್ಲಿಸುವಂತೆ ಸ್ಪೀಕರ್ ಸೂಚಿಸಿದ್ದು, ಈಗಾಗಲೇ ಬಜೆಟ್ ಮಂಡನೆ ನಡೆಸುವಂತೆ ಅನುಮತಿ ನೀಡ ಲಾಗಿದೆ. ನಿಗಧಿಯಂತೆ ಇಂದು ಬಜೆಟ್ ಮಂಡನೆ ನಡೆಯಲಿದ್ದು, ಬಜೆಟ್ ಮಂಡನೆ ಮಾಡುವಂತೆ ಜೇಟ್ಲಿ ಅವರಿಗೆ ಸೂಚಿಸಿದ್ದಾರೆ.
- ಲೋಕಸಭಾ ಸದಸ್ಯ ಇ.ಅಹಮದ್ ಅವರಿಗೆ ಸಂತಾಪ ಸೂಚಿಸಿದ ನಂತರ ಲೋಕಸಭೆಯಲ್ಲಿ ಬಜೆಟ್ ಮಂಡನೆ ಆರಂಭವಾಗಿದೆ.[೨]
೨೦೧೭-೧೮ ರ ಬಜೆಟ್
ಬದಲಾಯಿಸಿ- ‘ಪರಿವರ್ತನೆ, ಶಕ್ತಿಯುಕ್ತ ಮತ್ತು ಸ್ವಚ್ಛ ಭಾರತ’ (Transform, Energise and Clean India– TEC) ಎಂಬುದು 2017-18 ಸಾಲಿನ ಬಜೆಟ್ ಕಾರ್ಯಸೂಚಿಯಾಗಿದೆ.
- ಹತ್ತು ಪ್ರಮುಖ ಭಾಗಗಳಾಗಿ ವಿಂಗಡಿಸಿ ಅರುಣ್ ಜೇಟ್ಲಿ ಬಜೆಟ್ ಮಂಡಿಸಿದರು.
ರೈತರ ಉತ್ಪಾದನೆ 5 ವರ್ಷಗಳಲ್ಲಿ ದುಪ್ಪಟುಗೊಳಿಸಲು ಹಲವು ಕ್ರಮ
ಬದಲಾಯಿಸಿ- ರೂ.10 ಲಕ್ಷ ಕೋಟಿಯಷ್ಟು ಕೃಷಿ ಸಾಲ
- ಡಿ.31ರಂದು ಪ್ರಕಟಿಸಿದಂತೆ ರೈತರ ಸಾಲದ ಮೇಲಿನ 60 ದಿನಗಳ ಬಡ್ಡಿ ಮನ್ನ
- ದೇಶದ 63 ಸಾವಿರ ಕೃಷಿ ಕ್ರೆಡಿಟ್ ಸೊಸೈಟಿಗಳ ಗಣಕೀಕರಣ ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಗೆ ರೂ.1,900 ಕೋಟಿ ಅಂದಾಜು. 3 ವರ್ಷಗಳಲ್ಲಿ ಕಾರ್ಯ ಪೂರ್ಣ.
- ಫಸಲ್ ವಿಮಾ ಯೋಜನೆ ವಿಸ್ತರಿಸಲು ₹9000 ಕೋಟಿ ಮೀಸಲು. 2017–18 ಸಾಲಿನಲ್ಲಿ ವಿಮಾ ವ್ಯಾಪ್ತಿ ಶೇ.30ರಿಂದ ಶೇ.40ಕ್ಕೆ ಏರಿಕೆಯಾಗಲಿದೆ.
- ಮಣ್ಣಿನ ಪರೀಕ್ಷೆಗೆ ಸಹಕಾರಿಯಾಗಲು ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಕಿರು ಪ್ರಯೋಗಾಲಯ ಸ್ಥಾಪನೆ
- ರಾಷ್ಟ್ರೀಯ ಕೃಷಿ ಮಾರುಕಟ್ಟೆ(e-NAM), 250 ರಿಂದ 585 ಎಪಿಎಂಸಿಗೆ ವಿಸ್ತರಣೆ. ಪ್ರತಿ ಮಾರುಕಟ್ಟೆ e-NAM ಗೆ ರೂ.75 ಲಕ್ಷ ಸಹಕಾರ
ಗ್ರಾಮೀಣ ಜನರ ಉನ್ನತಿಗಾಗಿ ಉದ್ಯೋಗ
ಬದಲಾಯಿಸಿ- ಗ್ರಾಮೀಣ ಭಾಗದ ಬಡವರ ಉನ್ನತಿಗೆ ವಾರ್ಷಿಕ ರೂ.3 ಲಕ್ಷ ಕೋಟಿ ಖರ್ಚು
- 2019ರ ವೇಳೆಗೆ 50 ಸಾವಿರ ಗ್ರಾಮ ಪಂಚಾಯ್ತಿಗಳು ಹಾಗೂ 1 ಕೋಟಿ ಕುಟುಂಬಗಳು ಬಡತನ ಮುಕ್ತಗೊಳಿಸುವ ಗುರಿ
- ನರೇಗಾ ಯೋಜನೆಗೆ ರೂ.48 ಸಾವಿರ ಕೋಟಿ ಮೀಸಲು.
- ನರೇಗಾ ಯೋಜನೆ ಅಡಿ ಮಾರ್ಚ್ 2017ಕ್ಕೆ ಹತ್ತು ಲಕ್ಷ ಕೃಷಿ ಹೊಂಡಗಳ ನಿರ್ಮಾಣ
- ಗ್ರಾಮೀಣ ಭಾಗದ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಮೀಸಲು ರೂ.15 ಸಾವಿರ ಕೋಟಿಯಿಂದ ₹23 ಸಾವಿರ ಕೋಟಿಗೆ ಹೆಚ್ಚಳ
- 2018ರ ಮೇ 1ರೊಳಗೆ ಶೇ.100 ಗ್ರಾಮೀಣ ಭಾಗಕ್ಕೆ ವಿದ್ಯುತ್ ಸಂಪರ್ಕ
- ಆರ್ಸೆನಿಕ್ ಮತ್ತು ಫ್ಲೋರೈಡ್‌ಯುಕ್ತ 28,000 ವಲಯಗಳಲ್ಲಿ ಉತ್ತಮ ಕುಡಿಯುವ ನೀರಿನ ವ್ಯವಸ್ಥೆ. ಮುಂದಿನ 4 ವರ್ಷಗಳಲ್ಲಿ
- 2022ರ ವೇಳೆಗೆ 5 ಲಕ್ಷ ಜನರಿಗೆ ಕೌಶಲ ತರಬೇತಿ
- ಗ್ರಾಮೀಣ ಮತ್ತು ಕೃಷಿ ಚಟುವಟಿಕೆ ವಲಯಗಳಿಗೆ ಒಟ್ಟು ರೂ.1.87 ಲಕ್ಷ ಕೋಟಿ ಮೀಸಲು[೩]
ಯುವಜನ ಅಭಿವೃದ್ಧಿ
ಬದಲಾಯಿಸಿ- ಶೈಕ್ಷಣಿಕವಾಗಿ ಹಿಂದುಳಿದಿರುವ 3479 ಜಿಲ್ಲೆಗಳಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ಹಾಗೂ ಗುಣಮಟ್ಟ ಹೆಚ್ಚಳಕ್ಕೆ ಆದ್ಯತೆ
- ‘ಸ್ವಯಂ’ ವೇದಿಕೆ ಅಡಿ 350 ಆನ್‌ಲೈನ್ ಕೋರ್ಸ್‌ಗಳ ಪ್ರಾರಂಭ
- ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಸ್ಥಾಪನೆ
- ದೇಶದ 600ಕ್ಕೂ ಹೆಚ್ಚು ಜಿಲ್ಲೆಗಳಿಗೆ ಪ್ರಧಾನ ಮಂತ್ರಿ ಕೌಶಲ ಕೇಂದ್ರ ವಿಸ್ತರಣೆ
- ಮಾರುಕಟ್ಟೆ ಆಧಾರಿತ ತರಬೇತಿ ನೀಡುವ ‘ಸಂಕಲ್ಪ್’ ಕಾರ್ಯಕ್ರಮಕ್ಕೆ ಚಾಲನೆ. ₹4 ಸಾವಿರ ಕೋಟಿ ವೆಚ್ಚ.
- ಪ್ರವಾಸ ಮತ್ತು ಉದ್ಯೋಗ ಹೆಚ್ಚಳಕ್ಕೆ ‘ಇನ್‌ಕ್ರೆಡಿಬಲ್ ಇಂಡಿಯಾ 2.0 ’ ಅಭಿಯಾನ
ಆರೋಗ್ಯ ಸುಧಾರಣೆ
ಬದಲಾಯಿಸಿ- 14 ಲಕ್ಷ ಅಂಗನವಾಡಿ ಕೇಂದ್ರಗಳಲ್ಲಿ 500 ಕೋಟಿ ವೆಚ್ಚದಲ್ಲಿ ‘ಮಹಿಳಾ ಶಕ್ತಿ ಕೇಂದ್ರ’ ಸ್ಥಾಪನೆ
- ಗರ್ಭಿಣಿಯರ ಖಾತೆಗೆ ನೇರವಾಗಿ 6 ಸಾವಿರ ವರ್ಗಾವಣೆ
- ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಮೂಲಕ 20 ಸಾವಿರ ಕೋಟಿ ಗೃಹ ಸಾಲ
- ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ಸೇವೆ ದೊರೆಯಲು 5 ಸಾವಿರ ಸ್ನಾತಕೋತ್ತರ ಸೀಟ್‌ಗಳಲ್ಲಿ ಹೆಚ್ಚಳ
- ಜಾರ್ಖಂಡ್ ಮತ್ತು ಗುಜರಾತ್‌ನಲ್ಲಿ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಸ್ಥಾಪನೆ
- ಔಷಧ ಮತ್ತು ಸೌಂದರ್ಯವರ್ಧಕ ನಿಯಮಗಳಲ್ಲಿ ತಿದ್ದುಪಡಿ ತರುವ ಮೂಲಕ ಅಗತ್ಯ ಔಷಧಗಳು ಕಡಿಮೆ ದರದಲ್ಲಿ ಲಭ್ಯ
- ಹಿರಿಯ ನಾಗರಿಕರಿಗೆ ಆಧಾರ್ ಆಧಾರಿತ ಸ್ಮಾರ್ಟ್ ಕಾರ್ಡ್ ಮೂಲಕ ಆರೋಗ್ಯ ಮಾಹಿತಿ
- ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ರೂ.31,920ಕ್ಕೆ ಹೆಚ್ಚಳ. ಅಲ್ಪ ಸಂಖ್ಯಾತರಿಗೆ 4195 ಕೋಟಿ. ಪರಿಶಿಷ್ಟ ಜಾತಿಗೆ ಮೀಸಲಾತಿ ಮೊತ್ತ ಶೇ.35ರಷ್ಟು ಹೆಚ್ಚಳ
ಮೂಲಸೌಕರ್ಯ
ಬದಲಾಯಿಸಿ- – ರಸ್ತೆ, ರೈಲ್ವೆ ಹಾಗೂ ಜಲಮಾರ್ಗದ ಸಂಪರ್ಕ ವ್ಯವಸ್ಥೆಗಾಗಿ ರೂ.2.41 ಲಕ್ಷ ಕೋಟಿ
- – 2017–18ನೇ ಸಾಲಿನಲ್ಲಿ ರೈಲ್ವೆ ಅಭಿವೃದ್ಧಿಗೆ ಒಟ್ಟು ರೂ.1.31 ಲಕ್ಷ ಕೋಟಿ ಖರ್ಚಿನ ಅಂದಾಜು ಹಾಗೂ ಕೇಂದ್ರ ಸರ್ಕಾರದಿಂದ 51 ಸಾವಿರ ಕೋಟಿ ಮೀಸಲು
- – ರೈಲು ಪ್ರಯಾಣಿಕರ ಸುರಕ್ಷತೆಗಾಗಿ 5 ವರ್ಷಗಳ ಅವಧಿಗೆ ರೂ.1 ಲಕ್ಷ ಕೋಟಿ ‘ರಾಷ್ಟ್ರೀಯ ರೈಲು ಸಂರಕ್ಷಾ ಕೋಶ’
- – 500 ರೈಲ್ವೆ ನಿಲ್ದಾಣಗಳನ್ನು ಅಂಗವಿಕಲ ಸ್ನೇಹಿಯಾಗಿಸು ಯೋಜನೆ
- – ಐಆರ್‌ಸಿಟಿಸಿ ಮೂಲಕ ರೈಲ್ವೆ ಟಿಕೆಟ್ ಬುಕಿಂಗ್‌ಗೆ ಸೇವಾ ಶುಲ್ಕ ತೆರಿಗೆ ರದ್ದು
- – 2019ರ ವೇಳೆಗೆ ಭಾರತೀಯ ರೈಲ್ವೆಯ ಎಲ್ಲಾ ಕೋಚ್‌ಗಳಲ್ಲಿ ಪರಿಸರ ಸ್ನೇಹಿ ಶೌಚಾಲಯ (Bio-toilet)
- – 3,500 ಕಿ.ಮೀ. ರೈಲ್ವೆ ಮಾರ್ಗ ಕಾರ್ಯಾರಂಭ. ಕಳೆದ ವರ್ಷ 2,800 ಕಿ.ಮೀ. 25 ರೈಲ್ವೆ ನಿಲ್ದಾಣಗಳ ಅಭಿವೃದ್ಧಿ.
- – 7 ಸಾವಿರ ರೈಲ್ವೆ ನಿಲ್ದಾಣಗಳಿಗೆ ಸೌರಶಕ್ತಿ ವ್ಯವಸ್ಥೆ
- – ಹೊಸ ಮೆಟ್ರೋ ರೈಲು ನೀತಿ. ಹೆಚ್ಚು ಉದ್ಯೋಗ ಸೃಷ್ಟಿ. ಖಾಸಗಿ ಸಂಸ್ಥೆಗಳೊಂದಿಗೆ ಸಹಭಾಗಿತ್ವ
- – ಹೆದ್ದಾರಿ ರಸ್ತೆ ಕಾರ್ಯಗಳಿಗೆ ₹64,900 ಕೋಟಿ.
- – 2,000 ಕಿ.ಮೀ. ಕರಾವಳಿ ರಸ್ತೆ ಸಂಪರ್ಕ ಅಭಿವೃದ್ಧಿ
- – 1.5 ಲಕ್ಷ ಗ್ರಾಮ ಪಂಚಾಯ್ತಿಗಳಿಗೆ ‘ಭಾರತ್‌ನೆಟ್’ ಯೋಜನೆ ಅಡಿ ಆಪ್ಟಿಕಲ್ ಫೈಬರ್ ಮೂಲಕ ಹೈಸ್ಪೀಡ್ ಬ್ರಾಡ್‌ಬ್ಯಾಂಡ್ ಸಂಪರ್ಕ
- – ಎಲೆಕ್ಟ್ರಾನಿಕ್ಸ್ ಉತ್ಪಾದನೆಗಾಗಿ ರೂ.745 ಕೋಟಿ ವೆಚ್ಚದಲ್ಲಿ ಎಂ–ಸಿಪ್ಸ್ ಮತ್ತು ಇಡಿಎಫ್ ಕಾರ್ಯಕ್ರಮ
ಆರ್ಥಿಕ ವಲಯ
ಬದಲಾಯಿಸಿ- – ಆರ್ಥಿಕ ವಲಯದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಸ್ಥಾಪನೆ
- –ಸರ್ಕಾರಿ ಸ್ವಾಮ್ಯದ ಐಆರ್‌ಸಿಟಿಸಿ, ಐಆರ್‌ಎಫ್‌ಸಿ ಹಾಗೂ ಐರ್ಕಾನ್ ಸಂಸ್ಥೆಗಳು ಷೇರು ಮಾರುಕಟ್ಟೆ ಪ್ರವೇಶ
- – ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ರೂ.2.44 ಲಕ್ಷ ಕೋಟಿ ಗುರಿ.
ಡಿಜಿಟಲ್ ಆರ್ಥಿಕತೆ
ಬದಲಾಯಿಸಿ- – 125 ಲಕ್ಷ ಜನರಿಂದ ಭೀಮ್ ಆ್ಯಪ್ ಬಳಕೆ
- – ಶೀಘ್ರದಲ್ಲಿ ಆಧಾರ್ ಪಾವತಿ ವ್ಯವಸ್ಥೆ ಪ್ರಾರಂಭ
- – 2017ರ ಮಾರ್ಚ್ ವೇಳೆಗೆ 10 ಲಕ್ಷ ಪಿಒಎಸ್ ಕೇಂದ್ರಗಳ ಸ್ಥಾಪನೆಗೆ ಬ್ಯಾಂಕ್‌ಗಳ ಗುರಿ
- – ರೂ.3 ಲಕ್ಷಕ್ಕೂ ಅಧಿಕ ಮೊತ್ತದ ನಗದು ವಹಿವಾಟಿಗೆ ಅವಕಾಶವಿಲ್ಲ
ಸಾರ್ವಜನಿಕ ಸೇವೆ
ಬದಲಾಯಿಸಿ- – ಸರಕು ಮತ್ತು ಸೇವೆಗಳಿಗೆ ಸರ್ಕಾರದ ಇ–ಮಾರುಕಟ್ಟೆ ವ್ಯವಸ್ಥೆ
- – ಮುಖ್ಯ ಅಂಚೆ ಕಚೇರಿಗಳಲ್ಲಿ ಪಾಸ್‌ಪೋರ್ಟ್ ಸೇವೆಗಳು
- – ಸೇನಾ ಯೋಧರು ಮತ್ತು ಅಧಿಕಾರಿಗಳಿಗೆ ಒಂದೇ ವೇದಿಕೆಯಡಿ ಆನ್‌ಲೈನ್ ಮೂಲಕ ಪ್ರಯಾಣದ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ
ಕೊರತೆ ನಿರ್ವಹಣೆ
ಬದಲಾಯಿಸಿ- – ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರೂ.4.11 ಲಕ್ಷ ಕೋಟಿ ಸಂಪನ್ಮೂಲ ವರ್ಗಾವಣೆ
- – ಮೊದಲ ಬಾರಿಗೆ ಎಲ್ಲ ಸಚಿವಾಲಯ ಹಾಗೂ ಇಲಾಖೆಗಳ ಏಕೀಕರಿಸಿದ ಬಜೆಟ್
- – 2017–18ನೇ ಸಾಲಿನಲ್ಲಿ ಶೇ.3.2 ವಿತ್ತೀಯ ಕೊರತೆ ಹಾಗೂ ಮುಂದಿನ ವರ್ಷದಲ್ಲಿ ಶೇ.3ರ ಗುರಿ
- – ಕಂದಾಯ ಕೊರತೆ ಶೇ.2.3ರಿಂದ ಶೇ.2.1ಕ್ಕೆ ಇಳಿಕೆ
- – ನವೆಂಬರ್ 8–ಡಿಸೆಂಬರ್ 30ರವರೆಗೂ 1.09 ಕೋಟಿ ಖಾತೆಗಳಲ್ಲಿ ₹2–₹80 ಲಕ್ಷ ಹಣ ಜಮೆ
ಕೈಗಾರಿಕೆ
ಬದಲಾಯಿಸಿ- ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗಾಗಿ ರೂ.50 ಕೋಟಿ ವಹಿವಾಟು ನಡೆಸುವ ಸಂಸ್ಥೆಗಳ ಆದಾಯ ತೆರಿಗೆ ಶೇ.25ಕ್ಕೆ ಇಳಿಕೆ
ಚುನಾವಣಾ ನಿಧಿಯಲ್ಲಿ ಪಾರದರ್ಶಕತೆ
ಬದಲಾಯಿಸಿ- – ಪ್ರತಿ ವ್ಯಕ್ತಿಯಿಂದ ಗರಿಷ್ಠ ರೂ.2 ಸಾವಿರ ನಗದು ದಾನವನ್ನು ಪಕ್ಷ ಪಡೆಯಬಹುದು. ಡಿಜಿಟಲ್ ಅಥವಾ ಚೆಕ್ ಮೂಲಕ ಹಣ ಪಡೆಯಲು ಪಕ್ಷಗಳಿಗೆ ಅವಕಾಶ
ಆದಾಯ ತೆರಿಗೆ
ಬದಲಾಯಿಸಿ- 13.14 ಲಕ್ಷ ನೋಂದಾಯಿತ ಕಂಪೆನಿಗಳ ಪೈಕಿ 5.97 ಲಕ್ಷ ಕಂಪೆನಿಗಳು ಮಾತ್ರ 2016–17ರ ಸಾಲಿನಲ್ಲಿ ರಿಟರ್ನ್ ಸಲ್ಲಿಸಿವೆ.
- ವಾರ್ಷಿಕ ಆದಾಯ ರೂ.2.5 ಲಕ್ಷದಿಂದ ರೂ.5 ಲಕ್ಷದೊಳಗಿರುವವರ ಸಂಖ್ಯೆ 1.95 ಕೋಟಿ.
- ವಾರ್ಷಿಕ ರೂ.5 ಲಕ್ಷದಿಂದ ರೂ.56 ಲಕ್ಷದೊಳಗಿನ ಸಂಬಳದಾರರ ಸಂಖ್ಯೆ 76 ಲಕ್ಷ.
- 1.72 ಲಕ್ಷ ಮಂದಿ ತಮ್ಮ ವಾರ್ಷಿಕ ಆದಾಯ ರೂ.50 ಲಕ್ಷಕ್ಕಿಂತ ಮೇಲಿದೆ ಎಂದು ಘೋಷಿಸಿಕೊಂಡಿದ್ದಾರೆ.
- ನಿರ್ಬಂಧ:ರೂ.3 ಲಕ್ಷಕ್ಕಿಂತ ಹೆಚ್ಚಿನ ನಗದು ವ್ಯವಹಾರದ ಮೇಲೆ ನಿರ್ಬಂಧ.
- ರೂ.2.5–ರೂ.5 ಲಕ್ಷ ಆದಾಯ ಹೊಂದಿರುವವರಿಗೆ ತೆರಿಗೆ ಶೇ.5ಕ್ಕೆ ಇಳಿಕೆ ಮಾಡಲಾಗಿದೆ.
- ವೈಯಕ್ತಿಕ ಆದಾಯ ತೆರಿಗೆಯಲ್ಲಿ ಇಳಿಕೆ ಮಾಡಿರುವ ಕಾರಣದಿಂದ ರೂ.15 ಸಾವಿರ ಕೋಟಿ ನಷ್ಟವಾಗಲಿದ್ದು, ಅದನ್ನು ಭರಿಸಲು ಹೆಚ್ಚುವರಿ ತೆರಿಗೆ ಪ್ರಕಟಿಸಲಾಗಿದೆ. ರೂ.50 ಲಕ್ಷ–ರೂ.1 ಕೋಟಿ ಆದಾಯ ಹೊಂದಿರುವವರು ಶೇ.10ರಷ್ಟು ಅಧಿಕ ಕರ ತೆರಬೇಕಾಗುತ್ತದೆ.
- ರೂ.1 ಕೋಟಿಗೂ ಅಧಿಕ ಆದಾಯ ಹೊಂದಿರುವವರು ಶೇ.15ರಷ್ಟು ಅಧಿಕ ಕರ ಪಾವತಿಸಬೇಕು.
- 2015–16ನೇ ಸಾಲಿನಲ್ಲಿ 3.7 ಕೋಟಿ ಜನ ಆದಾಯ ತೆರಿಗೆ ಮರುಪಾವತಿ ಅರ್ಜಿ ಸಲ್ಲಿಸಿದ್ದು, 99 ಲಕ್ಷ ಜನ 2.5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
- ಹೊಸ ತೆರಿಗೆ ವ್ಯವಸ್ಥೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಕುರಿತು 2017ರ ಏಪ್ರಿಲ್ 1ರಿಂದ ಅರಿವು ಮೂಡಿಸುವ ಕಾರ್ಯಕ್ರಮ[೧]
ಕೃಷಿ–ಗ್ರಾಮೀಣಾಭಿವೃದ್ಧಿಗೆ ಸಹಾಯ
ಬದಲಾಯಿಸಿ- ಮುಂಬರುವ ಆರ್ಥಿಕ ವರ್ಷದಲ್ಲಿ ಕೃಷಿ ಕ್ಷೇತ್ರದಲ್ಲಿ ಒಟ್ಟು ರೂ.10 ಲಕ್ಷ ಕೋಟಿ ಸಾಲ ವಿತರಿಸುವ ಗುರಿಯನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ. ಈ ವರ್ಷ ಕೃಷಿ ಕ್ಷೇತ್ರದ ಬೆಳವಣಿಗೆ ದರ ಶೇಕಡ 4.1ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ.
- ಕೃಷಿ ವಿಮೆಗೆ ಆದ್ಯತೆ: ರೈತರಿಗೆ ನೆರವಾಗುವ ಉದ್ದೇಶದಿಂದ ಫಸಲು ವಿಮಾ ಯೋಜನೆಯ ವ್ಯಾಪ್ತಿಯನ್ನು 2018–19ರ ವೇಳೆಗೆ ಬಿತ್ತನೆ ಪ್ರದೇಶದ ಶೇಕಡ 50 ರಷ್ಟಕ್ಕೆ ವಿಸ್ತರಿಸಲಾಗುವುದು. ಈ ಯೋಜನೆಗೆ ರೂ.9 ಸಾವಿರ ಕೋಟಿ ಮೀಸಲಿಡ ಲಾಗುತ್ತದೆ. ಹೈನುಗಾರಿಕೆಗೆ ಉತ್ತೇಜನ ನೀಡಲು ರೂ.8 ಸಾವಿರ ಕೋಟಿ ಮೊತ್ತದ ‘ಹೈನುಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ನಿಧಿ’ ಯನ್ನು ನಬಾರ್ಡ್ ಮೂಲಕ ಆರಂಭಿಸಲಾಗುವುದು. ಆರಂಭದಲ್ಲಿ ಇದಕ್ಕೆ ರೂ.2 ಸಾವಿರ ಕೋಟಿ ನೀಡಲಾಗುತ್ತದೆ.
ಕೃಷಿ ಆದಾಯ ದುಪ್ಪಟ್ಟು ಉದ್ದೇಶ
ಬದಲಾಯಿಸಿಮುಂದಿನ ಐದು ವರ್ಷಗಳಲ್ಲಿ ರೈತರ ಆದಾಯನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಕೃಷಿ ಮತ್ತು ಅದಕ್ಕೆ ಪೂರಕವಾದ ಯೋಜನೆಗೆ ಒತ್ತು
- ರೂ.5 ಸಾವಿರ ಕೋಟಿ ಆರಂಭಿಕ ಮೊತ್ತ ಬಳಸಿ, ಸಣ್ಣ ನೀರಾವರಿ ನಿಧಿ ಸ್ಥಾಪನೆ;
- ಮಣ್ಣಿನ ಆರೋಗ್ಯ ಪರೀಕ್ಷೆಗೆ ದೇಶದ 648 ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಕಿರು ಪ್ರಯೋಗಾಲಯ ಸ್ಥಾಪನೆ. ಇದರ ಜೊತೆ, ಉದ್ಯಮಿಗಳ ಮೂಲಕ ಹೆಚ್ಚುವರಿಯಾಗಿ ಒಂದು ಸಾವಿರ ಪ್ರಯೋಗಾಲಯಗಳ ಆರಂಭ.
- 63 ಸಾವಿರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವಹಿವಾಟುಗಳನ್ನು ಮೂರು ವರ್ಷಗಳ ಅವಧಿಯಲ್ಲಿ ಕಂಪ್ಯೂಟರೀಕರಿಸಲು ನಬಾರ್ಡ್‌ಗೆ ನೆರವು. ಇದಕ್ಕೆ ಅಂದಾಜು ರೂ.1,900 ಕೋಟಿ ವೆಚ್ಚ.
- ಹಣ್ಣು, ತರಕಾರಿ ಬೆಳೆಯುವ ರೈತರಿಗೆ ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳ ಜೊತೆ ಸಂಪರ್ಕ ಕಲ್ಪಿಸಿ, ಬೆಳೆಗೆ ಉತ್ತಮ ಬೆಲೆ ಸಿಗುವಂತೆ ಕ್ರಮ. ಗುತ್ತಿಗೆ ಕೃಷಿಗೆ ಹೊಸ ಕಾನೂನು ರೂಪಿಸಿ, ರಾಜ್ಯಗಳ ಪರಿಶೀಲನೆಗೆ ರವಾನಿಸುವ ಪ್ರಸ್ತಾಪ.
ನರೇಗಾಗೆ ರೂ.48 ಸಾವಿರ ಕೋಟಿ ಮೀಸಲು
ಬದಲಾಯಿಸಿ- ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗೆ (ಎಂ–ನರೇಗಾ) 2017–18ನೇ ಸಾಲಿನಲ್ಲಿ ರೂ.48 ಸಾವಿರ ಕೋಟಿ ಮೀಸಲಿಡಲಾಗಿದೆ. ಕಳೆದ ವರ್ಷ ನರೇಗಾಗೆ ರೂ.38,500 ಕೋಟಿ ನಿಗದಿ ಮಾಡಲಾಗಿತ್ತು.
- ದೀನದಯಾಳ್ ಅಂತ್ಯೋದಯ ಯೋಜನೆ ಮತ್ತು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಗಳ ಅಡಿ ಹಂಚಿಕೆಯನ್ನು ರೂ.4,500 ಕೋಟಿಯಷ್ಟು ಹೆಚ್ಚಿಸಲಾಗಿದೆ.
ಅಂತ್ಯೋದಯ ಯೋಜನೆ
ಬದಲಾಯಿಸಿ- 2019ರೊಳಗೆ ದೇಶದ ಒಂದು ಕೋಟಿ ಕುಟುಂಬಗಳನ್ನು ಬಡತನದ ಸುಳಿಯಿಂದ ಹೊರತರಲು, 50 ಸಾವಿರ ಗ್ರಾಮ ಪಂಚಾಯಿತಿಗಳನ್ನು ಬಡತನ ಮುಕ್ತ ಎಂದು ಘೋಷಿಸಲು ಅಂತ್ಯೋದಯ ಯೋಜನೆ.
- ನೀರಿನಲ್ಲಿ ಆರ್ಸೆನಿಕ್ ಮತ್ತು ಫ್ಲೋರೈಡ್ ಅಂಶ ಇರುವ 28 ಸಾವಿರ ಹಳ್ಳಿಗಳಿಗೆ ನಾಲ್ಕು ವರ್ಷಗಳಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ.
- 2022ರೊಳಗೆ ಐದು ಲಕ್ಷ ಜನರಿಗೆ ಕಲ್ಲು ಕೆಲಸಗಳ ತರಬೇತಿ ನೀಡುವ ಗುರಿ.
ಕೃಷಿ ಕ್ಷೇತ್ರಕ್ಕೆ ನೀಡಿದ ಅನುದಾನ
ಬದಲಾಯಿಸಿ- ರೂ.44,485 ಕೋಟಿ 2016-17
- ರೂ.51,026 ಕೋಟಿ 2017-18[೪]
ಒಂದು ಕೋಟಿ ಮನೆ ನಿರ್ಮಾಣ
ಬದಲಾಯಿಸಿ- ವಸತಿರಹಿತರು ಮತ್ತು ಗುಡಿಸಲು ವಾಸಿಗಳಿಗೆ 2019ರ ವೇಳೆಗೆ ಒಂದು ಕೋಟಿ ಮನೆಗಳ ನಿರ್ಮಾಣ ಗುರಿ. ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆಗೆ 2016–17ರಲ್ಲಿ ರೂ.15 ಸಾವಿರ ಕೋಟಿ ನೀಡಲಾಗಿತ್ತು. ಇದನ್ನು 2017–18ನೇ ಸಾಲಿಗೆ ರೂ.23 ಸಾವಿರ ಕೋಟಿಗೆ ಹೆಚ್ಚಿಸಲಾಗಿದೆ.
- 2018ರ ಮೇ 1 ವೇಳೆಗೆ ಎಲ್ಲ ಗ್ರಾಮಗಳಿಗೆ ಶೇಕಡ 100ರಷ್ಟು ವಿದ್ಯುತ್ ಸಂಪರ್ಕ ಕಲ್ಪಿಸಲು ನಿರ್ಧರಿಸಲಾಗಿದೆ.
- ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಗೆ 2017–18ನೇ ಸಾಲಿನಲ್ಲಿ ರೂ.4,814 ಕೋಟಿ ಅನುದಾನ[೫]
ಸಮಾಜ ಅಭಿವೃದ್ಧಿ
ಬದಲಾಯಿಸಿ- ಅನುದಾನಗಳು:
ವಿವರ | ಕೋಟಿ ರೂ.ಗಳು |
---|---|
ಪರಿಶಿಷ್ಟ ಜಾತಿಗೆ | 52,393 |
ಪರಿಶಿಷ್ಟ ಪಂಗಡಕ್ಕೆ | 31,920 |
ಅಲ್ಪಸಂಖ್ಯಾತ ಸಮುದಾಯಕ್ಕೆ | 4,915 |
ಮಹಿಳೆ ಮತ್ತು ಮಕ್ಕಳ ಕಲ್ಯಾಣ ಯೋಜನೆ | 1,84,632 |
ರಾ.ಗ್ರಾ.ಕುಡಿಯುವ ನೀರಿನ ಯೋಜನೆ | 6500 |
ಹಸಿರು ಕ್ರಾಂತಿಗೆ | 6500 |
ಹೈನುಗಾರಿಕೆಗೆ | 1634 |
ಪ್ರಧಾನಮಂತ್ರಿ ಕೌಶಲವಿಕಾಸ ಯೋಜನೆ | 9,000 |
ನಗರೋತ್ಥಾನ ಮಿಶನ್-ಸ್ಮಾರ್ಟ ಸಿಟಿ | 9,000 |
ಸಂಕಲ್ಪ ಯೋಜನೆ: ಸಂಪನ್ಮೂಲ ಅಭಿವೃದ್ಧಿಗೆ ತರಬೇತಿ | 4000 |
600 ಜಿಲ್ಲೆಗಳಲ್ಲಿ ಕೌಸಲಕೇಂದ್ರಸ್ಥಾಪನೆ, |
ಆಧುನಿಕ ತರಬೇತಿ ಮತ್ತು ಅಂತರರಷ್ಟ್ರೀಯ ಕೌಶಲ ಕೇಂದ್ರ ಸ್ಥಾಪನೆ; ಸೂಕ್ತ ತರಬೇತಿ |
ಸ್ಟ್ರೈವ್ ಯೋಜನೆ ಯುವಜನರಲ್ಲಿ ಕೇಗಾರಿಕಾಜ್ಞಾನ ಪೂರಣ | 2,200 |
ಚರ್ಮೋದ್ಯಮ : ಉದ್ಯೋಗ ಸೃಷ್ಟಿಸಲು ವಿಶೇಷ ತರಬೇತಿ |
ರೈಲ್ವೆ
ಬದಲಾಯಿಸಿವಿವರ | 2017-18 ಯೋಜಿತ ಹಣ : ರೂ.ಗಳಲ್ಲಿ | 2016-17 ಯೋಜಿತ ಹಣ : ರೂಗಳಲ್ಲಿ |
---|---|---|
ಒಟ್ಟು ಬಂಡವಾಳ ವೆಚ್ಚ | 1.31 ಲಕ್ಷ ಕೋಟಿ | 1.21 ಲಕ್ಷ ಕೋಟಿ |
ಸರ್ಕಾರದಿಂದ ರೈಲ್ವೆಗೆ ಅನದಾನ | 55 ಸಾವಿರ ಕೋಟಿ | |
ಹೊಸ ಮಾರ್ಗ | 3500ಕಿ.ಮೀ | 2800 ಕಿ.ಮೀ. |
ಅಂಗವಿಕಲರಿಗಾಗಿ ಅಭಿವೃದ್ಧಿ | 500 ನಿಲ್ದಾಣಗಳು |
- ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಲೋಕಸಭೆಯಲ್ಲಿ ಬುಧವಾರ ಮಂಡಿಸಿದ 2017–18ನೇ ಸಾಲಿನ ಬಜೆಟ್‌ನಲ್ಲಿ ನೈರುತ್ಯ ರೈಲ್ವೆಗೆ ₹3,174 ಕೋಟಿ ಹಂಚಿಕೆ ಮಾಡಿದ್ದಾರೆ. ಇದು ಕಳೆದ ವರ್ಷದ ಅನುದಾನಕ್ಕಿಂತ ಶೇ 19.17ರಷ್ಟು ಜಾಸ್ತಿ ಇದೆ. 2016–17ನೇ ಸಾಲಿನಲ್ಲಿ ₹2,663.42 ಕೋಟಿ ಹಂಚಿಕೆ ಮಾಡಲಾಗಿತ್ತು.
- ರೈಲು ಹಳಿಗಳು ಮತ್ತು ಸಿಗ್ನಲ್ ವ್ಯವಸ್ಥೆಯ ಸುಧಾರಣೆ ಸೇರಿದಂತೆ ರೈಲ್ವೆ ಸುರಕ್ಷತೆಗಾಗಿ ರೂ.1 ಲಕ್ಷ ಕೋಟಿ ವಿಶೇಷ ನಿಧಿ ಮೀಸಲಿರಿಸಲಾಗಿದೆ. 92 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಹಣಕಾಸು ಮತ್ತು ರೈಲ್ವೆ ಬಜೆಟ್‌ಅನ್ನು ವಿಲೀನಗೊಳಿಸಿ ಮಂಡಿಸಲಾಗಿದ್ದು, ಯಾವುದೇ ಹೊಸ ರೈಲು ಸಂಪರ್ಕ ಯೋಜನೆಗಳನ್ನು ಪ್ರಕಟಿಸಿಲ್ಲ. ಸುರಕ್ಷತೆ, ಸೌಲಭ್ಯ ಅಭಿವೃದ್ಧಿಗಳಿಗೆ ಆದ್ಯತೆ ನೀಡಲಾಗಿದೆ.
ನಿಲ್ದಾಣ ಮರುಅಭಿವೃದ್ಧಿ
ಬದಲಾಯಿಸಿ- ದೇಶದಲ್ಲಿನ 25 ರೈಲ್ವೆ ನಿಲ್ದಾಣಗಳನ್ನು ಮರು–ಅಭಿವೃದ್ಧಿಪಡಿಸುತ್ತಿದ್ದು, ಅವುಗಳಲ್ಲಿ ಬೆಂಗಳೂರಿನ ಯಶವಂತಪುರ ಮತ್ತು ಕಂಟೊನ್ಮೆಂಟ್ ರೈಲ್ವೆ ನಿಲ್ದಾಣಗಳು ಸೇರಿವೆ. ಖಾಸಗಿ ಸಹಭಾಗಿತ್ವದಲ್ಲಿ ಈ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುವುದು. ಅಲ್ಲಿನ ಖಾಲಿ ಜಾಗವನ್ನು ಅಭಿವೃದ್ಧಿಪಡಿಸುವುದರ ಮೂಲಕ ಆದಾಯ ಗಳಿಸುವ ಉದ್ದೇಶವೂ ಇದೆ.
- ಒಟ್ಟು 3500 (2,800-2016- 17?) ಕಿ.ಮೀ ಉದ್ದದ ರೈಲ್ವೆ ಮಾರ್ಗವನ್ನು ದೇಶದಲ್ಲಿ ಹೊಸದಾಗಿ ಅಭಿವೃದ್ಧಿಪಡಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಅದರಲ್ಲಿ ನೈರುತ್ಯ ರೈಲ್ವೆಯ 165 ಕಿ.ಮೀ ಸೇರಿದೆ. ಕಳೆದ ವರ್ಷ 231 ಕಿ.ಮೀ ಹೊಸ ಮಾರ್ಗ ನಿರ್ಮಾಣಕ್ಕೆ ಅನುದಾನ ಹಂಚಿಕೆ ಮಾಡಲಾಗಿತ್ತು.
- ಕರ್ನಾಟಕ ರಾಜ್ಯದಲ್ಲಿ ಮಾನವ ರಹಿತ ಲೆವೆಲ್ ಕ್ರಾಸಿಂಗ್‌ಗಳು 350 ಇದ್ದು, ಮೂರು ವರ್ಷಗಳಲ್ಲಿ ಅವುಗಳನ್ನು ನಿರ್ಮೂಲನೆ ಮಾಡಲಾಗುವುದು. ದೇಶದಲ್ಲಿನ 2,000 ರೈಲ್ವೆ ನಿಲ್ದಾಣಗಳಲ್ಲಿ ಸೌರವಿದ್ಯುತ್ ಉತ್ಪಾದನೆಗೆ ಅವಕಾಶ ಕಲ್ಪಿಸುತ್ತಿದ್ದು, ಈ ಯೋಜನೆ ವ್ಯಾಪ್ತಿಗೆ ರಾಜ್ಯದ 34 ನಿಲ್ದಾಣಗಳು ಸೇರಿವೆ. ಇದುವರೆಗೂ 900 ರೈಲ್ವೆ ಬೋಗಿಗಳಲ್ಲಿ ಜೈವಿಕ ಶೌಚಾಲಯಗಳನ್ನು ಅಳವಡಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಬೋಗಿಗಳಿಗೆ ಈ ಸೌಲಭ್ಯ ವಿಸ್ತರಿಸಲಾಗುವುದು.
ಬಜೆಟ್‌ನಲ್ಲಿ ಮೆಟ್ರೊ
ಬದಲಾಯಿಸಿ- ನಮ್ಮ ಮೆಟ್ರೊ ಎರಡು ಹೊಸ ಲೈನ್‌ಗಳಿಗೆ ಒಪ್ಪಿಗೆ;
- ಎರಡನೇ ಹಂತದ ನಾಲ್ಕು ಮಾರ್ಗಗಳ ವಿಸ್ತರಣೆ;[೬]
ತೆರಿಗೆ ಏರಿಕೆ ಮತ್ತು ಇಳಿಕೆ
ಬದಲಾಯಿಸಿ- ಕಿರು ನೋಟ:
ಏರಿಕೆ
|
ಇಳಿಕೆ
|
ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆ
ಬದಲಾಯಿಸಿ- ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆ ಸಂಬಂಧ ಕೇಂದ್ರ ನಿಯಮ ರೂಪಿಸಿದ್ದು, 2 ಸಾವಿರ ರೂಪಾಯಿ ಮಾತ್ರ ನಗದಿನಲ್ಲಿ ಪಾವತಿಸಬಹುದಾಗಿದೆ. 2 ಸಾವಿರಕ್ಕಿಂತ ಹೆಚ್ಚು ದೇಣಿಗೆಯನ್ನು ಚೆಕ್ ಅಥವಾ ಡಿಜಿಟಲ್ ಮಾದರಿಯಲ್ಲಿಯೇ ಪಾವತಿ ಮಾಡಬೇಕು.
- ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆ ಸಂಬಂಧ ಕೇಂದ್ರ ನಿಯಮ ರೂಪಿಸಿದ್ದು, 2 ಸಾವಿರ ರೂಪಾಯಿ ಮಾತ್ರ ನಗದಿನಲ್ಲಿ ಪಾವತಿಸಬಹುದಾಗಿದೆ. 2 ಸಾವಿರಕ್ಕಿಂತ ಹೆಚ್ಚು ದೇಣಿಗೆಯನ್ನು ಚೆಕ್ ಅಥವಾ ಡಿಜಿಟಲ್ ಮಾದರಿಯಲ್ಲಿಯೇ ಪಾವತಿ ಮಾಡಬೇಕು.[೭]
ರಕ್ಷಣಾ ವೆಚ್ಚ
ಬದಲಾಯಿಸಿ- ಹಣಕಾಸು ಸಚಿವ ಅರುಣ್ ಜೇಟ್ಲಿ 2017-18ಕ್ಕೆ ರಕ್ಷಣಾ ಖರ್ಚು ರೂ 2.74 ಲಕ್ಷ ಕೋಟಿ ಮಂಜೂರುಮಾಡಿದ್ದಾರೆ. - ಕಳೆದ ವರ್ಷದ ರೂ 2.58 ಲಕ್ಷ ಕೋಟಿ ಮಂಜೂರಾಗಿತ್ತು. ಅದರಲ್ಲಿ ಆಧುನೀಕರಣಕ್ಕೆ 86.488 ಕೋಟಿ ಸೇರಿದೆ.[೮]
ಅಭಿಪ್ರಾಯ
ಬದಲಾಯಿಸಿ- 4 Feb, 2017;
- ಈ ಬಜೆಟ್‌ನಲ್ಲಿ ಅಂದಾಜು ರೂ. 86 ಸಾವಿರ ಕೋಟಿಯನ್ನು ರಕ್ಷಣಾ ಉಪಕರಣಗಳ (ಯುದ್ಧನೌಕೆ, ವಿಮಾನಗಳು, ಬಂದೂಕು ಇತ್ಯಾದಿ) ಖರೀದಿಗೆ ಮೀಸಲಿಡಲಾಗಿದೆ. ಆದರೆ ಈ ಸಂಖ್ಯೆ ಕೂಡ ಪೂರ್ಣ ಕಥೆಯನ್ನು ಹೇಳುವುದಿಲ್ಲ. ರೂ.86 ಸಾವಿರ ಕೋಟಿ ಪೈಕಿ ಶೇಕಡ 85ರಷ್ಟಕ್ಕಿಂತ ಹೆಚ್ಚು ಮೊತ್ತ ಹಿಂದೆ ಮಾಡಿಕೊಂಡಿದ್ದ ಖರೀದಿ ಒಪ್ಪಂದಗಳಿಗೇ ವೆಚ್ಚವಾಗಲಿದೆ. ಐಎನ್‌ಎಸ್ ವಿಕ್ರಮಾದಿತ್ಯ, ಭೂಸೇನೆಯ ಕೆಲವು ವಿಮಾನಗಳು, ವಾಯು ಪಡೆಯ ಸುಖೋಯ್ ಮತ್ತಿತರ ವಿಮಾನಗಳನ್ನು ಖರೀದಿಸಿದ್ದಕ್ಕೆ ನಾವು ಇಂದಿಗೂ ಕಂತು ಕಟ್ಟುತ್ತಿದ್ದೇವೆ.
- ಈ ಬಾರಿ ರಕ್ಷಣಾ ಕ್ಷೇತ್ರಕ್ಕೆ ರೂ.3.6 ಲಕ್ಷ ಕೋಟಿ(??) ನಿಗದಿ ಮಾಡಲಾಗಿದೆ. ಇದು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇಕಡ 2.1ರಷ್ಟು.
- ಹಾಗಾಗಿ, ಹೊಸ ಖರೀದಿಗಳಿಗೆ ಉಳಿದಿರುವ ಮೊತ್ತ ₹ 10 ಸಾವಿರ ಕೋಟಿಯಿಂದ ₹ 15 ಸಾವಿರ ಕೋಟಿ ಮಾತ್ರ. ದೇಶದ ರಕ್ಷಣಾ ಪಡೆಗಳನ್ನು ಚೀನಾ ಅಥವಾ ಬೇರೆ ದೇಶಗಳ ಜೊತೆ ಸ್ಪರ್ಧಾತ್ಮವಾಗಿ ಇಡಲು ಈ ಮೊತ್ತ ತೀರಾ ಕಡಿಮೆ. 2017ರಲ್ಲಿ ಜಾಗತಿಕ ಮಟ್ಟದಲ್ಲಿ ಬಿಕ್ಕಟ್ಟುಗಳು ತೀವ್ರವಾಗುವ ಸಾಧ್ಯತೆ ಹೆಚ್ಚಿದೆ. ಹೊಸ ಉಪಕರಣಗಳ ಖರೀದಿಗೆ ಮೀಸಲಾದ ಚಿಕ್ಕ ಮೊತ್ತ ಕೂಡ ಪ್ರತಿ ವರ್ಷ ಹಣಕಾಸು ಇಲಾಖೆಗೆ ಮರಳುತ್ತಿದೆ. ತನಗೆ ನೀಡಿದ ಹಣವನ್ನು ರಕ್ಷಣಾ ಇಲಾಖೆ ವಿನಿಯೋಗಿಸಲಿ, ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಡಲಿ ಎಂಬುದೇ ನಾವು ಹೊಂದಬಹುದಾದ ಕನಿಷ್ಠ ಆಸೆ. ರಕ್ಷಣಾ ಪಡೆಗಳಿಗೆ ನೀಡಲಾದ ಚಿಕ್ಕ ಮೊತ್ತದಿಂದ ಏನನ್ನು ನಿಭಾಯಿಸಲು ಸಾಧ್ಯ ಎಂಬ ಪ್ರಶ್ನೆಯನ್ನು ಸಚಿವ ಮನೋಹರ ಪರಿಕ್ಕರ್ ಅವರಲ್ಲಿ ನಾವು ಹೆಚ್ಚೆಚ್ಚು ಕೇಳಬೇಕು.[೯]
ಆದಾಯ ಮತ್ತು ವೆಚ್ಚ ಪೈಸೆ ಲೆಕ್ಕದಲ್ಲಿ
ಬದಲಾಯಿಸಿ- ಬಜೆಟ್ಟನ ಒಟ್ಟು ಗಾತ್ರ ರೂ.2147000 ಕೋಟಿ ಎಂದು ಪ್ರಜಾವಾಣಿಯಲ್ಲಿ ಹೇಳಿದೆ. ಆದರೆ 9% ರಕ್ಷಣಾವೆಚ್ಚ = ರೂ. 2.74,114 ಕೋಟಿ ಎಂದರೆ ಒಟ್ಟು ಬಜೆಟ್ ಗಾತ್ರ ರೂ.3045711.111 ಲಕ್ಷಕೋಟಿ ಆಗುವುದು.
1 | ಆದಾಯ ಮೂಲ | 2016-17: ಪೈಸೆ/% | 2017-18:ಪೈಸೆ/% |
---|---|---|---|
2 | ಸಾಲ ಮತ್ತು ಇತರ ಹಣಕಾಸಿನ ಹೊಣೆ | 21 | 19% |
3 | ಕಾರ್ಪೊರೇಶನ್ ಸಂಸ್ಥೆಗಳ ತೆರಿಗೆ | 19 | 19 |
4 | ಆದಾಯ ತೆರಿಗೆ | 14 | 16 |
5 | ಕಸ್ಟಮ್ಸ್ | 9 | 9 |
6 | ಯೂನಿಯನ್ ಅಬಕಾರಿ ತೆರಿಗೆ (ಡ್ಯೂಟಿ) | 12 | 14 |
7 | ಸೇವಾ ತೆರಿಗೆ ಮತ್ತು ಇತರ ತೆರಿಗೆಗಳು | 9 | 10 |
8 | ತೆರಿಗೆ ಯಲ್ಲದ ಕಂದಾಯ (ಆದಾಯ) | 13 | 10 |
9 | ಸಾಲ ಅಲ್ಲದ ಕ್ಯಾಪಿಟಲ್ ಆದಾಯ | 3 | 3 |
2016-17 | 2017-18 | ||
ವೆಚ್ಚ | ಪೈಸೆ/% | ಪೈಸೆ/% | |
1 | ಇತರೆ ವೆಚ್ಚಗಳು | 15 | 13 |
2 | ಕೇಂದ್ರ ಪ್ರಾಯೋಜಿತ ಯೋಜನೆಗೆ | 9 | 10 |
3 | ಕೇಂದ್ರ ವಲಯದ ಯೋಜನೆ | 9 | 11 |
4 | ಬಡ್ಡಿ ಪಾವತಿ | 19 | 18 |
5 | ರಕ್ಷಣಾ ವೆಚ್ಚ (ರೂ. 2.74,114 ಕೋಟಿ.=.12.8% ಆಗುತ್ತೆ) | 10 | 9 {(?)+3.8%} |
6 | ಅನುದಾನಗಳು | 10 | 10 |
7 | ಹಣಕಾಸು ಆಯೋಗ ಮತ್ತು ಇತರ ವರ್ಗಾವಣೆಗಳು | 6 | 5 |
8 | ರಾಜ್ಯಗಳಿಗೆ ತೆರಿಗೆ ಪಾಲು | 22 | 24 |
2017-2018 ರ ಬಜೆಟ್ ಪಕ್ಷಿನೋಟ
ಬದಲಾಯಿಸಿವಿವರ | 2016-2017ಪರಿಷ್ಕೃತ ಅಂದಾಜು | 2017-2018ಬಜೆಟ್ ಅಂದಾಜು |
---|---|---|
ಕೋಟಿ ಯಲ್ಲಿ | ಕೋಟಿ ಯಲ್ಲಿ | |
೧.ಕಂದಾಯ ಆದಾಯ | 1423562 1 | 1515771 |
2. ತೆರಿಗೆ ಕಂದಾಯ | 1088792 | 1227014 |
3. ತೆರಿಗೆ ಅಲ್ಲದ ಕಂದಾಯ | 334770 | 288757 |
೪. ಕ್ಯಾಪಿಟಲ್ ಆದಾಯ 1 | 590845 | 630964 |
5. ಸಾಲ ವಸೂಲಿ | 11071 | 11932 |
6. ಇತರೆ ಆದಾಯಗಳು | 45500 | 72500 |
7. ಸಾಲ/ಎರವಲು ತೆಗೆದುಕೊಳ್ಳುವ ಮತ್ತು ಇತರ ಹೊಣೆಗಳು 2 | 534274 | 546532 |
೮.ಒಟ್ಟು ಆದಾಯ (1 +4) | 2014407 | 2146735 |
೯. ವೆಚ್ಚದ ಯೋಜನೆ | 869847 | 945078 |
10. ಕಂದಾಯ ಖಾತೆಯಲ್ಲಿ | 631511 | 674057 |
11. ಕ್ಯಾಪಿಟಲ್ ಖಾತೆಯಲ್ಲಿ | 238336 | 271021 |
೧೨. ಯೋಜನೇತರ ವೆಚ್ಚ (13 + 15) | 1144560 | 1201657 |
13. ಕಂದಾಯ ಖಾತೆಯಲ್ಲಿ | 1103049 | 1162877 |
14. ಬಡ್ಡಿ ಪಾವತಿಗೆ | 483069 | 523078 |
15.ಬಂಡವಾಳ(ಕ್ಯಾಪಿಟಲ್) ಖಾತೆಗೆ | 41511 | 38780 |
೧೬.ಒಟ್ಟು ವೆಚ್ಚ (9 + 12) (9 + 12) | 2014407 | 2146735 |
17.ಕಂದಾಯ ಖಾತೆ (10 + 13) | 1734560 | 1836934 |
18. ಬಂಡವಾಳ ಆಸ್ತಿಗಳನ್ನು ಸೃಷ್ಟಿಸವ ನೆರವಿನ ಧನಸಹಾಯ | 171472 | 195350 |
19. ಕ್ಯಾಪಿಟಲ್ ಖಾತೆಗೆ (11 +15) | 279847 | 309801 |
೨೦.ಕಂದಾಯ ಕೊರತೆ (17-1) | 310998 | 321163 |
* | (2.1) | (1.9) |
೨೧.ಪರಿಣಾಮಕಾರಿ ಕಂದಾಯ ಕೊರತೆ (20-18) | 139526 | 125813 |
* | (0.9) | (0.7) |
೨೨. ವಿತ್ತೀಯ ಕೊರತೆ [16- (1 + 5 + 6)] | 534274 | 546532 |
* | (3.2) | (3.2) |
೨೩.ಪ್ರಾಥಮಿಕ ಕೊರತೆ (22-14) | 51205 | 23454 |
* | (0.3) | (0.1) |
ಜಿ ಡಿ .ಪಿ. BE: 2017-2018 ರಲ್ಲಿ 11.75% ಬೆಳವಣಿಗೆ ಊಹಿಸಿಕೊಂಡು `
16847455' ಕೋಟಿ ಅಂದಾಜು ಮಾಡಲಾಗಿದೆ. ಇದು 2016-2017 (15075429 ಕೋಟಿ) ಪರಿಷ್ಕೃತ ಅಂದಾಜಿನ ಆಧಾರದ ಮೇಲೆ. |
||
[೯][೧೦]
ಕಾರ್ಪೋರೇಟ್ ವಲಯಕ್ಕೆ ರೂ.6 ಲಕ್ಷ ಕೋಟಿ ವಿನಾಯ್ತಿ!
ಬದಲಾಯಿಸಿ- 6 Mar, 2017
- ಕಳೆದ ಹಣಕಾಸು ವರ್ಷದಲ್ಲಿ (2015–16) ಕೇಂದ್ರ ಸರ್ಕಾರವು ದೇಶದ ಉದ್ಯಮ ವಲಯಕ್ಕೆ ನೀಡಿದ ಪ್ರತ್ಯಕ್ಷ, ಪರೋಕ್ಷ ತೆರಿಗೆ ರಿಯಾಯ್ತಿಗಳ ಒಟ್ಟು ಮೊತ್ತವು ಹೆಚ್ಚು ಕಡಿಮೆ ಐದೂವರೆ ಲಕ್ಷ ಕೋಟಿ ರೂಪಾಯಿಗಳಷ್ಟಿದೆ. ವ್ಯಕ್ತಿಗತ ಆದಾಯ ತೆರಿಗೆ ರಿಯಾಯ್ತಿ ಮೊತ್ತ ರೂ.55,366 ಕೋಟಿ ಮತ್ತು ಇತರೆ ರಿಯಾಯ್ತಿಗಳ ಲೆಕ್ಕ ಹಿಡಿದರೆ ಈ ಮೊತ್ತ ರೂ.6 ಲಕ್ಷ ಕೋಟಿ ದಾಟುತ್ತದೆ. 2017–-18ರ ಬಜೆಟ್‌ನಲ್ಲಿ ಈ ಮಾಹಿತಿ ಇದೆ. ಪರೋಕ್ಷ ತೆರಿಗೆಗಳ ಪೈಕಿ ಅಬಕಾರಿ ಸುಂಕದ ಸಂಬಂಧದಲ್ಲಿ ನೀಡಲಾದ ರಿಯಾಯ್ತಿ ಮೊತ್ತ ₹2,24,940 ಕೋಟಿ. ಕಸ್ಟಮ್ಸ್ ಸುಂಕಗಳ ರಿಯಾಯ್ತಿ ರೂ.2,57, 549 ಕೋಟಿ. 2.25 ಕೋಟಿ ವ್ಯಕ್ತಿಗತ ತೆರಿಗೆದಾರರಿಗೆ ನೀಡಿದ ರಿಯಾಯ್ತಿ ರೂ.55,366 ಕೋಟಿ.
- ಶಾಸನಾತ್ಮಕ ಕಾರ್ಪೊರೇಟ್ ತೆರಿಗೆ ದರಗಳನ್ನು ಶೇ 24.67ಕ್ಕೆ ಕಡಿತಗೊಳಿಸಿ, ಈ ಕಂಪೆನಿಗಳಿಗೆ ಒಟ್ಟು ರೂ.68,711 ಕೋಟಿಗಳಷ್ಟು ರಿಯಾಯ್ತಿ ನೀಡಲಾಗಿದೆ. ಇಂತಹ ಕಂಪೆನಿಗಳ ಸಂಖ್ಯೆ 5.82 ಲಕ್ಷ. ಕಾರ್ಪೊರೇಟ್ ವ್ಯಾಖ್ಯಾನದಡಿ ಬಾರದ ಪಾಲುದಾರ ಉದ್ಯಮ ಸಂಸ್ಥೆಗಳು, ವ್ಯಕ್ತಿಗಳೇ ಸೇರಿ ನಡೆಸುವ ಒಟ್ಟು 7.59 ಲಕ್ಷ ಉದ್ಯಮಗಳಿಗೆ ನೀಡಿರುವ ತೆರಿಗೆ ರಿಯಾಯ್ತಿ ರೂ.4,561 ಕೋಟಿ.[೧೨]
ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ ಪ್ರಮುಖಾಂಶ2017–18ನೇ ಸಾಲಿನ ಕೇಂದ್ರ ಬಜೆಟ್;ಪ್ರಜಾವಾಣಿ ವಾರ್ತೆ;1 Feb, 2017
- ↑ ಇ.ಅಹಮದ್ ಅವರಿಗೆ ಸಂತಾಪ;ಬಜೆಟ್ 2017: ಕಲಾಪ ಆರಂಭ, ವಿಪಕ್ಷಗಳಿಂದ ಗದ್ದಲ;ಪ್ರಜಾವಾಣಿ ವಾರ್ತೆ;1 Feb, 2017
- ↑ Budget 2017: Jaitley bets on rural
- ↑ ಕೃಷಿ–ಗ್ರಾಮೀಣಾಭಿವೃದ್ಧಿಗೆ ಒತ್ತು;ಕೃಷಿಗೆ ₹10 ಲಕ್ಷ ಕೋಟಿ ಸಾಲ;ಪ್ರಜಾವಾಣಿ ವಾರ್ತೆ;2 Feb, 2017
- ↑ ಒಂದು ಕೋಟಿ ಮನೆ ನಿರ್ಮಾಣ;ಪಿಟಿಐ;2 Feb, 2017
- ↑ ನೈರುತ್ಯ ರೈಲ್ವೆಗೆ ₹3,174 ಕೋಟಿ;ಪ್ರಜಾವಾಣಿ ವಾರ್ತೆ;2 Feb, 2017
- ↑ ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆ
- ↑ Budget 2017: Defence spending up by 6% but it may hurt military’s modernisation plans;Feb 01, 2017 19:07 IST;Rahul Singh
- ↑ "ಬಿಕ್ಕಟ್ಟಿನ ಪರ್ವದಲ್ಲಿ ರಕ್ಷಣೆಗೆ ಕಿರುಮೊತ್ತ;4 Feb, 2017;ಪವನ್ ಶ್ರೀನಾಥ್;ಲೇಖಕ ಬೆಂಗಳೂರಿನ ತಕ್ಷಶಿಲಾ ಇನ್‌ಸ್ಟಿಟ್ಯೂಟ್‌ನಲ್ಲಿ ಸಂಶೋಧಕ". Archived from the original on 2017-02-03. Retrieved 2017-02-05.
- ↑ "2017-18: in paise account" (PDF). Archived from the original (PDF) on 2017-02-15. Retrieved 2017-02-02.
- ↑ "2017-18:Budget at a Glance;". Archived from the original on 2011-03-02. Retrieved 2017-02-02.
- ↑ "ತೆರಿಗೆ:ಕಾರ್ಪೋರೇಟ್ ವಲಯಕ್ಕೆ ₹6 ಲಕ್ಷ ಕೋಟಿ ವಿನಾಯ್ತಿ!;ಉಮಾಪತಿ. ಡಿ.;6 Mar, 2017". Archived from the original on 2017-03-05. Retrieved 2017-03-06.