ಬಜರಂಗದಳ ವು (ಹಿಂದಿ:बजरंग दल)ಭಾರತದ ಹಿಂದೂ ಹೋರಾಟ ಒಕ್ಕೂಟವಾಗಿದೆ.[೧][೨] ಇದು ವಿಶ್ವ ಹಿಂದೂ ಪರಿಷತ್‌ನ ಯುವ ತಂಡವಾಗಿದೆ. ಮತ್ತು ಹಿಂದುತ್ವದ ಸಿದ್ಧಾಂತದ ತಳಹದಿಯನ್ನು ಇದು ಹೊಂದಿದೆ.[೩][೪] ಈ ಒಕ್ಕೂಟವು ೧೯೮೪ ಅಕ್ಟೋಬರ್ ೧ ರಂದು ಉತ್ತರಪ್ರದೇಶದಲ್ಲಿ ಅಸ್ಥಿತ್ವಕ್ಕೆ ಬಂತು. ಈಗ ಇದು ಭಾರತದೆಲ್ಲೆಡೆ ಹರಡಿಕೊಂಡಿದೆ (ತನ್ನ ಪ್ರಾಬಲ್ಯ ಸ್ಥಾಪಿಸಿದೆ). ಈ ತಂಡದಲ್ಲಿ ೧,೩೦೦,೦೦೦ ಸದಸ್ಯರಿದ್ದು,[ಸೂಕ್ತ ಉಲ್ಲೇಖನ ಬೇಕು] ಅವರಲ್ಲಿ ೮೫೦,೦೦೦ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತು ೨,೫೦೦ ಅಕಾಡಗಳು (ಇದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಯನ್ನು ಹೋಲುತ್ತದೆ) ನಡೆಯುತ್ತಿದೆ. ‘ಭಜರಂಗ’ವು ಹಿಂದೂ ದೇವರಾದ ಹನುಮಂತನನ್ನು (ಸೂಚಿಸುತ್ತದೆ) ಪ್ರತಿನಿಧಿಸುತ್ತದೆ.

ಭಜರಂಗದಳದ ಘೋಷವಾಕ್ಯವು ‘ಸೇವಾ ಸುರಕ್ಷಾ ಸಂಸ್ಕೃತಿ’ ಅಥವಾ ‘ಸರ್ವಿಸ್, ಸೇಫ್ಟಿ ಮತ್ತು ಕಲ್ಚರ್’. ಗೋವು ವಧೆ ಅಥವಾ ಹತ್ಯೆಯನ್ನು ತಡೆಯುವ ಕಾರ್ಯಸೂಚಿಯನ್ನು ಇದು ತನ್ನ ಅವಿಭಾಜ್ಯ ಹೊಣೆಯಂದು ಪರಿಗಣಿಸಿದೆ. ಗೋವನ್ನು ಭಾರತ ಸಂವಿಧಾನದ ಆರ್ಟಿಕಲ್ ೪೮ರಲ್ಲಿ ಇದನ್ನು ಪವಿತ್ರವೆಂದು ಪರಿಗಣಿಸಲಾಗಿದೆ.[೫] ದಳದ ಧ್ಯೇಯಗಳಲ್ಲೊಂದಾದ ಅಯೋಧ್ಯಾದ ರಾಮಜನ್ಮಭೂಮಿ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸುವುದು. ಕೃಷ್ಣ ಜನ್ಮಭೂಮಿಯಾದ ಮಥುರಾದಲ್ಲಿ ದೇವಸ್ಥಾನವನ್ನು ಮತ್ತು ಕಾಶಿಯಲ್ಲಿ (ವಾರಣಾಸಿ) ಕಾಶಿ ವಿಶ್ವನಾಥ ದೇವಸ್ಥಾನವನ್ನು ನಿರ್ಮಾಣ ಮಾಡುವುದು ಗುರಿಗಳಲ್ಲಿ ಸೇರಿಕೊಂಡಿದೆ. ಆದರೆ ಇವುಗಳು ಪ್ರಸ್ತುತ ಉಪಾಸನೆಯ ಚರ್ಚಿತ ಪ್ರದೇಶಗಳಾಗಿವೆ. ಮುಸ್ಲಿಂ ಜನಸಂಖ್ಯಾಶಾಸ್ತ್ರದಲ್ಲಿ ಏರಿಕೆ ಮತ್ತು ಕ್ರಿಶ್ಚಿಯನ್ ಮತಾಂತರದಿಂದ ಸಮುದಾಯ ಸಿದ್ಥಾಂತದ ಅಪಾಯವನ್ನು ಗ್ರಹಿಸಿ ಅದರಿಂದ ಭಾರತದಲ್ಲಿ ಹಿಂದೂ ಅಸ್ತಿತ್ವವನ್ನು ಉಳಿಸಲು ಮತ್ತು ರಕ್ಷಿಸುವುದು ಇದರ ಉಳಿದ ಧ್ಯೇಯಗಲ್ಲಿ ಒಳಗೊಂಡಿದೆ.

ಹುಟ್ಟು ಬದಲಾಯಿಸಿ

ಅಕ್ಟೋಬರ್ ೧೯೮೪ರಲ್ಲಿ ವಿಶ್ವ ಹಿಂದೂ ಪರಿಷತ್‌‍ (ವಿ ಎಚ್ ಪಿ) ಉತ್ತರ ಪ್ರದೇಶ ರಾಜ್ಯದಲ್ಲಿರುವ ಅಯೋಧ್ಯಾದಲ್ಲಿ ಅಭ್ಯಾಸ ಮೆರವಣಿಗೆಗಳನ್ನು ಮಾಡಲು ಆರಂಭಿಸಿತು. ಈ ಮೆರವಣಿಗೆಗಳನ್ನು "ರಾಮ್-ಜಾನಕಿ ರಥಯಾತ್ರಾ" ಎಂದು ಕರೆದರು. ಮತ್ತು ಸಮಾಜವನ್ನು ಜಾಗೃತಗೊಳಿಸುವ ಗುರಿಯನ್ನು ಹೊಂದಿದದ್ದರು. ಧಾರ್ಮಿಕ ವಿರೋಧಿ ಚಟುವಟಿಕೆಯಲ್ಲಿ ವಿ ಎಚ್ ಪಿ ಒಕ್ಕೂಟವು ಅಧಿಕೃತವಾಗಿ ಪಾಲ್ಗೊಳ್ಳುವಂತಿಲ್ಲದ್ದರಿಂದ ಈ ರೀತಿಯಾಗಿ ಚಾಲನೆ ನೀಡಲಾಯಿತು. ಭಾರತ ಸಮಾಜದ ಹಲವು ವಿಭಾಗಗಳಲ್ಲಿ ಹಿಂದೂ-ಪರ ಚಳವಳಿಯನ್ನು (pro-Hindu movement) ಕಾಣಬಹುದಾಗಿದೆ.

ಇದರ ಪರಿಣಾಮವಾಗಿ ಈ ಮೆರವಣಿಗೆಯ ಆವರಿತ ಪ್ರದೇಶಗಳಲ್ಲಿ ಮತೀಯ ಆತಂಕ ಮತ್ತು ಭಯದ ವಾತಾವರಣ ನಿರ್ಮಾಣವಾಗಿತ್ತು. ಈ ಎಲ್ಲ ಘಟನೆಗಳು, ‘ಪವಿತ್ರ ಸಾಧುಗಳು’ (ವಿ ಎಚ್ ಪಿ ಸದಸ್ಯರು) ಎಂದು ಯುವಕರ ಪ್ರತಿಭಟನೆ ಅಥವಾ ಮೆರವಣಿಗೆಯನ್ನು ರಕ್ಷಿಸಿಕೊಳ್ಳಲು ಕರೆಯಲಾಗುತ್ತಿತ್ತು. ಆ ಸಂದರ್ಭದಲ್ಲಿ ಭಜರಂಗದಳ ಹುಟ್ಟಿಕೊಂಡಿತು. ಅಂತಿಮವಾಗಿ ಭಜರಂಗದಳದ ಹೆಚ್ಚಿನ ಸದಸ್ಯರು ಈ ಒಕ್ಕೂಟದಲ್ಲಿ ಸೇರಿಕೊಳ್ಳಲು ಅಥವಾ ಗುರುತಿಸಿಕೊಳ್ಳಲು ಹೆಮ್ಮೆ ಪಡುತ್ತಾರೆ. ಮತ್ತು ಇದೇ ರೀತಿಯಲ್ಲಿ ಉತ್ತರ ಪ್ರದೇಶದ ಹೊರ ಭಾಗಗಳಲ್ಲೂ ಸಹ ಒಕ್ಕೂಟವು ತನ್ನ ಸದಸ್ಯರನ್ನು ಹೊಂದಿದೆ.

ಸಿದ್ಧಾಂತ ಮತ್ತು ಕಾರ್ಯಸೂಚಿ ಬದಲಾಯಿಸಿ

ಆಧುನಿಕ ಭಾರತದಲ್ಲಿ ಭಜರಂಗದಳದ ಗುರಿಯು, ಮಸ್ಲಿಂ ದಿಗ್ವಿಜಯೇತರ ಮತ್ತು ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ಆಕ್ರಮಣವನ್ನು ಅವರಿಗೆ ತಿರುಗುವ ರೀತಿಯಲ್ಲಿ ಮಾಡುವ ಕಾರ್ಯಸೂಚಿ ಹೊಂದಿದ್ದಾರೆ. ಪ್ರಸ್ತುತ ವಿವಾದಕ್ಕೆ ಒಳಪಟ್ಟ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಇರುವ ಐತಿಹಾಸಿಕ ಸ್ಮಾರಕಗಳನ್ನು ಅಥವಾ ದಾಖಲೆಗಳನ್ನು ಬದಲಾಯಿಸುವಂತೆ ದಳವು ಆಗ್ರಹಿಸುತ್ತಿದೆ.[೬] ಭಜರಂಗದಳವು ತಮ್ಮ ವೈಬ್ ಸೈಟ್ ನಲ್ಲಿ, ತಮ್ಮ ಒಕ್ಕೂಟವು ಕೋಮುವಾದಿಗಳು ಅಲ್ಲ ಅಥವಾ ವಿಭಜಕರಲ್ಲ ಎಂದು ಪ್ರತಿಪಾದಿಸಿದೆ. ಇದನ್ನು ಉದ್ದೇಶಪೂರ್ವಕವಾಗಿ ಅವರು ಇದರಲ್ಲಿ ಹೇಳಿದ್ದಾರೆ.[೭]

"ಭಜರಂಗದಳವು ಯಾವುದೇ ಧರ್ಮದ ವಿರೋಧಿಯಲ್ಲ. ಇದು ಉಳಿದ ಜನರ ನಂಬಿಕೆಯನ್ನು ಗೌರವಪೂರ್ವಕವಾಗಿ ಸರಿಯೆಂದು ಒಪ್ಪಿಕೊಳ್ಳುತ್ತದೆ ಅಥವಾ ಅಂಗೀಕರಿಸುತ್ತದೆ. ಆದರೆ ಅದೇ ರೀತಿಯಲ್ಲಿ ಹಿಂದೂ ಭಾವನೆಗಳಿಗೂ ಗೌರವ ಕೊಟ್ಟು ಅದನ್ನು ಅಂಗೀಕರಿಸುವಂತೆ ಆಶಿಸುತ್ತದೆ. ಭಜರಂಗದಳವು ಅಸ್ತಿತ್ವದಲ್ಲಿರುವ ಎಲ್ಲ ಧರ್ಮಗಳನ್ನು ಮತ್ತು ಎಲ್ಲ ಮಾನವರನ್ನು ಗೌರವಿಸುತ್ತದೆ. ಜಾತಿ, ವರ್ಣ ಮತ್ತು ಧರ್ಮ ಪದ್ಧತಿಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ (ಆತ್ಮಾಸ್ವತ್ ಸರ್ವ ಭೂತೇಶು). ಈ ಉದ್ದೇಶದಿಂದ ಭಜರಂಗದಳವು ಹಲವಾರು ಸಾರ್ವಜನಿಕ ಜಾಗೃತಿ ಕಾರ್ಯಚಟುವಟಿಕೆಗಳನ್ನು ಕೈಗೆತ್ತಿಕೊಂಡಿತು. ಇದು ಘರ್ಷಣೆ ಅಥವಾ ಕಾನೂನು ಬಾಹಿರ ಚಟುವಟಿಕೆಯಲ್ಲಿ ನಂಬಿಕೆ ಇಟ್ಟಿಲ್ಲ".

ಇವುಗಳು ಸೇರಿದಂತೆ, ಭಜರಂಗದಳವು ಹೇಳುವ ಪ್ರಕಾರ, ಕ್ರಿಶ್ಚಿಯನ್ ಮಿಷನರಿಗಳು ಮಾಡುವ ಕಾರ್ಯಚಟುವಟಿಕೆ ಬಗ್ಗೆ ಜನರಿಗೆ ೫ ಮಿಲಿಯನ್ ಕರಪತ್ರಗಳನ್ನು ಹಂಚಿದೆ. ಭಜರಂಗದಳದ ರಾಷ್ಟ್ರೀಯ ಸಂಚಾಲಕ ಸುರೇಂದ್ರ ಕುಮಾರ್ ಜೈನ್ ಹೇಳುವಂತೆ, ಶಾಂತಿಯುತವಾಗಿ ವರದಿ ಸಿದ್ಧಪಡಿಸಿ ಅದರಲ್ಲಿ ಸಂಶಯಾಸ್ಪದವಾಗಿ ಈ ರೀತಿ ವಿವರಿಸಿದ್ದು, ಕ್ರಿಶ್ಚಿಯನ್ ವ್ಯಕ್ತಿಗಳು ಬಡಜನರನ್ನು ವಿಶ್ವ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಯೋಜಿಸಿದ್ದಾರೆ. ಇದರಲ್ಲಿ ಅತಿಮುಖ್ಯವಾಗಿ ಭಾರತದ ಬಹುಸಂಖ್ಯಾತ ಹಿಂದೂಗಳನ್ನು ಗುರಿಯಾಗಿಟ್ಟುಕೊಳ್ಳಲಾಗಿದೆ ಎಂದು ತಿಳಿಸುತ್ತಾರೆ.[೮].

ಭಜರಂಗದಳವು ವಿಶ್ವಹಿಂದೂ ಪರಿಷತ್ ಜತೆಗೆ ಸೇರಿಕೊಂಡು, ಭಾರತದಲ್ಲಿ ಇಸ್ಲಾಂ ಧರ್ಮದ ಭಯೋತ್ಪಾದನೆ ವಿರುದ್ಧ ಧ್ವನಿ ಎತ್ತಿದೆ. ಮತ್ತು ಭಾರತದೆಲ್ಲೆಡೆ ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚಳವಳಿಗಳನ್ನು ಹಮ್ಮಿಕೊಳ್ಳುವುದಾಗಿ ಪ್ರಕಟಿಸಿದೆ. ಇಸ್ಲಾಂ ಭಯೋತ್ಪಾದನೆಯು ಭಾರತದ ಸಾಮಾನ್ಯ ಜನಸಂಖ್ಯೆಯನ್ನು ನಶಿಸುವಂತೆ ಮಾಡುವುದು ಮತ್ತು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸುವುದು ಎಂದು ಪ್ರತಿಪಾದಿಸಿತು.[೯]. ಭಜರಂಗದಳ ಸಂಚಾಲಕ ಪ್ರಕಾಶ್ ಶರ್ಮಾ ಒತ್ತಿ ಹೇಳುವಂತೆ, ಇವರು ನಿರ್ಧಿಷ್ಟ ಸಮುದಾಯವನ್ನು ಗುರಿಯಾಗಿಟ್ಟುಕೊಂಡಿಲ್ಲ. ಆದರೆ ಭಾರತದ ಜನರನ್ನು ಜಾಗೃತ ಗೊಳಿಸುವಂತೆ (ಎಚ್ಚರಗೊಳ್ಳುವಂತೆ) ಪ್ರಯತ್ನಿಸುತ್ತೇವೆ. ಮುಖ್ಯವಾಗಿ ಯುವಕರು, ಅಪಾಯಕಾರಿ ಭಯೋತ್ಪಾದನೆಯಾದ ೨೦೦೨ರ ಅಕ್ಷರಧಾಮ ದೇವಸ್ಥಾನದ ಮೇಲೆ ನಡೆದ ದಾಳಿಯು ಲಕ್ಷರ್-ಇ-ತೊಯ್ಬಾ ಭಯೋತ್ಪಾದನೆ ಸಂಘಟನೆಯ ಕೊಂಡಿಯನ್ನು ಹೊಂದಿರುವವರಿಂದ ನಡೆಸಲ್ಪಟ್ಟಿತು.[೧೦][೧೧] ಭಜರಂಗದಳವು ವಿ ಎಚ್ ಪಿ ಯೊಂದಿಗೆ ಸೇರಿ ಗೋಹತ್ಯೆಯನ್ನು (ಹಲವಾರು ಹಿಂದೂಗಳು ದೈವೀ ಭಾವನೆಯಿಂದ ನೋಡುವ ಜಾನುವಾರು) ಮತ್ತು ಗೋವಿನ ಸಾಮೂಹಿಕ ಹತ್ಯಾಕಾಂಡವನ್ನು ನಿಷೇಧಿಸುವಂತೆ ಆಗ್ರಹಿಸಿತು .[೧೨].

ಗುಜರಾತ್ ಭಜರಂಗದಳವು ಸೌಂದರ್ಯ ಸ್ಪರ್ಧೆಯ ವಿರುದ್ಧದ ಚಳವಳಿಯಲ್ಲಿ ಮುಂಜೂಣಿಯಲ್ಲಿತ್ತು. ಮತ್ತೊಂದು ವಿಷಯವೆಂದರೆ ಹಿಂದೂ-ಮುಸ್ಲಿಂ ವಿವಾಹವನ್ನು ತಡೆಯುವುದು ಇದರ ಗುರಿಯಾಗಿದೆ.[೧೩]

ವಿವಾದಗಳು ಬದಲಾಯಿಸಿ

ಮಾನವ ಹಕ್ಕುಗಳಿಗೆ ಅನುಗುಣವಾಗಿ, ಭಜರಂಗದಳವು ೨೦೦೨ರಲ್ಲಿ ಗುಜರಾತ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಮುಸ್ಲಿಂರ ವಿರುದ್ಧ ಗಲಭೆಯಲ್ಲಿ ಪಾಲ್ಗೊಂಡಿತ್ತು[೧೪].

  • • ಏಪ್ರಿಲ್ ೨೦೦೬ರಲ್ಲಿ, ಭಜರಂಗದಳದ ಇಬ್ಬರು ಕಾರ್ಯಕರ್ತರು ನಂಧೆಡ್‌ನ ಸಮೀಪದಲ್ಲಿ ಬಾಂಬ್ ತಯಾರಿಕೆಯ ಹಂತದಲ್ಲಿ ಕೊಲ್ಲಲ್ಪಟ್ಟರು.

ಇದೇ ತರಹದ ಗುಂಪು ಕಾರ್ಯಾಚರಣೆಯು ೨೦೦೩ರ ಪರ್ಬಾನಿ ಮಾಸ್ಕ್ ಸ್ಫೋಟದ ಅಪರಾಧದಲ್ಲೂ ಭಾಗಿಯಾಗಿರಬಹುದು ಎಂದು ಶಂಕಿಸಲಾಗಿದೆ.[೧೫] . ಈ ತಂಡವನ್ನು ಬಂಧಿಸಿದ ನಂತರ ಮಾಡಿದ ವಿಚಾರಣೆ ವೇಳೆ ಇಂಥಹ ಹಲವಾರು ಸ್ಫೋಟಗಳನ್ನು ಸೇಡಿಗಾಗಿ ನಡೆಸಿರುವುದನ್ನು ದೇಶದಾದ್ಯಂತ ನಡೆಸಿರುವುದಾಗಿ ಬಾಯಿಬಿಟ್ಟಿದ್ದಾರೆ.[೧೬] ಎನ್‌ಡಿ ಟಿವಿಯು ತರುವಾಯ ನಂಧೆಡ್‌ನ[೧೭] ಘಟನೆಯನ್ನು ಪೊಲೀಸರು ಮುಚ್ಚಿಡಲು ಪ್ರಯತ್ನಿಸಿದ ಕುರಿತು ವಿಸ್ತೃತ ವರದಿಯನ್ನು ಪ್ರಚುರಪಡಿಸಿತು. ಈ ವರದಿಯನ್ನು ನಾಗ್ಪುರದ ಸೆಕ್ಯುಲರ್ ಸಿಟಿಜನ್ಸ್ ಫೋರಮ್ ಮತ್ತು ಪಿಯುಸಿಎಲ್ ಮಾಡಿತ್ತು. ಅದರ ಪ್ರಕಾರ ಸತ್ತವನೊಬ್ಬನ ಮನೆಯಲ್ಲಿ ಮಸೀದಿಗಳ ಭೂಪಟ ಪತ್ತೆಯಾಗಿದೆ ಎಂದು ಪ್ರತಿಪಾದಿಸಲಾಯಿತು.[೧೮]

  • ವಿ ಎಚ್ ಪಿ ನಾಯಕ ಪ್ರವೀಣ್ ತೊಗಾಡಿಯಾ ಅವರನ್ನು ಏಪ್ರಿಲ್ ೨೦೦೩ರಲ್ಲಿ ಭಜರಂಗದಳ ಕಾರ್ಯಚಟುವಟಿಕೆಗೆ ತ್ರಿಶೂಲವನ್ನು ವಿತರಿಸುತ್ತಿದ್ದರು ಎಂಬ ಆರೋಪದ ಮೇಲೆ ಅಜ್ಮೀರ್‌ನಲ್ಲಿ ಬಂಧಿಸಲಾಯಿತು. ನಿಷೇಧಿಸಿದ್ದನ್ನು ವಿರೋಧಿಸಿದ್ದಕ್ಕೆ ಮತ್ತು ನಿಷೇಧಿತ ಆಜ್ಞೆಯನ್ನು ಮೀರಿದ್ದಕ್ಕಾಗಿ ಬಂಧಿಸಲಾಯಿತು.

ತೊಗಾಡಿಯಾರನ್ನು ಬಂಧಿಸಿದ ತರುವಾಯ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಬರುವ ಲೋಕಸಭಾ ಚುನಾವಣೆಯಲ್ಲಿ ಭಾರತದ ರಾಜಸ್ತಾನ ರಾಜ್ಯದಲ್ಲಿ ತ್ರಿಶೂಲದ ವಿಚಾರವನ್ನು ಹೊರತಂದಿತು. ಮತ್ತು ಮುಸ್ಲಿಂ ಸಮುದಾಯವನ್ನು ಸಮಾಧಾನಪಡಿಸಿ ಅವರ ಮತಗಳನ್ನು ಪಡೆಯಲು ಆಕ್ರಮಣಕಾರಿ ತಂತ್ರವನ್ನು ರೂಪಿಸಿತು. ತೊಗಾಡಿಯಾ ಈ ಪ್ರಕರಣಕ್ಕೆ ಸಿಕ್ಕ ಪ್ರಚಾರದ ಕುರಿತು ತೃಪ್ತಿ ವ್ಯಕ್ತಪಡಿಸಿದರು[೧೯]

  • ಭಜರಂಗದಳವು ಗುಜರಾತ್ ನಲ್ಲಿ ಮುಸ್ಲಿಂ ರು ಹೊಂದಿದ್ದ ಸ್ವಂತ ಜಾಗಕ್ಕೆ ಅವರು ಪ್ರವೇಶಿಸದಂತೆ ತಡೆಯುವುದರ ಜೊತೆಗೆ ಮುಸ್ಲಿಂ ರಿಗೆ ಯಾವುದೇ ವರ್ತಕರು ಭೂಮಿ ಮಾರಿದರೆ ಅಂಥವರ ಮೇಲೆ ದಾಳಿ ನಡೆಸುವುದು. ಮತ್ತು ಮುಸ್ಲಿಂ ರ ಮನೆಗಳಿಗೆ ನುಗ್ಗಿ ಅವರಿಂದ ಬಲವಂತವಾಗಿ ಅವರ ಮನೆ ಅಥವಾ ನಿವೇಶನವನ್ನು ಮಾರಿಸುತ್ತಿದ್ದವು. ಇದು ಅಹಮದಾಬಾದ್ ಮತ್ತು ವಡೋದರಾ ನಗರದ ತುಂಬೆಲ್ಲ ಹೆದರಿಕೆಯನ್ನು (ghettoisation) ಹುಟ್ಟಿಸಿದ್ದವು ಎಂಬ ಆರೋಪವನ್ನು ದಳ ಹೊತ್ತಿದೆ.[೨೦]
  • ಹಲವಾರು ಸಂದರ್ಭಗಳಲ್ಲಿ ‘ಸಾಮಾಜಿಕ ಪೊಲೀಸ್ ’ ರೀತಿಯಲ್ಲಿ ನಟಿಸುತ್ತದೆ. ಭಜರಂಗದಳದ ಕಾರ್ಯಕರ್ತರು ಪ್ರೇಮಿಗಳ ದಿನದಂದು ಅವಿವಾಹಿತ ಜೋಡಿಯನ್ನು ಹಿಡಿದು ಒತ್ತಾಯಪೂರ್ವಕವಾಗಿ ಈ ಜೋಡಿಯ ಇಷ್ಟಕ್ಕೆ ವಿರುದ್ಧವಾಗಿ ಕುಂಕುಮವನ್ನು ಇಟ್ಟುಕೊಳ್ಳುವಂತೆ ಹೇಳುವುದು ಅಥವಾ ಆಕೆಯ ಕೈಯಿಂದ ಹುಡುಗನಿಗೆ ರಾಖಿ ಕಟ್ಟಿಸುತ್ತಾರೆ. ಪ್ರೇಮಿಗಳ ದಿನದಂದು ಭಜರಂಗದಳದ ಕಾರ್ಯಕರ್ತರು ಹಿಂಸಾಚಾರದಲ್ಲಿ ತೃಪ್ತಿಪಡುವುದು, ಗಿಫ್ಟ್ (ಉಡುಗೊರೆ) ಅಂಗಡಿಗಳ ಮೇಲೆ ದಾಳಿ ನಡೆಸುವುದು ಮತ್ತು ರೆಸ್ಟೋರೆಂಟ್‌ಗಳಲ್ಲಿ ದಾಳಿ ನಡೆಸಿ ಜೋಡಿಗಳನ್ನು ಹೆದರಿಸುವ ಕಾರ್ಯದಲ್ಲಿ ನಿರತರಾಗಿರುತ್ತಾರೆ[೨೧].[೨೨][೨೩][೨೪]


  • • ಭಜರಂಗದಳವು ಬಾಂಬ್ ತಯಾರಿಕೆ ಪ್ರಮಾದದಲ್ಲಿ ೨೦೦೬ರ ಆಗಸ್ಟ್ ೬ರಂದು ನಂಧೆಡ್‌ನಲ್ಲಿ[೨೫] ಮತ್ತು ೨೦೦೮ ಆಗಸ್ಟ್ ೨೪ರಂದು ಕಾನ್ಪುರದಲ್ಲಿ ಭಾಗಿಯಾಗಿದೆ[೨೬].


  • ಸೆಪ್ಟೆಂಬರ್ ೨೦೦೮ರಲ್ಲಿ ಕರ್ನಾಟಕದ ನ್ಯೂಲೈಫ್ ಕ್ರಿಶ್ಟಿಯನ್ ಚರ್ಚ್‌ಗಳ ವಿರುದ್ಧ ದಾಳಿಗಳನ್ನು ನಡೆಸುವಂತೆ ನಿರ್ದೇಶನ ನೀಡಿದ್ದು, ಮತ್ತು ಪ್ರಾರ್ಥನಾ ಮಂದಿರಗಳ ಮೇಲೆ ದಾಳಿಗಳನ್ನು ಭಜರಂಗದಳ ನಡೆಸಿತು. ಹಿಂದೂ ದೇವರನ್ನು ಅಪಮಾನ ಮಾಡಿದ್ದಕ್ಕೆ ಮತ್ತು ಧಾರ್ಮಿಕ ಮತಾಂತರವನ್ನು ಮಾಡುತ್ತಿದ್ದ ನ್ಯೂಲೈಫ್ ಮಿಷನರಿಗಳ ವಿರುದ್ಧ ಪ್ರತಿಭಟನೆ ನಡೆಸಿತು.

ನಂತರದಲ್ಲಿ ಭಜರಂಗದಳದ ಸಂಚಾಲಕ ಮಹೇಂದ್ರ ಕುಮಾರ್‌ನನ್ನು ಈ ಸಂಬಂಧವಾಗಿ ಬಂಧಿಸಲಾಯಿತು. ಈ ಘಟನೆಗೆ ರಾಜ್ಯ ಸರ್ಕಾರವನ್ನು ಕೇಂದ್ರ ಸರ್ಕಾರವು ಕಟುವಾಗಿ ಟೀಕಿಸಿದ ನಂತರದಲ್ಲಿ ಮಹೇಂದ್ರ ನಾವು ಈ ಗಲಭೆಗೆ ಜವಾಬ್ಧಾರರಲ್ಲ ಎಂಬುದಾಗಿ ಸಾರ್ವಜನಿಕವಾಗಿ ಪ್ರಕಟಿಸಿದರು. ಇದಕ್ಕನುಗುಣವಾಗಿ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗವು ಬಿಜೆಪಿ ಆಡಳಿತ ರಾಜ್ಯಗಳಾದ ಕರ್ನಾಟಕ ಮತ್ತು ಓರಿಸ್ಸಾಗಳಲ್ಲಿ ಕೋಮುಗಲಭೆಗಳು ನಡೆಯುತ್ತಿವೆ ಎಂದು ಬೊಟ್ಟು ಮಾಡಿ ತೋರಿಸಿದವು.[೨೭]. ಅದೇನೇ ಇದ್ದರೂ ಪೊಲೀಸ್ ವರದಿಯಲ್ಲಿ ಭಜರಂಗದಳವು ಈ ಗಲಭೆಯಲ್ಲಿ ವಾಸ್ತವವಾಗಿ ಯಲ್ಲಿ ಪಾಲ್ಗೊಂಡಿಲ್ಲ ಎಂಬುದಾಗಿ ತೋರಿಸಿತು. ಈ ದಾಳಿಯನ್ನು ವಿಭಜಿತ ತಂಡದಿಂದ ಮಾಡಲಾಗಿದೆ ಎಂದು ತಿಳಿಸಲಾಯಿತು. ಆದಾಗ್ಯೂ ಸಾಕ್ಷ್ಯಗಳು ಭಜರಂಗದಳ ಕಾರ್ಯಚಟುವಟಿಕೆಯು ತೋರಿಸುವಂತೆ ವಿರುದ್ಧವಾದ, ಅವರು ಬಣ್ಣಿಸಿದಂತೆ ದಾಳಿ ಮತ್ತು ಹೆಚ್ಚಿನ ಹಿಂಸಾಚಾರವನ್ನು ಮುಕ್ತವಾಗಿ ಎಚ್ಚರಿಸುತ್ತಿದೆ.[೨೮].

ವಿಮರ್ಶೆ ಬದಲಾಯಿಸಿ

೨೦೦೦ದ ರಾಜ್ಯದ ಸಂಯುಕ್ತ ರಾಷ್ಟ್ರಗಳ ಕಚೇರಿಗಳು ವಾರ್ಷಿಕ ವರದಿಯನ್ನು ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಮತ್ತು ವಿಶ್ವ ವರದಿ (೨೦೦೦)ಯನ್ನು ಹ್ಯೂಮನ್ ರೈಟ್ಸ್ ವಾಚ್ (ಮಾನವ ಹಕ್ಕುಗಳ ಆಯೋಗ)ವು ಈ ಒಕ್ಕೂಟಕ್ಕೆ ಹಿಂದೂ ಉಗ್ರವಾದಿ ಸಂಘಟನೆ ಎಂಬ ಹಣೆಪಟ್ಟಿಯನ್ನು ಹಚ್ಚಿದೆ.[೨೯][೩೦] ವಾಷಿಂಗ್ಟನ್ ವಿಶ್ವ ವಿದ್ಯಾನಿಲಯದ ರಾಜಕೀಯ ವಿಜ್ಞಾನ ಮಚ್ಚು ದಕ್ಷಿಣ ಭಾರತ ಅಭ್ಯಾಸದ ವಿಶ್ರಾಂತ ಪ್ರೊ. ಪೌಲ್ ಆರ್. ಬ್ರಾಸ್ ಪ್ರಕಾರ, ಭಜರಂಗದಳವು ಜರ್ಮನಿಯ ನಾಜಿ Sturmabteilungಗೆ ಸಮನಾದುದು ಎಂದು ಬಣ್ಣಿಸಿದ್ದಾನೆ.[೩೧]

ಭಜರಂಗದಳವು ಮಂದಗಾಮಿ ಹಿಂದೂ ರಾಷ್ಟ್ರೀಯ ಸಂಘಟನೆಗಳಿಂದ ಅವುಗಳಾದ ಹಿಂದೂ ಮಹಾಸಭಾದಿಂದ ಸಾಕಷ್ಚು ಟೀಕೆಗಳನ್ನು ಪಡೆಯಬೇಕಾಯಿತು.


ಭಜರಂಗದಳವು ಇಸ್ಲಾಮಿಕ್ ಮೂಲಭೂತವಾದಿಗಳು ಇಸ್ಲಾಮಿಕ್ ಭಯೋತ್ಪಾದನೆಯನ್ನು ವಿಸ್ತರಿಸಿ ನಿಯಂತ್ರಿಸುತ್ತಿರುವ ವಿಧಾನವನ್ನು ಅಳವಡಿಸಿಕೊಂಡಿದೆ ಎಂದು ಹಿಂದೂ ಮಹಾಸಭಾ ಭಾವಿಸಿತ್ತು.[೩೨] ಇದಕ್ಕೆ ಅನುಗುಣವಾಗಿ ಭಾರತೀಯ ಜನತಾ ಪಾರ್ಟಿ ಸದಸ್ಯರು ಮತ್ತು ಭಾರತದ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಸಹ ಭಜರಂಗದಳ ಬಗ್ಗೆ ಟೀಕಿಸಿದ್ದರು. ವಾಜಪೇಯಿ ಹೇಳುವ ಪ್ರಕಾರ, ಭಜರಂಗದಳವು ಬಿಜೆಪಿಗೆ ನಾಚಿಕೆತರುವ ಕೆಲಸ ಮಾಡುತ್ತಿದೆ ಮತ್ತು ಸಂಘಪರಿವಾರವು ಅದನ್ನು ತನ್ನ ಹತೋಟಿಗೆ ತರಬೇಕು ಎಂದು ಹೇಳಿದ್ದರು.[೩೩] ಓರಿಸ್ಸಾದಲ್ಲಿ ಕೋಮು ಹಿಂಸಾಚಾರದ ನಂತರ ಭಾರತೀಯ ಜನತಾ ಪಾರ್ಟಿಯ ಪ್ರಧಾನಮಂತ್ರಿ ಅಭ್ಯರ್ಥಿ ಎಲ್.ಕೆ. ಅಡ್ವಾಣಿಯವರು, ಭಜರಂಗದಳವು ಹಿಂಸೆಯನ್ನು ಬಿಟ್ಟು ಬಿಡಬೇಕು ಎಂದು ಹೇಳಿದ್ದರು, ಏಕೆಂದರೆ ಇದರಿಂದಾಗಿ ತಮ್ಮ ಪಕ್ಷಕ್ಕೆ ದೆಹಲಿಯಲ್ಲಿನ ಯುಪಿಎ ಸರ್ಕಾರದ ಮೇಲಿನ ಒತ್ತಡವನ್ನು ಈ ಘಟನೆ ಕಡಿಮೆಗೊಳಿಸಿತ್ತು.[೩೪]

ನಿಷೇಧಕ್ಕೆ ಒತ್ತಾಯ ಬದಲಾಯಿಸಿ

  • ಈ ಸಂಘಟನೆಯನ್ನು ಈ ವರೆಗೂ ನಿಷೇಧಿಸುವಂತೆ ಯಾವುದೇ ಒತ್ತಾಯವಿಲ್ಲ. ಆದರೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದಿಂದ ಹೆಚ್ಚಿನ ಒತ್ತಾಯ ಕೇಳಿಬರುತ್ತಿದ್ದು, ಅಲ್ಪಸಂಖ್ಯಾತರನ್ನು ತೃಪ್ತಿಪಡಿಸುವ ಸಲುವಾಗಿ ಈ ಆರೋಪವನ್ನು ಹೊರಿಸುತ್ತಿದ್ದಾರೆ. ಮತ್ತು ಭಿನ್ನ ಅಲ್ಪಸಂಖ್ಯಾತ ಗುಂಪುಗಳಿಗಾಗಿ ಸರ್ಕಾರಿ ಸ್ವಾಮ್ಯದ ಅಲ್ಪಸಂಖ್ಯಾತ ರಾಷ್ಟ್ರೀಯ ಆಯೋಗವು ಈ ಒತ್ತಾಯವನ್ನೊಳಗೊಂಡಿದೆ. ಆದಾಗ್ಯೂ ಆಡಳಿತಾರೂಢ ಸರ್ಕಾರವು ಸಾಕ್ಷ್ಯಾಧಾರಗಳ ಕೊರತೆ ಇರುವುದರಿಂದ ಇದನ್ನು ಕಾರ್ಯರೂಪಕ್ಕೆ ತರುವಲ್ಲಿ ಹಿಂಜರಿಯುತ್ತಿದೆ.

[೩೫]. ಜತೆಗೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರೂ ಸಹ ಭಜರಂಗದಳವನ್ನು ನಿಷೇಧಿಸುವುದು ಸಮರ್ಥನೀಯ ಕ್ರಮವಲ್ಲ ಎಂದು ಹೇಳಿದ್ದಾರೆ.[೩೬]

  • ೨೦೦೮ ಸೆಪ್ಟೆಂಬರ್‌ನಲ್ಲಿ,ಭಾರತ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ)ಯು ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಗಳನ್ನು ನಿಷೇಧಿಸುವಂತೆ ಆಗ್ರಹಿಸಿತು. ಏಕೆಂದರೆ ಅದರ ಪ್ರಕಾರ ಈ ಸಂಘಟನೆಗಳು ರಾಷ್ಟ್ರವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದವು. . ಕಾಂಗ್ರೆಸ್ ವಕ್ತಾರ ಮನೀಷ್ ಥಿವಾರಿ, ಬಿಳಿ ಹಾಳೆಯ ಮೇಲಿನ ನಿಷೇಧ ಬರಹವನ್ನು ಕೇವಲ ಸಿಮಿ ಸಂಘಟನೆಗಷ್ಟೇ ಸೀಮಿತವಾಗಿಡಬೇಕಿಲ್ಲ. ಇದನ್ನು ರಾಷ್ಟ್ರ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಎಲ್ಲ ಸಂಘಟನೆಗಳ ಮೇಲೂ ಹೇರಬೇಕಿದೆ. ಉದಾಹರಣೆಗೆ ಭಜರಂಗದಳ ಮತ್ತು ವಿ ಎಚ್ ಪಿ ಎಂದು ಹೇಳಿದರು.[೩೭] ಕಾಂಗ್ರೆಸ್‌ನ ಮತ್ತೋರ್ವ ವಕ್ತಾರ ಶಕೀಲ್ ಅಹ್ಮದ್, ಭಯೋತ್ಪಾದನೆ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ, ಸಾಮಗ್ರಿ ಒದಗಿಸುವುದರ ಬಗ್ಗೆ ತನಿಖೆ ನಡೆಸಬೇಕು. ಮತ್ತು ಭಜರಂಗದಳವನ್ನು ಏಕೆ ನಿಷೇಧಿಸಬಾರದು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ ಎಂದು ಹೇಳಿದರು.[೩೮] ಮುಸ್ಲಿಂ ಮುಲ್ಲಾ (ಧೂತ) ಮೌಸಾನಾ ಖಾಲಿದ್ ರಶೀದ್ ಫಿರಂಗಿ ಮಾಲಿ, ಯಾರು ಭಯೋತ್ಪಾದನೆ ವಿರೋಧಿ ಚಳವಳಿಯಲ್ಲಿ ಪಾಲ್ಗೊಂಡಿದ್ದಾರೆ, ಜತೆಗೆ ಕಾನ್ಪುರ ಸ್ಫೋಟಕ್ಕೆ ಸಂಬಂಧಪಟ್ಟಂತೆ ಈ ಸಂಘಟನೆಯನ್ನು ನಿಷೇಧಿಸಬೇಕು ಎಂದು ಒತ್ತಾಯಪಡಿಸಿದರು.[೩೯]
  • ಕಮ್ಯುನಲಿಸಮ್ ಕಂಬತ್ ಎಂಬ ಮಾಸಿಕ ಪುರವಣಿಯನ್ನು ನಾಗರಿಕ ಹಕ್ಕುಗಳ ಕಾರ್ಯಕರ್ತ ಟೀಸ್ಟಾ ಸೆಟಲ್ವಡ್ ಪ್ರಾರಂಭಿಸುತ್ತಾರೆ. ಈ ಮಾಸಿಕ ಪುರವಣಿಯ ಆಗಸ್ಟ್ ೨೦೦೮ರ ಸಂಚಿಕೆಯಲ್ಲಿ ಭಜರಂಗದಳವನ್ನು ಕೂಡಲೇ ನಿಷೇಧಿಸಬೇಕು ಎಂದು ಆಗ್ರಹಿಸಲಾಗಿದೆ.[೪೦] ಲೋಕ ಜನಶಕ್ತಿ ಪಕ್ಷದ (ಎಲ್ ಜೆ ಪಿ) ನಾಯಕ ರಾಮಚಂದ್ರ ಪಾಸ್ವಾನ್, ಭಜರಂಗದಳವು ಕೋಮು ಸಂಘಟನೆಯೆಂದು ವರ್ಣಿಸುತ್ತಾರೆ. ಹಾಗೂ ಭಜರಂಗದಳ ಮತ್ತು ವಿ ಎಚ್ ಪಿ ಸಂಘಟನೆಯನ್ನು ಕೂಡಲೇ ನಿಷೇಧಿಸಬೇಕು ಎಂದು ಆಗ್ರಹಿಸುತ್ತಾರೆ.[೪೧]

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಕಾರ್ಮಿಕ ಸಚಿವ ರಾಮ್ ವಿಲಾಸ್ ಪಾಸ್ವಾನ್, ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಸಹ ಭಜರಂಗದಳ ಮತ್ತು ಶ್ರೀರಾಮಸೇನೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ವಿಷಯವಾಗಿ ದೇವೇಗೌಡ ಪ್ರಧಾನಮಂತ್ರಿಗಳಿಗೆ ಒಂದು ಪತ್ರವನ್ನೂ ಸಹ ಬರೆಯುತ್ತಾರೆ. ಅದರಲ್ಲಿ ಅಲ್ಪಸಂಖ್ಯಾಥರ ವಿರುದ್ಧ ಭಜರಂಗದಳವು ಅಸಂಬದ್ಧ (ಪ್ರಜ್ಞಾರಹಿತ) ಕೋಮು ಗಲಭೆಯಂತಹ ಅಪರಾಧ ಕೃತ್ಯಗಳಲ್ಲಿ ಕರ್ನಾಟಕ ಮತ್ತು ಓರಿಸ್ಸಾಗಳಲ್ಲಿ ಕೈಗೊಂಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.[೪೨][೪೩][೪೪]

  • ೨೦೦೮ ಅಕ್ಟೋಬರ್ ೫ರಂದು, ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸಂಘಟನೆಯನ್ನು ಕರ್ನಾಟಕದಲ್ಲಿ ಕ್ರಿಶ್ಚಿಯನ್ ಕೇಂದ್ರಗಳ ಮೇಲೆ ದಾಳಿ ಮಾಡಿದ ಆರೋಪದ ಮೇಲೆ ನಿಷೇಧಿಸುವಂತೆ ಅಲ್ಪಸಂಖ್ಯಾತ ರಾಷ್ಟ್ರೀಯ ಆಯೋಗಗಳು ಶಿಫಾರಸು ಮಾಡಿತು.[೪೫] . ಆದಾಗ್ಯೂ ಆಡಳಿತಾರೂಢ ರಾಜ್ಯ ಸರ್ಕಾರವು[೪೬] ಈ ಅಲ್ಪಸಂಖ್ಯಾತ ಆಯೋಗದ ಶಿಫಾರಸುಗಳನ್ನು ಮತ್ತು ಸಲಹೆಗಳನ್ನು ಬೆಂಬಲಿಸಲಿಲ್ಲ.


  • ೨೦೦೮ ಅಕ್ಟೋಬರ್ ೫ರಂದು, ಭಾರತದ ಪ್ರಧಾನ ಮಂತ್ರಿಗಳು ವಿಶೇಷ ಸಂಪುಟ ದರ್ಜೆ ಸಭೆಯನ್ನು ಕರೆಯಲು ನಿಶ್ಟಯಿಸುತ್ತಾರೆ. ಕರ್ನಾಟಕ ಮತ್ತು ಓರಿಸ್ಸಾಗಳಲ್ಲಿ ಕ್ರಿಶ್ಚಿಯನ್ನರ ಮತ್ತು ಅವರ ಧಾರ್ಮಿಕ ಕೇಂದ್ರಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿ ಹಿನ್ನೆಲೆಯಲ್ಲಿ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸಂಘಟನೆಯನ್ನು ನಿಷೇಧಿಸಲು ಸಾಧ್ಯವಿದೆಯೇ ಎಂಬ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿತ್ತು.[೪೭] .

ರಾಷ್ಟ್ರೀಯ ಸಂಯೋಜಕರ ಪಟ್ಟಿ ಬದಲಾಯಿಸಿ

  • ವಿನಯ್ ಕಟಿಯಾರ್
  • ಜೈಬನ್ ಸಿಗ್ ಪವೈಯ
  • ಡಾ. ಸುರೇಂದ್ರ ಜೈನ್
  • ಶ್ರೀ ಸೋಹನ್ ಸೋಲಂಕಿ
  • ಶ್ರೀ ನೀರಜ್ ಧೋನರಿ

ಇದನ್ನೂ ಗಮನಿಸಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. ""Bajrang Dal: The militant face of the saffron family?"". The Times of India. Retrieved 2008-09-30.
  2. ""Militant Hindu Valentine threat"". BBC. 12 February 2001. Retrieved 2001-02-12.
  3. Chetan Bhatt (2001). Hindu Nationalism: Origins, Ideologies and Modern Myths. Berg Publishers. p. 199. ISBN 9781859733486.
  4. ಕ್ರಾಕಿಂಗ್ ಡೌನ್ ಆನ್ ’ವಾಯೊಲೇಶನ್ ಆಫ್ ಮಾರಲ್ ಕೋಡ್’ ಐನ್ ದಕ್ಷಿಣ ಕನ್ನಡ Archived 2009-02-17 ವೇಬ್ಯಾಕ್ ಮೆಷಿನ್ ನಲ್ಲಿ. ದ ಹಿಂದೂ
  5. ಆರ್ಟಿಕಲ್.48
  6. "ಫ್ರಂ ದ ವೆಬ್‌ಸೈಟ್ ಆಫ್ ದ ಬಜರಂಗ ದಳ". Archived from the original on 2013-04-10. Retrieved 2010-09-07.
  7. "ಡಿಕ್ಲರೇಶನ್ ಫ್ರಂ ದ ವೆಬ್‌ಸೈಟ್ ಆಫ್ ದ ಬಜರಂಗ ದಳ". Archived from the original on 2005-03-05. Retrieved 2010-09-07.
  8. "ಮೀಡಿಯಾ ವಾಚ್". Archived from the original on 2006-09-03. Retrieved 2010-09-07.
  9. ಟೆರರ್:ವಿಹೆಚ್‌ಪಿ ಪ್ಲಾನ್ಸ್ ಅವೇರ್‌ನೆಸ್ ಜಾತಾ,ಡೆಕ್ಕನ್ ಹೆರಾಲ್ಡ್
  10. ಬಜರಂಗ ದಳ ಲಾಂಚಸ್ ಕ್ಯಾಂಪೈನ್,ದ ಟ್ರೈಬ್ಯೂನ್
  11. "Three get death for Akshardham attack". Times of India. 2006-06-02. Retrieved 2008-08-04. {{cite news}}: Cite has empty unknown parameter: |coauthors= (help)
  12. ಕೌ ಸ್ಲಾಟರ್: ಬಜರಂಗ ದಳ ಡಬ್ಸ್ ಫೋರಮ್ಸ್ ಸ್ಟ್ಯಾಂಡ್ ಆ‍ಯ್‍೦ಟೀ-ಹಿಂದೂ,ಡೆಕ್ಕನ್ ಹೆರಾಲ್ಡ್
  13. "ಬಜರಂಗ ದಳ ಲೂನಿಸ್ ಎಟ್ ಲಾರ್ಜ್". Archived from the original on 2008-11-22. Retrieved 2010-09-07.
  14. ಸ್ಟೇಟ್ ಪಾರ್ಟಿಸಿಪೇಶನ್ ಆ‍ಯ್‌೦ಡ್ ಕಾಂಪ್ಲಿಸಿಟಿ ಇನ್ ಕಮ್ಯೂನಲ್ ವಾಯೊಲೆನ್ಸ್ ಇನ್ ಗುಜರಾತ್ ಹ್ಯೂಮೀನ್ ರೈಟ್ಸ್ ವಾಚ್ - ಜೂನ್ ೨೦೦೨
  15. ಮಾಲೆಗಾಂವ್ ದ ರೋಡ್ ಟು ಪರ್ಡಿಕ್ಷನ್ Archived 2007-03-19 ವೇಬ್ಯಾಕ್ ಮೆಷಿನ್ ನಲ್ಲಿ.,ದ ಹಿಂದೂ
  16. [೧] ಮಲೆಗಾಂವ್ ಬ್ಲಾಸ್ಟ್ಸ್: ಇಸ್ ಇಟ್ ಬಜರಂಗ್ ಆರ್ ಲಷ್ಕರ್?
  17. ಪೋಲಿಸ್ ಕವರ್ ಅಪ್ ನಾಂಡೆಡ್ ಬ್ಲಾಸ್ಟ್ ,NDTV.com .
  18. ಎ ರಿಪೋರ್ಟ್ ಆನ್ ಬಾಂಬ್ ಬ್ಲಾಸ್ಟ್ ಎಟ್ ದ ಹಯ್ಸ್ ಆಫ್ ಪ್ರಾಮಿನೆಂಟ್ ಆರ್‌ಎಸ್‌ಎಸ್ ಆ‍ಯ್‌ಕ್ಟಿವಿಸ್ಟ್ ಇನ್ ನ್ಯಾಂಡೆಡ್, ಮಹಾರಾಷ್ಟ್ರ Archived 2015-09-24 ವೇಬ್ಯಾಕ್ ಮೆಷಿನ್ ನಲ್ಲಿ.,pucl.org
  19. ಟೊಗಾಡಿಯಾ ಡಿಫೈನ್ಸ್ ಬ್ಯಾನ್, ಡಿಸ್ಟ್ರಿಬ್ಯೂಟ್ಸ್ ಟ್ರೈಡೆಂಟ್ಸ್ Archived 2009-02-18 ವೇಬ್ಯಾಕ್ ಮೆಷಿನ್ ನಲ್ಲಿ.,ದ ಹಿಂದೂ
  20. "ಆರ್ಗನೈಸ್ಡ್ ಇಂಟಾಲರೆನ್ಸ್". Archived from the original on 2009-02-18. Retrieved 2010-09-07.
  21. ಪ್ರೇಮಿಗಳ ದಿನ
  22. http://timesofindia.indiatimes.com/articleshow/೨೭೮೩೬೫೩.cms
  23. http://www.rediff.com/news/2008/feb/14vday.htm
  24. "ಆರ್ಕೈವ್ ನಕಲು". Archived from the original on 2008-02-20. Retrieved 2010-09-07.
  25. ಸೆಕ್ಯೂರಿಟಿ ಎಜೆನ್ಸಿಸ್ ಪರ್ಸ್ಯೂ ಬಜರಂಗ್ ದಳ, ಬಾಂಗ್ಲಾ ಲಿಂಕ್ಸ್ ಟು ಮಲೆಗಾಂವ್ ಡಿಎನ್‌ಎಇಂಡಿಯಾ - ೬ ಸೆಪ್ಟೆಂಬರ್ ೨೦೦೬
  26. ಬಜರಂಗ ದಳ ಪ್ಲಾಟೆಡ್ ’ರಿವೆಂಜ್ ಬ್ಲಾಸ್ಟ್ಸ್’ ಇನ್ ಕಾನ್ಪುರ್: ಯುಪಿ ಪೋಲಿಸ್ ಇಂಡಿಯನ್‌ ಎಕ್ಸ್‌ಪ್ರೆಸ್ - ೨೮ ಆಗಸ್ಟ್ ೨೦೦೮
  27. ಕ್ರಿಸ್ಟಿಯನ್ಸ್: ದ ಸಂಘ ಪರಿವಾರ್ಸ್ ನ್ಯೂ ಟಾರ್ಗೆಟ್ ದ ಎಕನಾಮಿಕ್ ಟೈಮ್ಸ್ - ೨೦ ಸೆಪ್ಟೆಂಬರ್ ೨೦೦೮
  28. ಬಿಜೆಪಿ, ದಳ ಟಾಕ್ ಇನ್ ಟು ವಾಯ್ಸಸ್ ಓವರ್ ಕರ್ನಾಟಕ ಎನ್‌ಡಿಟಿವಿ - ೨೩ ಸೆಪ್ಟೆಂಬರ್ ೨೦೦೮
  29. Barbara Larkin. Annual Report on International Religious Freedom 2000. p. 508. ISBN 0756712297.
  30. Human Rights Watch World Report 2000. Human Rights Watch. p. 188. ISBN 1564322386.
  31. Paul R. Brass (1997). Theft of an Idol: Text and Context in the Representation of Collective Violence. Princeton University Press. p. 17. ISBN 0691026505.
  32. ಬಜರಂಗೀಸ್- ಡು ನಾಟ್ ಬಿಕಮ್ ಹಿಂದೂ ಜಿಹಾದೀಸ್ Archived 2004-06-12 ವೇಬ್ಯಾಕ್ ಮೆಷಿನ್ ನಲ್ಲಿ.,hindutva.org
  33. ರೈನ್ ಇನ್ ಪರಿವಾರ್ ಔಟ್‌ಫಿಟ್ಸ್, ಪಿಎಮ್ ಟೆಲ್ಸ್ ಆರ್‌ಎಸ್‌ಎಸ್,ದ ಟ್ರೈಬ್ಯೂನ್
  34. ಬಜರಂಗ ಡೀಫ್ ಟು ಬಿಜೆಪಿ ಸೆರ್ಮನ್ ದ ಟೆಲಿಗ್ರಾಫ್, ಕಲ್ಕತ್ತಾ - ೩ ಅಕ್ಟೋಬರ್ ೨೦೦೮
  35. ಎ ಕಾಸ್ ಆಫ್ ಪೊಲಿಟಿಕಲ್ ಡಿವೈಡ್
  36. ಬ್ಯಾನ್ ಅಗೈನೆಸ್ಟ್ ಬಜರಂಗ ದಳ ಕಾಂಟ್ ವಿ ಸಸ್ಟೈನ್ಡ್: ಎನ್‌ಎಸ್‌ಎ
  37. ಕಾಂಗ್ ಡಿಮ್ಯಾಂಡ್ಸ್ ವೈಟ್ ಪೇಪರ್ ಆನ್ ಬಜರಂಗ ದಳ, ವಿಹೆಚ್‌ಪಿ
  38. ಕಾಂಗ್ರೆಸ್ ಡಿಮ್ಯಾಂಡ್ಸ್ ಬ್ಯಾನ್ ಆನ್ ಬಜರಂಗ ದಳ
  39. ಮುಸ್ಲಿಮ್ ಕ್ಲೆರಿಕ್ ಡಿಮ್ಯಾಂಡ್ಸ್ ಬ್ಯಾನ್ ಆನ್ ಬಜರಂಗ ದಳ
  40. "ಕಾಲ್ ಫಾರ್ ಇಮ್ಮಿಡಿಯೆಟ್ ಬ್ಯಾನ್ ಆನ್ ಬಜರಂಗ ದಳ, ವಿಹೆಚ್‌ಪಿ". Archived from the original on 2008-09-02. Retrieved 2010-09-07.
  41. ಎಲ್‌ಜೆಪಿ ಡಿಮ್ಯಾಂಡ್ಸ್ ಬ್ಯಾನ್ ಆನ್ ಬಜರಂಗ ದಳ, ವಿಹೆಚ್‌ಪಿ
  42. ಗೌಡ, ಮಾಯ ಡಿಮ್ಯಾಂಡ್ ಬ್ಯಾನ್ ಆನ್ ಬಜರಂಗ ದಳ Archived 2009-02-17 ವೇಬ್ಯಾಕ್ ಮೆಷಿನ್ ನಲ್ಲಿ. ದ ಟೈಮ್ಸ್ ಆಫ್ ಇಂಡಿಯಾ, ೨೨ ಸೆಪ್ಟೆಂಬರ್ ೨೦೦೮
  43. ಪಾಸ್ವಾನ್ ಸೀಕ್ಸ್ ಬ್ಯಾನ್ ಆನ್ ಬಜರಂಗ ದಳ, ವಿಹೆಚ್‌ಪಿ Archived 2008-09-22 ವೇಬ್ಯಾಕ್ ಮೆಷಿನ್ ನಲ್ಲಿ. ದ ಹಿಂದೂ, ೨೦ ಸೆಪ್ಟೆಂಬರ್ ೨೦೦೮
  44. ಕಾಂಗ್ರೆಸ್ ಸೀಕ್ಸ್ ಬ್ಯಾನ್ ಆನ್ ವಿಹೆಚ್‌ಪಿ, ಬಜರಂಗ ದಳ ಸೈಫೀ ನ್ಯೂಸ್, ೨೦ ಸೆಪ್ಟೆಂಬರ್ ೨೦೦೮
  45. [೨] ಬ್ಯಾನ್ ಬಜರಂಗ ದಳ, ಸೇಸ್ ನ್ಯಾಶನಲ್ ಮೈನಾರಿಟೀಸ್ ಪ್ಯಾನೆಲ್ ಸಿಎನ್‌ಎನ್-ಐಬಿಎನ್, ೬ ಅಕ್ಟೋಬರ್ ೨೦೦೮
  46. ಕ್ರಿಟಿಸೈಜ್ಡ್
  47. ಕ್ಯಾಬಿನೆಟ್ ಟು ಡಿಸ್ಕಸ್ ಬಜರಂಗ, ವಿಹೆಚ್‌ಪಿ ಬ್ಯಾನ್ ದ ಟೆಲಿಗ್ರಾಫ್

ಬಾಹ್ಯ ಕೊಂಡಿಗಳು ಬದಲಾಯಿಸಿ