ಬೇಳೆ ಪದವನ್ನು ಭಾರತೀಯ ಉಪಖಂಡದಲ್ಲಿ ಒಣಗಿಸಿದ, ಸೀಳಿದ ದ್ವಿದಳ ಧಾನ್ಯಗಳಿಗೆ ಬಳಸಲಾಗುತ್ತದೆ. ದಕ್ಷಿಣ ಏಷ್ಯಾದ ದೇಶಗಳಲ್ಲಿ ಈ ದ್ವಿದಳ ಧಾನ್ಯಗಳು ಅತ್ಯಂತ ಪ್ರಧಾನ ಆಹಾರಗಳ ಪೈಕಿ ಒಂದೆನಿಸಿವೆ, ಮತ್ತು ಭಾರತೀಯ ಉಪಖಂಡದ ಪಾಕಶಾಸ್ತ್ರದ ಪ್ರಮುಖ ಭಾಗವನ್ನು ರೂಪಿಸುತ್ತವೆ.[೧]

ಉಪಯೋಗ ಬದಲಾಯಿಸಿ

ಬೇಳೆಯನ್ನು ಸಾರು, ಸಾಂಬಾರು ಮುಂತಾದ ನೀರುನೀರಾಗಿರುವ ಪದಾರ್ಥಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದು ಅತ್ಯಂತ ಸಾಮಾನ್ಯವಾದ ರೀತಿಯಾಗಿದೆ. ಇವಕ್ಕೆ ಈರುಳ್ಳಿ, ಟೊಮೇಟೊ, ಮತ್ತು ವಿವಿಧ ಸಂಬಾರ ಪದಾರ್ಥಗಳನ್ನು ಸೇರಿಸಬಹುದು. ಹೊರಗಿನ ಸಿಪ್ಪೆಯನ್ನು ತೆಗೆದಿರಬಹುದು ಅಥವಾ ತೆಗೆಯದೇ ಇರಬಹುದು. ಕಾಳು ಎಂದರೆ ಪೂರ್ಣ ದ್ವಿದಳ ಧಾನ್ಯ, ಮೇಲಿನ ಸಿಪ್ಪೆ ತೆಗೆಯದೇ ಇರುವುದು ಮತ್ತು ಸೀಳದೇ ಇರುವುದು. ಕೆಲವೊಮ್ಮೆ ಮೇಲಿನ ಸಿಪ್ಪೆ ತೆಗೆಯದೇ ಅರ್ಧ ಸೀಳಬಹುದು.

ಬೇಳೆಯನ್ನು ಬೇಯಿಸಿ ಹಲವುವೇಳೆ ರೋಟಿ ಅಥವಾ ಚಪಾತಿ ಅಥವಾ ಅನ್ನದೊಂದಿಗೆ ತಿನ್ನಬಹುದು. ಕೆಲವು ಬಗೆಗಳ ಬೇಳೆಗಳನ್ನು ಎಣ್ಣೆಯಲ್ಲಿ ಕರಿದು, ಉಪ್ಪು ಸೇರಿಸಿ ಒಣ ತಿನಿಸಾಗಿ ತಿನ್ನಲಾಗುತ್ತದೆ. ನೆನೆಸಿ ರುಬ್ಬಿದ ಬೇಳೆಗಳಿಂದ ಪೇಸ್ಟನ್ನು ತಯಾರಿಸಿ ಅಸಂಖ್ಯಾತ ಬಗೆಯ ಉಪ್ಪುಖಾರದ ತಿನಿಸುಗಳನ್ನು ತಯಾರಿಸಲಾಗುತ್ತದೆ. ಇವಕ್ಕೆ ಸಂಬಾರ ಪದಾರ್ಥಗಳು, ಗೋಡಂಬಿ, ಇತ್ಯಾದಿಗಳನ್ನು ಸೇರಿಸಬಹುದು.

ಉಲ್ಲೇಖಗಳು ಬದಲಾಯಿಸಿ

  1. Davidson, Alan; Jaine, Tom (2014). "Dal". The Oxford Companion to Food (in ಇಂಗ್ಲಿಷ್). Oxford University Press. p. 246. ISBN 9780199677337.
"https://kn.wikipedia.org/w/index.php?title=ಬೇಳೆ&oldid=914131" ಇಂದ ಪಡೆಯಲ್ಪಟ್ಟಿದೆ