ಬೆಂಗಳೂರು ನೀಲಿದ್ರಾಕ್ಷಿ
ಬೆಂಗಳೂರು ನೀಲಿದ್ರಾಕ್ಷಿಯು ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆಯಲ್ಪಡುವ ದ್ರಾಕ್ಷಿಯಾಗಿದ್ದು ಬೆಂಗಳೂರು ಬ್ಲೂ ತಳಿ ಎಂದು ಕರೆಯಲಾಗುತ್ತದೆ. ಬೆಂಗಳೂರು ನಗರ, ಕೋಲಾರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬೆಳೆಯಲ್ಪಡುತ್ತದೆ. ಬೆಂಗಳೂರು, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ದೇವನಹಳ್ಳಿ ಸುತ್ತಮುತ್ತ ಬೆಳೆಯುವ ಈ ದ್ರಾಕ್ಷಿ ನೀಲಿ ಬಣ್ಣ, ಆಕಾರ ಮತ್ತು ಸ್ವಾದಕ್ಕೆ ಹೆಸರುವಾಸಿ. ಕಳೆದ ನೂರೈವತ್ತು ವರ್ಷಗಳಿಂದ ಸುಮಾರು ೫೦೦೦ ಹೆಕ್ಟೇರ್ ಪ್ರದೇಶದಲ್ಲಿ ಇದರ ಕೃಷಿ ನಡೆದುಕೊಂಡು ಬಂದಿದೆ.[೧] ಇದನ್ನು ಬೆಳೆಯಲು ಮರಳು ಮಿಶ್ರಿತ ಕಳಿಮಣ್ಣು ಭೂಮಿ ಪ್ರಸಕ್ತವಾಗಿದ್ದು, ದಿನದ ಉಷ್ಣಾಂಶ ಸುಮಾರು 35-37 ಡಿಗ್ರಿ ಸೆಲ್ಶಿಯಸ್ ಹಾಗೂ ರಾತ್ರಿಯ ಉಷ್ಣಾಂಶ 12-15 ಡಿಗ್ರಿ ಸೆಲ್ಶಿಯಸ್ ಇರಬೇಕಾಗುತ್ತದೆ. ಈ ವಾತಾವರಣಕ್ಕೆ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳು ಸೂಕ್ತವಾಗಿವೆ.[೨] ವರ್ಷವಿಡೀ ಈ ಬೆಳೆ ಇರುತ್ತಲಾದರೂ ಫೆಬ್ರವರಿ ನಡುವಿನಿಂದ ಏಪ್ರಿಲ್‍ವರೆಗೆ ಫಸಲು ಹೆಚ್ಚಿರುತ್ತದೆ. ಇದರ ವಿಶೇಷ ರುಚಿ ಹಾಗು ಗುಣದ ವಿಶಿಷ್ಟತೆಯಿಂದಾಗಿ ಇದು ೨೦೧೧ರಲ್ಲಿ ಭಾರತದ ಭೌಗೋಳಿಕ ಸಂಕೇತಗಳ ಪಟ್ಟಿಯಲ್ಲಿ ನೋಂದಾಯಿಸಲ್ಪಟ್ಟಿದೆ.[೩]
ಬಳಕೆ
ಬದಲಾಯಿಸಿವಾರ್ಷಿಕ ೪.೫ ಲಕ್ಷ ಟನ್‍ಗಿಂತಲೂ ಹೆಚ್ಚು ಬೆಳೆಯಲಾಗುತ್ತಿದ್ದು, ಇದರಲ್ಲಿ ಹೆಚ್ಚಿನಂಶ ನೇರವಾಗಿ ತಿನ್ನಲು, ಜಾಮ್, ಜೆಲ್ಲಿಗಳನ್ನು ತಯಾರಿಸಲು ಬಳಸಲಾಗುತ್ತದೆ. ಹುಳಿಮಿಶ್ರಿತ ಸಿಹಿಯುಳ್ಳ ಈ ದ್ರಾಕ್ಷಿಯನ್ನು ಜ್ಯೂಸ್ ತಯಾರಿಸಲು ಬಳಸಲಾಗುತ್ತದೆ. ಸುಮಾರು ನಾಲ್ಕು ಸಾವಿರ ಟನ್‍ಗಳಷ್ಟು ವೈನ್ ಕಾರ್ಖಾನೆಗಳಿಂದ ಕೊಳ್ಳಲ್ಪಡುತ್ತದೆ. ಈ ತಳಿಯ ದ್ರಾಕ್ಷಿಗಳಲ್ಲಿ ಗರಿಷ್ಟ ಶೇಕಡಾ ೧೦-೧೨ ಆಲ್ಕೋಹಾಲ್ ಅಂಶವಿರುತ್ತದೆ. ಆದ್ದರಿಂದ ಇದು ವೈನ್ ತಯಾರಿಕೆಗೆ ಹೆಚ್ಚಾಗಿ ಬಳಸಲಾಗುವುದಿಲ್ಲ. ಸಾಮಾನ್ಯವಾಗಿ ವೈನ್ ತಯಾರಿಕೆಗೆ ಹೆಚ್ಚು ಆಲ್ಕೋಹಾಲ್ ಅಂಶವಿರುವ ಫ್ರೆಂಚ್ ತಳಿಯ ದ್ರಾಕ್ಷಿ ಬಳಸಲಾಗುತ್ತದೆ.[೪]
ಬೆಳೆ ಕುಸಿತ
ಬದಲಾಯಿಸಿಅಂತರ್ಜಲ ಮಟ್ಟ ಕುಸಿತ, ಕೃಷಿಭೂಮಿಯ ಪರಿವರ್ತನೆ ಮುಂತಾದ ವಿವಿಧ ಕಾರಣಗಳಿಂದಾಗಿ ದ್ರಾಕ್ಷಿತೋಟಗಳ ವಿಸ್ತೀರ್ಣ ಕಡಿಮೆಯಾಗುತ್ತಿದ್ದು ಈ ದ್ರಾಕ್ಷಿಯ ಉತ್ಪಾದನೆಯಲ್ಲಿ ವರ್ಷದಿಂದ ವರ್ಷಕ್ಕೆ ಇಳಿಯಾಗುತ್ತಿರುವುದು ವರದಿಯಾಗಿದೆ. [೫]
- ೨೦೧೧-೧೨: ೨೯೭೨ ಹೆಕ್ಟೇರ್, ೫೭೮೪೭ ಟನ್
- ೨೦೧೨-೧೩: ೨೯೫೦ ಹೆಕ್ಟೇರ್, ೫೬೦೧೧ ಟನ್
- ೨೦೧೩-೧೪: ೨೭೯೪ ಹೆಕ್ಟೇರ್, ೫೨೨೭೯ ಟನ್
ಉಲ್ಲೇಖಗಳು
ಬದಲಾಯಿಸಿ- ↑ ರೈತರಿಗೆ ಕಹಿಯಾಗುತ್ತಿರುವ ನೀಲಿ ದ್ರಾಕ್ಷಿ,ವಿಜಯವಾಣಿ ನ್ಯೂಸ್ ·FEB 4, 2016
- ↑ Bangalore Blue Grapes gets Geographical Indication status, Times of India, Rhik Kundu | May 15, 2013,
- ↑ "ಆರ್ಕೈವ್ ನಕಲು". Archived from the original on 2013-08-26. Retrieved 2016-02-08.
- ↑ http://timesofindia.indiatimes.com/city/bengaluru/Bangalore-Blue-Grapes-gets-Geographical-Indication-status/articleshow/20060462.cms
- ↑ http://vijaykarnataka.indiatimes.com/district/bengalurucity/decrease-bangalore-blue-grapes-crop-area/articleshow/50748874.cms